ಬೇಡ ಜಂಗಮ ವೀರಶೈವರು ಪರಿಶಿಷ್ಟರಲ್ಲ: ಎಸ್ಸಿ.ಎಸ್ಟಿ ಕಲ್ಯಾಣ ಸಮಿತಿ ಅಧ್ಯಕ್ಷ ಕುಮಾರಸ್ವಾಮಿ
ಮೀಸಲಾತಿ ಕೇಳುವುದು ಹೊಸ ರೂಪಾಂತರಿ ಅಟ್ರಾಸಿಟಿ ಪ್ರಕರಣ
Team Udayavani, Aug 1, 2022, 10:12 PM IST
ಬೆಂಗಳೂರು: ವೀರಶೈವ ಲಿಂಗಾಯತ ಸಮುದಾಯದ ಗುರು ಸ್ಥಾನದಲ್ಲಿರುವ ಬೇಡ ಜಂಗಮರು ಪರಿಶಿಷ್ಟ ಜಾತಿಗೆ ಸೇರಿದವರಲ್ಲ. ಅವರಿಗೆ ಎಸ್ಸಿ ಸರ್ಟಿಫಿಕೇಟ್ ಅನ್ನು ರಾಜ್ಯ ಸರ್ಕಾರ ನೀಡಬಾರದು ಎಂದು ಅನುಸೂಚಿತ ಜಾತಿ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಎಂ.ಪಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಎಸ್ಸಿ.ಎಸ್ಟಿ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವುದು, ಸಮಾಜಿಕವಾಗಿ ಮೇಲುಸ್ತರದಲ್ಲಿರುವ ಮೇಲ್ವರ್ಗಗಳು ನಮ್ಮನ್ನು ಎಸ್.ಸಿ.ಎಸ್.ಟಿಗೆ ಸೇರಿಸಿ ಎಂದು ಒತ್ತಡ ಹಾಕುವುದು ಪ್ರಬಲರು ದುರ್ಬಲರ ಮೇಲೆ ನಡೆಸುವ ದೌರ್ಜನ್ಯವಷ್ಟೆ ಅಲ್ಲ . ಎಸ್ಸಿ.ಎಸ್ಟಿ ಗಳ ಮೇಲೆ ಎಸಗುವ ಹೊಸ ಮಾದರಿಯ ರೂಪಾಂತರಿ ಅಟ್ರಾಸಿಟಿ ಪ್ರಕರಣವಾಗಿದೆ ಎಂದು ವ್ಯಾಖ್ಯಾನ ಮಾಡಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯ ಅನಾದಿ ಕಾಲದಿಂದಲೂ ಸಮಾಜಕ್ಕೆ ನ್ಯಾಯ ನೀತಿ ಧರ್ಮ ಬೋದಿಸುವುದರ ಜತೆಗೆ ದೀನದಲಿತರ ಮತ್ತು ಬಡವರ ಮಕ್ಕಳಿಗೆ ಉಚಿತ ಅನ್ನ ದಾಸೋಹ ಮತ್ತು ವಿದ್ಯಾಧಾನ ಮಾಡುತ್ತಿರುವ ಸಮುದಾಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಸಮುದಾಯದಲ್ಲಿ ಮೇಲಿನ ಗುರು ಸ್ಥಾನದಲ್ಲಿರುವ ಜಂಗಮರು ಎನ್ನುವ ಉಪ ಜಾತಿಯ ಕೇಲವು ವ್ಯಕ್ತಿಗಳು ಎಸ್. ಸಿ ಬೇಡ ಜಂಗಮ ಎಂಬ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಆ ಜನರ ಅನ್ನ ಕಸಿದುಕೊಳ್ಳುತ್ತಿರುವು ಮಹಾಪಾಪವಾಗಿದೆ ಎಂದರು.
ವೀರಶೈವ ಲಿಂಗಾಯತ ಸಮುದಾಯದಲ್ಲಿ ಗುರುಗಳ ಸ್ಥಾದಲ್ಲಿರುವ ಜಂಗಮರು ಎಸ್.ಸಿ.ಗಳಾಗಲು ಸಾಧ್ಯವೇ. ಕೇಂದ್ರ ಸರ್ಕಾರದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿನ 101 ಜಾತಿಗಳ 19ನೇ ಕ್ರಮ ಸಂಖ್ಯೆಯಲ್ಲಿ ಬೇಡ ಜಂಗಮ ಅಥವಾ ಬುಡ್ಗ ಜಂಗಮ ಅಥವಾ ಮೂಲ ಜಂಗಮ ಎಂಬ ಹೆಸರಿನ ಜಾತಿಯಿದೆ. ಈ ಜಾತಿಯನ್ನು ಎಸ್ಸಿ ಜಾತಿ ಪಟ್ಟಿಗೆ ಸೇರಿಸುವ ಮುನ್ನ ಕುಲ ಶಾಸ್ತ್ರ, ಸಮಾಜಿಕ ಮತ್ತು ಶೈಕ್ಷಣಿಕ ಹಿನ್ನಲೆಯ ಬಗ್ಗೆ ಸಮಗ್ರ ಅಧ್ಯಯನ ನಡೆಸಲಾಗಿದೆ. ಬೇಡ ಜಂಗಮರು ಆಂಧ್ರ ಪ್ರದೇಶ ಮೂಲದವರು ಇವರ ಮಾತೃ ಭಾಷೆ ತೆಲುಗು ಆಗಿದ್ದು. ಮಾಂಸಹಾರಿಗಳು, ಹೊಟ್ಟೆ ಪಾಡಿಗಾಗಿ ವೇಷಧಾರಿಗಳಾಗಿ ಊರೂರು ಸುತ್ತಿ ಭಿಕ್ಷೆ ಬೇಡುವುದು ಇವರ ಕಾಯಕವಾಗಿದೆ. ಇವರಲ್ಲಿ ವಿದ್ಯಾವಂತರ ಸಂಖ್ಯೆ ಶೇ 1 ಆಗಿದೆ. ಈ ಜನಾಂಗದ ಗುಣ ಲಕ್ಷಣಗಳಲ್ಲಿ ಶೇ ಒಂದು ಭಾಗನೂ ಹೊಂದಿರದ ವೀರಶೈವ ಲಿಂಗಾಯತ ಜನಾಂಗದವರು ಜಂಗಮ್ ಎಂಬ ಪದವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Darshan: ದರ್ಶನ್ ಜಾಮೀನು ರದ್ದತಿಗೆ ಸುಪ್ರೀಂ ಮೊರೆ ಹೋಗಲು ಸಿದ್ಧತೆ
MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!
Ration Card: ಬಡವರಿಗೆ ಬಿಪಿಎಲ್ ಕಾರ್ಡ್ ತಪ್ಪದಂತೆ ನೋಡಿಕೊಳ್ಳಿ: ಸಿಎಂ ಸೂಚನೆ
Session: ವಕ್ಫ್ ಜೊತೆ ಬಿಪಿಎಲ್ ಹೋರಾಟಕ್ಕೆ ಬಿಜೆಪಿ ಸಜ್ಜು
Operation Fear: ಕಾಂಗ್ರೆಸ್ ಶಾಸಕರ ಮೇಲೆ ನಿಗಾ ವಹಿಸಿ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Air Pollutionಗೆ ಪಾಕಿಸ್ತಾನ ಕಂಗಾಲು- 3 ದಿನ ಸಂಪೂರ್ಣ ಲಾಕ್ ಡೌನ್…AQI ಮಟ್ಟ 2000!
Keerthy Suresh: ಬಾಲ್ಯದ ಗೆಳೆಯನೊಂದಿಗೆ ಈ ದಿನ ನೆರವೇರಲಿದೆ ಕೀರ್ತಿ ಸುರೇಶ್ ವಿವಾಹ?
Belthangady: ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ
Max Movie: ಬಿಗ್ ಬಾಸ್ ವೇದಿಕೆಯಲ್ಲಿ ʼಮ್ಯಾಕ್ಸ್ʼ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.