ಬನ್ನಂಜೆ, ಡಾ.ಎನ್ನೆಸ್ಸೆಲ್ ಸೇರಿ ಐವರಿಗೆ ಗೌರವ ಪ್ರಶಸ್ತಿ
Team Udayavani, Mar 2, 2018, 8:15 AM IST
ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2017ನೇ ಸಾಲಿನ ಗೌರವ ಪ್ರಶಸ್ತಿ ಪ್ರಕಟವಾಗಿದ್ದು, ಹಿರಿಯ ಸಾಹಿತಿಗಳಾದ ಬನ್ನಂಜೆ ಗೋವಿಂದಾಚಾರ್ಯ, ಪ್ರೊ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಪ್ರೊ. ಸೋಮಶೇಖರ ಇಮ್ರಾಪುರ, ಪ್ರೊ.ಎಚ್.ಜೆ.
ಲಕ್ಕಪ್ಪಗೌಡ ಹಾಗೂ ಕಸ್ತೂರಿ ಬಾಯರಿ ಅವರಿಗೆ ಪ್ರಶಸ್ತಿ ಲಭಿಸಿದೆ. 2016ರಲ್ಲಿ ಪ್ರಕಟವಾದ 18 ಪ್ರಕಾರದ ಕೃತಿಗಳಿಗೆ ವಿಮರ್ಶಕರ ಅಭಿಪ್ರಾಯ ಆಧರಿಸಿ ವರ್ಷದ ಅತ್ಯುತ್ತಮ ಕೃತಿಗಳನ್ನು ಆಯ್ಕೆ ಮಾಡಲಾಗಿದೆ.
“ಉದಯವಾಣಿ’ಯ ಹಿರಿಯ ಮುಖ್ಯ ಉಪಸಂಪಾದಕ ಎ.ಆರ್.ಮಣಿಕಾಂತ್ ಹಾಗೂ ಪತ್ರಕರ್ತ ಹ.ಚ.ನಟೇಶಬಾಬು ಅವರ “ಗಿಫೆrಡ್’ (ಕಥೆಗಳು) ಅನುವಾದ- 1 (ಸೃಜನಶೀಲ ವಿಭಾಗ) ಕೃತಿಯು ಅತ್ಯುತ್ತಮ ಕೃತಿ ಪ್ರಶಸ್ತಿಗೆ ಭಾಜನವಾಗಿದೆ. ಅಕಾಡೆಮಿಯು ಇದೇ ಮೊದಲ ಬಾರಿಗೆ ನೀಡುತ್ತಿರುವ “ಸಾಹಿತ್ಯಶ್ರೀ’ ಪ್ರಶಸ್ತಿಗೆ ಪ್ರೊ.ಧರಣೇಂದ್ರ ಕುರಕುರಿ, ಫಕೀರ್ ಮಹಮ್ಮದ್ ಕಟಾ³ಡಿ,
ಡಾ.ವಿಜಯಶ್ರೀ ಸಬರದ, ಡಾ.ವಿ.ಮುನಿವೆಂಕಟಪ್ಪ, ಡಾ.ನಟರಾಜ ಹುಳಿಯಾರ್, ಡಾ.ಕೆ.ಕೇಶವಶರ್ಮ, ಡಾ.ಕರೀಗೌಡ ಬೀಚನಹಳ್ಳಿ, ಪ್ರೊ.ತೇಜಸ್ವಿ ಕಟ್ಟಿàಮನಿ, ಡಾ.ಕಮಲಾ ಹೆಮ್ಮಿಗೆ ಹಾಗೂ ಕಂಚ್ಯಾಣಿ ಶರಣಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ನೂತನ ಪ್ರಶಸ್ತಿಗೆ
ಭಾಜನರಾದವರಿಗೆ 25 ಸಾವಿರ ರೂ. ನಗದು, ಪ್ರಮಾಣ ಪತ್ರದ ಜತೆಗೆ ಸನ್ಮಾನಿಸಲಾಗುತ್ತದೆ.
ಅತ್ಯುತ್ತಮ ಕೃತಿ ಪ್ರಶಸ್ತಿಗೆ ಪಾತ್ರವಾದ ಕೃತಿಗಳ ವಿವರ ಹೀಗಿದೆ.
ಕಾವ್ಯ: ಗಾಯಗೊಂಡಿದೆ ಗರಿಕೆಗಾನ- ಕೃಷ್ಣಮೂರ್ತಿ ಬಿಳಿಗೆರೆ. ಯುವಕವಿಗಳ ಪ್ರಥಮ ಸಂಕಲನ: ಕಸಬಾರಿಗೆ ಪಾದ- ಬಸವರಾಜ ಹೃತ್ಸಾಕ್ಷಿ. ಕಾದಂಬರಿ: ವೈವಸ್ವತ- ರೇಖಾ ಕಾಖಂಡಕಿ. ಸಣ್ಣಕತೆ: ಬ್ರಹ್ಮರಾಕ್ಷಸ- ಜಯಪ್ರಕಾಶ ಮಾವಿನಕುಳಿ. ನಾಟಕ:
ಬಕಾವಲಿಯ ಹೂ- ಸುಧೀರ್ ಅತ್ತಾವರ್. ಲಲಿತ ಪ್ರಬಂಧ: ಮಿಸಳ್ ಭಾಜಿ- ಭಾರತಿ ಬಿ.ವಿ. ಪ್ರವಾಸ ಸಾಹಿತ್ಯ: ಯುರೋಪ್‌ನ ಧಾರ್ಮಿಕ ನೆಲೆಗಳು- ಡಾ.ಬಿ.ಎಸ್.ತಲ್ವಾಡಿ. ಜೀವನಚರಿತ್ರೆ: ಕಣ್ಣಾಮುಚ್ಚೇ ಕಾಡೇಗೂಡೆ- ಪ್ರೀತಿ ನಾಗರಾಜ್. ಸಾಹಿತ್ಯ ವಿಮರ್ಶೆ:
ಕನ್ನಡ ಕಾವ್ಯ ಮೀಮಾಂಸೆ- ಡಾ.ಎಸ್.ನಟರಾಜ ಬೂದಾಳು. ಗ್ರಂಥ ಸಂಪಾದನೆ: ತಿಂತಿಣಿ ಮೌನೇಶ್ವರರ ವಚನಗಳು- ಡಾ.ವೀರೇಶ ಬಡಿಗೇರ. ಮಕ್ಕಳ ಸಾಹಿತ್ಯ: ಶ್ರಮಯೇವ ಜಯತೆ- ನಿರ್ಮಲಾ ಸುರತ್ಕಲ್.
ವಿಜ್ಞಾನ ಸಾಹಿತ್ಯ: ಅಂತರ್ಜಲ ಬಳಕೆ- ಡಾ.ಎ.ಎಸ್. ಕುಮಾರಸ್ವಾಮಿ. ಮಾನವಿಕ- ದಲಿತ ಚಳವಳಿ ನಿನ್ನೆ- ಇಂದು- ನಾಳೆ- ಡಾ.ಸಣ್ಣರಾಮ. ಸಂಶೋಧನೆ: ಬೌದಟಛಿ ಧರ್ಮ ದರ್ಶನ- ಡಾ. ಶರತ್‌ಚಂದ್ರ ಸ್ವಾಮಿಗಳು. ಅನುವಾದ-2 (ಸೃಜನೇತರ):
ಅಲ್ಲಾಹ್‌ನಿಂದ ನಿರಾಕೃತರು- ಎಂ.ಅಬ್ದುಲ್ ರೆಹಮಾನ್ ಪಾಷ. ಸಂಕೀರ್ಣ: ನಮ್ಮ ಮನೆಗೂ ಬಂದರು ಗಾಂಧೀಜಿ! ಕೆಲವು ನೆನಪುಗಳು- ರಾಜೇಶ್ವರಿ ತೇಜಸ್ವಿ. ಲೇಖಕರ ಮೊದಲ ಕೃತಿ: ಮನಸು ಅಭಿಸಾರಿಕೆ (ಕಥೆಗಳು)- ಶಾಂತಿ ಕೆ. ಅಪ್ಪಣ್ಣ.
ಅಕಾಡೆಮಿಯು ಕೆಲ ಸಾಹಿತ್ಯ ಪ್ರಕಾರಗಳಿಗೆ ನೀಡುವ ದತ್ತಿ ಬಹುಮಾನಗಳನ್ನು ಪ್ರಕಟಿಸಿದೆ. ಕಾವ್ಯ- ಹಸ್ತಪ್ರತಿ (ಚಿ.ಶ್ರೀನಿವಾಸರಾಜು ದತ್ತಿನಿಧಿ ಬಹುಮಾನ): ಎರಡು ನಂಬರಿನ ಟಿಕಲಿ- ಚೈತ್ರಿಕಾ ಶ್ರೀಧರ ಹೆಗಡೆ. ಕಾದಂಬರಿ (ಚದುರಂಗ ದತ್ತಿನಿಧಿ
ಬಹುಮಾನ): ಕಾಡಂಕಲ್ ಮನೆ- ಮುಹಮ್ಮದ್ ಕುಳಾಯಿ. ಆತ್ಮಕತೆ (ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ): ಜೀವಾತ್ಮ ಜೈತ್ರಯಾತ್ರೆ- ಡಾ.ಗುರುಪಾದ ಕೆ. ಹೆಗಡೆ. ಸಾಹಿತ್ಯ ವಿಮರ್ಶೆ (ಪಿ.ಶ್ರೀನಿವಾಸರಾವ್ ದತ್ತಿನಿಧಿ ಬಹುಮಾನ): ಸಾಹಿತ್ಯ ಮತ್ತು ಸಾಹಿತ್ಯೇತರ- ಎಸ್.ಶಿವಾನಂದ. ಅನುದಾನ-1 (ಸೃಜನಶೀಲ- ಎಲ್.ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ ಬಹುಮಾನ): ಒಂಟಿ
ಸೇತುವೆ- ಸ. ರಘುನಾಥ. ಲೇಖಕರ ಮೊದಲ ಸ್ವತಂತ್ರ ಕೃತಿ (ಮಧುರಚೆನ್ನ ದತ್ತಿನಿಧಿ ಬಹುಮಾನ): ಪಂಚಮುಖ (ಕಾದಂಬರಿ)- ಡಾ.ಕೆ.ಬಿ.ಶ್ರೀಧರ್. ಕನ್ನಡದಿಂದ ಇಂಗ್ಲಿಷಿಗೆ ಅನುವಾದ (ಅಮೆರಿಕನ್ನಡ ದತ್ತಿನಿಧಿ ಬಹುಮಾನ): ಮೋಹನ್‌ಸ್ವಾಮಿ- ರಶ್ಮಿ
ತೇರದಾಳ.
ನಗರದ ಕನ್ನಡ ಭವನದಲ್ಲಿರುವ ಅಕಾಡೆಮಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರ ವಿವರ ಪ್ರಕಟಿಸಿದ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ, ಅಕಾಡೆಮಿ ವತಿಯಿಂದ ವಾರ್ಷಿಕ ಪ್ರಶಸ್ತಿಗಳಿಗೆ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ. 60 ವರ್ಷ ಮೀರಿದ ಹಾಗೂ ಸಮಗ್ರ ಸಾಹಿತ್ಯ ಆಧರಿಸಿ 5 ಮಂದಿಯನ್ನು 2017ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ 50 ಸಾವಿರ ರೂ. ನಗದು ಹಾಗೂ ಪ್ರಮಾಣ ಪತ್ರ ಒಳಗೊಂಡಿರುತ್ತದೆ ಎಂದು ಹೇಳಿದರು.
ಪ್ರಶಸ್ತಿಗೆ ಐದು ಮಂದಿಯ ಹೆಸರು ಶಿಫಾರಸು ಮಾಡುವಂತೆ 100 ಮಂದಿಗೆ ಪತ್ರ ಬರೆಯಲಾಗಿತ್ತು. ಅದರಲ್ಲಿ 60 ಮಂದಿ ಪ್ರತಿಕ್ರಿಯೆ ನೀಡಿದ್ದರು. ಹಾಗೆಯೇ ಹಿಂದಿನ ಐದು ವರ್ಷಗಳಲ್ಲಿ ಸಲ್ಲಿಕೆಯಾಗಿರುವ ಸಲಹೆ, ಅಭಿಪ್ರಾಯಗಳನ್ನೂ ಪರಿಶೀಲಿಸಿ ಚರ್ಚಿಸಿ ಅಂತಿಮವಾಗಿ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.