ದುಬೈ ಕನ್ನಡಿಗರ ಕುಟುಂಬದ ಕಾಳಜಿ ಜವಾಬ್ದಾರಿ ನಮ್ಮದು: ಗೃಹ ಸಚಿವ ಬಸವರಾಜ ಬೊಮ್ಮಾಯಿ
Team Udayavani, Apr 18, 2020, 12:45 PM IST
ಬೆಂಗಳೂರು: ಕೋವಿಡ್-19 ಸಂಕಷ್ಟದ ಸಮಯದಲ್ಲಿ ದುಬೈ ಕನ್ನಡಿಗರು ಯಾವುದೇ ಆತಂಕಕ್ಮೆ ಒಳಗಾಗುವ ಅವಷ್ಯಕತೆ ಇಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಮಾದ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸರ್ಕಾರ ದುಬೈ ಕನ್ನಡಿಗರ ಜೊತೆ ಇದೆ. ಇಲ್ಲಿರುವ ನಿಮ್ಮ ಕುಟುಂಬಕ್ಕೂ ಯಾವುದೇ ರೀತಿ ಸಮಸ್ಯೆ ಆಗಲು ನಾವು ಬಿಡುವುದಿಲ್ಲ. ನಿಮ್ಮ ಕುಟುಂಬದ ಕಾಳಜಿ ವಹಿಸುತ್ತೇವೆ ಎಂದು ಅಭಯ ನೀಡಿದ್ದಾರೆ.
ದುಬೈನಲ್ಲಿರುವ ಕನ್ನಡಿಗ ಉದ್ಯಮಿಗಳು, ನೌಕರರು, ಕೋವಿಡ್-19 ವಿರುದ್ದ ಹೋರಾಡಲು ನೆರವಾಗಿ. ಸರ್ಕಾರಕ್ಕೆ ನಿಮ್ಮ ಸಹಕಾರ ಇರಲಿ. ಅಲ್ಲಿರುವ ಕನ್ನಡಿಗ ಕಾರ್ಮಿಕರು, ಕೆಲಸಗಾರರ ಬಗ್ಗೆಗೂ ನೀವು ಕಾಳಜಿ ವಹಿಸಿ. ಅಸಹಾಯಕರಿಗೆ ಸಹಾಯ ಮಾಡಿ. ಸರ್ಕಾರ ಯಾವಾಗಲೂ ನಿಮ್ಕ ಜೊತೆ ಇದೆ ಎಂದು ದುಬೈ ಕನ್ನಡಿಗರಿಗೆ ಧೈರ್ಯ ತುಂಬಿದ್ದಾರೆ. ಸರ್ಕಾರದ ಜೊತೆ ನಿಂತು ಸಹಕಾರ ಕೊಡುವಂತೆ ಬೊಮ್ಮಾಯಿ ಮನವಿ ಮಾಡಿದ್ದಾರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.