Basaveshwar District; ಅನಗತ್ಯ ಗಿಮಿಕ್ ಬೇಡ : ಸಚಿವ ಶಿವಾನಂದ ಪಾಟೀಲ್ ಕಿಡಿ

ನಮ್ಮವರೇ ಮಾಡಲಿ, ಬೇರೆ ಯಾರೇ ಮಾಡಲಿ, ಅದು ತಪ್ಪೇ

Team Udayavani, Oct 28, 2023, 10:59 PM IST

Shivanand Patil

ವಿಜಯಪುರ : ವಿಜಯಪುರ ಜಿಲ್ಲೆಗೆ ಬಸವ ಜಿಲ್ಲೆ ಎಂದು ನಾಮಕರಣ ಮಾಡುವ ವಿಷಯದಲ್ಲಿ ಅನಗತ್ಯವಾಗಿ ಯಾರೂ ಗಿಮಿಕ್ ಮಾಡುವುದು ಬೇಡ. ಚುನಾವಣೆ ಹೊಸ್ತಿಲಲ್ಲಿ ಇಂಥ ನಡೆ ರಾಜಕೀಯ ಅಭಾಸ ಎನಿಸಲಿದೆ. ವಿಜಯಪುರ ಜಿಲ್ಲೆ ಬಸವೇಶ್ವರರ ತವರು ಜಿಲ್ಲೆ ಎಂಬುದು ಇಡಿ ಜಗತ್ತಿಗೆ ಗೊತ್ತಿದೆ ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಪ್ರತಿಕ್ರಿಯಿಸಿದ್ದಾರೆ.

ಶನಿವಾರ ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯಾವುದೇ ಸರ್ಕಾರ ಇರಲಿ, ಬಸವೇಶ್ವರರ ಜನ್ಮಭೂಮಿ ಅಭಿವೃದ್ಧಿ ವಿಷಯದಲ್ಲಿ ನೈಜ ಕಾಳಜಿ ತೋರುತ್ತಿಲ್ಲ. ನಾವೇ ಶಾಸಕರು, ಸಚಿವರೆ ಸರ್ಕಾರದೊಂದಿಗೆ ಜಗಳಕ್ಕಿಳಿದು ಅಭಿವೃದ್ಧಿಗೆ ಅನುದಾನ ತರುವ ದುಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾಮಾಜಿಕ ಪರಿವರ್ತನೆ ಮೂಲಕ ಬಸವಣ್ಣ ವಿಶ್ವಗುರು ಎನಿಸಿದ್ದಾರೆ. ಕೇವಲ ಅವರ ಬಸವೇಶ್ವರರ ನಾಮಕರಣದಿಂದ ಹಿರಿಮೆ, ಗರಿಮೆ ಹೆಚ್ಚಳವಾಗಲಿ, ಜಗತ್ತಿಗೆ ಬಸವಣ್ಣನನ್ನು ಪರಿಚಯಿಸುತ್ತೇವೆ ಎಂಬುದಾಗಲಿ ಕಷ್ಟದ ಕೆಲಸ ಎಂದರು.

ಬಸವೇಶ್ವರರು ಮಾಡಿರುವ ಕೆಲಸ, ನೀಡಿರುವ ಸಂದೇಶಗಳು, ಬಿಟ್ಟುಹೋಗಿರುವ ಕುರುಹುಗಳು ಸಮಾಜಕ್ಕೆ ತಿಳಿಯಬೇಕಿದೆ, ಜನ್ಮಭೂಮಿ ಬಸವನಬಾಗೇವಾಡಿ, ಐಕ್ಯಸ್ಥಳ ಕೂಡಲಸಂಗಮ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗಿಲ್ಲ. ಮೊದಲು ಇವುಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.

ನಾನು ಕೂಡ ಬಸವಣ್ಣನ ಅಭಿಮಾನಿ, ಬಸವಣ್ಣನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ರೆ ಅದು ಸಾಧನೆ ಅಲ್ಲ. ಯಾರೇ ಮುಖ್ಯಮಂತ್ರಿ ಇರಲಿ ಅಧಿಕಾರ, ಅವಕಾಶ ಇದ್ದಾಗ ಬಸವ ಜನ್ಮಭೂಮಿ ಹಾಗೂ ಕರ್ಮ ಭೂಮಿ ಅಭಿವೃದ್ಧಿ ಕಾಳಜಿ ತೋರಬೇಕು ಎಂದರು.

ಹೀಗಾಗಿ ವಿಜಯಪುರ ಜಿಲ್ಲೆಗೆ ಬಸವೇಶ್ವರ ಹೆಸರು ನಾಮಕರಣದಿಂದ ವಿಶೇಷ ಏನೂ ಬದಲಾವಣೆ ಆಗದು. ಜಿಲ್ಲೆಗೆ ಬಸವೇಶ್ವರ ಹೆಸರು ನಾಮಕರಣ ಮಾಡಿದ ಮೇಲೆ ಕರೆಯುವುದೂ ಕಷ್ಟವಾಗುತ್ತದೆ ಎಂದರು.

ರಾಜ್ಯಕ್ಕೆ ಬಸವನಾಡು ಎಂದು ಹೆಸರಿಡುವ ವಿಚಾರಕ್ಕೂ ಸಹಮತ ವ್ಯಕ್ತಪಡಿಸದ ಸಚಿವ ಶಿವಾನಂದ,
ಇದು ಸ್ತ್ಯೂಕ್ತ ವಿಚಾರವೇ ಅಲ್ಲ. ರಾಜಕೀಯ ಗಿಮಿಕ್ ಗಾಗಿ ಇಂಥ ನಡೆ ಅನುಸರಿಸುವುದು ಸರಿಯಾದ ಕ್ರಮವಲ್ಲ ಎಂದರು.

ಮಹಾನ್ ಸಂತರನ್ನು ಮಹಾಪುರುಷರನ್ನು ರಾಷ್ಟ್ರೀಯ ದೃಷ್ಠಿಕೋನದಿಂದ ನೋಡಬೇಕೇ ಹೊರತು ರಾಜಕೀಯ ದೃಷ್ಠಿಕೋನದಿಂದಲ್ಲ ಎಂದರು.

ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಇಂಥ ವಿಷಯ ಪ್ರಸ್ತಾಪಿಸುವುದೇ ಸರಿಯಲ್ಲ. ಆ ರೀತಿ ಮಾಡುವುದೇ ತಪ್ಪು. ಇಂಥದ್ದನ್ನು ನಮ್ಮವರೇ ಮಾಡಲಿ, ಬೇರೆ ಯಾರೇ ಮಾಡಲಿ, ಅದು ತಪ್ಪೇ ಎಂದರು

ಬಸವೇಶ್ವರರ ಕರ್ಮಭೂಮಿ ಬೀದರ ಜಿಲ್ಲೆ ಇದ್ದು, ನಮ್ಮ ಜಿಲ್ಲೆಗೆ ಹೆಸರಿಡಿ ಎಂಬ ಬೇಡಿಕೆ ಬಾರದೇ ಇರದು. ಒಂದಕ್ಕೊಂದು ಇತಿಹಾಸ ತಿರುಚಲು ನಾವು ಪ್ರಯತ್ನ ಮಾಡಬಾರದು ಎಂದರು.

ಬಸವೇಶ್ವರ ಹೆಸರಿನಲ್ಲಿ ಪ್ರತ್ಯೇಕ ಪ್ರಾಧಿಕಾರ ರಚಿಸುವುದಾಗಿ ಚುನಾವಣೆ ಪ್ರಚಾರಕ್ಕೆ ಬಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದ್ದರು. ನಾವು ಕೂಡ ಈ ವಿಷಯವಾಗಿ ಮುಖ್ಯಮಂತ್ರಿಗೆ ಒತ್ತಾಯಿಸುತ್ತೇವೆ. ಹಾಗಂತ ಕೇವಲ ಪ್ರಾಧಿಕಾರ ಘೋಷಿಸಿದರೆ ಸಾಲದಯ, ಅಗತ್ಯ ಅನುದಾನವನ್ನೂ ನೀಡಿದರೆ ಅಭಿನಂದಿಸುವುದಾಗಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ನೇಕಾರರ ಮಕ್ಕಳಿಗೂ ಕಟ್ಟಡ ಕಾರ್ಮಿಕರ ಮಕ್ಕಳ ಸೌಲಭ್ಯ ಕಲ್ಪಿಸಲು ಯತ್ನ
ನೇಕಾರರ ಮಕ್ಕಳಿಗೆ ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡುವ ಸೌಲಭ್ಯ ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸುತ್ತೇನೆ, ಅದಕ್ಕಾಗಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಜವಳಿ ನೀತಿ ಇದೆ. ಕಟ್ಟಡ ಕಾರ್ಮಿಕರ ಪಟ್ಟಿಗೆ ಜವಳಿ ಕಾರ್ಮಿಕರನ್ನು ಸೇರಿಸಿ ಎಂಬುದು ನಮ್ಮ ಒತ್ತಾಯ. ಕಾರ್ಮಿಕ ಸಚಿವರಿಗೆ ಈ ವಿಷಯವಾಗಿ ಒತ್ತಾಯ ಮಾಡಿದ್ದೇನೆ ಎಂದರು.

ನಮ್ಮ ಮನವಿಗೆ ಕಾರ್ಮಿಕ ಸಚಿವರು ಸಕಾರಾತ್ಮಕ ಸ್ಪಂದನೆ ನೀಡಿದ್ದು, ನಮ್ಮ ಬೇಡಿಕೆ ಈಡೇರಿದರೆ ದೇಶದ ನೇಕಾರರ ಮಕ್ಕಳಿಗೆ ಅನುಕೂಲ ಆಗಲಿದೆ ಎಂದರು.

ಟಾಪ್ ನ್ಯೂಸ್

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

isrel netanyahu

Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

crime (2)

Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

crime (2)

Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Belagavi: Let there be a full discussion of issues in the plenary session: Dr. Prabhakar Kore

Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್‌ ಕೋರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.