ಐತಿಹಾಸಿಕ ಕಡಲೆಕಾಯಿ ಪರಿಷೆ ಆರಂಭ ; ಹೇಗೆ ಆರಂಭವಾಯ್ತು ಗೊತ್ತಾ?
Team Udayavani, Dec 3, 2018, 3:32 PM IST
ಬೆಂಗಳೂರು: ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಕಾರ್ತಿಕ ಮಾಸದ ಕೊನೆಯ ಸೋಮವಾರ ಅಧಿಕೃತ ಚಾಲನೆ ದೊರೆತಿದೆ. ಸಹಸ್ರಾರು ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿದ್ದು , ಪರಿಷೆಯನ್ನು ಪ್ಲ್ರಾಸ್ಟಿಕ್ ಮುಕ್ತ ಮಾಡಿ, ಸ್ವತ್ಛತೆ ಕಾಪಾಡುವಂತೆ ಮನವಿ ಮಾಡಲಾಗಿದ್ದು, ವ್ಯವಸ್ಥೆಯನ್ನೂ ಮಾಡಲಾಗಿದೆ.
ಪ್ಲಾಸ್ಟಿಕ್ ಚೀಲಕ್ಕೆ ಬದಲಾಗಿ ಪರಿಸರ ಸ್ನೇಹಿ ಬ್ಯಾಗ್‌ಗಳನ್ನು ಬಳಸಲು ವ್ಯವಸ್ಥೆ ಮಾಡಲಾಗಿದೆ.
ಎರಡು ದಿನ ಸಂಚಾರ ಬಂದ್
ರಾಮಕೃಷ್ಣ ಆಶ್ರಮದಿಂದ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜುವರೆಗಿನ ರಸ್ತೆಯಲ್ಲಿ ಸೋಮವಾರ, ಮಂಗಳವಾರ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಪರಿಷೆಗೆ ಆಗಮಿಸುವವರ ಅನುಕೂಲಕ್ಕಾಗಿ ಸಮೀಪದ ಎಪಿಎಸ್ ಕಾಲೇಜು ಆವರಣ ಮತ್ತು ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಪರಿಷೆ ಆರಂಭವಾಗಿದ್ದು ಹೇಗೆ ?
ಬೆಂಗಳೂರು ಅಭಿವೃದ್ಧಿ ಹೊಂದುವುದಕ್ಕೂ ಮೊದಲು, ಬಸವನಗುಡಿಯ ಪ್ರದೇಶ ಕೃಷಿ ಭೂಮಿಯಾಗಿತ್ತು. ಅಲ್ಲಿ ಹೆಚ್ಚಾಗಿ ಕಡಲೆಕಾಯಿ ಬೆಳೆಯುತ್ತಿದ್ದರು. ಫಸಲು ಬಲಿಯುತ್ತಿದ್ದಂತೆಯೇ ಯಾವುದೋ ಪ್ರಾಣಿ, ರಾತ್ರೋರಾತ್ರಿ ಅದನ್ನು ತಿಂದು ಹಾಕುತ್ತಿತ್ತು. ಗಾಬರಿಯಾದ ರೈತರು, ರಾತ್ರಿಯ ವೇಳೆ ಅಡಗಿ ಕುಳಿತು ಪರೀಕ್ಷಿಸಿದಾಗ- ಭಾರೀ ಗಾತ್ರದ ಹೋರಿಯೊಂದು ಕಡಲೆಕಾಯಿ ಬೆಳೆಯನ್ನು ತಿನ್ನುವುದು ಕಾಣಿಸಿತು. ಅದು ಸಾಮಾನ್ಯ ಹೋರಿಯಲ್ಲ. ದೈವಾಂಶ ಸಂಭೂತವಾದ
ಬಸವಣ್ಣ ಎಂದು ಊಹಿಸಿದ ರೈತರು- ನಮ್ಮ ಬೆಳೆಯನ್ನು ಹಾಳು ಮಾಡಬೇಡ. ಪ್ರತಿ ವರ್ಷವೂ ಕೃಷಿ ಚಟುವಟಿಕೆ ಮುಗಿದ ನಂತರ, ನಿನ್ನ ಹೆಸರಿನಲ್ಲಿ ಪರಿಷೆ ಮಾಡುತ್ತೇವೆ ಎಂದು ಹರಕೆ ಕಟ್ಟಿಕೊಂಡರಂತೆ…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.