![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Nov 4, 2022, 8:41 PM IST
ಬೆಂಗಳೂರು: ಎಸ್‌ಟಿ ಸಮುದಾಯದ ಮೀಸಲಾತಿ ವಿಚಾರದಲ್ಲಿ ನನ್ನ ಹೇಳಿಕೆ ತಿರುಚಿರುವ ಮಾಜಿ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ನಾಚಿಕೆಯಾಗಬೇಕು ಎಂದು ಮಾಜಿ ಸಚಿವ ಬಾಬುರಾವ್ ಚಿಂಚಸನೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೀಸಲಾತಿಯಿಂದ ಜಿಲ್ಲಾ, ತಾಲೂಕು ಪಂಚಾಯಿತಿ ಸೇರಿ ಎಲ್ಲ ಚುನಾವಣೆಗಳಲ್ಲೂ ಸಮುದಾಯದವರಿಗೆ ಅನುಕೂಲವಾಗಲಿದೆ. ಪೇದೆಯಾಗಿ ನೇಮಕಗೊಂಡ ಮೀಸಲಾತಿಯಿಂದ ಡಿವೈಎಸ್‌ಪಿ ಹಂತದವರೆಗೂ ಬಡ್ತಿ ಪಡೆಯಬಹುದು ಎಂದು ನಾನು ಹೇಳಿದ್ದೆ. ಆದರೆ, ಪ್ರಿಯಾಂಕ ಖರ್ಗೆ ಅವರು ಅದನ್ನು ತಿರುಚಿ ನೇರವಾಗಿ ಡಿವೈಎಸ್‌ಪಿ ಆಗಬಹುದು ಎಂದು ಹೇಳಿದ್ದಾರೆ. ಅವರು ನನ್ನ ಹೇಳಿಕೆ ಕಣ್ಣು ತೆರೆದು ನೋಡಲಿ ಎಂದು ತಿಳಿಸಿದ್ದಾರೆ.
ರಾಜ್ಯದ ಎಸ್‌ಟಿ ಸಮುದಾಯಕ್ಕೆ ರಾಜ್ಯ ಸರ್ಕಾರ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದೆ. ಶ್ರೀರಾಮುಲು ಅವರು ಸತತ ಹೋರಾಟ ಫಲವಾಗಿ ಮುಖ್ಯಮಂತ್ರಿಯವರು ಹಾಗೂ ಬಿಜೆಪಿ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.