ಇಂದಿನಿಂದ ಅಂತಾರಾಷ್ಟ್ರೀಯ ಚಿತ್ರೋತ್ಸವ
Team Udayavani, Feb 21, 2019, 1:39 AM IST
ಬೆಂಗಳೂರು: ಹನ್ನೊಂದನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೊತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ಸಂಜೆ 6 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿ ರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡುವರು. ಹಿರಿಯ ನಟ ಅನಂತನಾಗ್ ಹಾಗೂ ಬಾಲಿವುಡ್ ನಿರ್ಮಾಪಕ, ನಿರ್ದೇಶಕ ರಾಹುಲ್ ರವೈಲ್ ಅತಿಥಿಗಳಾಗಿ ಭಾಗವಹಿಸುವರು.
ಫೆ.21ರಿಂದ 28ರವರೆಗೆ ನಡೆಯುವ ಉತ್ಸವದಲ್ಲಿ ಸುಮಾರು 60 ರಾಷ್ಟ್ರಗಳ 225
ಚಲನಚಿತ್ರಗಳು ಪ್ರದರ್ಶನವಾಗಲಿವೆ. “ವಲ್ಡ…ì ಸಿನಿಮಾ’, “ಏಷ್ಯಾ ಸಿನಿಮಾ’, “ಭಾರತೀಯ
ಸಿನಿಮಾ’ ಹಾಗೂ “ಕನ್ನಡ ಸಿನಿಮಾ’ ಎಂಬ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಫೆ.28ರಂದು
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭ ನಡೆಯಲಿದ್ದು, ರಾಜ್ಯಪಾಲ ವಜೂಭಾಯ್ ವಾಲಾ ಚಿತ್ರೋತ್ಸವದ ವಿಜೇತ ಚಿತ್ರಗಳಿಗೆ ಪ್ರಶಸ್ತಿ
ಪ್ರದಾನ ಮಾಡಲಿದ್ದಾರೆ.
ಚಲನಚಿತ್ರೋತ್ಸವದ ಆರಂಭದ ಚಿತ್ರವಾಗಿ ಇರಾನ್ ದೇಶದ “ಬಾಂಬ್ ಎ ಲವ್ ಸ್ಟೋರಿ’ ಚಿತ್ರ ಪ್ರದರ್ಶನವಾದರೆ, ಇರಾನ್‌ನ ಮತ್ತೂಂದು ಚಿತ್ರ “ಟೇಲ್ ಆಫ್ ದಿ ಸಿ’ ಉತ್ಸವದಲ್ಲಿ ಪ್ರದರ್ಶನಗೊಳ್ಳುವ ಕೊನೆಯ ಚಿತ್ರವಾಗಿದೆ.
ಕಳೆದ ಡಿಸೆಂಬರ್‌ನಲ್ಲಿ ನಿಧನರಾದ ನಟ ಅಂಬರೀಶ್, ಹಿರಿಯ ನಟ ಲೋಕನಾಥ್, ಎಂ.ಎನ್ ವ್ಯಾಸರಾವ್ ಹಾಗೂ ಬಂಗಾಳಿ ಚಿತ್ರ ನಿರ್ದೇಶಕ ಮೃಣಾಲ್ ಸೇನ್ ಅವರ ಸ್ಮರಣಾರ್ಥ ಅವರ ಚಿತ್ರಗಳನ್ನು ಉತ್ಸವದಲ್ಲಿ ಪ್ರದರ್ಶಿಸಲಾಗುತ್ತಿದೆ. ಜತೆಗೆ, ಇತ್ತೀಚೆಗೆ ಲಿಂಗೈಕ್ಯರಾದ ತುಮಕೂರಿನ ಸಿದಟಛಿಗಂಗಾ ಮಠದ ಶಿವಕುಮಾರ ಸ್ವಾಮಿಜಿ, ಸಾವಯವ ಕೃಷಿ ತಜ್ಞ ನಾರಾಯಣ ರೆಡ್ಡಿ ಅವರ ಕುರಿತ ಕಿರುಚಿತ್ರಗಳು, ಪ್ರಕೃತಿ ವಿಕೋಪ ಕುರಿತ ಸಾಕ್ಷ ಚಿತ್ರಗಳು ಪ್ರದರ್ಶನವಾಗಲಿವೆ. ಇದಲ್ಲದೆ, ಗಾಂಧಿ-150 ಶೀರ್ಷಿಕೆ ಅಡಿಯಲ್ಲಿ ಗಾಂಧೀಜಿ ವಿಚಾರಗಳಿಗೆ ಸಂಬಂಧಿಸಿದ ನಾಲ್ಕು ವಿಶೇಷ ಚಿತ್ರಗಳೂ
ಪ್ರದರ್ಶನ ಕಾಣಲಿವೆ.
“ಏಷ್ಯಾ ಸಿನಿಮಾ’ ವಿಭಾಗದಲ್ಲಿ 15 ಚಿತ್ರಗಳು ನಾಮ ನಿರ್ದೇಶನವಾಗಿದ್ದು, ಕನ್ನಡದಿಂದ ಪಿ.ಶೇಷಾದ್ರಿ ನಿರ್ದೇಶನದ “ಮೂಕಜ್ಜಿಯ ಕನಸುಗಳು’ ಚಿತ್ರ ಆಯ್ಕೆಯಾಗಿದೆ. ಭಾರತೀಯ ಸಿನಿಮಾ ವಿಭಾಗ ದಲ್ಲಿ ದಯಾಳ್ ಪದ್ಮನಾಭನ್ ನಿರ್ದೇಶನದ “ಆ ಕರಾಳ ರಾತ್ರಿ’, ಚಂಪಾ ಶೆಟ್ಟಿ ನಿರ್ದೇಶನದ “ಅಮ್ಮಚ್ಚಿಯೆಂಬ ನೆನಪು’ ನಾಮನಿರ್ದೇಶನಗೊಂಡಿವೆ.
“ಕನ್ನಡ ಸಿನಿಮಾ ವಿಭಾಗ’ಕ್ಕೆ 13 ಚಿತ್ರಗಳು ಆಯ್ಕೆಯಾಗಿದ್ದು, “ಅನಂತು ವರ್ಸಸ್ ನುಸ್ರತ್’, “ಅನುತ್ತರ’, “ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು’, “ಬೆಳಕಿನ ಕನ್ನಡಿ’, “ಕಾನೂರಾಯಾಣ’, “ನಾತಿಚರಮಿ’, “ನೀರು’, “ಮೂಕಜ್ಜಿಯ ಕನಸುಗಳು’, “ಒಂದಲ್ಲಾ ಎರಡಲ್ಲಾ’, “ರಾಮನ ಸವಾರಿ’, “ಸಮಾನತೆಯ ಕಡೆಗೆ’, “ಸ್ಮಶಾನ ಮೌನ’, “ಸಾವಿತ್ರಿ ಬಾಯಿ ಫುಲೆ’ ಮತ್ತು “ವಿಶ್ವಮಾನವ’ ಚಿತ್ರಗಳು
ಇಲ್ಲಿ ಪ್ರದರ್ಶನಗೊಳ್ಳಲಿವೆ.
ಅಂಬಿ ಚಿತ್ರಗಳ ಪ್ರದರ್ಶನ ಈ ಬಾರಿಯ ಚಲನ ಚಿತ್ರೋತ್ಸವದಲ್ಲಿ ರೆಬಲ್‌ಸ್ಟಾರ್ ಅಂಬರೀಶ್ ಸಿನಿಮಾ
ಜೀವನದ ಮಾಸ್ಟರ್‌ಪೀಸ್ ಚಿತ್ರಗಳಾದ “ನಾಗರಹಾವು’, “ಏಳು ಸುತ್ತಿನ ಕೋಟೆ’, “ಅಂತ’, “ಪಡುವಾರಳ್ಳಿ ಪಾಂಡವರು’, “ಶುಭಮಂಗಳ’, “ರಂಗನಾಯಕಿ’ ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಪ್ರದರ್ಶನ ಸ್ಥಳ ರಾಜಾಜಿನಗರದ ಓರಾಯನ್ ಮಾಲನ ಪಿವಿಆರ್ ಸಿನಿಮಾಸ್‌ನ ಹನ್ನೊಂದು
ಸ್ಕ್ರೀನ್‌ಗಳಲ್ಲಿ ಹಾಗೂ ಚಾಮರಾಪೇಟೆಯ ಕಲಾವಿದರ ಸಂಘದ ಒಂದು ಸ್ಕ್ರೀನ್‌ನಲ್ಲಿ
ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಪಾಸ್ ಶುಲ್ಕ 800 ರೂ. ಕಳೆದ ಬಾರಿಗಿಂತ, ಈ ಬಾರಿಯ ಚಲನ ಚಿತ್ರೋತ್ಸವದ ಪ್ರವೇಶ ಶುಲ್ಕ ಕಡಿಮೆ ಆಗಿದ್ದು, ಎಂಟು ದಿನದ ಪಾಸ್ 800 ರೂ.ಗೆ ಲಭ್ಯವಿದೆ. ವಿದ್ಯಾರ್ಥಿಗಳು, ಹಿರಿಯ ನಾಗರಿಕರಿಗೆ, ಚಿತ್ರೋದ್ಯಮದ ಸದಸ್ಯರಿಗೆ 400 ರೂ. ನಿಗದಿಪಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.