ಸದನದ ಹೊರಗೂ ಧ್ವಜ ಗದ್ದಲ : ಆರೋಪ ಪ್ರತ್ಯಾರೋಪ
Team Udayavani, Feb 17, 2022, 6:50 AM IST
ಬೆಂಗಳೂರು: ರಾಷ್ಟ್ರಧ್ವಜ ಕುರಿತು ಆಡಳಿತ ಮತ್ತುಪ್ರತಿಪಕ್ಷಗಳ ನಾಯಕರ ವಾಕ್ಸಮರ ಸದನದ ಹೊರಗೂ ಮುಂದುವರೆದಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ನೇರವಾಗಿ ಆರೋಪ ಪ್ರತ್ಯಾರೋಪ ಮುಂದುವರೆಸಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳ ಗದ್ದಲದಿಂದ ಸದನದಲ್ಲಿ ಚರ್ಚೆಗೆ ಅವಕಾಶ ವಂಚಿತರಾಗಿರುವ ಜೆಡಿಎಸ್ ನಾಯಕರು ಎರಡೂ ಪಕ್ಷಗಳ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ವಿರುದ್ದ ಕಾಂಗ್ರೆಸ್ ಸದಸ್ಯರು ಧರಣಿ ನಡೆಸಿದ ಹಿನ್ನೆಲೆಯಲ್ಲಿ ಕಲಾಪ ಗುರುವಾರಕ್ಕೆ ಮುಂದೂಡಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೆ.ಎಸ್.ಈಶ್ವರಪ್ಪ, ಆರ್. ಅಶೋಕ್ ಸೇರಿದಂತೆ ಆಡಳಿತ ಪಕ್ಷದ ನಾಯಕರು ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದರೆ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಹರಿಹಾಯ್ದರು. ಈ ನಡುವೆ ಎರಡೂ ರಾಷ್ಟ್ರೀಯ ಪಕ್ಷಗಳು ರಾಜಕೀಯಕ್ಕೆ ಸದನವನ್ನು ಬಳಸಿಕೊಳ್ಳುತ್ತಿವೆ ಎಂದು ಜೆಡಿಎಸ್ ನಾಯಕರು ಆರೋಪಿಸಿದ್ದಾರೆ.
ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ: ಸಿಎಂ
ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳಿಂದ ಕಾಂಗ್ರೆಸ್ ನಾಯಕರು ಬಹಳ ಹತಾಶೆ ಆಗಿದ್ದಾರೆ. ಕಾಂಗ್ರೆಸ್ ರಾಜಕೀಯವಾಗಿ ದಿವಾಳಿ ಆಗಿದೆ. ಅವರು ರಾಜ್ಯಪಾಲರ ಭಾಷಣದ ಬಗ್ಗೆ ಚರ್ಚೆ ಮಾಡಬಹುದಿತ್ತು. ಅವರಿಗೆ ಜನರ ಸಮಸ್ಯೆ ಬೇಕಾಗಿಲ್ಲ. ಈಶ್ವರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ. ಐನೂರು ವರ್ಷ ಆದಮೇಲೆ ಭಗವಾಧ್ವಜ ಹಾರಬಹುದು. ರಾಷ್ಟ್ರಧ್ವಜಕ್ಕೆ ಗೌರವ ಕೊಡಬೇಕು ಎಂದು ಹೇಳಿದ್ದಾರೆ. ಕಾಂಗ್ರೆಸ್‌ನವರು ಆಯ್ದ ಭಾಗಗಳನ್ನ ಆರಿಸಿಕೊಂಡು ಜನರಿಗೆ ದಾರಿ ತಪ್ಪಿಸುತ್ತಿದ್ದಾರೆ. ಈಶ್ವರಪ್ಪ ಹೇಳಿಕೆಯಿಂದ ಕಾನೂನು ಉಲ್ಲಂಘನೆಯಾಗಿಲ್ಲ. ಇಲ್ಲಸಲ್ಲದ ಆರೋಪಗಳನ್ನ ಮಾಡುತ್ತಿದ್ದಾರೆ. ರಾಷ್ಟ್ರ ಧ್ವಜ ಬಳಕೆ ಮಾಡಲು ಧ್ವಜ ಸಂಹಿತೆ ಇದೆ. ಸಂಜೆ ಆದಮೇಲೆ ತೆಗೆಯಬೇಕು. ಇವರು ತಮ್ಮ ತೆವಲಿಗಾಗಿ ರಾಷ್ಟ್ರ ಧ್ವಜವನ್ನ ಬಳಸಿಕೊಂಡಿದ್ದಾರೆ. ಜನರು ಎಲ್ಲವನ್ನು ನೋಡುತ್ತಿದ್ದಾರೆ. ಕಾಂಗ್ರೆಸ್ ಜನರ ಪರವಾಗಿ ಕೆಲಸ ಮಾಡಲು ವಿಫಲವಾಗಿದೆ. ಸದನದಲ್ಲಿ ಅವರು ನಡೆದುಕೊಳ್ಳುವ ರೀತಿ ಶೋಭೆ ತರುವುದಿಲ್ಲ.ಇಂದು ಕಾಂಗ್ರೆಸ್ ಇಂಥ ನಿಲುವಿನಿಂದಾಗಿ ನೆಲೆಕಚ್ಚಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಕಾಂಗ್ರೆಸ್‌ನಿಂದ ರಾಷ್ಟ್ರಧ್ವಜಕ್ಕೆ ಅಪಮಾನ: ಈಶ್ವರಪ್ಪ
ಕಾಂಗ್ರೆಸ್‌ನವರು ರಾಷ್ಟ್ರಧ್ವಜವನ್ನು ಸದನದ ಒಳಗೆ ಬೇಕಾಬಿಟ್ಟಿ ಹಿಡಿದುಕೊಂಡು ಬರುವ ಮೂಲಕ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ. ನಾನು ನಲವತ್ತು ವರ್ಷದಿಂದ ವಿಧಾನಸೌಧಕ್ಕೆ ಬರುತ್ತಿದ್ದೇನೆ. ಎಂದೂ ರಾಷ್ಟ್ರ ಧ್ವಜ ಹಿಡಿದು ಸದನದಲ್ಲಿ ಅವಮಾನ ಮಾಡಿರಲಿಲ್ಲ. ಇಂದು ವಿಧಾನಸಭೆ ಒಳಗೆ ರಾಷ್ಟ್ರ ಧ್ವಜ ತಂದು ಹಾರಿಸಿ, ರಾಷ್ಟ್ರ ದ್ರೋಹಿ ಕೆಲಸ ಮಾಡಿದ್ದಾರೆ. ಹಿಜಾಬ್ ಅಜೆಂಡಾ ತಂದು ಹಿಂದೂ, ಮುಸ್ಲಿಂ ಒಡೆದಿದ್ದಾರೆ. ವೀರಶೈವ ಲಿಂಗಾಯತರನ್ನೂ ಒಡೆದರು, ಬಳಿಕ ಸೋತರು. ಕೆಂಪುಕೋಟೆ ಮೇಲೆ ಇನ್ನು ಮುನ್ನೂರು, ಐನೂರು ವರ್ಷಗಳ ಬಳಿಕ ಭಗವಾದ್ವಜ ಹಾರಬಹುದು ಅಂತ ಹೇಳಿದೆ. ಕಾಂಗ್ರೆಸ್‌ನವರು ಇದನ್ನೇ ರಾಜಕೀಯ ದಾಳ ಮಾಡಿಕೊಂಡಿದ್ದಾರೆ. ಈ ಎಲ್ಲಾ ವಿಚಾರ ರಾಜ್ಯದ ಜನತೆ ನೋಡುತ್ತಾರೆ. ಅವರೇ ನಿರ್ಧಾರ ಮಾಡುತ್ತಾರೆ. ಡಿಕೆ ಶಿವಕುಮಾರ್ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಅವರನ್ನ ರಾಷ್ಟ್ರ ದ್ರೋಹದ ಮೇಲೆ ಬಂಧಿಸಬೇಕು ಅಂತ ಈಶ್ವರಪ್ಪ ಆಗ್ರಹಿಸಿದ್ದಾರೆ.
ತಾಯಿ ಮೊಲೆ ಹಾಲು ಕುಡಿದಿದ್ದರೆ, ಕಾಶ್ಮೀರಿನ ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಿದರೆ, ಹತ್ತು ಲಕ್ಷ ಹಣ ನೀಡೋದಾಗಿ ಘೋಷಣೆ ಮಾಡಿದ್ದರು. ಮುರುಳಿ ಮನೋಹರ್ ಜೋಶಿ, ಮೋದಿ ಎಲ್ಲರೂ ಆಗ ಲಾಲ್ ಚೌಕ್ ಹೋಗಿ ರಾಷ್ಟ್ರ ಧ್ವಜ ಹಾರಿಸಿದೆವು. ನಾವು ತಾಯಿ ಮೊಲೆ ಹಾಲು ಕುಡಿದವರು ಅಂತ ಎದೆ ತಟ್ಟಿ ಹೇಳಿದೆವು. ಹುಬ್ಬಳ್ಳಿಯಲ್ಲಿ ತಿರಂಗ ಹಾರಿಸಿದೆವು. ನಾವು ತಿರಂಗ ಹಾರಿಸಿದವರು. ನಾವು ರಾಷ್ಟ್ರ ಭಕ್ತರೋ, ಕಾಂಗ್ರೆಸ್ ನವರು ರಾಷ್ಟ್ರ ಭಕ್ತರೋ.? ರಾಜ್ಯದ ಜನ ತೀರ್ಮಾನ ಮಾಡಲಿ ಎಂದು ಹೇಳಿದರು.
ಈಶ್ವರಪ್ಪ ರಾಜೀನಾಮೆಗೆ ನಮ್ಮ ಒತ್ತಾಯ :ಸಿದ್ದರಾಮಯ್ಯ
ರೈತರು ಕೆಂಪು ಕೋಟೆಯ ಮೇಲೆ ಧ್ವಜ ಹಾರಿಸುವ ಕೆಲಸ ಮಾಡಿದರು. ಅವರ ಮೇಲೆ ಕೇಸ್ ಹಾಕಲಾಗಿತ್ತು. ಈಶ್ವರಪ್ಪ ಮೇಲೆ ಯಾಕೆ ಕೇಸ್ ಹಾಕಿಲ್ಲ. ಬಿಜೆಪಿಗರು ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರ ಭಾಷೆ ಇವೆಲ್ಲ ಬದಲಾವಣೆ ಆಗಬೇಕು ಅಂತ ಹೇಳಿದವರು. ನಾಗಪುರ ಆರ್‌ಎಸ್‌ಎಸ್ ಕಚೇರಿಯಲ್ಲಿ ಕೇಸರಿ ಧ್ವಜ ಹಾರಿಸುತ್ತಾರೆ. ಈಶ್ವರಪ್ಪ ಬಾಯಲ್ಲಿ ಆರ್ ಎಸ್ ಎಸ್ ನವರೇ ಹೇಳಿಸಿರಬೇಕು. ಬಿಜೆಪಿಗರು ಆರ್‌ಎಸ್‌ಎಸ್ ಗುಲಾಮರಾಗಿದ್ದಾರೆ. ಮನುಸ್ಮತಿ ಬಂದ ಮೇಲೆ ಈಶ್ವರಪ್ಪ ಸಚಿವರಾಗಿರಲು ಲಾಯಕ್ಕಲ್ಲ.
ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡುವಂತೆ ಗುರುವಾರವರೆಗೂ ಕಾದು ನೋಡುತ್ತೇವೆ. ವಜಾ ಮಾಡದಿದ್ದರೆ, ಸದನದಲ್ಲಿ ಅಹೋರಾತ್ರಿ ಧರಣಿ ನಡೆಸುವ ಬಗ್ಗೆ ಚಿಂತನೆ ಇದೆ. ಈಶ್ವರಪ್ಪ ಹಿಂದೆ ಆರ್ ಎಸ್ ಎಸ್ ಬೆಂಬಲ ಇದೆ. ಪಾಪಾ ಬೊಮ್ಮಾಯಿ ಅಲ್ಲಿ ಸಿಕ್ಕಾಕಿಕೊಂಡಿದ್ದಾರೆ. ಹಾಗಾಗಿ ವಜಾ ಮಡಲು ಸಿಎಂ ಆಗುತಿಲ್ಲ. ಈಶ್ವರಪ್ಪ ಕ್ಷಮೆ ಕೇಳಿದರೂ ಬಿಡುವ ಪ್ರಶ್ನೆಯೆ ಇಲ್ಲ. ಮರ್ಡರ್ ಮಾಡಿ ಕ್ಷಮೆ ಕೇಳಿದರೆ ಬಿಡ್ತಾರ ? ಈಶ್ವರಪ್ಪ ರಾಜೀನಾಮೆ ನೀಡಬೇಕು. ಅವರ ವಿರುದ್ದ ರಾಷ್ಟ್ರದ್ರೋಹ ಕೇಸ್ ದಾಖಲಿಸಬೇಕು ಇದು ನಮ್ಮ ಒತ್ತಾಯ ಎಂದು ಸಿದ್ದರಾಮಯ್ಯ ಹೇಳಿದರು.
ಸ್ಪೀಕರ್ ಪೊಲಿಟಿಕಲ್ ಮ್ಯಾನ್ ಆಗಿದ್ದರು: ಡಿ.ಕೆ ಶಿವಕುಮಾರ್
ನಾವು ಭಾರತೀಯರು. ಭಾರತದ ಭಾವುಟ ರಕ್ಷಣೆ ಮಾಡಿಕೊಳ್ಳಬೇಕು. ರಾಜ್ಯಪಾಲರು ಮಂತ್ರಿಗಳು ಪ್ರಮಾಣ ವಚನ ಬೋಧಿಸುತ್ತಾರೆ. ರಾಜ್ಯಪಾಲರು ಕೂಡಲೇ ಈಶ್ವರಪ್ಪ ಅವರನ್ನು ವಜಾ ಮಾಡಬೇಕಿತ್ತು. ಇಲ್ಲ ಸಿಎಂ ರಾಜೀನಾಮೆ ಪಡೆಯಬೇಕಿತ್ತು. ಅಧಿಕಾರಿಗಳು ಸ್ವಯಂ ದೂರು ದಾಖಲು ಮಾಡಿಕೊಳ್ಳಬೇಕಿತ್ತು. ಶಿವಮೊಗ್ಗದಲ್ಲಿ ಹಿಂದಿನ ದಿನ ರಾಷ್ಟ್ರಧ್ವಜ ಇಳಿಸಿದ್ದಾರೆ. ಮಾರನೇ ದಿನ ಕೇಸರಿ ಕಟ್ಟಿಸಿದ್ದಾರೆ. ಜೊತೆಗೆ ಕೇಸರಿ ಭಾವುಟ ಹಂಚಿದ್ದೇವೆ ಎಂದು ಹೇಳಿದ್ದಾರೆ. ಆದರೂ ಅವರ ಮೇಲೆ ಕ್ರವವಾಗಿಲ್ಲ. ಸದನದಲ್ಲಿ ಚರ್ಚೆಗೆ ಅವಕಾಶ ಕೊಟ್ಟಿಲ್ಲ. ಚರ್ಚೆನೇ ಮಾಡದೆ ಉತ್ತರ ಕೊಡಿಸಲು ಮುಂದಾದರು. ಸ್ಪೀಕರ್ ಪೊಲಿಟಿಕಲ್ ಮ್ಯಾನ್ ಆಗಿದ್ದರು. ಅದು ಆರ್.ಎಸ್.ಎಸ್ ಅಜೆಂಡಾನಾ, ಬಿಜೆಪಿ ಅಜೆಂಡಾನಾ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನ ಹೀನ ಸಂಸ್ಕೃತಿ ಅನಾವರಣ: ಆರ್. ಅಶೋಕ್
ದೇಶದ ಇತಿಹಾಸಲ್ಲಿ ಸದನದಲ್ಲಿ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ್ದು ಇದೇ ಮೊದಲು. ಕಾಂಗ್ರೆಸ್ ಸದನದಲ್ಲಿ ರಾಷ್ಟ್ರಧ್ವಜವನ್ನು ಬೇಕಾಬಿಟ್ಟಿಯಾಗಿ ಬಳಸಿದ್ದು ಅಪರಾಧ. ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ದಿನದಲ್ಲೂ ಕೂಡ ಒಂದು ನಿಯಮದಂತೆ ರಾಷ್ಟ್ರಧ್ವಜ ಹಾಯಿಸಲಾಗುತ್ತದೆ. ಅದಕ್ಕೆ ಅದರದ್ದೇ ಆದ ಘನತೆ ಇದೆ.
ನಿಜಕ್ಕೂ ನಾವು ಜನರಿಗೆ, ಮಕ್ಕಳಿಗೆ ಮಾದರಿಯಾಗಬೇಕು. ಮಕ್ಕಳೂ ಕೂಡ ಎದ್ದು ನಿಂತು ಧ್ವಜಕ್ಕೆ ಗೌರವ ಕೊಡ್ತಾರೆ. ನಾವೇ ಈ ರೀತಿ ವರ್ತಿಸಿದರೆ ಹೇಗೆ? ಇದು ಕಾಂಗ್ರೆಸ್ ನ ಹೀನ ಸಂಸ್ಕೃತಿಯ ಅನಾವರಣವಾಗಿದೆ ಎಂದು ಆರ್. ಅಶೋಕ್ ಹೇಳಿದ್ದಾರೆ.
ಕರಾಳ ದಿನ : ಸುನಿಲ್ ಕುಮಾರ್
ರಾಜ್ಯ ವಿಧಾನ ಮಂಡಲದ ಇತಿಹಾಸದಲ್ಲೇ ಇದು ಕರಾಳ ದಿನ. ರಾಷ್ಟ್ರ ಧ್ವಜವನ್ನು ಕಾಂಗ್ರೆಸ್ ಪಕ್ಷ ತನ್ನ ರಾಜಕೀಯ ಪ್ರತಿಭಟನೆಗಾಗಿ ಸದನದಲ್ಲಿ ಬಳಕೆ ಮಾಡಿರುವುದು ಸದನ, ಸಂವಿಧಾನ ಹಾಗೂ ತಿರಂಗ ಧ್ವಜಕ್ಕೆ ಮಾಡಿದ ಅಪಮಾನ. ಧ್ವಜ ಸಂಹಿತೆಯ ಬಗ್ಗೆ ಸದನದಲ್ಲಿ ಗಂಟೆಗಳ ಕಾಲ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯನವರು, ಸದನದಲ್ಲಿ ತಮ್ಮ ಪಕ್ಷದ ಶಾಸಕರು ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡುವಾಗ ಮೌನಕ್ಕೆ ಜಾರಿದ್ದರು. ಇದು ಜಾಣ ಮೌನವೋ, ಅಸಹಾಯಕತೆಯೋ ? ಸದನದ ನಿಯಮಾವಳಿ ಪ್ರಕಾರ ರಾಷ್ಟ್ರ ಧ್ವಜವನ್ನು ಸದನಕ್ಕೆ ತರುವಂತಿಲ್ಲ. ಆದರೆ, ಕಾಂಗ್ರೆಸ್ ಶಾಸಕರು ರಾಷ್ಟ್ರ ಧ್ವಜವನ್ನು ಭಿತ್ತಿಪತ್ರದ ರೀತಿ ಬಳಸಿಕೊಂಡಿದ್ದಾರೆ. ಈ ದುರ್ವತನೆಗಾಗಿ ಕಾಂಗ್ರೆಸಿಗರು ಬೇಷರತ್ತಾಗಿ ರಾಷ್ಟ್ರದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು
Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.