ಬಜರಂಗದಳ ಬ್ಯಾನ್: ಕೈ ವಿರುದ್ಧ ತಿರುಗೇಟು
ರಾಜಕೀಯದಲ್ಲಿ ಬಜರಂಗದಳ ಬಿರುಗಾಳಿ: ಯಾರ್ಯಾರು ಏನಂದ್ರು ನೋಡಿ
Team Udayavani, May 4, 2023, 7:50 AM IST
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸುವ ಪ್ರಸ್ತಾವಕ್ಕೆ ಬಿಜೆಪಿ, ವಿಎಚ್‌ಪಿ, ಬಜರಂಗ ದಳ ಸಹಿತ ವಿವಿಧ ಸಂಘಟನೆಗಳ ಮುಖಂಡರಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ. ಈ ನಡುವೆ ತನ್ನ ಪ್ರಣಾಳಿಕೆಯನ್ನು ಕಾಂಗ್ರೆಸ್ ಮುಖಂಡರು ಸಮರ್ಥಿಸಿಕೊಂಡಿದ್ದಾರಾದರೂ ಈ ವಿಚಾರ ಪ್ರಸ್ತುತ ರಾಜಕೀಯವಾಗಿ ತೀವ್ರ ಚರ್ಚೆಗೆ ಎಡೆಮಾಡಿದೆ.
ತಿರುಕನ ಕನಸು: ಬಿಎಸ್‌ವೈ
ಮೈಸೂರು: ಬಜರಂಗದಳ ಬ್ಯಾನ್ ಎನ್ನುವುದು ಕಾಂಗ್ರೆಸ್ ಪಾಲಿಗೆ ತಿರುಕನ ಕನಸು ಇದ್ದಂತೆ. ಕಾಂಗ್ರೆಸ್‌ನವರು ಅಧಿಕಾರಕ್ಕೆ ಬರುವುದಿಲ್ಲ. ಹೀಗಾಗಿ ಇಂತಹ ಬ್ಯಾನ್ ಪ್ರಶ್ನೆಗಳೇ ಉದ್ಭವಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ವಿನಾಶ ಕಾಲೇ ವಿಪರೀತ ಬುದ್ಧಿ ಬಂದಿದೆ. ಕಾಂಗ್ರೆಸ್ ತಿರುಕನ ಕನಸು ಕಾಣುತ್ತಿದೆ.
ಬಜರಂಗದಳ ದೇಶವ್ಯಾಪ್ತಿ ಇರುವಂತಹ ಸಂಘಟನೆ. ಇದನ್ನು ನಿಷೇಧಿಸಲು ಅಧಿಕಾರ ಇರುವುದು ಕೇಂದ್ರ ಸರಕಾರಕ್ಕೆ ಮಾತ್ರ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ನಿಷೇಧಿಸುತ್ತೇವೆಂದು ಹೇಳಿರುವುದು ಹಾಸ್ಯಾಸ್ಪದ. ಈ ಅಂಶವು ಸಮಾಜದಲ್ಲಿ ಅಶಾಂತಿ ಮೂಡಿಸುವ ಉದ್ದೇಶವಾಗಿದೆ.
– ಬಸವರಾಜ ಬೊಮ್ಮಾಯಿ, ಸಿಎಂ
“ಅಪರಾಧ ಹಿನ್ನೆಲೆ ಇರುವವರೇ ಬಜರಂಗದಳಕ್ಕೆ ಸೇರುತ್ತಾರೆ”
ಜೈಪುರ: “ಅಪರಾಧದ ಹಿನ್ನೆಲೆಯುಳ್ಳ ವ್ಯಕ್ತಿಗಳೇ ಬಜರಂಗ ದಳಕ್ಕೆ ಸೇರುತ್ತಾರೆ’ ಎಂದು ರಾಜಸ್ಥಾನದ ಸಚಿವ ಗೋವಿಂದ ರಾಮ್ ಮೇಘಾÌಲ್ ಬುಧವಾರ ಹೇಳಿದ್ದಾರೆ. ಜೈಪುರದಲ್ಲಿ ಮಾತನಾಡಿದ ಅವರು, ಆರೆಸ್ಸೆಸ್‌ನಲ್ಲಿ ಇರುವವರು ಸಂವಿಧಾನದ ಬಗ್ಗೆ ಯಾವುದೇ ಗೌರವ ಹೊಂದಿಲ್ಲ. ವಿಶ್ವಹಿಂದೂ ಪರಿಷತ್‌ನ ಯುವ ವಿಭಾಗವಾಗಿರುವ ಬಜರಂಗದಳಕ್ಕೆ ಅಪರಾಧದ ಹಿನ್ನೆಲೆ ಇರುವವರೇ ಸೇರಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಕೋಮು ಭಾವನೆ ಕೆರಳಿಸುವ ಸಂಘಟನೆ
ವಿಜಯಪುರ: ಕೋಮು ಭಾವನೆ ಕೆರಳಿಸುವ ಪಿಎಫ್‌ಐ, ಬಜರಂಗದಳ ಮಾತ್ರವಲ್ಲದೆ ಇದೇ ಸಾಲಿಗೆ ಸೇರುವ ಯಾವುದೇ ಧರ್ಮದ ಸಂಘಟನೆಗಳಿದ್ದರೂ ಅವುಗಳನ್ನು ನಿಷೇ ಧಿಸಲಾಗುವುದು. ಜನರ ಮುಂದೆ ಹೋಗಲು ಏನೂ ವಿಷಯ ಇಲ್ಲದ ಪ್ರಧಾನಿ ಮೋದಿ ಬಜರಂಗ ದಳ ವಿಷಯ ಪ್ರಸ್ತಾವಿಸಲು ಮುಂದಾಗಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಆರೋಪಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ ಧಿಕಾರದಲ್ಲಿದ್ದಾಗ ಹಿಜಾಬ್, ಹಲಾಲ್ ಎಂದೆಲ್ಲ ಪ್ರಚೋದನಾತ್ಮಕ ವಿಚಾರಗಳಲ್ಲೇ ಮುಳುಗಿದ್ದ ಬಿಜೆಪಿ ನಾಯಕರಿಗೆ ಈಗ ಹೇಳಿಕೊಳ್ಳಲು ಅಭಿವೃದ್ಧಿಯ ವಿಷಯವೇ ಇಲ್ಲ. ಹೀಗಾಗಿ ಪ್ರಧಾನಿ ಮೋದಿ ಬಜರಂಗದಳ ನಿಷೇಧದ ಕುರಿತ ನಮ್ಮ ಪಕ್ಷದ ಪ್ರಣಾಳಿಕೆಯನ್ನಷ್ಟೇ ಪ್ರಸ್ತಾವಿಸುತ್ತಿದ್ದಾರೆ ಎಂದರು.
ಬಜರಂಗದಳ ನಿಷೇಧ ವಿಚಾರವನ್ನು ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸುವ ಮೂಲಕ ಕಾಂಗ್ರೆಸ್ ಹಿಂದೂ ವಿರೋಧಿ ಧೋರಣೆ ಪ್ರದರ್ಶಿಸಿದೆ. ಕಾಂಗ್ರೆಸ್ ಪಿಎಫ್ಐ ಜತೆಗೆ ಬಜರಂಗದಳ ಹೋಲಿಕೆ ಮಾಡುವುದೇ ಅಸಮಂಜಸ. ಹಿಂದೂ ಸಂಘಟನೆಯನ್ನು ಇಸ್ಲಾಂ ಭಯೋತ್ಪಾದಕ ಸಂಘಟನೆ ಜತೆ ತುಲನೆ ಮಾಡಿದ್ದಾರೆ. ಈ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ಯಾವ ಸಂದೇಶ ನೀಡಲು ಹೊರಟಿದ್ದಾರೆ?
– ತೇಜಸ್ವಿ ಸೂರ್ಯ, ಸಂಸದ
ಇಂದು ಹನುಮಾನ್ ಚಾಲೀಸಾ ಪಠಣ
ಬೆಂಗಳೂರು: ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧಿಸುವ ಬಗ್ಗೆ ಉಲ್ಲೇಖೀಸಿರುವುದನ್ನು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ತೀವ್ರವಾಗಿ ಖಂಡಿಸಿದೆ. ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಜರಂಗದಳ ಕರ್ನಾಟಕ ದಕ್ಷಿಣ ಪಾಂತ್ರದ ಸಂಯೋಜಕ ಗೋವರ್ಧನ್, ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಸಿಡಿದೆದ್ದಿರುವ ಬಜರಂಗದಳವು ಗುರುವಾರ ಸಂಜೆ 7ಗಂಟೆಗೆ ರಾಜ್ಯವ್ಯಾಪಿ ರಾಮ ಹಾಗೂ ಆಂಜ ನೇಯ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸಾ ಪಠಣದ ಅಭಿ ಯಾನ ನಡೆಸಲಾಗುತ್ತದೆ. ಚುನಾವಣೆವರೆಗೆ ಮನೆಮನೆಗೆ ತೆರಳಿ ಕಾಂಗ್ರೆಸ್ಸಿಗೆ ಮತ ನೀಡದಂತೆ ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದರು. ಕಾಂಗ್ರೆಸ್ ತತ್‌ಕ್ಷಣ ಪ್ರಣಾಳಿಕೆ ಹಿಂಪಡೆದು ಕ್ಷಮೆ ಕೋರಬೇಕು. ಇಲ್ಲವೇ ತಾಕತ್ತಿದ್ದರೆ ತಾವು ಕೈಗೊಳ್ಳುವ ಎಲ್ಲ ಚುನಾವಣ ಭಾಷಣದಲ್ಲಿ ಬಹಿರಂಗವಾಗಿ “ಬಜರಂಗದಳ ನಿಷೇಧಿಸುತ್ತೇವೆ’ ಎಂದು ಘೋಷಿಸಲಿ. ಇದರ ಪರಿಣಾಮ ಮೇ 13ರಂದು ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ನಿಷೇಧ ಪರಿಹಾರವಲ್ಲ: ಎಚ್‌ಡಿಕೆ
ಕೊಪ್ಪಳ: ಬಜರಂಗ ದಳವನ್ನು ನಿಷೇಧಿಸುವ ಕುರಿತು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ. ವಾಸ್ತವವಾಗಿ ಇದು ಪ್ರಣಾಳಿಕೆಯ ವಿಷಯವೇ ಅಲ್ಲ. ಅಲ್ಲದೆ, ಬಜರಂಗ ದಳವನ್ನು ನಿಷೇಧಿಸುವುದು ಪರಿಹಾರವೂ ಅಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಸುಮಧುರ ವಾತಾವರಣ ತರಬೇಕು. ಅದಕ್ಕೆ ಸಂಘಟನೆಯನ್ನು ನಿಷೇಧಿಸುವುದು ಪರಿಹಾರವಲ್ಲ. ಅಲ್ಲಿ ಯಾರು ತಪ್ಪು ಮಾಡಿದ್ದಾರೋ ಅದರ ಮೂಲವನ್ನು ಪತ್ತೆಹಚ್ಚಬೇಕು. ಬಜರಂಗ ದಳದಲ್ಲಿ ಅಮಾಯಕ ಮಕ್ಕಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಮಕ್ಕಳ ಮೆದುಳಿಗೆ ಭಾವನಾತ್ಮಕ ವಿಷಯಗಳನ್ನು ತುಂಬುತ್ತಾರೆ. ಅಂತಹ ಚಟುವಟಿಕೆಗಳನ್ನೆಲ್ಲ ಕಡಿಮೆ ಮಾಡಬೇಕು. ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗ ಯಾಕೆ ನಿಷೇಧ ಮಾಡಿಲ್ಲ? ಈಗ ಅವರು ಕೇವಲ ಅ ಧಿಕಾರಕ್ಕೆ ಏರಬೇಕು ಎಂಬ ಕಾರಣಕ್ಕಾಗಿ ಹೀಗೆಲ್ಲ ಮಾತನಾಡುತ್ತಿದ್ದಾರೆ ಎಂದರು.
ದೇಶದ ರಾಜಕಾರಣದಲ್ಲಿ ಯಾವ ಪಕ್ಷಕ್ಕೂ ತತ್ವ-ಸಿದ್ಧಾಂತವಿಲ್ಲ. ಸಿದ್ದರಾಮಯ್ಯ ಅವರು ನಮಗೆ ಗೆದ್ದೆತ್ತಿನ ಬಾಲ ಹಿಡಿಯುವವರು ಎನ್ನುತ್ತಾರೆ. ಅದಿರಲಿ, ಆದರೆ ಸೋತೆತ್ತಿನ ಬಾಲ ಹಿಡಿದು ಬರುತ್ತಿರುವ ನಿಮಗೆ ಏನನ್ನಬೇಕು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ರಾಜ್ಯದಲ್ಲಿ ನೆರೆ ಸಹಿತ ಹಲವು ಗಂಭೀರ ವಿಕೋಪಗಳಾಗಿದ್ದಾಗ ಮೋದಿ ಬರಲಿಲ್ಲ. ಈಗ ಪದೇಪದೆ ಬಂದು ರೋಡ್ ಶೋ ಮಾಡಿ, ಜನರಿಗೆ ಕೈ ಬೀಸಿ ಹೋಗುತ್ತಿದ್ದಾರೆ. ನಿಜವಾದ ಸಮಸ್ಯೆ ರೋಡ್ ಶೋದಲ್ಲಿ ಕಾಣುವುದಿಲ್ಲ ಎಂದರು.
ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ 30-35 ಸ್ಥಾನಗಳನ್ನು ಗೆಲ್ಲಲಿದೆ. ಬಿಜೆಪಿಯಲ್ಲಿ ಬೊಮ್ಮಾಯಿ ಮುಖ ನೋಡಿ ಜನ ಮತ ಹಾಕುವುದಿಲ್ಲ. ಅದಕ್ಕೆ ಅವರಿಗೆ ಮೋದಿ ಬಿಟ್ಟು ಬೇರೆ ಯಾರೂ ಇಲ್ಲ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ 10 ಸ್ಥಾನಗಳೂ ಸಿಗದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Police FIR: ಎಫ್ಐಆರ್ ದಾಖಲಿಸಿ ನನ್ನ ವಿರುದ್ಧ ಸರ್ಕಾರದಿಂದ ದ್ವೇಷ ಸಾಧನೆ: ಎಚ್‌ಡಿಕೆ
Waqf: ಕಾಂಗ್ರೆಸ್ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್ ಆಸ್ತಿ ಕಬಳಿಕೆ: ಯತ್ನಾಳ್
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.