“ಮಾತೆರೆಗ್ ಬಿಸುತ ಸುಭಾಸುಯೊಲು” ತುಳುವರ ಹೊಸ ವರ್ಷಕ್ಕೆ ತುಳುವಿನಲ್ಲಿ ಶುಭಕೋರಿದ ಬಿಎಸ್ ವೈ
Team Udayavani, Apr 14, 2020, 10:43 AM IST
ಬೆಂಗಳೂರು: ಇಂದು ಸೌರಮಾನ ಯುಗಾದಿ. ಹಿಂದೂ ಪಂಚಾಂಗಗಳ ಪ್ರಕಾರ ಇಂದು ಹೊಸ ವರ್ಷದ ಮೊದಲ ದಿನ. ದೇಶದ ಹಲವು ರಾಜ್ಯಗಳಲ್ಲಿ ಹಲವು ರೀತಿಯಲ್ಲಿ ಇದನ್ನು ಆಚರಿಸಲಾಗುತ್ತದೆ. ತುಳುನಾಡಿನಲ್ಲಿ ‘ಬಿಸು’ಹಬ್ಬವಾಗಿ ಆಚರಿಸಲಾಗುತ್ತದೆ.
ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತುಳುನಾಡಿನ ಜನರಿಗೆ ಬಿಸು ಹಬ್ಬದ ಶುಭಾಶಯ ಕೋರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ತುಳುವಿನಲ್ಲೇ ಟ್ವೀಟ್ ಮಾಡಿದ್ದಾರೆ.
ಬಿಸುತ ದಿನ ಪೊಸತ್ ಮನಸ್, ಪೊಸತ್ ಕನಸ್ ಪೊಸತ್ ತೆನಸ್, ಮಾತಲಾ ಪೊಸತ್ ಪೊಸತ್ ಆವಡ್ ಪೊಸ ವರ್ಷೊಡು ಪರತ್ ಮಹಾಮಾರಿ ದೂರ ಅದ್ ಸುಖ ಸಂತೋಸ ನೆಲೆಸಡ್. ಮಾತೆರೆಗ್ ಬಿಸುತ ಸುಭಾಸುಯೊಲು ( ಯುಗಾದಿ ದಿನ ಹೊಸ ಮನಸ್ಸು, ಹೊಸ ಕನಸು, ಹೊಸ ಊಟ, ಎಲ್ಲವೂ ಹೊಸತಾಗಿರಲಿ. ಹೊಸ ವರ್ಷದಲ್ಲಿ ಹಳೆ ಮಹಾಮಾರಿ ದೂರವಾಗಿ ಸುಖ ಸಂತೋಷ ನೆಲೆಸಲಿ. ಎಲ್ಲರಿಗೂ ಬಿಸು ಹಬ್ಬದ ಶುಭಾಶಯಗಳು) ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.