ಕಾಡುಗಳ್ಳರಿಂದ ಎಆರ್‌ಎಫ್ಒ ಮೇಲೆ ಗುಂಡಿನ ದಾಳಿ
Team Udayavani, Aug 22, 2017, 7:50 AM IST
ಕಾರವಾರ: ಗಸ್ತು ತಿರುಗುತ್ತಿದ್ದ ಅಂಕೋಲಾ ತಾಲೂಕು ಸಹಾಯಕ ವಲಯ ಅರಣ್ಯಾಧಿಕಾರಿ ಹಜರತ್ ಸಾಬ್ ಕುಂದಗೋಳ ಮತ್ತು ನಾಲ್ವರು ಸಿಬ್ಬಂದಿ ಇದ್ದ ಜೀಪಿನ ಮೇಲೆ ಕಾಡುಗಳ್ಳರು ಗುಂಡಿನ ದಾಳಿ ನಡೆಸಿರುವ ಘಟನೆ ಭಾನುವಾರ ರಾತ್ರಿ ಸುಂಕಸಾಳ ಅರಣ್ಯ ವಲಯದಲ್ಲಿ ನಡೆದಿದೆ.
ಸುಂಕಸಾಳ ಅರಣ್ಯ ವಲಯದಲ್ಲಿ ಅಂಕೋಲಾ ತಾಲೂಕು ಸಹಾಯಕ ವಲಯ ಅರಣ್ಯಾಧಿಕಾರಿ ಹಜರತ್ ಸಾಬ್ ಕುಂದಗೋಳ ಮೂವರು ಸಿಬ್ಬಂದಿ ಜತೆ ಜೀಪಿನಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಎದುರಿನಿಂದ ಕಾಡುಗಳ್ಳರು ಗುಂಡಿನ ದಾಳಿ ನಡೆಸಿದ್ದಾರೆ. ಜೀಪ್ ಚಾಲಕ ರಾಮನಾಥ ನಾಯ್ಕ ಅವರ ಚಾಣಾಕ್ಷತನದಿಂದ ಹಜರತ್ ಸಾಬ್ ಗುಂಡು ತಾಗದೇ ಬಚಾವ್ ಆಗಿದ್ದಾರೆ. ಚಾಲಕ ರಾಮನಾಥ ನಾಯ್ಕ, ಸಿಬ್ಬಂದಿ ಕಿರಣ್ ನಾಯ್ಕ, ರಾಜಾಸಾವ್ ರಾಟಿ,
ಲೋಕನಾಥ ನಾಯ್ಕ ಸ್ವಲ್ಪದರಲ್ಲೇ ಗುಂಡೇಟಿನಿಂದ ಪಾರಾಗಿದ್ದಾರೆ. ಜೀಪ್ ಮುಂಭಾಗದಲ್ಲಿ ಮೂರು ಗುಂಡುತಾಗಿವೆ.
ಎರಡು ಬುಲೆಟ್ ಜೀಪ್ ಮುಂಭಾಗದ ಗ್ಲಾಸ್ ಹೊಕ್ಕಿವೆ. ಒಂದು ಗುಂಡು ಕನ್ನಡಿಗೆ ತಾಗಿದೆ. ಉಳಿದ ಮೂರು ಗುಂಡು ಜೀಪ್ ಎಡ ಬದಿಗೆ ತಾಗಿವೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಅರಣ್ಯದಲ್ಲಿ ಮರ ಕಡಿದು ಸಾಗಿಸುವವರ ಗುಂಪು
ಅಥವಾ ಪ್ರಾಣಿ ಬೇಟೆಯಾಡುವವರ ಗುಂಪು ಈ ದಾಳಿ ನಡೆಸಿರಬಹುದೆಂದು ಶಂಕಿಸಲಾಗಿದೆ. ಇದು ನಾಡ ಬಂದೂಕಿನದೆ, ಪಿಸ್ತೂಲ್‌ನದೇ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ. ಈಚೆಗೆ ಅರಣ್ಯದಲ್ಲಿ ಕಳ್ಳ ನಾಟಾ ಸಾಗಾಟ ಮತ್ತು ಪ್ರಾಣಿಬೇಟೆ ಪ್ರಕರಣಗಳಲ್ಲಿ ಬಂಧಿತರಾದವರನ್ನು ಗಮನದಲ್ಲಿರಿಸಿ ತನಿಖೆ ಕೈಗೆತ್ತಿಕೊಳ್ಳಲಾಗಿದೆ.
ಕಳೆದ ವರ್ಷ ಕಾಡುಗಳ್ಳರು ಯಲ್ಲಾಪುರ ತಾಲೂಕಿನಲ್ಲಿ ಅರಣ್ಯ ರಕ್ಷಕನನ್ನು ಗುಂಡಿಕ್ಕಿ ಕೊಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
MUST WATCH
ಹೊಸ ಸೇರ್ಪಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.