ಕನ್ನಡಕ್ಕೆ ಬಂದಿದೆ ಹೊಸ ಫಾಂಟ್ ಬಂಡೀಪುರ!
Team Udayavani, Jan 18, 2022, 12:17 PM IST
ಚಾಮರಾಜನಗರ: ಕನ್ನಡ ಅಕ್ಷರಗಳ ಶೈಲಿಗೆ ಯೂನಿಕೋಡ್‌ನಲ್ಲಿ ಬಳಸಲು ಹೊಸದೊಂದು ಫಾಂಟ್ ಇದೀಗ ತಾನೇ ಬಂದಿದೆ! ಅದರ ಹೆಸರು ಬಂಡೀಪುರ! ಆನೆಯಿಂದ ಪ್ರೇರಣೆ ಪಡೆದು ಈ ಫಾಂಟ್ ರಚಿಸಲಾಗಿದ್ದು, ಆನೆಗಳ ತಾಣ ಬಂಡೀಪುರ ಹೆಸರನ್ನೇ ಇದಕ್ಕೆ ಇಟ್ಟಿದ್ದಾಗಿ ಫಾಂಟ್ ತಯಾರಿಸಿದ ಮಂಜುನಾಥ್ ನುಡಿಯುತ್ತಾರೆ.
ಶೇ. 51ಅರಣ್ಯವನ್ನೇ ಹೊಂದಿರುವ ಚಾಮರಾಜನಗರ ಜಿಲ್ಲೆಗೆ ಬಂಡೀಪುರ ಹೆಸರನ್ನು ಹೊತ್ತ ಫಾಂಟ್ ಗೌರವದ ಕೊಡುಗೆ ಎಂದೇ ಹೇಳಬೇಕು. ಈ ಫಾಂಟ್‌ನ ಅಕ್ಷರದ ಶೈಲಿ ಆನೆಯಿಂದ ಪ್ರೇರಿತವಾಗಿದೆ. ಚೂಪಾದ ಅಂಚುಗಳು ಮತ್ತು ಅನಿಯಮಿತವಾದ ದಪ್ಪವನ್ನು ಹೊಂದಿವೆ. ಹೀಗಾಗಿ ಈ ಫಾಂಟ್ ಶೀರ್ಷಿಕೆಗಳು, ಪೋಸ್ಟರ್‌ಗಳಿಗೆ ದೊಡ್ಡ ಗಾತ್ರದಲ್ಲಿ ಬಳಸಲು ಸೂಕ್ತವಾಗಿದೆ.
ಪ್ರಸ್ತುತ ಯೂನಿಕೋಡ್‌ನಲ್ಲಿ ಬಳಸಲು ಕನ್ನಡದಲ್ಲಿ ವಿವಿಧ ಶೈಲಿಯ ಫಾಂಟ್‌ಗಳ ಕೊರತೆಯಿದೆ. ಈ ಕೊರತೆಯನ್ನು ನೀಗಿಸಲು ಕೆಲವು ಉತ್ಸಾಹಿಗಳು ತಮ್ಮ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಅಂಥಉತ್ಸಾಹಿ ತಿ. ನರಸೀಪುರದ ಆರ್. ಮಂಜುನಾಥ್. ಮೂಲತಃ ಪೇಂಟಿಂಗ್ ಆರ್ಟಿಸ್ಟ್ ಆಗಿರುವಮಂಜುನಾಥ್ ಪ್ರಸ್ತುತ ಆನಿಮೇಷನ್ ಕೋರ್ಸ್ ಹಾಗೂ ಗ್ರಾಫಿಕ್ ಡಿಸೈನ್ ಶಿಕ್ಷಕರಾಗಿ ಮೈಸೂರಿನಲ್ಲಿಕೆಲಸ ನಿರ್ವಹಿಸುತ್ತಿದ್ದಾರೆ. ಆರ್ಟಿಸ್ಟ್ ಆಗಿದ್ದಾಗ ಬ್ಯಾನರ್, ಪೋಸ್ಟರ್‌ಗಳು, ಫಲಕಗಳಲ್ಲಿ ಬರೆಯುತ್ತಿದ್ದ ಅಕ್ಷರಗಳ ಶೈಲಿಯನ್ನು ಡಿಜಿಟಲ್ ಫಾಂಟ್‌ಗಳಾಗಿ ಮಾಡಬೇಕೆಂದು ಅವರ ಆಸೆಯಾಗಿತ್ತು. ಬಂಡೀಪುರ ಫಾಂಟ್ ಮೊದಲ ಪ್ರಯೋಗ.
ಮಾಡಿದ್ದು ಹೀಗೆ: ತಾವು ಮಾಡಬೇಕೆಂದಿದ್ದ ಫಾಂಟ್‌ನ ಶೈಲಿಯನ್ನು ಮೊದಲಿಗೆ ಹ್ಯಾಂಡ್ ಸ್ಕೆಚ್‌ಮಾಡಿಕೊಂಡು, ಸಾಫ್ಟ್ ವೇರ್ ಮೂಲಕ ಡಿಜಿಟಲ್ ಅಕ್ಷರಗಳಾಗಿ ಪರಿವರ್ತಿಸಲಾಯಿತು. ಈಅಕ್ಷರದ ಶೈಲಿಯನ್ನು ಕನ್ನಡದ ಎಲ್ಲ ಅಕ್ಷರಗಳನ್ನೂಕಾಗುಣಿತ ಸಮೇತ ಸ್ಕೆಚ್ ಮಾಡಿಕೊಂಡುಡಿಜಿಟಲ್ ರೂಪಕ್ಕೆ ಪರಿವರ್ತಿಸಲಾಯಿತು ಎಂದುಮಂಜುನಾಥ್ ಉದಯವಾಣಿಗೆ ತಿಳಿಸಿದರು.
ಇದು ಕನ್ನಡ ಮಾತ್ರವಲ್ಲದೇ, ಇಂಗ್ಲಿಷ್ ಸೇರಿಲ್ಯಾಟಿನ್‌ನ 135 ಲಿಪಿಗಳನ್ನು ಬೆಂಬಲಿಸುತ್ತದೆ. ಈಫಾಂಟಿನ ಪೂರ್ತಿ ಹೆಸರು ಎಟಿಎಸ್ ಬಂಡೀಪುರ.ಎಟಿಎಸ್ ಅಂದರೆ ಅಕ್ಷರ ಟೈಪ್ ಸ್ಟೂಡಿಯೋ.ಇದು ಮಂಜುನಾಥ್ ಅವರ ಸ್ವಂತ ಸಂಸ್ಥೆಯಹೆಸರು. ಇದು ಯೂನಿಕೋಡ್ ಫಾಂಟ್ ಆಗಿರುವುದರಿಂದ ಎಲ್ಲ ಕೀಬೋರ್ಡ್‌ಗಳಲ್ಲಿಯೂಬಳಸಬಹುದು ಎಂದು ಮಂಜುನಾಥ್ ಹೇಳುತ್ತಾರೆ. ಬಂಡೀಪುರ ಎಂಬ ಹೆಸರನ್ನೇ ಯಾಕೆ ನೀಡಿದಿರಿ? ಎಂದು ಪ್ರಶ್ನಿಸಿದಾಗ ಆನೆಯಿಂದಲೇ ಈ ಶೈಲಿಯ ಪ್ರೇರಣೆ ಪಡೆದೆ. ಆನೆಗಳಿಗೆ ಬಂಡೀಪುರ ಹೆಸರುವಾಸಿ.
ಹಾಗಾಗಿ ಬಂಡೀಪುರ ಹೆಸರು ನೀಡಿದೆ. ಇದು ನಮ್ಮ ರಾಜ್ಯದ ಹೆಮ್ಮೆಯ ತಾಣ ಎಂದು ಅವರು ತಿಳಿಸಿದರು. ಈ ಫಾಂಟನ್ನು ಸಂಕ್ರಾಂತಿ ಹಬ್ಬದ ದಿನ ಲೋಕಾರ್ಪಣೆ ಮಾಡಿದ್ದಾರೆ. ಇದು ಅವರ ಮೊದಲ ಯತ್ನವಾಗಿದ್ದು, ಮುಂಬರುವ ದಿನಗಳಲ್ಲಿ ಮೈಸೂರು ಹೆಸರಿನಲ್ಲಿಇನ್ನೊಂದು ಫಾಂಟ್ ತಯಾರಿಸಲಿದ್ದಾರೆ. ಅದುಮೈಸೂರಿನ ಸಾಂಪ್ರದಾಯಿಕ ಶೈಲಿಯನ್ನು ಬಿಂಬಿಸುತ್ತದೆ ಎನ್ನುತ್ತಾರೆ. ಅವರ ವೆಬ್‌ಸೈಟಿನಲ್ಲಿಹೆಸರಿಡದ ಇನ್ನಷ್ಟು ಹೊಸ ಫಾಂಟಿನಮಾದರಿಗಳನ್ನು ನೀಡಿದ್ದಾರೆ. ಫಾಂಟಿಗೆ aksharatypestudio.in/fonts/bandipura/ ಈ ಲಿಂಕ್ ನೋಡಿ.
ಕನ್ನಡಕ್ಕೆ ಹೊಸ ಹೊಸ ಫಾಂಟ್‌ಗಳನ್ನು ನೀಡಬೇಕೆಂಬುದು ನನ್ನ ಆಸೆ. ನಾನೊಬ್ಬ ಡಿಸೈನರ್ ಆಗಿರುವುದರಿಂದ ಬೇರೆ ಬೇರೆ ಶೈಲಿಫಾಂಟ್‌ಗಳನ್ನು ರಚಿಸುವುದು ನನ್ನಆಸಕ್ತಿಯ ವಿಷಯ. ಬಂಡೀಪುರ ಫಾಂಟ್ ರಚನೆಗೆ ಒಂದು ವರ್ಷ ಶ್ರಮಿಸಿದ್ದೇನೆ. –ಆರ್. ಮಂಜುನಾಥ್. ಫಾಂಟ್ ವಿನ್ಯಾಸಕ.
ಕನ್ನಡಕ್ಕೆ ಇನ್ನೊಂದು ಹೊಸ ಯೂನಿಕೋಡ್ ಫಾಂಟ್‌ಬಂದಿರುವುದು ಸಂತಸದ ವಿಷಯ. ಮಿತ್ರರಾದ ಮಂಜುನಾಥ್ ಅವರ ಈ ಶ್ರಮಕ್ಕೆ ಅಭಿನಂದನೆ. ಶೀರ್ಷಿಕೆಗಳಿಗೆ ಬಳಸಲು ಇದು ನಿಜಕ್ಕೂ ಚೆನ್ನಾಗಿದೆ. –ಟಿ.ಜಿ. ಶ್ರೀನಿಧಿ,ತಂತ್ರಜ್ಞಾನ ಲೇಖಕ
–ಕ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.