ಕೋವಿಡ್ ಹೆಸರಲ್ಲಿ ಮೋಸ ಹೋದೀರಿ ಎಚ್ಚರ !
ಹೆಸರಲ್ಲಿ ಮೋಸ ಹೋದೀರಿ ಎಚ್ಚರ !
Team Udayavani, Dec 8, 2020, 6:30 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಹೆಸರಲ್ಲೂ ಮೋಸ ಮಾಡುವ ದಂಧೆ ಹುಟ್ಟಿಕೊಂಡಿದ್ದು, ನಿಮ್ಮ ಎಲ್ಲ ಮಾಹಿತಿ ಕದಿಯುವ ಮತ್ತು ಹಣ ಲಪಟಾಯಿಸುವ ಸಾಧ್ಯತೆ ಇದೆ. ಈ ಬಗ್ಗೆ ಸೈಬರ್ ಪೊಲೀಸರು ಮತ್ತು ತಜ್ಞರು ಮಾಹಿತಿ ನೀಡಿದ್ದು, ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ.
ಕೆಲವು ಕಿಡಿಗೇಡಿಗಳು ನಕಲಿ ವೆಬ್‌ಸೈಟ್ ಲಿಂಕ್ ಬಿಡುಗಡೆ ಮಾಡಿದ್ದಾರೆ. ಸರಕಾರ ಕೊರೊನಾ ಸಂಬಂಧ ಪ್ರತಿಯೊಬ್ಬರಿಗೆ 7,500 ರೂ. ಬಿಡುಗಡೆ ಮಾಡಲಿದೆ. ಈ ಲಿಂಕ್ ಒತ್ತಿ ಅದರಲ್ಲಿರುವ ಪ್ರಶ್ನೆ ಗಳಿಗೆ ಉತ್ತರಿಸಿ ಖಾತೆ ವಿವರ ನೀಡುವಂತೆ ಕೇಳಿದ್ದಾರೆ. ಲಿಂಕ್ ಕ್ಲಿಕ್
ಮಾಡಿ ಬ್ಯಾಂಕ್ ಖಾತೆ ವಿವರ ದಾಖಲಿಸಿದರೆ ಅವುಗಳನ್ನು ಅಕ್ರಮವಾಗಿ ಸಂಗ್ರಹಿಸಿಕೊಳ್ಳಲಿದ್ದಾರೆ ಎಂದು ಸೈಬರ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಕೋವಿಡ್ ಲಸಿಕೆ ಬಗ್ಗೆಯೂ ಎಚ್ಚರಿಕೆ
ಕೊರೊನಾ ಲಸಿಕೆ ವಿತರಣೆ ಬಗ್ಗೆಯೂ ಸಂದೇಶ ಬರುವ ಸಾಧ್ಯತೆಗಳಿರುತ್ತವೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಆರೋಗ್ಯ ಕಾರ್ಯಕರ್ತರನ್ನು ಹೊರತುಪಡಿಸಿ ಎಲ್ಲಿಯೂ ಸಾರ್ವಜನಿಕರು ಹೆಸರು ನೋಂದಾಯಿಸಿಕೊಳ್ಳುವಂತೆ ಸೂಚಿಸಿಲ್ಲ. ಯಾರಾದರೂ ಆ ರೀತಿಯ ಸಂದೇಶಗಳು ಅಥವಾ ವೆಬ್‌ಸೈಟ್‌ನ ಲಿಂಕ್‌ಗಳನ್ನು ಕಳುಹಿಸಿದರೆ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಸೈಬರ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಅಮೆರಿಕ ಸರ್ವರ್ ಮೂಲಕ ಕಾರ್ಯ
ಈ ವೆಬ್‌ಸೈಟ್ ಅಮೆರಿಕ ಮೂಲದ ಸರ್ವರ್‌ನಿಂದ ಕೆಲಸ ಮಾಡುತ್ತಿದೆ. ಲಿಂಕ್ ತೆರೆದರೆ ಫಿಶಿಂಗ್ ಸೈಟ್‌ಗೆ ಹೋಗುತ್ತದೆ. ಅಲ್ಲಿ ಕೇಳಿರುವ ಮಾಹಿತಿ ನೀಡಿದರೆ ಗ್ರಾಹಕನಿಗೆ ಬರುವ ಒಟಿಪಿ ಅವರಿಗೆ ಹೋಗಬಹುದು. ಇದು ಸರಕಾರದ ಅಧಿಕೃತ ವೆಬ್‌ಸೈಟ್ ಅಲ್ಲ, ನಕಲಿ. ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಇಂತಹ ಸಂದೇಶ ಬಂದಿದ್ದರೆ ಪೊಲೀಸರಿಗೆ ತಿಳಿಸಬೇಕು ಎಂದು ವಿಧಿ ವಿಜ್ಞಾನ ತಜ್ಞ ಮತ್ತು ಐಟಿ ವಕೀಲರಾದ ಬಿ.ಎನ್. ಪಣಿಂಧರ್ ಹೇಳಿದ್ದಾರೆ.
ಪಿಎಂ ಕೇರ್ ದುರ್ಬಳಕೆ
ಉ.ಪ್ರದೇಶದಲ್ಲಿ ” ಪ್ರಧಾನಮಂತ್ರಿ ಕೇರ್ಸ್’ ಎಂಬ ವೆಬ್‌ಸೈಟ್ ಸಿದ್ಧಪಡಿಸಿ ಲಕ್ಷಾಂತರ ರೂ. ಲೂಟಿ ಮಾಡಿದ್ದರು. ಬಳಿಕ ಸ್ಥಳೀಯ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
Excise: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್
Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!
MUST WATCH
ಹೊಸ ಸೇರ್ಪಡೆ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.