ವಿಧಾನಸಭೆ ಚುನಾವಣೆ ಹಿನ್ನೆಲೆ: ರಾಜ್ಯಕ್ಕೆ ರೈಲ್ವೆ ಬಂಪರ್ ನಿರೀಕ್ಷೆ
Team Udayavani, Jan 30, 2018, 7:33 AM IST
ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಬಜೆಟ್‌ನಲ್ಲಿ ಈ ಬಾರಿ ರಾಜ್ಯದ ರೈಲ್ವೆ ಬೇಡಿಕೆಗಳಿಗೆ ಬಂಪರ್ ಕೊಡುಗೆ ಸಿಗುವ ನಿರೀಕ್ಷೆಯಿದೆ. ರಾಜಧಾನಿಯ ಬೆಂಗಳೂರಿಗರ ಬಹು ವರ್ಷದ ಬೇಡಿಕೆಯಾದ 170 ಕಿ.ಮೀ.ಬೆಂಗಳೂರು ಸಬರ್ಬನ್ ರೈಲು ಸೇವೆಯನ್ನು ಬಜೆಟ್‌ನಲ್ಲಿ ಘೋಷಿಸುವ ಸಾಧ್ಯತೆಯಿದೆ. ಇದರ ಜತೆಗೆ, ಬೆಂಗಳೂರು-ಹುಬ್ಬಳ್ಳಿ-ಮುಂಬೈ ಸೂಪರ್‌ಫಾಸ್ಟ್, ಹುಬ್ಬಳ್ಳಿ-ಬೆಳಗಾವಿ ರಾತ್ರಿ ಸೇವೆ, ಹೊಸಪೇಟೆ-ಬೆಂಗಳೂರು ನಡುವೆ ಮತ್ತೂಂದು ರೈಲು ಆರಂಭಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
(ಹಂಪಿ ಎಕ್ಸ್‌ಪ್ರೆಸ್‌ಗೆ ಪ್ರಯಾಣಿಕರ ಒತ್ತಡ ಹೆಚ್ಚಳ ಹಿನ್ನೆಲೆ), ಸೆಂಟ್ರಲ್ ರೈಲ್ವೆ ವಲಯದಲ್ಲಿರುವ ಕಲಬುರಗಿ ಪ್ರತ್ಯೇಕ ವಲಯ ಮಾಡುವ ಬೇಡಿಕೆ, ಮಂಗಳೂರನ್ನು ನೈಋತ್ಯ ವಲಯಕ್ಕೆ ಸೇರಿಸುವ ಬೇಡಿಕೆ ಬಗ್ಗೆ ಇಲಾಖೆ ಮಟ್ಟದಲ್ಲಿ ಚರ್ಚೆ ನಡೆದು ಬಜೆಟ್‌ನಲ್ಲಿ ಸೇರಿಸಬಹುದಾದ ವಿಚಾರಗಳ ಪ್ರಸ್ತಾವನೆ ಸಿದ್ಧಗೊಂಡಿದೆ ಎಂದು ಮೂಲಗಳುತಿಳಿಸಿವೆ.
ಸಬರ್ಬನ್: ಸುರೇಶ್ ಪ್ರಭು ರೈಲ್ವೆ ಸಚಿವರಾಗಿದ್ದಾಗ ಸಬರ್ಬನ್ ರೈಲು ಯೋಜನೆ ಕುರಿತ ಒಪ್ಪಂದಕ್ಕೆ ಸಹಿ ಸಹ ಮಾಡಿದ್ದರು. ರೈಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರ ತಲಾ ಶೇ.20ರಷ್ಟು ಹೂಡಿಕೆ ಮಾಡಿ ಉಳಿದ ಶೇ.60ರಷ್ಟು ಸಾಲ ಪಡೆಯುವುದು. ಆ ಸಾಲವನ್ನು
ರಾಜ್ಯ ಸರ್ಕಾರ ತೀರಿಸುವುದು ಎಂದು ಹೇಳಲಾಗಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ಅವರು ಅಷ್ಟು ಹೊರೆ ರಾಜ್ಯ ಸರ್ಕಾರ ಭರಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರವೂ ಭರಿಸಬೇಕೆಂಬ ಬೇಡಿಕೆ ಇಟ್ಟಿದ್ದರು. ಸಬರ್ಬನ್ ರೈಲು ಸೇವೆಗೆ 12 ಸಾವಿರ ಕೋಟಿ
ರೂ. ವೆಚ್ಚವಾಗುವುದರಿಂದ ಅದಕ್ಕಾಗಿಯೇ ವಿಶೇಷ ಉದ್ದೇಶದ ವಾಹಕ (ಎಸ್‌ಪಿವಿ) ಸ್ಥಾಪಿಸಲು ತೀರ್ಮಾನಿಸಲಾಗಿತ್ತು. ಆದರೆ, ಇದೀಗ ರೈಲ್ವೆ ಇಲಾಖೆಯು ತಮ್ಮ ಸುಪರ್ದಿಯಲ್ಲಿರುವ ಜಾಗವನ್ನು ಗುತ್ತಿಗೆ ಆಧಾರದಲ್ಲಿ ವಾಣಿಜ್ಯ ಉಪಯೋಗಕ್ಕೆ ನೀಡಿ
ಅದರಿಂದ ಬರುವ ಆದಾಯ ಇದಕ್ಕೆ ಬಳಸಲು ಮುಂದಾಗಿದೆ. ರಾಜ್ಯ ಸರ್ಕಾರ ಸಹಕಾರದೊಂದಿಗೆ ಖಾಸಗಿ-ಸಾರ್ವಜನಿಕ-ಸಹಭಾಗಿತ್ವದಡಿ ಯೋಜನೆ ಅನುಷ್ಠಾನಕ್ಕೆ ರೈಲ್ವೆ ಇಲಾಖೆ ಮುಂದಾಗಿದೆ. ಬಾಣಸವಾಡಿ, ಯಲಹಂಕ, ಯಶವಂತಪುರ, ಕೆಂಗೇರಿ, ಕಾಕ್ಸ್‌ಟೌನ್, ಮಲ್ಲೇಶ್ವರ, ರಾಮನಗರ, ವೈಟ್‌ಫಿಲ್ಡ್, ದೊಡ್ಡಬಳ್ಳಾಪುರ, ನೆಲಮಂಗಲ ಮಾರ್ಗದಲ್ಲಿ ಸಬರ್ಬನ್ ರೈಲು ಸೇವೆಗೆ ನಕ್ಷೆ
ಸಿದ್ಧವಾಗಿದ್ದು, ನಗರ ಪ್ರದೇಶಗಳಲ್ಲಿ ಎಲಿವೇಟೆಡ್ (ಎತ್ತರೀಕರಿಸಿದ ರೈಲು ಹಳಿ) ಮಾರ್ಗ ನಿರ್ಮಾಣ ವಾಗಲಿದೆ. ಇದರ ಜತೆಗೆ ಯಶವಂತಪುರ- ಹೊಸೂರು ದ್ವಿಪಥ (ಡಬಲಿಂಗ್) ಹಾಗೂ ವಿದ್ಯುದ್ದೀಕರಣ ಮಾಡಿದರೆ ನಗರದ 200 ಕಿ.ಮೀ. ವ್ಯಾಪ್ತಿಯಲ್ಲಿ ಸಬರ್ಬನ್ ರೈಲು ಸಿಗುವ ಸಾಧ್ಯತೆಗಳಿವೆ.
ವೇಗ ಸಿಗಬೇಕಿದೆ: ರಾಜ್ಯದ ರೈಲ್ವೆ ಯೋಜನೆಗಳ ಪೈಕಿ ಚಾಲ್ತಿಯಲ್ಲಿರುವ ಗದಗ-ವಾಡಿ, ಗಿಣಿಗೆರ- ಮೆಹಬೂಬ್‌ನಗರ, ಕುಡಚಿ-ಬಾಗಲಕೋಟೆ, ತುಮ ಕೂರು- ರಾಯದುರ್ಗ, ತುಮಕೂರು-ಚಿತ್ರದುರ್ಗ -ದಾವಣಗೆರೆ ಮಾರ್ಗಗಳ ಕಾಮಗಾರಿಗೆ ವೇಗ
ಸಿಗಬೇಕಿದೆ. ಹುಬ್ಬಳ್ಳಿ-ಬೆಂಗಳೂರು ವಿದ್ಯುದ್ದೀಕರಣ ಕೆಲಸ ಪ್ರಾರಂಭವಾಗಿಲ್ಲ. ಈ ಹಿಂದಿನ ಬಜೆಟ್‌ನಲ್ಲಿ ಮುಂದಿನ ಐದು ವರ್ಷದಲ್ಲಿ 1,058 ಕಿ.ಮೀ. ವಿದ್ಯುದ್ದೀಕರಣ ಘೋಷಣೆ ಮಾಡಲಾಗಿತ್ತು. ಆ ಕೆಲಸವೂ ಇನ್ನೂ ಪ್ರಾರಂಭವಾಗಿಲ್ಲ. ತುಮಕೂರು-ಅರಸೀಕೆರೆ, ಚಿಕ್ಕಜಾಜೂರು- ಹುಬ್ಬಳ್ಳಿ, ಹುಬ್ಬಳ್ಳಿ- ಲೋಂಡಾ- ಮೀರಜ್, ಗದಗ- ಹೊಟಗಿ, ಯಶವಂಪುರ-ಪೆನಗೊಂಡ ದ್ವಿಪಥ ಕಾಮಗಾರಿ ನಡೆಯಬೇಕಿದೆ. ಈ ಬಾರಿಯ ಬಜೆಟ್‌ನಲ್ಲಿ ಇದಕ್ಕೆ ಅನುದಾನ ಸಿಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಮುಗಿದ ಮೂರು ಯೋಜನೆ: ಕಳೆದ ವರ್ಷಕ್ಕೆ ಹೋಲಿಸಿದರೆ ಹಾಸನ-ಬೆಂಗಳೂರು, ಕಲಬುರಗಿ- ಬೀದರ್ ಮಾರ್ಗ ಪ್ರಾರಂಭಗೊಂಡಿದೆ. ಬೆಂಗ ಳೂರು-ಮೈಸೂರು ನಡುವೆ 139 ಕಿ.ಮೀ. ದ್ವಿಪಥ ಹಾಗೂ ವಿದ್ಯುದ್ದೀಕರಣ ಮುಗಿದಿದೆಯಾದರೂ
ಇನ್ನೂ ಉದ್ಘಾಟನೆ ಭಾಗ್ಯ ಒದಗಿ ಬಂದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರಿಂದಲೇ ಉದ್ಘಾಟನೆ ಮಾಡಿಸ ಬೇಕೆಂಬ ಕಾರಣಕ್ಕೆ ಕಾಯಲಾಗುತ್ತಿದೆ. ಫೆ.4 ರಂದು ಪ್ರಧಾನಿಯವರು ಪರಿವರ್ತನಾ ಯಾತ್ರೆ ಸಮಾರೋಪಕ್ಕೆ ಬಂದಾಗ ಚಾಲನೆ ಸಿಗಬಹುದು
ಎಂದೂ ಹೇಳಲಾಗಿದೆ.
ಕಳೆದ ಬಾರಿ ಬಜೆಟ್‌ನಲ್ಲಿ ರಾಜ್ಯದ ರೈಲ್ವೆ ಯೋಜನೆಗಳಿಗೆ 800 ಕೋಟಿ ರೂ.ಗಳಷ್ಟು ಅನುದಾನ ಒದಗಿಸಿ, ವಿವಿಧ ಕಾಮಗಾರಿಗಳಿಗೆ ಬೇರೆ ಬೇರೆ ಮೂಲಗಳಿಂದ ಅನುದಾನ ಲಭ್ಯವಾಗುವಂತೆ ಮಾಡಲಾಗಿತ್ತು. ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಡಬಲ್ ಆಗುವ ನಿರೀಕ್ಷೆಯಲ್ಲಿದ್ದೇವೆ. ರೈಲ್ವೆ ಯೋಜನೆ ಗಳಿಗೆ ಜಮೀನು, ಹಣದ ಸಹಭಾಗಿತ್ವ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕ. ಹೀಗಾಗಿ, ಕೇಂದ್ರ ನಮ್ಮ ಬಗ್ಗೆ ವಿಶೇಷ ಮುತುವರ್ಜಿ ತೋರಲೇಬೇಕು.
●ಕೃಷ್ಣಪ್ರಸಾದ್, ರೈಲ್ವೆ ಹೋರಾಟಗಾರ
●ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್
Illegal Property Case: ಸಚಿವ ಜಮೀರ್ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!
MUST WATCH
ಹೊಸ ಸೇರ್ಪಡೆ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.