ಜಾತಿ, ಅನುಕಂಪ ಮೀರಿ ಅಭಿವೃದ್ಧಿಗೆ ಜನ ಮತ
Team Udayavani, Nov 11, 2020, 2:10 PM IST
ಬೆಂಗಳೂರು: ಜಾತಿ ರಾಜಕಾರಣ, ಅನುಕಂಪದ ರಾಜಕಾರಣದ ಬದಲಿಗೆ ಅಭಿವೃದ್ಧಿಗಾಗಿ ಜನ ಮತ ಹಾಕಿದ್ದಾರೆ. ಎಲ್ಲ ಸಮುದಾಯದ ಜನರನ್ನು ವಿಶ್ವಾಸದಲ್ಲಿಟ್ಟುಕೊಂಡು ಸಂಘಟಿತ ಪ್ರಯತ್ನದ ಫಲವಾಗಿ ಶಿರಾಕ್ಷೇತ್ರದಲ್ಲಿ ಮತದಾರರು ಪಕ್ಷಕ್ಕೆ ಆಶೀರ್ವದಿಸಿದ್ದಾರೆ. – ಇದು ಶಿರಾ ಕ್ಷೇತ್ರದ ಉಪಚುನಾವಣಾ ಉಸ್ತುವಾರಿಯಾದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಮಾತುಗಳು. ಉಪಚುನಾವಣೆ ಗೆಲುವಿನ ಹಿನ್ನೆಲೆಯಲ್ಲಿ “ಉದಯವಾಣಿ’ಗೆ ಸಂದರ್ಶನ ನೀಡಿದ್ದು, ಸಾರಾಂಶ ಹೀಗಿದೆ.
ಶಿರಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಲು ನೆರವಾದ ಅಂಶಗಳೇನು? :
ಶಿರಾ ಕ್ಷೇತ್ರದಲ್ಲಿ ಸಹಜವಾಗಿಯೇ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ ಎಂಬ ವಾತಾವರಣ ಮೊದಲಿನಿಂದ ಇತ್ತು. ಮೊದಲಿಗೆ ನಾವು ಮೊದಲಿಗೆ ಗೆಲ್ಲಲು ಸಾಧ್ಯವಿದೆ ಎಂಬುದಾಗಿ ಕ್ಷೇತ್ರದ ಮುಖಂಡರು, ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸಲಾಯಿತು. ಆ ಮೂಲಕ ಮತದಾರರನ್ನು ತಲುಪಿದೆವು. ನಾಲ್ಕೈದು ಮಂದಿಯ ತಂಡ ಹೋಗಿ ಏನೂ ಮಾಡಲು ಸಾಧ್ಯವಿಲ್ಲ. ಚುನಾವಣೆ ಮಾಡ ಬೇಕಾದವರು ಸ್ಥಳೀಯ ಮುಖಂಡರು, ಕಾರ್ಯಕರ್ತರು. ಹಾಗಾಗಿ ಸ್ಥಳೀಯರಲ್ಲಿ ವಿಶ್ವಾಸ ಮೂಡಿಸಲಾಯಿತು. ಎಲ್ಲರೂ ಪಕ್ಷದ ಗೆಲುವಿಗೆ ಶ್ರಮಿಸಿದ್ದು. ಮುಖ್ಯಮಂತ್ರಿಗಳು ನೀಡಿದ ಭರವಸೆಯೂ ವಿಶ್ವಾಸ ಮೂಡಿಸಿತು.
ಗೆಲುವಿಗಾಗಿ ರೂಪಿಸಿದಕಾರ್ಯಕ್ರಮಗಳೇನು? :
ಈವರೆಗೆ ಕ್ಷೇತ್ರದಲ್ಲಿ ಜಾತಿ ಆಧಾರದ ಮೇಲೆ ಚುನಾವಣೆ ಮಾಡುತ್ತಿದ್ದರು. ಆದರೆ ನಾವು ಎಲ್ಲ ಜಾತಿಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದೆವು. ಜನರ ಬಳಿ ಹೋದಾಗ ಕಾಂಗ್ರೆಸ್, ಜೆಡಿಸ್‌ನವರು ಈ ರೀತಿ ಎಂದೂ ಮಾತನಾಡಿಸಿರಲಿಲ್ಲ ಎಂದು ಜನ ಬಹಿರಂಗವಾಗಿ ಹೇಳುತ್ತಿದ್ದರು. ಹಿಂದೆ ಭಾಗ್ಯಲಕ್ಷಿ ಯೋಜನೆ ಸೇರಿದಂತೆ ಇತರೆ ಜನ ಪ್ರಿಯ ಯೋಜನೆಗಳ ಬಗ್ಗೆಯೂ ಜನ ಮಾತನಾಡುತ್ತಿದ್ದರು. ಎಲ್ಲ ಸಮುದಾಯದವರಿಗೂ ಬಿಜೆಪಿ ಹೊಸ ಪ್ರಯೋಗ ಮಾಡುತ್ತಿದೆ ಎಂಬ ವಿಶ್ವಾಸ ಮೂಡಿದಂತಿದೆ. ಅದು ನಮಗೆ ದೊಡ್ಡ ವಿಶ್ವಾಸ ಮೂಡಿತ್ತು. ಬದಲಾವಣೆ ಬಯಸಿ ಆಶೀರ್ವಾದ ಮಾಡಿದ್ದಾರೆ.
15 ದಿನದಲ್ಲಿ ಕ್ಷೇತ್ರದ ಉಪಚುನಾವಣಾ ಕಣದ ಚಿತ್ರಣ ಬದಲಾಗಿದ್ದು ಹೇಗೆ? :
ಒಂದು ಪಕ್ಷದವರು ಅನುಕಂಪದ ಮೇಲೆ ಗೆಲ್ಲುತ್ತೇವೆ ಎಂದು ಹೇಳುತ್ತಾ ಹೋದರೆ ಮತ್ತೂಂದು ಪಕ್ಷದವರು ಆರು ಬಾರಿ ಗೆದ್ದಿದ್ದು, ಈ ಬಾರಿ ಕೈಬಿಡುವುದಿಲ್ಲ ಎಂದು ಹೇಳುತ್ತಿದ್ದರು. ಕೊನೆಗೆ ಇದು ಕೊನೆಯ ಚುನಾವಣೆ ಎಂಬ ಅನುಕಂಪದ ಧಾಟಿಯಲ್ಲಿ ಮಾತನಾಡಿ
ದರು. ಆದರೆ ಜನ ಯಾವ ಅನುಕಂಪವೂ ಬೇಡ, ಅಭಿವೃದ್ಧಿಯಾಗಬೇಕು ಎಂಬ ಸಂದೇಶ ನೀಡಿದ್ದಾರೆ.ಅವರ ಅನುಕಂಪದಿಂದ ಹೊಟ್ಟೆ ತುಂಬುದಿಲ್ಲ ಎಂಬುದು ಜನರಿಗೆ ಗೊತ್ತಾಗಿದೆ. ಹಾಗಾಗಿ ಅಭಿವೃದ್ಧಿಗೆ ಮತ ಹಾಕಿದ್ದಾರೆ
ಮುಂದಿನ ಟಾರ್ಗೆಟ್? :
ಪಕ್ಷ ಯಾವ ಟಾರ್ಗೆಟ್ ನೀಡುವುದೋ ಆ ಜವಾಬ್ದಾರಿ ನಿರ್ವಹಿಸುವುದಷ್ಟೇ ನನಗೆ ಗೊತ್ತಿರುವುದು. ಪಕ್ಷ ಸೂಚಿಸಿದರೆ ಮಸ್ಕಿ, ಬಸವಕಲ್ಯಾಣ ಕ್ಷೇತ್ರದಲ್ಲೂ ಸ್ಥಳೀಯ ಮುಖಂಡರು, ಕಾರ್ಯಕರ್ತರೊಂದಿಗೆ ತೊಡಗಿಸಿಕೊಂಡುಕೆಲಸ ಮಾಡುತ್ತೇವೆ.
ಈ ಗೆಲುವಿನಿಂದ ಹಳೆ ಮೈಸೂರು ಕ್ಷೇತ್ರದಲ್ಲಿ ಬಲ ವೃದ್ಧಿಗೆ ನೆರವಾಗುವುದೇ? :
ಬೇರೆ ಕ್ಷೇತ್ರಗಳಿಗೂ ಕೆ.ಆರ್.ಪೇಟೆ, ಶಿರಾ ಕ್ಷೇತ್ರಕ್ಕೂ ಅಜಗಜಾಂತರ. ಎರಡೂ ಕ್ಷೇತ್ರಗಳಲ್ಲಿ ಮತದಾರರು ಜಾತಿ ರಾಜಕಾರಣ ಬಿಟ್ಟು ಅಭಿವೃದ್ಧಿ ರಾಜಕಾರಣಕ್ಕೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ. ಅದು ಮುಂದಿನ ಚುನಾವಣೆಗೂ ದೊಡ್ಡ ಶಕ್ತಿ ಕೊಟ್ಟಂತಾಗಿದೆ. ಹಳೆಯ ಮೈಸೂರು ಭಾಗದ ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಶಕ್ತಿ ಸ್ವಲ್ಪ ಕಡಿಮೆ ಇದೆ. ಆದರೆ ಬಿಜೆಪಿಗೆ ಹೋದರೆ ಗೆಲ್ಲಬಹುದು ಎಂಬ ಧನಾತ್ಮಕ ಸಂದೇಶವನ್ನು ಫಲಿತಾಂಶ ನೀಡಿದೆ.
ನಿಮಗೆ ಚುನಾವಣೆಗಳಲ್ಲಿ ಸ್ಪರ್ಧಿಸುವ ಬಯಕೆ ಇಲ್ಲವೇ? :
ನಾನು ಸ್ಪರ್ಧೆ ಮಾಡಬೇಕೋ, ಬೇಡವೋ. ಮಾಡುವುದಾದರೆ ಯಾವಾಗ ಮಾಡಬೇಕು?ಎಲ್ಲಿಂದ ಮಾಡಬೇಕು ಎಂಬುದನ್ನು ಮುಂದಿನ ದಿನಗಳಲ್ಲಿ ಪಕ್ಷ ತೀರ್ಮಾನಿಸಲಿದೆ. ಆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
-ಎಂ.ಕೀರ್ತಿಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.