ಕೊಳವೆ ಬಾವಿ ಅಕ್ರಮ ತನಿಖೆಗೆ: ಸಿಎಂ ಬಸವರಾಜ ಬೊಮ್ಮಾಯಿ
ಕೊಳವೆ ಬಾವಿ,ಬಸವರಾಜ ಬೊಮ್ಮಾಯಿ,
Team Udayavani, Sep 15, 2022, 7:00 AM IST
ವಿಧಾನಸಭೆ: ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಆದಿ ಜಾಂಬವ ಅಭಿವೃದ್ಧಿ ನಿಗಮ ವತಿಯಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಿರುವ ಯೋಜನೆಯಲ್ಲಿ ಅವ್ಯವಹಾರ ನಡೆದಿದ್ದರೆ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಪ್ರಶ್ನೋತ್ತರ ವೇಳೆ ಕಾಂಗ್ರೆಸ್‌ನ ಯತೀಂದ್ರ ಸಿದ್ದರಾಮಯ್ಯ ವಿಷಯ ಪ್ರಸ್ತಾಪಿಸಿದಾಗ ಪ್ರಿಯಾಂಕ್ ಖರ್ಗೆ, 431 ಕೋಟಿ ರೂ. ವೆಚ್ಚದ ಯೋಜನೆಯಲ್ಲಿ ಲೂಟಿ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಬೋರ್‌ವೆಲ್ ಕೊರೆಸಿದರೆ 84 ಸಾವಿರ ರೂ., ನಿಗಮದಿಂದ ಬೋರ್‌ವೆಲ್ ಕೊರೆಸಿದರೆ 1.24 ಲಕ್ಷ ರೂ. ಪಾವತಿಸಲಾಗಿದೆ. ನಕಲಿ ಕಾಮಗಾರಿ ಪ್ರಮಾಣಪತ್ರ ಕೊಟ್ಟವರಿಗೆ ಟೆಂಡರ್ ನೀಡಲಾಗಿದೆ. ಇದು ಸರ್ಕಾರದ ಆಂತರಿಕ ಸಮಿತಿಯ ತನಿಖೆಯಿಂದಲೇ ಗೊತ್ತಾಗಿದೆ ಎಂದು ದೂರಿದರು.
ಇದಕ್ಕೆ ಹಲವು ಕಾಂಗ್ರೆಸ್ ಸದಸ್ಯರು ದನಿಗೂಡಿಸಿದರು. ಜೆಡಿಎಸ್ ಸದಸ್ಯರೂ ಇದರಲ್ಲಿ ಸಾಕಷ್ಟು ಲೋಪಗಳಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಸಚಿವರು ಸೂಕ್ತ ಉತ್ತರ ಕೊಡಲಿಲ್ಲ ಎಂದು ಸದನದ ಬಾವಿಗೆ ಇಳಿದು ಧರಣಿಗೆ ಮುಂದಾದರು.
ಆಗ ಮುಖ್ಯಮಂತ್ರಿಯವರು ಈ ಯೋಜನೆಯ ಲೋಪ ಸರಿಪಡಿಸಿ ಒಂದು ಹಂತಕ್ಕೆ ತರಬೇಕಾಗಿದೆ. ಸದ್ಯದಲ್ಲೇ ಸಭೆ ಕರೆದು ಚರ್ಚಿಸಲಾಗುವುದು ಎಂದರು.
ಇದಕ್ಕೂ ಸದಸ್ಯರು ಒಪ್ಪದಿದ್ದಾಗ, ಅಕ್ರಮ ಆಗಿದ್ದರೆ ತನಿಖೆ ನಡೆಸಲಾಗುವುದು. ನಕಲಿ ಕಾಮಗಾರಿ ಪ್ರಮಾಣ ಪತ್ರ ಕೊಟ್ಟಿರುವುದು ಸೇರಿ ತನಿಖೆಗೆ ಒಳಪಡಿಸಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ಯತೀಂದ್ರ, ರಾಜ್ಯಾದ್ಯಂತ ಒಬ್ಬರೇ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿದೆ. ಬೋರ್‌ವೆಲ್ ಕೊರೆದು ವಿದ್ಯುತ್ ಸಂಪರ್ಕ ಕಲ್ಪಿಸಲು ವರ್ಷಗಳಾದರೂ ಆಗುತ್ತಿಲ್ಲ ಎಂದು ದೂರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: 39 ಲಕ್ಷ ಕೇಸ್ ಇತ್ಯರ್ಥ; ಪುನಃ ಒಂದಾದ 307 ದಂಪತಿ
ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.