ಧ್ವನಿ ಯಡಿಯೂರಪ್ಪ ಅವರದ್ದಲ್ಲ ಎಂದಾದರೆ ರಾಜೀನಾಮೆ: ಸಿಎಂ
Team Udayavani, Feb 10, 2019, 12:40 AM IST
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹೊಸ ಗದ್ದಲಕ್ಕೆ ಕಾರಣವಾಗಿರುವ ‘ಆಪರೇಷನ್ ಆಡಿಯೋ’ ಧ್ವನಿ ಶನಿವಾರ ಮತ್ತಷ್ಟು ಜೋರಾಗಿದ್ದು, ಲೋಕಸಭೆ ಮತ್ತು ವಿಧಾನಸಭೆ ತನಕ ಇದನ್ನು ಒಯ್ಯುವುದಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೇಳಿಕೊಂಡಿದೆ. ಇದಕ್ಕೆ ಪ್ರತಿಯಾಗಿ, ‘ತನ್ನ ಬಳಿ ಆಡಿಯೋ ಅಲ್ಲ, ವಿಡಿಯೊನೇ ಇದೆ’ ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.
ಬಿಜೆಪಿ ರಾಜ್ಯ ಅಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ ಧ್ವನಿ ಇದೆ ಎಂದು ಹೇಳಲಾಗಿರುವ ಆಡಿಯೋದ ಕುರಿತು ಚರ್ಚೆಗಳು ನಡೆಯುತ್ತಿರುವ ಹಾಗೆಯೇ, ” ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಯಡಿಯೂರಪ್ಪ ಆಮಿಷ ಒಡ್ಡಿರುವ ಆಡಿಯೋ ಅವರದ್ದು ಅಲ್ಲ ಎಂದಾದರೆ ನಾನು ರಾಜೀನಾಮೆ ನೀಡುತ್ತೇನೆ,” ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸವಾಲೆಸೆದಿದ್ದಾರೆ. ಅವರು ಈ ಸವಾಲನ್ನು ಧರ್ಮಸ್ಥಳದಲ್ಲಿ ಹಾಕುವ ಮೂಲಕ ಇಡೀ ಪ್ರಕರಣಕ್ಕೆ ಮತ್ತೂಂದು ಆಯಾಮವನ್ನು ನೀಡಿದ್ದಾರೆ.
ಧರ್ಮಸ್ಥಳದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ‘ನಾನು ಪುಣ್ಯಕ್ಷೇತ್ರದಲ್ಲಿ ನಿಂತಿದ್ದೇನೆ. ಹಿಂದೆ ಯಡಿಯೂರಪ್ಪನವರು ಈ ಕ್ಷೇತ್ರದ ಹೆಸರು ಹೇಳಿ ಒಂದೇ ತಿಂಗಳಲ್ಲಿ ರಾಜೀನಾಮೆ ಕೊಡ¸ೇಕಾಯಿತು. ನಿನ್ನೆ ಬಿಡುಗಡೆಯಾದ ಆಡಿಯೋ ಅವರದು ಅಲ್ಲ ಎಂದು ಸಾಬೀತಾದರೆ ರಾಜೀನಾಮೆ ನೀಡುತ್ತೇನೆ,’ ಎಂದು ತಿಳಿಸಿದರು. ಆಡಿಯೋ ಕುರಿತು ತನಿಖೆಯಾಗಬೇಕು, ಸತ್ಯಾಸತ್ಯತೆ ಹೊರಬರಬೇಕು. ಸೋಮವಾರ ಸದನದಲ್ಲಿ ಅದರ ಕುರಿತು ಚರ್ಚೆ ನಡೆಯಲಿ. ಅದರ ಕುರಿತು ರಮೇಶ್‌ಕುಮಾರ್ ಅವರೇ ತೀರ್ಪು ನೀಡಲಿ ಎಂದು ಹೇಳಿದ್ದಾರೆ.
25 ಕೋಟಿ ರೂ. ಬೇಡಿಕೆ ಇಟ್ಟಿದ್ದರು-ವಿಜುಗೌಡ: ನಾನು ಜೆಡಿಎಸ್ ಪಕ್ಷದಲ್ಲಿದ್ದಾಗ ನನ್ನನ್ನು ಎಂಎಲ್‌ಸಿ ಮಾಡಲು 25 ಕೋಟಿ ಬೇಡಿಕೆ ಇಟ್ಟಿದ್ದರು. ನಾನು ಜೆಡಿಎಸ್‌ನಿಂದ ಬಬಲೇಶ್ವರ ಕ್ಷೇತ್ರದಿಂದ 2008 ಹಾಗೂ 2013ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಎರಡು ಬಾರಿಯ ಚುನಾವಣೆ ಸಂದರ್ಭದಲ್ಲೂ ಲಕ್ಷಾಂತರ ಕಾರ್ಯಕರ್ತರನ್ನು ಸೇರಿಸಿ ಬಹಿರಂಗ ಸಮಾವೇಶ ಮಾಡಿದರೂ ನನ್ನ ಚುನಾವಣಾ ಪ್ರಚಾರಕ್ಕೆ ಬರಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಮಾತು ಕೇಳಿ ನನ್ನ ಪ್ರಚಾರಕ್ಕೆ ಬರದೇ ಮೋಸ ಮಾಡಿದರು. ಇದನ್ನು ಪ್ರಶ್ನಿಸಲು ನನ್ನ ಕ್ಷೇತ್ರದ ಜನರು ನನ್ನ ಅನುಪಸ್ಥಿತಿಯಲ್ಲಿ ಕುಮಾರಸ್ವಾಮಿ ಬಳಿಗೆ ಹೋಗಿ ಮೇಲ್ಮನೆ ಸದಸ್ಯರನಾಗಿ ವಿಜುಗೌಡ ಅವರನ್ನು ನೇಮಿಸುವಂತೆ ಒತ್ತಾಯಿಸಿದ್ದರು. ಅದರೆ ಕುಮಾರಸ್ವಾಮಿ ಅವರು ಮೇಲ್ಮನೆ ಸದಸ್ಯನ್ನಾಗಿ ಮಾಡಲು 25 ಕೋಟಿ ರೂ. ಕೊಡಬೇಕು ಎಂದು ಬೇಡಿಕೆ ಇರಿಸಿದ್ದರು. ನಮ್ಮ ಕಾರ್ಯಕರ್ತರು 10 ಕೋಟಿ ರೂ. ಕೊಡುವುದಾಗಿ ಹೇಳಿದ್ದರು. ಈ ಕುರಿತು ಕಾರ್ಯಕರ್ತರು ಧ್ವನಿ ಮುದ್ರಣ ಮಾಡಿಸಿಕೊಂಡು ಬಂದಿರುವ ದಾಖಲೆ ನನ್ನ ಬಳಿ ಇದೆ. ಈ ಬಗ್ಗೆಯೂ ಸಿಎಂ ಬಹಿರಂಗ ಚರ್ಚೆಗೆ ಬರಲಿ ಎಂದರು.
ಬಿಜೆಪಿ ವಿಡಿಯೋ ಅಸ್ತ್ರ
”ಬಿಜೆಪಿಯ ನಾಯಕರೊಬ್ಬರನ್ನು ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ಮಾಡಲು 25 ಕೋಟಿ ಲಂಚ ಕೇಳಿದ ಧ್ವನಿ ಮತ್ತು ದೃಶ್ಯಾವಳಿ ನಮ್ಮಲ್ಲಿದ್ದು, ಸೋಮವಾರ ಸದನದಲ್ಲಿ ಇದನ್ನು ಪ್ರಸ್ತಾಪಿಸಲಿದ್ದೇವೆ” ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೊಸ ಬಾಂಬ್ ಹಾಕಿದ್ದಾರೆ. ಈ ಸಿ.ಡಿಯನ್ನು ಸೋಮವಾರ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್‌ಗೆ ನೀಡಲಿದ್ದೇವೆ. ಈ ಆಡಿಯೋ ಸತ್ಯಾಸತ್ಯತೆಯನ್ನು ಅರಿಯಲು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ತಮ್ಮ ಕೊಠಡಿಗೆ ಕರೆಸಿ ವಿಚಾರಣೆ ನಡೆಸುವಂತೆ ಮನವಿ ಮಾಡಲಿದ್ದೇವೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಹಿಂದೆ ಜೆಡಿಎಸ್‌ನಲ್ಲಿದ್ದ ಪ್ರಸ್ತುತ ಬಿಜೆಪಿಯಲ್ಲಿರುವ ವಿಜುಗೌಡ ಅವರು ಪರಿಷತ್‌ಗೆ ಸೀಟು ಕೇಳಿದಾಗ ಅವರ ಬಳಿ ದುಡ್ಡಿನ ಕುರಿತು ಪ್ರಸಾಪಿಸಿದ್ದು ನಿಜ. ಆದರೆ ಅದು ವ್ಯವಸ್ಥೆಯ ಕುರಿತು ಮಾತನಾಡಿದ್ದೇ ವಿನಾ ಹಣಕ್ಕೆ ಬೇಡಿಕೆ ಇರಿಸಿದ್ದಲ್ಲ. ಅಂತಹ ವಿಡಿಯೋ ದಾಖಲೆಗಳಿದ್ದರೆ ಬಿಜೆಪಿಯವರು ಬಿಡುಗಡೆ ಮಾಡಲು ಸರ್ವ ಸ್ವತಂತ್ರರಿದ್ದಾರೆ ಎಂದು ಹೇಳಿದ್ದಾರೆ.
ಸದನದಲ್ಲಿ ಸೋಮವಾರ ಬಿಜೆಪಿಯವರು ವಿಡಿಯೋ ರಿಲೀಸ್ ಮಾಡುವ ಬಗ್ಗೆ ಮುಖ್ಯಮಂತ್ರಿ ಹೇಳಿದ್ದಾರೆ. ನಾನು ಯಾವುದನ್ನೂ ಮುಚ್ಚಿಡುವುದಿಲ್ಲ. ಬಿಡುಗಡೆ ಮಾಡಲಿ ಎಂದು ಹೇಳಿದ್ದಾರೆ. ನೋಡೋಣ. ● ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ
ಕುಮಾರಸ್ವಾಮಿ ತನ್ನ ವೈಫಲ್ಯ ಮುಚ್ಚಿಡಲು ಯಡಿಯೂರಪ್ಪ ವಿರುದ್ಧ ಆರೋಪ ಮಾಡಿದ್ದಾರೆ. ಜೆಡಿಎಸ್‌ನವರಿಗೆ ನಕಲಿ ಆಡಿಯೋ ಬಿಡುಗಡೆ ಅಭ್ಯಾಸವಾಗಿಬಿಟ್ಟಿದೆ. ಸಂಸದ ಉಗ್ರಪ್ಪ ಕೂಡ ಆಡಿಯೋ ಬಿಡುಗಡೆ ಮಾಡಿದ್ದರು. • ಡಾ.ಅಶ್ವತ್ಥ ನಾರಾಯಣ, ಬಿಜೆಪಿ ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ
Winter Session Issue: ಬಂಧನ, ಪೊಲೀಸ್ ದೌರ್ಜನ್ಯ: ಡಿಜಿಪಿಗೆ ಸಿ.ಟಿ.ರವಿ ದೂರು
Valmiki Nigama: ಜಪ್ತಿ ಮಾಡಿರುವ 6.11 ಕೋಟಿ ರೂ. ಬಿಡುಗಡೆಗೆ ಸೂಚನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.