ಅರ್ಕಾವತಿ ಡಿ ನೋಟಿಫೈ: ಸಿದ್ದುಗೆ ಕ್ಲೀನ್‌ಚಿಟ್?
Team Udayavani, Aug 24, 2017, 8:10 AM IST
ಬೆಂಗಳೂರು: ರಾಜಕೀಯವಾಗಿ ಭಾರಿ ಕೋಲಾಹಲ ಎಬ್ಬಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ನೇರ ಆರೋಪ ಮಾಡಲಾಗಿದ್ದ ಅರ್ಕಾವತಿ ಡಿ ನೋಟಿμಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ನ್ಯಾ.ಎಚ್.ಎಸ್.ಕೆಂಪಣ್ಣ ನೇತೃತ್ವದ ವಿಚಾರಣಾ ಆಯೋಗ ಬುಧವಾರ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ವಿಚಾರಣೆ ಸಂದರ್ಭದಲ್ಲಿ 44 ದೂರುದಾರರ ಪೈಕಿ ಯಾರೊಬ್ಬರೂ ಖುದ್ದು ಹಾಜರಾಗಿ ಸಾಕ್ಷಿ ಹೇಳಿಕೆ ದಾಖಲಿಸಿಲ್ಲ.
ಹೀಗಾಗಿ ಸಿಎಂ ಸಿದ್ದರಾಮಯ್ಯ ವಿರುದಟಛಿ ಮಾಡಲಾಗಿದ್ದ ಗುರುತರ ಆರೋಪ ಸಾಬೀತುಪಡಿಸುವ ಸಾಕ್ಷಿ ಪುರಾವೆಗಳು ಸಿಕ್ಕಿಲ್ಲ. ಆದ್ದರಿಂದ ಸಿದ್ದರಾಮಯ್ಯಗೆ ಕ್ಲೀನ್‌ಚಿಟ್ ಸಿಕ್ಕಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಆದರೂ ಸಿದ್ದರಾಮಯ್ಯ ಅವರಿಗೆ ಕ್ಲೀನ್‌ಚಿಟ್ ಸಿಕ್ಕಿದೆಯಾ ಅಥವಾ ಸರ್ಕಾರದ ಲೋಪಗಳು ಮಾತ್ರ ವರದಿಯಲ್ಲಿ ಪ್ರಸ್ತಾಪಿಸಲಾಗಿದೆಯಾ ಎಂಬುದು ವರದಿ ಬಹಿರಂಗಗೊಂಡ ಮೇಲಷ್ಟೇ ಸ್ಪಷ್ಟವಾಗಲಿದೆ.
ವರದಿ ಸಲ್ಲಿಸಿದ ನ್ಯಾ. ಕೆಂಪಣ್ಣ ಅವರು ಮಾತ್ರ ಸುದ್ದಿಗಾರರ ಯಾವುದೇ ಪ್ರಶ್ನೆಗಳಿಗೂ ಉತ್ತರಿಸದೆ,”ನನ್ನ ಕೆಲಸ ಮಾಡಿದ್ದೇನೆ, ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇನೆ, ಈಗ ಅದು ಸರ್ಕಾರದ ಸ್ವತ್ತು’ ಎಂದಷ್ಟೇ ಹೇಳಿದರು.
ಆದರೆ, 1894 ಭೂಸ್ವಾಧೀನ ಕಾಯ್ದೆಯ ಸೆಕ್ಷನ್ 48ರಲ್ಲಿ ನಡೆಸಲಾದ 198 ಎಕರೆ ಡಿನೋಟಿμಕೇಷನ್‌ನಲ್ಲಿ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ನ ಮಾರ್ಗಸೂಚಿಗಳ ಉಲ್ಲಂಘನೆ ಆಗಿಲ್ಲ ಎಂಬ ಅಂಶವನ್ನು ವರದಿಯಲ್ಲಿ
ಉಲ್ಲೇಖೀಸಲಾಗಿದೆ ಎಂದು ಮೂಲಗಳು ಹೇಳುತ್ತವೆ. ಈ 198 ಎಕರೆ ಡಿನೋಟಿμಕೇಷನ್ ವಿಚಾರ ನೇರವಾಗಿ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದು. ಹಾಗಾಗಿ ಅರ್ಕಾವತಿ ಡಿನೋಟಿμಕೇಷನ್ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್‌ಚಿಟ್ ಸಿಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಅರ್ಕಾವತಿ ಬಡಾವಣೆಗೆ ಸ್ವಾಧೀನಪಡಿಸಿಕೊಳ್ಳಲಾಗಿದ್ದ ಜಮೀನಿನಲ್ಲಿ ಒಟ್ಟು 981.21 ಎಕರೆ ಜಮೀನು ಡಿನೋಟಿμಕೇಷನ್ ಮಾಡಲಾಗಿದೆ. ಇದರಲ್ಲಿ 1894 ಭೂಸ್ವಾಧೀನ ಕಾಯ್ದೆಯ ಸೆಕ್ಷನ್ 48ರಡಿ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ಗಳ ಮಾರ್ಗಸೂಚಿಗಳನ್ನು ಪಾಲಿಸಿ ಡಿನೋಟಿμಕೇಷನ್ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ಅದರಂತೆ 198 ಎಕರೆ ಮೂರೂವರೆ ಗುಂಟೆ ಜಮೀನು ಡಿನೋಟಿμಕೇಷನ್ ಆಗಿದೆ. ಉಳಿದಂತೆ
ಬಿಡಿಎ, ವಿಶೇಷ ಭೂಸ್ವಾಧೀನಾಧಿಕಾರಿಗಳಿಂದ ಡಿನೋಟಿμಕೇಷನ್ ನಡೆದಿದೆ. ಒಂದು ವೇಳೆ 198 ಎಕರೆ ಡಿನೋಟಿμಕೇಷನ್‌ನಲ್ಲಿ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ನ ಮಾರ್ಗಸೂಚಿ ಉಲ್ಲಂ ಸಿದ್ದರೆ ರಾಜ್ಯ ಸರ್ಕಾರ
ಸಂಕಷ್ಟಕ್ಕೆ ಸಿಲುಕುತ್ತದೆ. ಆದರೆ, ಸರ್ಕಾರ ನಡೆಸಿದ ಡಿನೋಟಿμಕೇಷನ್‌ನಲ್ಲಿ ಮಾರ್ಗಸೂಚಿಗಳ ಉಲ್ಲಂಘನೆ ಆಗಿಲ್ಲ ಎಂದು ಹೇಳಲಾಗಿದೆ.
2013ರ ಮೇ 13ರ ನಂತರದಿಂದ “ರೀ ಡೂ ಮಾಡಿμಕೇಷನ್ ಸ್ಕೀಂ’ ಜಾರಿಗೆ ಬಂದ 2014ರ ಜುಲೈ 18ರೊಳಗಿನ ಅವಧಿಯಲ್ಲಿ ರಾಜ್ಯ ಸರ್ಕಾರದಿಂದ ಡಿನೋಟಿμಕೇಷನ್ ನಡೆದ ಸಾಧ್ಯತೆಗಳನ್ನು ಪುಷ್ಟೀಕರಿಸುವ ಕಾನೂನಾತ್ಮಕ ಹಾಗೂ ಸಿಂಧುತ್ವಾತ್ಮಕ ಅಂಶಗಳು ಸಾಕ್ಷಿಗಳ ಹೇಳಿಕೆ ದಾಖಲಿಸುವ ಹಾಗೂ ಪಾಟಿ ಸವಾಲು ನಡೆಸುವ ಸಂದರ್ಭದಲ್ಲಿ ದೃಢಪಟ್ಟಿಲ್ಲ ಎಂಬ ಅಂಶವೂ ಇದೆ ಎಂದು ತಿಳಿದು ಬಂದಿದೆ. ಡಿನೋಟಿμಕೇಷನ್‌ಗೆ ಸಂಬಂಧಿಸಿದಂತೆ ಆಯೋಗಕ್ಕೆ ಸಲ್ಲಿಕೆಯಾಗಿದ್ದ ಒಟ್ಟು 85 ದೂರು ಅರ್ಜಿಗಳ ಪೈಕಿ ವಿಚಾರಣೆಗೆ ಪರಿಗಣಿಸಲಾಗಿದ್ದ 44 ದೂರು ಅರ್ಜಿಗಳ ದೂರುದಾರರಿಗೆ ಸಾಕಷ್ಟು ಅವಕಾಶಗಳನ್ನು ನೀಡಿದ್ದರೂ, ಒಬ್ಬರೂ ಖುದ್ದು ಹಾಜರಾಗಿ ಹೇಳಿಕೆ ದಾಖಲಿಸಿಲ್ಲ. ಕೇವಲ ಪ್ರತಿವಾದಿ ಗಳಲ್ಲಿ ಬಿಡಿಎ ಆಯುಕ್ತರು, ನಾಲ್ವರು ವಿಶೇಷ ಭೂಸ್ವಾಧೀನಾಧಿಕಾರಿಗಳು ಹಾಗೂ ನಗರಾಭಿವೃದಿಟಛಿ
ಇಲಾಖೆಯ ಅಧೀನ ಕಾರ್ಯದರ್ಶಿ ಮಾತ್ರ ವಿಚಾರಣೆಗೆ ಹಾಜರಾಗಿದ್ದು, ಅವರ ಸಾಕ್ಷಿ ವಿಚಾರಣೆ ಹಾಗೂ ಪಾಟಿ ಸವಾಲು ಮಾತ್ರ ನಡೆದಿದೆ. ಇದರ ಜೊತೆಗೆ ದೂರುದಾರರು ಹಾಗೂ ಪ್ರತಿವಾದಿಗಳ ವಕೀಲರ ವಾದ-ಪ್ರತಿವಾದ ಸಹ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
MUST WATCH
ಹೊಸ ಸೇರ್ಪಡೆ
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!
Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.