ಕೊರಟಗೆರೆ : 45 ನೇ ವರ್ಷದ ಆರತಿ ಮಹೋತ್ಸವ ಕಾರ್ಯಕ್ರಮ

Team Udayavani, Mar 2, 2022, 7:09 PM IST

ಕೊರಟಗೆರೆ : 45 ನೇ ವರ್ಷದ ಆರತಿ ಮಹೋತ್ಸವ ಕಾರ್ಯಕ್ರಮ

ಕೊರಟಗೆರೆ: ಕಾಡಿನಲ್ಲಿ ಬೇಟೆ ಮಾಡುತ್ತಿದ್ದ ಕಣ್ಣಪ್ಪನಿಗೆ  ಮೊದಲಿಗೆ  ಕನಸಿನಲ್ಲಿ ಶಿವ ಬಂದು ಇಲ್ಲಿ ಒಂದು ಲಿಂಗ ಇದೆ ನನಗೆ ಪ್ರತಿನಿತ್ಯ ಪೂಜೆ ಮಾಡಬೇಕು ಎಂದು ಹೇಳುತ್ತಾರೆ ಅದಕ್ಕಾಗಿ ಬೇಡರಕಣ್ಣಪ್ಪ ಕೂಡ ಆಯ್ತು ಎಂದು ಶಿವಲಿಂಗವನ್ನು ಹುಡುಕುತ್ತಾರೆ ನಂತರ ಶಿವಲಿಂಗ ಕಾಣುತ್ತದೆ ಹಾಗೂ ಪ್ರತಿನಿತ್ಯ ಶಿವಲಿಂಗಕ್ಕೆ ಪೂಜೆ ಮಾಡುತ್ತಾರೆ ಆದರೆ ಬೇಡರಕಣ್ಣಪ್ಪ ನಿಗೆ ಯಾವ ರೀತಿ ಶಿವನಿಗೆ ಪೂಜೆ ಮಾಡಬೇಕು ಎಂಬುದು ಗೊತ್ತಿರುವುದಿಲ್ಲ ಅದಕ್ಕಾಗಿ ತಾನು ತಿನ್ನುವ ಆಹಾರವನ್ನೇ ಪ್ರತಿದಿನ ನೈವಿದ್ಯ ಮಾಡಿಡುತ್ತಿದ್ದ ಎಂದು  ಪುರಾಣಗಳಲ್ಲಿ ತಿಳಿಸಲಾಗಿದೆ ಎಂದು ಕಣ್ಣಪ್ಪ ಸೇವಾ ಟ್ರಸ್ಟ್ ನ ಅಧ್ಯಕ್ಷ ಮಾದಣ್ಣ ತಿಳಿಸಿದರು.

ತಾಲ್ಲೂಕಿನ ಹೊಳವನಹಳ್ಳಿಯಲ್ಲಿ ನಡೆದ 45 ನೇ ವರ್ಷದ ಆರತಿ ಮಹೋತ್ಸವ ಕಾರ್ಯಕ್ರಮದಲ್ಲಿ ತಿಳಿಸಿದರು.ಈ ಗ್ರಾಮದಲ್ಲಿ  ಸುಮಾರು ವರ್ಷಗಳಿಂದ ಕಣಪ್ಪ ದೇವರಿಗೆ ಸಂಪ್ರದಾಯದಂತೆ ಆರತಿ ಹಾಗೂ ವಿಶೇಷ ಪೂಜೆ ಪ್ರತಿವರ್ಷದಂತೆ ಈ ಬಾರಿಯೂ ನಡೆಯುತ್ತಿದೆ. ಆದರೆ ಕಳೆದ ಬಾರಿಯಂತೆ ಈ ಬಾರಿಯೂ ಸಹ ಅದ್ದೂರಿ ಇಲ್ಲದಿದ್ದರೂ ಸಾಂಪ್ರದಾಯಿಕವಾಗಿ ಆರತಿ ಕಾರ್ಯಕ್ರಮವನ್ನು ಮಾಡುತ್ತಿರುವುದು ಸಮುದಾಯದ ಎಲ್ಲಾ ಜನರ ಅಭಿಲಾಷೆಯನ್ನು ಈಡೇರಿಸಲಾಗಿದೆ ಎಂದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಓಬಳೇಶ್ ಮಾತನಾಡಿ ಭಕ್ತಿಯಲ್ಲಿ ಬೇಡರಕಣ್ಣಪ್ಪನನ್ನು ಮೀರಿಸುವಂತ ಬೇರೆಯಾವ ಭಕ್ತನು ಪರಮಶಿವನಿಗೆ ಸಿಗಲಾರ ತಾನು ಸೇವಿಸುವ ಆಹಾರವನ್ನು ಪರಮಶಿವನಿಗೆ ನೈವೇದ್ಯವಾಗಿ ಅರ್ಪಿಸುತಿದ್ದರು ಎಂದು ತಿಳಿಸಿದರು. ಪ್ರತಿದಿನ ಬೇಟೆಯಾಡಿದ ಪ್ರಾಣಿ ಹಾಗೂ ಕಾಡಿನಲ್ಲಿ ಸಿಗುವ ಗೆಡ್ಡೆಗೆಣಸು ಮೊದಲು ತಾನು ತಿಂದು ನಂತರ ಶಿವಲಿಂಗ ಮುಂದೆ ನೈವೇದ್ಯ ಮಾಡಿ ಪೂಜಿಸುತ್ತಿದ್ದ ಮಹಾಭಕ್ತ ಬೇಡರ ಕಣ್ಣಪ್ಪ ಅಲ್ಲದೆ ಶಿವನಿಗೆ ಕಣ್ಣು ನೀಡಿದಂತಹ ಪರಮಭಕ್ತ ಕಣ್ಣಪ್ಪ ಅಂತಹ ಭಕ್ತನಾದ ಕಣ್ಣಪ್ಪನವರಿಗೆ ನಾವು ಪ್ರತಿವರ್ಷದಂತೆ ಈ ವರ್ಷವೂ ಸಹ ಮಹಾಮಂಗಳಾರತಿ ಗ್ರಾಮಗಳ ಪ್ರತಿ ಪ್ರಮುಖ ಬೀದಿಗಳಲ್ಲಿ ಗ್ರಾಮದೇವರ ಮೆರವಣಿಗೆ ಸೇರಿದಂತೆ ವಿಶೇಷ ಪೂಜೆಯನ್ನು ಮಹಾಶಿವರಾತ್ರಿಯ ಹಬ್ಬದ ದಿನದಿಂದ 3-4 ದಿನಗಳು ಈ ಹಬ್ಬದ ವಾತಾವರಣ ಗ್ರಾಮಸ್ಥರಲ್ಲಿ ಮೂಡುತ್ತದೆ.ನಂತರ ದೇವರ ಮೂರ್ತಿಯನ್ನು  ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಪೂಜೆ, ಪುರಸ್ಕಾರಗಳು ಮುಗಿದ ನಂತರ ಹಬ್ಬದ  ರೂಪದಲ್ಲಿ ಗ್ರಾಮದ ಎಲ್ಲಾ ಜನರು ಸೇರುತ್ತಾರೆ ಎಂದರು.

ಇದನ್ನೂ ಓದಿ : 750 ಅಭ್ಯರ್ಥಿಗಳಿಗೆ ಶಿಷ್ಯವೇತನದ ಜತೆಗೆ ಕೆಪಿಎಸ್‌ಸಿ- ಯುಪಿಎಸ್‌ಸಿ ತರಬೇತಿ

ಮುಖಂಡ ನರಸಪ್ಪ ಮಾತನಾಡಿ ನಮ್ಮ ಸೇವಾ ಟ್ರಸ್ಟ್ ನಿಂದ ಹಾಗೂ ಸರ್ಕಾರದ ಅನುದಾನದಲ್ಲಿ ನಿರ್ಮಿಸಿರುವ ಶ್ರೀ ಬೇಡರಕಣ್ಣಪ್ಪ ಸಮುದಾಯ ಭವನ ಈಗಾಗಲೇ ಮುಗಿಯುವ ಹಂತಕ್ಕೆ ಬಂದಿದ್ದರೂ, ಇದಕ್ಕೆ ಇನ್ನೂ ಹಣದ ಅಭಾವ ಇರುವುದರಿಂದ ಕೆಲಸ ಮುಗಿಸಲು ಆಗುತ್ತಿಲ್ಲ. ಆದ್ದರಿಂದ ಸರ್ಕಾರ  ಹಣ ಬಿಡುಗಡೆ ಮಾಡಿದರೆ ಈ ಕೆಲಸ ಪೂರ್ಣಗೊಳ್ಳುತ್ತದೆ ಅಲ್ಲದೆ ದೇವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ಇದೆಲ್ಲವನ್ನು ನಾವೆಲ್ಲರೂ ಸೇರಿ ಮಾಡಿಕೊಂಡು ಬರುತ್ತಿದ್ದೇವೆ ಎಂದರು

ಕಾರ್ಯಕ್ರಮದಲ್ಲಿ ನರಸಪ್ಪ ,ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರವಿಕುಮಾರ್, ಗಂಗಾಧರಪ್ಪ, ಮೂರ್ತಿ ದೊಡ್ಡಮನೆ ,ರಂಗಶ್ಯಾಮಯ್ಯ ,ಚಂದ್ರಣ್ಣ ,ಅಶ್ವಥಣ್ಣ ,ರಂಗನಾಥ್ ,ಜಯರಾಜ್ ,ಸಿದ್ದರಾಜು ,ಕಿಶೋರ್ ,ನಿರಂಜನ್, ರಮೇಶ್ ,ನಾಗರಾಜ್, ರಾಜಣ್ಣ, ನಾಗರಾಜು ಹಳ್ಳಾಪುರ, ರಂಗನಾಥ್  ಸೇರಿದಂತೆ ಗ್ರಾಮದ ಮಹಿಳೆಯರು ಹಾಗೂ ಯುವಕರು ಇದ್ದರು.

ಟಾಪ್ ನ್ಯೂಸ್

ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ : ಸಚಿವ

Minister Sudhakar: ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ

Donald-Trumph

Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ

Ajit Pawar

Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್‌: ಮಹಾಯುತೀಲಿ ಬಿರುಕು?

canada

Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ

ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್‌.ಎನ್‌. ನಾಗಮೋಹನ್‌ ದಾಸ್‌ ಅಧ್ಯಕ್ಷ?

State Govt: ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್‌.ಎನ್‌. ನಾಗಮೋಹನ್‌ ದಾಸ್‌ ಅಧ್ಯಕ್ಷ?

tirupati

Supreme Court; ಧರ್ಮಕ್ಕೊಂದು ರಾಜ್ಯ ಕೂಡದು: ತಿರುಪತಿ ಕುರಿತ ಅರ್ಜಿ ತಿರಸ್ಕೃತ

Malpe: ಬೀಚ್‌ನಲ್ಲಿ ಮತ್ತೆ ಆರಂಭವಾಗಿದೆ ಫ್ಲೋಟಿಂಗ್‌ ಬ್ರಿಡ್ಜ್, ಪ್ರವಾಸಿಗರ ಸ್ಪಂದನೆ

Malpe: ಬೀಚ್‌ನಲ್ಲಿ ಮತ್ತೆ ಆರಂಭವಾಗಿದೆ ಫ್ಲೋಟಿಂಗ್‌ ಬ್ರಿಡ್ಜ್, ಪ್ರವಾಸಿಗರ ಸ್ಪಂದನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ : ಸಚಿವ

Minister Sudhakar: ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ

ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್‌.ಎನ್‌. ನಾಗಮೋಹನ್‌ ದಾಸ್‌ ಅಧ್ಯಕ್ಷ?

State Govt: ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್‌.ಎನ್‌. ನಾಗಮೋಹನ್‌ ದಾಸ್‌ ಅಧ್ಯಕ್ಷ?

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ : ಸಚಿವ

Minister Sudhakar: ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ

Donald-Trumph

Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ

Ajit Pawar

Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್‌: ಮಹಾಯುತೀಲಿ ಬಿರುಕು?

canada

Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ

ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್‌.ಎನ್‌. ನಾಗಮೋಹನ್‌ ದಾಸ್‌ ಅಧ್ಯಕ್ಷ?

State Govt: ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್‌.ಎನ್‌. ನಾಗಮೋಹನ್‌ ದಾಸ್‌ ಅಧ್ಯಕ್ಷ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.