ಮೈಸೂರಿನಲ್ಲಿ ನಡೆದಿದ್ದು ಅಭಿವೃದ್ದಿ ಚರ್ಚೆಯಷ್ಟೇ; ಸಂಸದ-ಶಾಸಕರ ಜಟಾಪಟಿಗೆ ಸಿಎಂ ಸಮರ್ಥನೆ
ಟೋಯಿಂಗ್ ವ್ಯವಸ್ಥೆಯಲ್ಲಿ ಹಲವು ಬದಲಾವಣೆ ಮಾಡುತ್ತೆವೆ
Team Udayavani, Jan 30, 2022, 12:03 PM IST
ಬೆಂಗಳೂರು: ಮೈಸೂರಿನಲ್ಲಿ ಅಭಿವೃದ್ಧಿ ಕುರಿತು ಚರ್ಚೆಯಾಗಿದೆ ಅಷ್ಟೇ, ಆದರೆ ಇಬ್ಬರನ್ನೂ ಕರೆದು ನಾನು ಮಾತಾಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಮೈಸೂರು ಶಾಸಕರು-ಸಂಸದರ ಜಟಾಪಟಿಗೆ ಪ್ರತಿಕ್ರಿಯೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲಸ ಕಾರ್ಯಗಳ ಬಗ್ಗೆ ಅಭಿಪ್ರಾಯ ಇದೆಯೇ ಹೊರತು ಬೇರೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅಭಿವೃದ್ಧಿ ಬಗ್ಗೆ ಪೈಪೋಟಿಯಿದ್ದಾಗ ಈ ರೀತಿಯ ಚರ್ಚೆಯಾಗುತ್ತದೆ ಎಂದು ಸಮರ್ಥನೆ ಮಾಡಿಕೊಂಡರು.
ಟೋಯಿಂಗ್ ಪುನರ್ ಪರಿಶೀಲನೆ: ಟೋಯಿಂಗ್ ನಲ್ಲಿರುವ ವ್ಯವಸ್ಥೆ ಪುನರ್ ಪರಿಶೀಲನೆ ಮಾಡುತ್ತಿದ್ದೇವೆ. ಹಲವಾರು ಘಟನೆ ಬಗ್ಗೆ ನಾನು ಗಮನಿಸಿದ್ದೇನೆ. ಸಾರ್ವಜನಿಕರಿಗೆ ಕಾನೂನು ರೀತಿ ನಡೆದುಕೊಳ್ಳಬೇಕು, ಆದರೆ ರಕ್ಷಣೆ ಮಾಡಬೇಕಾದವರು ಅತಿರೇಕ ವರ್ತನೆ ಮಾಡುವುದನ್ನು ನಾವು ಸಹಿಸುವುದಿಲ್ಲ. ಇಡೀ ವ್ಯವಸ್ಥೆ ಬಗ್ಗೆ ನಾಳೆ, ಡಿಜಿ, ಕಮಿಷನರ್, ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ಮಾಡುತ್ತೇನೆ. ಹಲವು ಬದಲಾವಣೆ ಮಾಡುವುದರ ಜೊತೆಗೆ ಜನ ಸ್ನೇಹಿ ತೀರ್ಮಾನ ಗಳನ್ನು ಮಾಡುತ್ತೇವೆ ಎಂದರು.
ಇದನ್ನೂ ಓದಿ:ವರಿಷ್ಠರು ಕರೆದಾಗ ದೆಹಲಿಗೆ ಹೋಗುತ್ತೇನೆ..: ಸಂಪುಟ ವಿಸ್ತರಣೆ ಗುಟ್ಟು ಬಿಟ್ಟುಕೊಡದ ಸಿಎಂ
ಸಿನಿಮಾಗೆ ಕೋವಿಡ್ 50:50 ರೂಲ್ಸ್ ಮುಂದುವರಿಕೆ ವಿಚಾರವಾಗಿ ಮಾತನಾಡಿದ ಸಿಎಂ, “ನಿನ್ನೆ ಚಿತ್ರರಂಗದವರು ಭೇಟಿಯಾಗಿದ್ದರು. ಅವರ ಜೊತೆ ಮಾತಾಡಿದ್ದೇನೆ. ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸಿನ ಮೇರೆಗೆ ನಿರ್ಧಾರ ಮಾಡಿದ್ದೇವೆ. ಮತ್ತೆ ತಾಂತ್ರಿಕ ಸಲಹಾ ಸಮಿತಿ ಮುಂದೆ ಚಿತ್ರರಂಗದ ಮನವಿ ಮುಂದಿಡುತ್ತೇವೆ. ಆ ಬಳಿಕ ನಿರ್ಧಾರ ಮಾಡುತ್ತೇವೆ” ಎಂದರು.
ಕಾಂಗ್ರೆಸ್ ಗುಣ ಬದಲಾವಣೆಯಾಗದು: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಒಳ ಜಗಳ ಎಲ್ಲರಿಗೂ ಗೊತ್ತಿರುವ ವಿಚಾರ. ಕಾಂಗ್ರೆಸ್ ಯಾವಾಗಲೂ ಕೂಡ ಜನ ಹಿತವಾಗಿ ಕೆಲಸ ಮಾಡಿಲ್ಲ. ಅಧಿಕಾರವನ್ನು ಸ್ವಾರ್ಥಕ್ಕಾಗಿ ಬಳಸೋದು ಬಿಟ್ಟರೆ, ಬೇರೆ ಅಭಿವೃದ್ಧಿಗೆ ಬಳಕೆ ಮಾಡಿಲ್ಲ, ಯಾರೇ ನಾಯಕರು ಬದಲಾವಣೆಯಾದರೂ ಸರಿಯೇ ಸ್ವಾರ್ಥಕ್ಕಾಗಿ ಅವರ ರಾಜಕಾರಣ. ಹೀಗಾಗಿ ಅವರ ಗುಣಗಳು ಎಂದಿಗೂ ಬದಲಾವಣೆ ಆಗೋಲ್ಲ ಎಂದು ಸಿಎಂ ಟಾಂಗ್ ನೀಡಿದರು.
ಆರು ತಿಂಗಳ ಸರ್ಕಾರದ ಸಾಧನೆ ಬಗ್ಗೆ ಸಿದ್ದರಾಮಯ್ಯ ಟೀಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ್ ಬೊಮ್ಮಾಯಿ, “ಸಿದ್ದರಾಮಯ್ಯರಿಂದ ಬೇರೆ ಏನು ನಿರೀಕ್ಷೆ ಮಾಡಲುಕೆ ಸಾಧ್ಯ. ಜನ ಹಿತಕ್ಕಾಗಿ ಏನಾಗಿದೆಂದು ನೋಡಬೇಕು. ಅದು ಬಿಟ್ಟು ಮೊಸರಲ್ಲಿ ಹುಡುಕುವ ಕೆಲಸ ಮಾಡಬಾರದು. ಪ್ರಣಾಳಿಕೆಯಲ್ಲಿ ಶೇ90 ಮಾಡಿದ್ದೀವಿ ಎನ್ನುತ್ತಾರೆ. ಆದರೆ ಎಲ್ಲಿ ಮಾಡಿದ್ದಾರೆ? ಅದಕ್ಕಾಗಿ ಅವರನ್ನು ಜನರು ತಿರಸ್ಕಾರ ಮಾಡಿರುವುದು. ಅವರ ಪ್ರಣಾಳಿಕೆಯ ಯೋಜನೆಗಳು ಘೋಷಣೆಯಷ್ಟೇ, ಅನುಷ್ಠಾನವಾಗಿಲ್ಲ. ಯಾವ ಕಾರ್ಯಕ್ರಮ ಯಾವ ರೀತಿ ಅನುಷ್ಠಾನ ಮಾಡಿ, ಯಾರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಅರಿವು ನಮಗೆ ಇದೆ, ಈ ದಿಕ್ಕಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ
ಹೃದಯಾಘಾತದಿಂದ ಜಾಗೃತ ಮತದಾರರ ವೇದಿಕೆಯ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ಫಲ್ಗುಣಿ ನಿಧನ
Karnataka BJP; ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೀಘ್ರ ಚುನಾವಣೆ: ಕೇಂದ್ರ ಸಚಿವ ಚೌಹಾಣ್
ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್… ರಮೇಶ್ ಜಾರಕಿಹೊಳಿ
MUST WATCH
ಹೊಸ ಸೇರ್ಪಡೆ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.