Bangaluru to Bhatkal: ಬಾಂಬರ್‌ ಸಂಚಾರ? ಮಸೀದಿಯಲ್ಲಿ ಬಟ್ಟೆ ಬದಲಾಯಿಸಿದ ಶಂಕಿತ?

Team Udayavani, Mar 8, 2024, 6:20 AM IST

1-ewwewr

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಪ್ರಕರಣದ ಶಂಕಿತ ಆರೋಪಿಯ ಕುರಿತು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಹಾಗೂ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳಿಗೆ ಮಹತ್ವದ ಸುಳಿವು ಸಿಕ್ಕಿದೆ. ಬೆಂಗಳೂರಿನಿಂದ ಮೊದಲು ತುಮಕೂರು, ಅನಂತರ ಬಳ್ಳಾರಿಗೆ ತೆರಳಿ ಅಲ್ಲಿಂದ ಮತ್ತೆ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಹಾಗೆಯೇ ಆತ ಬಳಿಕ ಭಟ್ಕಳ ಅಥವಾ ಬೀದರ್‌ಗೆ ತೆರಳಿರಬಹುದು ಎಂದೂ ಹೇಳಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಆತ ಪ್ರಯಾಣಿಸಿರುವ ದೃಶ್ಯಾವಳಿ ಮತ್ತಿತರ ಸಾಕ್ಷ್ಯಗಳು ಎನ್‌ಐಎ ಅಧಿಕಾರಿಗಳ ಕೈಸೇರಿವೆ.
ರಾಮೇಶ್ವರಂ ಕೆಫೆಯಲ್ಲಿ ಮಾ. 1ರಂದು ಬಾಂಬ್‌ ಸ್ಫೋಟಿಸಿದ್ದ ಶಂಕಿತನ ಸುಳಿವು ಕೊನೆಗೂ ತನಿಖಾ
ಧಿಕಾರಿಗಳಿಗೆ ಸಿಕ್ಕಿದೆ. ಹಗಲಿರುಳೆನ್ನದೆ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು ಶೀಘ್ರದಲ್ಲೇ ಆತನನ್ನು ಹೆಡೆಮುರಿ ಕಟ್ಟಿ ಪ್ರಕರಣ ಪತ್ತೆಹಚ್ಚುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಾಂಬ್‌ ಸ್ಫೋಟದ ಬಳಿಕ ಶಂಕಿತ ವ್ಯಕ್ತಿ ಬೆಂಗಳೂರಿನ ಹೂಡಿ ಬಳಿಯ ಮಸೀದಿಯೊಂದರಲ್ಲಿ ಬಟ್ಟೆ ಬದಲಾಯಿಸಿಕೊಂಡು, ಬಸ್‌ನಲ್ಲಿ ಹೋಗಿರುವ ಶಂಕೆಯಿದೆ. ಈ ವೇಳೆ ಆತ ಬಿಟ್ಟು ಹೋಗಿರುವ ಟೋಪಿ ಪೊಲೀಸರ ಕೈಸೇರಿದೆ.

ಶಂಕಿತನ ಪ್ರಯಾಣ ಹೇಗಿತ್ತು?
ಮಾ. 1ರಂದು ಸಂಜೆ ಬೆಂಗಳೂರಿನ ಗೊರಗುಂಟೆ ಪಾಳ್ಯದಲ್ಲಿ ಕೆಎಸ್ಸಾರ್ಟಿಸಿ ಬಸ್‌ ಏರಿ ತುಮಕೂರು ತಲುಪಿ, ಅಲ್ಲಿಂದ ಬಳ್ಳಾರಿಗೆ ಹೋಗಿದ್ದಾನೆ. ಬಳಿಕ ಬಳ್ಳಾರಿಯಿಂದ ಉತ್ತರ ಕನ್ನಡ ಜಿÇÉೆಯ ಭಟ್ಕಳಕ್ಕೆ ತೆರಳಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಮತ್ತೂಂದೆಡೆ ಬಳ್ಳಾರಿಯಿಂದ ಶಂಕಿತ ಬೀದರ್‌ನತ್ತ ಪ್ರಯಾಣಿಸಿರುವ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ.

ಹಿಂದಿಯಲ್ಲಿ ಮಾತು, ಹೊರರಾಜ್ಯದ ನಿವಾಸಿ?
ಈ ಸುಳಿವು ಸಿಗುತ್ತಿದ್ದಂತೆ ಬೆಂಗಳೂರು ಪೊಲೀಸರು ತುಮ ಕೂರಿನಲ್ಲಿ ಪರಿಶೀಲನೆ ನಡೆಸಿ, ಬಳ್ಳಾರಿ ತಲುಪುವಷ್ಟರಲ್ಲಿ ಬಾಂಬರ್‌ ಅಲ್ಲಿಂದ ಬೇರೆಡೆ ಹೋಗಿದ್ದಾನೆ ಎನ್ನಲಾಗಿದೆ. ಬಾಂಬರ್‌ನ ನೈಜ ಫೋಟೋ ಪೊಲೀಸರಿಗೆ ದೊರೆತಿದ್ದು, ಆರೋಪಿ ಯು ಹಿಂದಿ ಮಾತನಾಡಿರುವುದು ಕಂಡುಬಂದಿದೆ. ಹೀಗಾಗಿ ಆತ ಹೊರರಾಜ್ಯದ ನಿವಾಸಿಯಾಗಿರುವ ಸಾಧ್ಯತೆ ಗಳಿವೆ ಎನ್ನಲಾಗಿದೆ.

ಸೀಟಿನಿಂದ ಕದಲದ ಶಂಕಿತ
ಶಂಕಿತನಿದ್ದ ಕೆಎಸ್ಸಾರ್ಟಿಸಿ ಬಸ್‌ ಸಂಜೆ 4.30ಕ್ಕೆ ತುಮಕೂರಿನ ಕಳ್ಳಂಬೆಳ್ಳ ಟೋಲ… ಹಾಗೂ ಸಂಜೆ 5 ಗಂಟೆಗೆ ಶಿರಾವನ್ನು ದಾಟಿರುವುದು ತನಿಖಾಧಿಕಾರಿಗಳಿಗೆ ಕಂಡು ಬಂದಿದೆ. ತುಮಕೂರಿನಿಂದ ಬಳ್ಳಾರಿಗೆ ದೀರ್ಘ‌ ಪ್ರಯಾಣ ಮಾಡಿದರೂ ಬಸ್‌ ಬಳ್ಳಾರಿಗೆ ತಲುಪಿದ ಅನಂತರವೇ ಶಂಕಿತ ಬಸ್‌ನಿಂದ ಇಳಿದಿ¨ªಾನೆ. ಮಾರ್ಗ ಮಧ್ಯೆ ಹಲವು ಕಡೆ ಬಸ್‌ ನಿಲುಗಡೆ ಮಾಡಿದರೂ ಆತ ಮಾತ್ರ ಬಸ್‌ ಸೀಟಿನಿಂದ ಕದಲಲಿಲ್ಲ. ತನ್ನ ಸುಳಿವು ಸಿಗದಂತೆ ಎಚ್ಚರ ವಹಿಸಿ ಬಸ್‌ನಿಂದ ಇಳಿಯದಿರಬಹುದು ಎಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಶಂಕಿತನ ಓಡಾಟ ಸೆರೆಹಿಡಿದ ಸಿಸಿ ಕೆಮರಾ
ಆರೋಪಿಯು ರಾಮೇಶ್ವರಂ ಕೆಫೆಗೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿರುವ ಸಿಸಿ ಕೆಮರಾ ದೃಶ್ಯಾವಳಿ ಎಲ್ಲೆಡೆ ವೈರಲ್‌ ಆಗಿದೆ. ವೋಲ್ವೋ ಬಸ್‌ನ ಮುಂದಿನ ಮೆಟ್ಟಿಲು ಗಳಲ್ಲಿ ಏರುತ್ತಿರುವುದು ಪತ್ತೆಯಾಗಿದೆ. ಬಸ್‌ನ ಒಳಭಾಗದ ಆರಂಭದಲ್ಲಿ ಸಿಸಿಟಿವಿ ಕೆಮರಾ ಗಮನಿಸಿರುವ ಆತ ಅದರಿಂದ ತಪ್ಪಿಸಿಕೊಳ್ಳಲು ದೃಶ್ಯ ಕೆಮರಾ ಕಣ್ಣಿಗೆ ಸಿಕ್ಕದ ಮುಂದಿನ ಆಸನದಲ್ಲೇ ಕುಳಿತಿರುವುದು ವೀಡಿಯೋದಲ್ಲಿ ಕಂಡುಬಂದಿದೆ. ಮಾಸ್ಕ್ ಇಲ್ಲದೆ ಕೆಎಸ್ಸಾರ್ಟಿಸಿ ಬಸ್ಸಿನ ಹಿಂಭಾಗದ ಸೀಟಿನಲ್ಲಿ ಕುಳಿತಿರುವ ಮತ್ತೂಂದು ಚಿತ್ರ ವೈರಲ್‌ ಆಗಿದೆ. ಬಳ್ಳಾರಿಯ ಬಸ್‌ ನಿಲ್ದಾಣದಲ್ಲಿ ಆರೋಪಿಯು ಓಡಾಡಿರುವ ಸಿಸಿ ಕೆಮರಾ ದೃಶ್ಯ ಎನ್‌ಐಎಗೆ ಸಿಕ್ಕಿದೆ ಎಂದು ಗೊತ್ತಾಗಿದೆ.

ಟಾಪ್ ನ್ಯೂಸ್

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

1-qeqwe

Russia ದಿಂದ ಉಕ್ರೇನ್‌ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ

IFFI 2024:  ತಾಲಿಯಾ..ತಾಲಿಯಾ…ಜೋರ್‌ ದಾರ್‌ ತಾಲಿಯಾ..!

IFFI 2024:  ತಾಲಿಯಾ..ತಾಲಿಯಾ…ಜೋರ್‌ ದಾರ್‌ ತಾಲಿಯಾ..!

adani (2)

Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್‌ ಬಗ್ಗೆ ಸುಪ್ರೀಂ ಹೇಳಿದ್ದೇನು?

Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್‌ ಬಗ್ಗೆ ಸುಪ್ರೀಂ ಹೇಳಿದ್ದೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್

Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್

BPL: ತೆರಿಗೆದಾರರು, ಸರ್ಕಾರಿ ನೌಕರರ ಕಾರ್ಡ್‌ ಮಾತ್ರ ರದ್ದು: ಗೊಂದಲಕ್ಕೆ ಸಚಿವರ ಸ್ಪಷ್ಟನೆ

BPL: ತೆರಿಗೆದಾರರು, ಸರ್ಕಾರಿ ನೌಕರರ ಕಾರ್ಡ್‌ ಮಾತ್ರ ರದ್ದು: ಗೊಂದಲಕ್ಕೆ ಸಚಿವರ ಸ್ಪಷ್ಟನೆ

MUST WATCH

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

ಹೊಸ ಸೇರ್ಪಡೆ

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

1-qeqwe

Russia ದಿಂದ ಉಕ್ರೇನ್‌ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ

IFFI 2024:  ತಾಲಿಯಾ..ತಾಲಿಯಾ…ಜೋರ್‌ ದಾರ್‌ ತಾಲಿಯಾ..!

IFFI 2024:  ತಾಲಿಯಾ..ತಾಲಿಯಾ…ಜೋರ್‌ ದಾರ್‌ ತಾಲಿಯಾ..!

adani (2)

Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.