ರಾಜ್ಯದಲ್ಲಿ ರಾಮಜನ್ಮ ಭೂಮಿ ಹೋರಾಟ
Team Udayavani, Nov 10, 2019, 5:15 AM IST
ಬೆಂಗಳೂರು: ಅಯೋಧ್ಯೆ ರಾಮಜನ್ಮಭೂಮಿ ಆಂದೋಲನ ಕರ್ನಾಟಕದಲ್ಲಿ 35 ವರ್ಷಗಳ ಹಿಂದೆಯೇ ದೊಡ್ಡ ಪ್ರಮಾಣದಲ್ಲೇ ಪ್ರಾರಂಭವಾಗಿತ್ತು.
1984ರ ಡಿಸೆಂಬರ್‌ನಲ್ಲಿ ವಿಶ್ವ ಹಿಂದೂ ಪರಿಷತ್‌ನ ಎರಡನೇ ಮಹಾ ಸಮ್ಮೇಳನ ಉಜಿರೆಯಲ್ಲಿ ನಡೆದಾಗ ರಾಮಜನ್ಮಭೂಮಿ ಜಾಗೃತಿ ರಥಯಾತ್ರೆಯೂ ಆರಂಭವಾಗಿತ್ತು, ರಾಮಜನ್ಮಭೂಮಿ ಮುಕ್ತಿಗಾಗಿ ಕರೆ ನೀಡಲಾಗಿತ್ತು.
1990 ರಲ್ಲಿ ಆದಿಚುಂಚನಗಿರಿ, ಧರ್ಮಸ್ಥಳ, ಕೂಡಲಸಂಗಮ ಸೇರಿ ರಾಜ್ಯದ ಏಳು ಭಾಗಗಳಿಂದ ರಾಮಶಿಲಾ ರಥಯಾತ್ರೆ ಹೆಸರಿನಲ್ಲಿ ಏಳು ರಥಗಳು ಬೀದರ್‌ನಲ್ಲಿ ಸಮಾವೇಶಗೊಂಡು ಬೃಹತ್ ಸಮಾವೇ ಶದ ಮೂಲಕ ಸುಮಾರು 60 ರಿಂದ 70 ಸಾವಿರ ಕರಸೇವಕರು ಅಯೋಧ್ಯೆ ತಲುಪಿದರು.
ಆಗ ಉತ್ತರಪ್ರದೇಶ ಮುಖ್ಯಮಂತ್ರಿಯಾ ಗಿದ್ದ ಮುಲಾಯಂಸಿಂಗ್ ಯಾದವ್ ಅವರು ಕರಸೇವಕರನ್ನು ಉತ್ತರಪ್ರದೇಶ ಪ್ರವೇಶದಲ್ಲೇ ತಡೆಯಲು ಸೂಚಿಸಿದಾಗ ಪೊಲೀಸರು ಬಂಧಿ ಸಿದರು. ಆಗ ಕೆಲವರ ಪ್ರಾಣತ್ಯಾಗ ಸಹ ಆಯಿ ತು. ಸ್ವಾತಂತ್ರಾéನಂತರ ಭಾರತದಲ್ಲಿ ರಾಮಜನ್ಮ ಭೂಮಿ ಮುಕ್ತಿಗಾಗಿ ನಡೆದ ಬಲಿದಾನ ಎಂದೇ ಆಗ ಕರಸೇವಕರು ಹೇಳಿಕೊಂಡರು.
ಆ ನಂತರ 1992 ರಲ್ಲಿ ಮತ್ತೆ ರಾಜ್ಯದ ದಕ್ಷಿಣ ಭಾಗದಲ್ಲಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ ರಾಮಜನ್ಮಭೂಮಿ ಆಂದೋಲನ ಪ್ರಾರಂಭವಾಯಿತು. ಉತ್ತರ ಕರ್ನಾಟಕ ಭಾಗದ ನೇತೃತ್ವವನ್ನು ವಾದಿರಾಜ ಪಂಚಮುಖೀ ಅವರು ವಹಿಸಿಕೊಂಡಿದ್ದರು. (ಪ್ರಸ್ತುತ ಅವರು ಅಲಹಾಬಾದ್‌ನಲ್ಲಿ ಶ್ರೀಗಳಾಗಿದ್ದಾರೆ). ಆಗ ರಾಜ್ಯದಿಂದ 1 ಲಕ್ಷ ಕರಸೇವಕರು ಅಯೋಧ್ಯೆಗೆ ತೆರಳಿ ಅಶೋಕ್ ಸಿಂಘಾಲ್ ನೇತೃತ್ವದಲ್ಲಿ ಡಿಸೆಂಬರ್ 6 ರ ಘಟನೆಯಲ್ಲಿ ಪಾಲ್ಗೊಂಡಿದ್ದರು. ರಾಜ್ಯದ 28 ಸಾವಿರ ಗ್ರಾಮಗಳಿಂದ ಒಂದು ಗ್ರಾಮದಿಂದ ಒಂದು ಇಟ್ಟಿಗೆ, ಒಬ್ಬ ಹಿಂದೂವಿ ನಿಂದ 1.25 ರೂ. ಸಂಗ್ರಹ ಮಾಡಲಾಗಿತ್ತು.
ರಾಜ್ಯದ ಪ್ರತಿ ಹಳ್ಳಿಯಿಂದಲೂ ಇಟ್ಟಿಗೆಗಳನ್ನು ಪೂಜಿಸಿ ರಾಮಮಂದಿರ ನಿರ್ಮಾಣಕ್ಕಾಗಿ ಸ್ವಯಂ ಪ್ರೇರಿತರಾಗಿ ಜನತೆ ಕಳುಹಿಸಿಕೊಟ್ಟಿದ್ದರು.ವಹಿ ಬನಾಯೇಂಗೇ: ರಾಜ್ಯದಲ್ಲಿ ರಾಮಜನ್ಮಭೂಮಿ ಆಂದೋಲನ ಕುರಿತು ಆಗ ಕೂಡಲಸಂಗಮ ಭಾಗದಿಂದ ಹೊರಟ ರಥದ ಸಾರಥ್ಯ ವಹಿಸಿದ್ದ ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಮಂತ್ರಿ ಆಗಿರುವ ಜಗದೀಶ್ ಕಾರಂತ್ ಅವರು “ಉದಯವಾಣಿ’ಯೊಂದಿಗೆ ಮಾತನಾಡಿ, ರಾಮಜನ್ಮಭೂಮಿ ಮುಕ್ತಿಗಾಗಿ ನಡೆದ ಹೋರಾಟ 73 ಬಾರಿ ವಿಫಲ ಯತ್ನದ ನಂತರ 1992ರಲ್ಲಿ ನಾವು ಯಶಸ್ವಿಯಾಗಿದ್ದೆವು. ಅಲ್ಲಿಂದ “ಮಂದಿರ್ ವಹಿ ಬನಾಯೇಂಗೇ’ ಘೋಷವಾಕ್ಯ ಮೊಳಗಿತು. ಆ ಜಾಗವನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ ಎಂಬುದು ಖಾತರಿಯಾಯಿತು.
ರಾಮಜನ್ಮಭೂಮಿ ಆಂದೋಲನವು ಭಾರತದ ರಾಜಕೀಯ ದಿಕ್ಕನ್ನೇ ಬದಲಾಯಿಸಿತು. ಹಿಂದೂಗಳ ಭಾವನೆ ಭಾರತಕ್ಕಷ್ಟೇ ಅಲ್ಲದೆ ವಿಶ್ವಕ್ಕೆ ಗೊತ್ತಾಯಿತು. ಆದರೆ, ಈ ಸತ್ಯ ಅರ್ಥ ಮಾಡಿಕೊಳ್ಳದ ಸೆಕ್ಯುಲರ್ ವಾದಿಗಳ ರಾಜಕೀಯ ಭವಿಷ್ಯ ನೆಲಕಚ್ಚಿತು. ಎಡವಾದಿಗಳಂತೂ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡರು.
1980-85 ರಲ್ಲಿ ಏನೇನೂ ಅಲ್ಲದ ಬಿಜೆಪಿ ಕೋಟಿ ಕೋಟಿ ಹಿಂದೂಗಳ ಭಾವನೆಗಳಿಗೆ ಬೆಲೆ ಕೊಟ್ಟಿದ್ದರಿಂದ ಇಂದು ದೊಡ್ಡ ಮಟ್ಟದಲ್ಲಿ ಬೆಳೆದಿದೆ.
ಕೇಂದ್ರದಲ್ಲಿ ಆಡಳಿತ ಮಾಡಿದ ಸರಕಾರಗಳಿಗೆ ನಾವು ಕಾನೂನಾತ್ಮಕವಾಗಿಯೇ ರಾಮ ಜನ್ಮಭೂಮಿಯನ್ನು ಹಿಂದೂಗಳಿಗೆ ಬಿಟ್ಟುಕೊಡಲು ಬೇಡಿಕೆ ಇಟ್ಟಿದ್ದೆವು. ಅಂತಿಮವಾಗಿ ಅದು ನ್ಯಾಯಾಲಯದ ಅಂಗಳಕ್ಕೆ ಹೋಗಿತ್ತು. ಇದೀಗ 500 ವರ್ಷಗಳ ಸುದೀರ್ಘ ಸಂಘರ್ಷಕ್ಕೆ ಪುರಸ್ಕಾರ, ಗೌರವ ಸಂದಿದೆ. ರಾಮಜನ್ಮಭೂಮಿ ವಿಚಾರದಲ್ಲಿ ತುಷ್ಟೀಕರಣ ನೀತಿ ಅನುಸರಿಸಿದ ಸೋಗಲಾಡಿ ಸೆಕ್ಯುಲರ್‌ವಾದಿಗಳು, ನಕಲಿ ಜಾತ್ಯತೀತವಾದಿ ಗಳಿಗೆ ಪಾಠವಾಗಿದೆ ಎಂದು ಹೇಳಿದ್ದಾರೆ.
ಆಡ್ವಾಣಿ ರಥಯಾತ್ರೆ
ರಾಮಮಂದಿರ ನಿರ್ಮಾಣಕ್ಕಾಗಿ ಎಲ್.ಕೆ.ಆಡ್ವಾಣಿಯವರು ನಡೆಸಿದ ರಥಯಾತ್ರೆ ಕರ್ನಾಟಕದಲ್ಲೂ ಐದು ದಿನ ಸಂಚರಿಸಿತ್ತು. ಬೆಂಗಳೂರಿಗೆ ಆಗಮಿಸಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಭೆಯ ನಂತರ ತುಮಕೂರು, ಶಿವಮೊಗ್ಗ, ಹರಿಹರ, ಹೊಸಪೇಟೆ, ಗಂಗಾವತಿ, ರಾಯಚೂರು ಮೂಲಕ ಸಾಗಿ ನಂತರ ಆಂಧ್ರಪ್ರದೇಶಕ್ಕೆ ಹೊರಟಿತ್ತು.
ಶಬರಿ ಕೊಟ್ಟ ಬೋರೆ ಹಣ್ಣು
ಭಕ್ತಿ, ಆದರಾತಿಥ್ಯ, ಮುಗ್ಧ ಪ್ರೀತಿಗೆ ಮತ್ತೂಂದು ಹೆಸರು “ಶಬರಿ’. ಬೇಡರ ರಾಜನ ಮಗಳಾಗಿದ್ದ ಶಬರಿ, ವೈರಾಗ್ಯದಿಂದ ಮನೆಯನ್ನು ತೊರೆದು ಮಾತಂಗ ಮುನಿಯ ಶಿಷ್ಯೆ ಯಾಗುತ್ತಾಳೆ. ಶ್ರೀರಾಮನನ್ನು ಜಪಿಸಿದರೆ ಮುಕ್ತಿ ಸಿಗುತ್ತದೆಂದು ತಿಳಿದಾಗ, ಆಕೆ ಆತನಿಗಾಗಿ ಉತ್ಕಟ ಭಕ್ತಿಯಿಂದ ವರ್ಷಾನುಗಟ್ಟಲೆ ಕಾಯುತ್ತಾಳೆ. ಪ್ರತಿ ದಿವಸ ಕಾಡಿಗೆ ಹೋಗಿ, ಬೋರೆ ಹಣ್ಣುಗಳನ್ನು ಕೊಯ್ದು, ಹಣ್ಣು ಸಿಹಿಯೇ? ಹುಳಿಯೇ? ಎಂದು ಕಚ್ಚಿ ನೋಡಿ, ಸಿಹಿ ಹಣ್ಣನ್ನು ರಾಮನಿಗಾಗಿ ತೆಗೆದಿಡುವುದೇ ಅವಳ ನಿತ್ಯ ಕಾಯಕವಾಗುತ್ತದೆ. ಆಕೆಯ ನಿಸ್ವಾರ್ಥ ತಪಸ್ಸಿಗೆ ಮೆಚ್ಚಿ ಬರುವ ರಾಮ, ಅವಳು ಎಂಜಲು ಮಾಡಿಟ್ಟ ಆ ಹಣ್ಣುಗಳನ್ನೇ ಸಂತೋಷದಿಂದ ಸ್ವೀಕರಿಸುತ್ತಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ
CT Ravi ಜಾಮೀನು ಅರ್ಜಿ ವಿಚಾರಣೆ ಇಂದು ಬೆಳಗಾವಿ ಕೋರ್ಟ್‌ನಿಂದ ಬೆಂಗಳೂರಿಗೆ ವರ್ಗ
ಕನ್ನಡದ ಅಸ್ಮಿತೆಗೆ ಗೊ.ರು.ಚನ್ನಬಸಪ್ಪ 21 ಸೂತ್ರಗಳು
87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ :ಹಿಂದಿ ಹೇರಿಕೆಯ ವಿರುದ್ಧ ಕಹಳೆ
High Court: ಮುಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಲ್ಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.