ಮೂವರು ಮನೆಗಳ್ಳರ ಬಂಧನ
Team Udayavani, Dec 27, 2018, 11:35 AM IST
ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಹಗಲು ಮತ್ತು ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳು ನಗರ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಜೆ.ಪಿ.ನಗರದ ಬಿಳೇಕಳ್ಳಿ ನಿವಾಸಿ ರಾಜ ಅಲಿಯಾಸ್ ಜಪಾನ್ ರಾಜ (40), ನಾಗರಾಜ್ ಅಲಿಯಾಸ್ ಮತ್ತಿನಾಗ (24), ಮಲ್ಲೇಶ್ವರ ನಿವಾಸಿ ಕಿರಣ್ ಅಲಿಯಾಸ್ ಕಿರಣ್ ಕುಮಾರ್ (26) ಬಂಧಿತರು. ಇದೇ ವೇಳೆ ಆರೋಪಿಗಳು ಕದ್ದ ಚಿನ್ನಾಭರಣ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಜಯನಗರ ನಿವಾಸಿ ನೀಲಮ್ಮ (70) ಮತ್ತು ಕದ್ದ ಚಿನ್ನ
ಖರೀದಿಸಿದ ಆರೋಪದಲ್ಲಿ ಬಿಳೇಕಳ್ಳಿ ನಿವಾಸಿ, ಜ್ಯುವೆಲರಿ ಮಾಲೀಕ ಸೈಯದ್ ಫರೂಕ್ (47)ನನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳಿಂದ 1.2 ಕೋಟಿ ರೂ. ಮೌಲ್ಯದ 4 ಕೆ.ಜಿ. 77 ಗ್ರಾಂ ಚಿನ್ನಾಭರಣ, 1 ಕೆ.ಜಿ 300 ಗ್ರಾಂ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ಬಂಧನದಿಂದ ನಗರದ 27 ಠಾಣೆಗಳ ವ್ಯಾಪ್ತಿಗಳಲ್ಲಿ ದಾಖಲಾಗಿದ್ದ 44 ಮನೆಗಳವು ಪ್ರಕರಣಗಳು ಪತ್ತೆಯಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಡಿ.12ರಂದು ಮೂವರು ಆರೋಪಿಗಳು ಕೆ.ಪಿ.ಅಗ್ರಹಾರ ಠಾಣೆ ವ್ಯಾಪ್ತಿಯ ಮಾಗಡಿ ರಸ್ತೆಯಲ್ಲಿರುವ ಫೋರ್ಡ್ ಐಕಾನ್ ಕಾರು ಶೋ ರೂಂ ಹತ್ತಿರ ಮಾರಕಾಸ್ತ್ರಗಳನ್ನು ಹಿಡಿದು ದರೋಡೆ ಮಾಡಲು ಸಂಚು ರೂಪಿಸಿದ್ದರು. ಈ ಮಾಹಿತಿ ಆಧರಿಸಿ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ಜೈಲಿನಲ್ಲೇ ಕಳವಿಗೆ ಸಂಚು?: ಆರೇಳು ವರ್ಷಗಳಿಂದ ಮನೆಗಳ್ಳತನ ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿರುವ ಆರೋಪಿಗಳು, ಕಳ್ಳತನ ಪ್ರಕರಣಗಳ ಸಂಬಂಧ ಆಗಾಗ ಪರಪ್ಪನ ಅಗ್ರಹಾರ ಜೈಲು ಸೇರುತ್ತಿದ್ದರು. ಈ ವೇಳೆ ಪರಸ್ಪರ ಪರಿಚಯವಾಗಿದ್ದು, ಜೈಲಿನಿಂದಲೇ ಮನೆ ಕಳ್ಳತನಕ್ಕೆ ಸಂಚು ರೂಪಿಸುತ್ತಿದ್ದರು. ಜಾಮೀನು ಪಡೆದು ಹೊರ ಬಂದ ಬಳಿಕ ಮೂವರು ಒಟ್ಟಾಗಿ ಕೃತ್ಯವೆಸಗುತ್ತಿದ್ದರು ಎಂದು ಪೊಲೀಸರು ಹೇಳಿದರು
ಕಳವು ಮಾಡಿದ ದ್ವಿಚಕ್ರ ವಾಹನಗಳಲ್ಲಿ ಮೂವರೂ ಆರೋಪಿಗಳು ನಗರದ ಪ್ರತಿಷ್ಠಿತ ಪ್ರದೇಶಗಳಲ್ಲಿ ಸುತ್ತಾಡುತ್ತಿದ್ದರು. ಈ ವೇಳೆ ಎರಡು ಮೂರು ದಿನಗಳ ದಿನ ಪತ್ರಿಕೆ ಹಾಗೇ ಬಿದ್ದಿರುವ ಮನೆಗಳು, ರಂಗೋಲಿ ಹಾಕದೆ ಕಸ ಬಿದ್ದಿರುವ ಮನೆಗಳನ್ನು ಗುರುತಿಸುತ್ತಿದ್ದರು. ಬಳಿಕ ಅದೇ ದಿನ ರಾತ್ರಿ ಅಥವಾ ಮರುದಿನ ಬೆಳಗ್ಗೆ ಆ ಮನೆಗಳ ಬಳಿ ಬಂದು ಕೃತ್ಯಕ್ಕೆ ಸಜ್ಜಾಗುತ್ತಿದ್ದರು.ಈ ಪೈಕಿ ರಾಜ ಅಲಿಯಾಸ್ ಜಪಾನ್ ರಾಜ ತನ್ನ ಬಳಿಯಿದ್ದಕಬ್ಬಿಣದ ಆಯುಧದಿಂದ ಮನೆಗಳ ಬೀಗ ಹಾಗೂ ಚೀಲಕಗಳನ್ನುಮೀಟಿ ಒಳ ಪ್ರವೇಶಿ, ಮನೆಗಳಲ್ಲಿದ್ದ ಚಿನ್ನಾಭರಣ ಕಳವು
ಮಾಡುತ್ತಿದ್ದ. ಈ ಸಂದರ್ಭದಲ್ಲಿ ನಾಗರಾಜ್ ಮತ್ತು ಕಿರಣ್ ಮನೆಯ ಹೊರಗಡೆ ನಿಂತು ನಿಗಾವಹಿಸುತ್ತಿದ್ದರು.
ವೃದ್ಧೆ ಬಳಕೆ: ಪ್ರಕರಣದಲ್ಲಿ ಬಂಧನವಾಗಿರುವ ಜಯನಗರ ನಿವಾಸಿ ನೀಲಮ್ಮ, ಸ್ವಂತ ಆಟೋ ಹೊಂದಿದ್ದು, ಈ
ಆಟೋವನ್ನು ಆರೋಪಿ ರಾಜ ಬಾಡಿಗೆಗೆ ಓಡಿಸುತ್ತಿದ್ದ. ಹೀಗಾಗಿ ನೀಲಮ್ಮನಿಗೆ ನಾಲ್ಕೈದು ವರ್ಷಗಳಿಂದ ಆರೋಪಿಯ ಪರಿಚಯವಿದೆ. ಈ ಹಿನ್ನೆಲೆಯಲ್ಲಿ ಆರೋಪಿ ತನ್ನ ಸಹಚರರ ಜತೆ ಸೇರಿ ಕಳವು ಮಾಡುತ್ತಿದ್ದ ಚಿನ್ನಾಭರಣಗಳನ್ನು ನೀಲಮ್ಮಗೆ ಕೊಟ್ಟು, ಅವೆರಲ್ಲವೂ ತನ್ನ ಪತ್ನಿ, ಸಂಬಂಧಿಕರ ಒಡವೆಗಳು. ಮನೆ ಕಟ್ಟಲು, ಮಕ್ಕಳ ಶಾಲಾ ಫೀಸ್ ಕಟ್ಟಲು ಹಣ ಬೇಕು ಎಂದು ಸುಳ್ಳು ಹೇಳಿ ನಂಬಿಸುತ್ತಿದ್ದ. ಈತನ ಮಾತು ನಂಬುತ್ತಿದ್ದ ನೀಲಮ್ಮ, ಜಯನಗರದ ಅಕ್ಷಯ ಗೋಲ್ಡ್ ಕಂಪನಿ, ಹಿಂದೂಸ್ತಾನ್ ಗೋಲ್ಡ್ ಕಂಪನಿ, ಅಟ್ಟಿಕಾ ಗೋಲ್ಡ್ ಕಂಪನಿ, ಸುಲ್ತಾನ್ ಗೋಲ್ಡ್ ಕಂಪನಿಗಳಲ್ಲಿ ಚಿನ್ನ ಮಾರಾಟ ಮಾಡಿಸುತ್ತಿದ್ದರು. ಈ ರೀತಿ ಸಹಾಯ ಮಾಡಿದ ನೀಲಮ್ಮಗೆ ಆರೋಪಿ 2ರಿಂದ 3 ಸಾವಿರ ರೂ. ಹಣ ಕೊಡುತ್ತಿದ್ದ. ಆರೋಪಿ ಕಖ ಎಂದು ತಿಳಿಯದ ನೀಲಮ್ಮ, ಜೀವನ ನಿರ್ವಹಣೆಗೆ ಸಹಾಯವಾಗಲಿದೆ ಎಂದು ಹಣ ಪಡೆದುಕೊಳ್ಳುತ್ತಿದ್ದರು. ಮತ್ತೂಂದೆಡೆ ಜ್ಯುವೆಲರಿ ಅಂಗಡಿ ಮಾಲೀಕ, ಬಿಳೇಕಳ್ಳಿ ದೇವರ ಚಿಕ್ಕನಹಳ್ಳಿಯ ನಿವಾಸಿ ಸೈಯದ್ ಫಾರೂಕ್‌ಗೆ ಆರೋಪಿಗಳು ಚಿನ್ನಾಭರಣ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರುಹೇಳಿದರು. ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಕೆ.ಸಿಂಗ್, ಪಶ್ಚಿಮ ವಲಯ ಡಿಸಿಪಿ ರವಿ ಡಿ. ಚೆನ್ನಣ್ಣನವರ್ ಉಪಸ್ಥಿತರಿದ್ದರು.
ಐಷಾರಾಮಿ ಜೀವನ
ಆರೋಪಿಗಳು ಚಿನ್ನಾಭರಣಗಳನ್ನು ಮಾರಾಟ ಮಾಡಿದ ಹಣದಲ್ಲಿ ಮೋಜು-ಮಸ್ತಿ, ಪ್ರವಾಸ ಎಂದೆಲ್ಲಾ ಐಷಾರಾಮಿ ಜೀವನ ನಡೆಸುತ್ತಿದ್ದರು. ಪ್ರತಿ ಬಾರಿ ಕೃತ್ಯವೆಸಗಿದ ಬಳಿಕ ತಮಿಳುನಾಡು, ಆಂಧ್ರಪ್ರದೇಶ, ಕೇರಳದ ಪ್ರವಾಸಿ ತಾಣಗಳಿಗೆ ಹೋಗುತ್ತಿದ್ದರು ಎಂಬುದುವಿಚಾರಣೆ ಸಂದರ್ಭದಲ್ಲಿ ತಿಳಿದು ಬಂದಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.