Ayushman Bharat; ನವೀಕೃತ ಹೆಲ್ತ್ ಕಾರ್ಡ್‌ಗೆ ಸಿದ್ದರಾಮಯ್ಯ ಚಾಲನೆ
Team Udayavani, Dec 7, 2023, 12:12 AM IST
ಬೆಳಗಾವಿ: ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್‌ಗಳಿಗೆ ಆರೋಗ್ಯ ಇಲಾಖೆ ಹೊಸ ರೂಪ ನೀಡಿದ್ದು, ಮರುನಾಮಕರಣಗೊಂಡ ನವೀಕೃತ ಹೆಲ್ತ್ ಕಾರ್ಡ್‌ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು. ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್‌ಗಳನ್ನು “ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನಾರೋಗ್ಯ -ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ’ ಎಂದು ಹೆಸರಿಸಲಾಗಿದೆ.
ಈ ಸಂದರ್ಭ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಕಾರ್ಡ್‌ನಲ್ಲಿ ಕೆಲವು ಬದಲಾವಣೆ ತರಲಾಗಿದೆ. ರಾಜ್ಯದ 5 ಕೋಟಿಗೂ ಅಧಿಕ ಜನರಿಗೆ ಹೆಲ್ತ್ ಕಾರ್ಡ್‌ಗಳನ್ನು ಮುಂದಿನ 6 ತಿಂಗಳಲ್ಲಿ ವಿತರಿಸುವ ಗುರಿಯನ್ನು° ಆರೋಗ್ಯ ಇಲಾಖೆ ಹೊಂದಿದೆ ಎಂದು ಹೇಳಿದರು.
ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ನ್ಯಾಶನಲ್ ಪೊರ್ಟಲ್‌ಗೆ ನೂತನ ಹೆಲ್ತ್ ಕಾರ್ಡ್‌ಗಳನ್ನು° ಸಂಯೋಜನೆಗೊಳಿಸಲಾಗಿದೆ. ರಾಜ್ಯದ ಬಿಪಿಎಲ್ ಕಾರ್ಡು ದಾರರು ದೇಶದ ಇತರೆ ರಾಜ್ಯಗಳಲ್ಲಿ ಹೆಲ್ತ್ ಕಾರ್ಡ್ ನಡಿ ಚಿಕಿತ್ಸೆ ಪಡೆಯಬಹುದಾಗಿದೆ. ಯೋಜನೆಯ ಒಟ್ಟು ಅನುದಾನದ ಪಾಲಿನಲ್ಲಿ ರಾಜ್ಯ ಸರಕಾರವು ಶೇ. 66ರಷ್ಟು ಹಾಗೂ ಕೇಂದ್ರ ಸರಕಾರವು ಶೇ.34ರಷ್ಟು ನೀಡುತ್ತಿದೆ. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಬಡಕುಟುಂಬಗಳು ವಾರ್ಷಿಕ ಐದು ಲಕ್ಷ ಮೌಲ್ಯದ ಚಿಕಿತ್ಸೆಯನ್ನು ಕುಟುಂಬದ ಒಬ್ಬರು ಅಥವಾ ಹಲವರು ಸೇರಿ ಬಳಸಿಕೊಳ್ಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.