ಅರವಿಂದ ಲಿಂಬಾವಳಿ ಮತ್ತೊಂದು ವಿವಾದ;ಇದೇನಾ ಸಂಸ್ಕೃತಿ ಎಂದ ಮಹಿಳೆ
ಮಹಿಳಾ ಆಯೋಗ, ಪ್ರಧಾನಿಗೆ ದೂರು ನೀಡಲು ನಿರ್ಧರಿಸಿದ ರುತ್ ಸಗಾಯ್
Team Udayavani, Sep 3, 2022, 6:57 PM IST
ಬೆಂಗಳೂರು: ಮಹಿಳಾ ನಿಂದನೆ ಪ್ರಕರಣ ಸಮರ್ಥಿಸಿಕೊಳ್ಳುವ ಭರದಲ್ಲಿ ” ನಾನೇನು ರೇಪ್ ಮಾಡಿದ್ದೇನಾ” ಎಂದು ಶಾಸಕ ಅರವಿಂದ ಲಿಂಬಾವಳಿ ಪ್ರಶ್ನಿಸಿರುವುದು ಈಗ ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದು, ಮಹಿಳಾ ಆಯೋಗ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರು ನೀಡಲು ರುತ್ ಸಗಾಯ್ ನಿರ್ಧರಿಸಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಅರವಿಂದ್ ಲಿಂಬಾವಳಿ ನನ್ನ ಮೇಲೆ ದೌರ್ಜನ್ಯ ಮಾಡಿದ್ದಾರೆ.ನಾನೇನು ರೇಪ್ ಮಾಡಿದ್ದೇನಾ ? ಎಂಬ ಪ್ರಶ್ನೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ.ಬಿಜೆಪಿ ನಾಯಕರು ತಮ್ಮದು ಶಿಸ್ತಿನ ಪಕ್ಷ ಅಂತಾ ಹೇಳುತ್ತಾರೆ. ಆದರೆ ಇದೇನಾ ಅವರ ಸಂಸ್ಕೃತಿ ? ಒಬ್ಬ ಮಹಿಳೆ ಬಗ್ಗೆ ಹೇಗೆ ಮಾತನ್ನಾಡಬೇಕು ಅನ್ನೋದು ಗೊತ್ತಿಲ್ಲ. ಹೆಣ್ಣಿಗೆ ಗೌರವ ಕೊಡುವುದನ್ನ ಕಲಿತುಕೊಳ್ಳಲಿ.ನಾನು ಮಹಿಳಾ ಆಯೋಗಕ್ಕೆ ದೂರು ನೀಡುತ್ತಿದ್ದೇನೆ.ಪ್ರಧಾನಿ ನರೇಂದ್ರ ಮೋದಿಗೂ ಪತ್ರ ಬರೆಯುತ್ತೇನೆ ಎಂದು ಹೇಳಿದರು.
ನಮ್ಮ ಮನೆಯ ಗೋಡೆ ಒಡೆದು ಹಾಕಿದ್ದರು.ಆಗ ಬಿಬಿಎಂಪಿ ಕಮಿಷನರ್, ಬಿಜೆಪಿ ನಾಯಕರು ಇದ್ದರು.ಒತ್ತುವರಿಯಾಗಿದೆ ಎಂದು ಒಡೆದು ಹಾಕಿದ್ದರು.ನಮ್ಮ ಬಳಿ ದಾಖಲೆಗಳು ಸರಿಯಾಗಿಯೇ ಇದೆ.ಡೆಮಾಲಿಷ್ ಮಾಡುವುದಕ್ಕೂ ಮೊದಲು ನೋಟಿಸ್ ಕೊಡಬೇಕು.ಅದ್ಯಾವುದನ್ನೂ ನೀಡದೆ ಏಕಾಏಕಿ ನೆಲಸಮ ಮಾಡಿದರು.ನಾನು ಶಾಸಕರಿಗೆ ದಾಖಲೆ ತೋರಿಸಲು ಹೋಗಿದ್ದೆ.ಆಗ ಅವರು ನನ್ನಿಂದ ದಾಖಲೆ ಕಿತ್ತುಕೊಂಡರು.ಬಳಿಕ ಬಾಯಿಗೆ ಬಂದಂತೆ ಬೈದರು.ನಾನು ಮಹಿಳೆ ಸರ್ ಅಂತ ಹೇಳಿದೆ. ಏನು ಮಹಿಳೆ? ನಾಚಿಕೆ, ಮಾನ ಮರ್ಯಾದೆ ಇಲ್ವಾ ಅಂತ ಬೈದರು.ನನ್ನ ಮೇಲೆ ಹಲ್ಲೆ ಮಾಡೋಕೆ ಬಂದರು.ಅವರ ಪಕ್ಷದ ಕಾರ್ಯಕರ್ತರಿಗೆ ಏ ಇವಳಿಗೆ ಹೊಡಿರೋ ಅಂತ ಹೇಳಿದರು.ಲೇಡಿ ಪೊಲೀಸರನ್ನ ಕರೆಸಿ ಇವಳನ್ನ ಎಳ್ಕೊಂಡು ಹೋಗಿ ಅಂತಾ ಹೇಳಿದರು.ನನ್ನನ್ನ ಪೊಲೀಸ್ ಸ್ಟೇಷನ್ ಗೂ ಕರೆದುಕೊಂಡು ಹೋಗುವಂತೆ ಮಾಡಿದರು ಎಂದು ಅಳಲು ತೋಡಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ
Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.