![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Sep 16, 2021, 6:13 AM IST
ಬೆಂಗಳೂರು: ಭಿಕ್ಷಾಟನೆ ಹಿಂದೆ ದೊಡ್ಡ ಜಾಲವಿದ್ದು, ಅದನ್ನು ಮಟ್ಟ ಹಾಕುವಲ್ಲಿ ಗೃಹ ಇಲಾಖೆ ವಿಫಲವಾಗಿದೆ. ಆದ್ದರಿಂದ ಭಿಕ್ಷಾಟನೆಗೆ ತೊಡಗಿರುವ ಹಾಗೂ ಪ್ರೋತ್ಸಾಹ ನೀಡುವವರ ಮೇಲೆ ಕ್ರಮ ಕೈಗೊಳ್ಳುವಂತೆ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸರಕಾರಕ್ಕೆ ಶಿಫಾರಸು ಮಾಡಿದೆ.
ವಿಧಾನಸಭೆಯಲ್ಲಿ ಬುಧವಾರ ಸಮಿತಿ ಅಧ್ಯಕ್ಷೆ ಕೆ. ಪೂರ್ಣಿಮಾ ಅವರು ವರದಿ ಮಂಡಿಸಿದ್ದು, ಭಿಕ್ಷಾಟನೆ ಮಾಡುವವರನ್ನು ಬಂಧಿಸಿ ಅವರ ಮನವೊಲಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎಂದು ಹೇಳಿದೆ. ತಿಳಿಸಲಾಗಿದೆ.
ಅಂಗವಿಲಕರ ಠೇವಣಿ ಮೊತ್ತ ಹೆಚ್ಚಿಸಿ:
ಅಂಗವಿಕಲರ ಹೆಸರಿನಲ್ಲಿಡುವ ಠೇವಣಿ ಮೊತ್ತವನ್ನು 50 ಸಾವಿರದಿಂದ 1 ಲಕ್ಷಕ್ಕೇರಿಸ ಬೇಕು. 5 ವರ್ಷಗಳ ಠೇವಣಿ ಮೊತ್ತವನ್ನು 10 ವರ್ಷಗಳಿಗೆ ವಿಸ್ತರಿಸಬೇಕು ಎಂದು ಶಿಫಾರಸು ಮಾಡಿದೆ.
ಆರೈಕೆ ಭತ್ತೆ ಹೆಚ್ಚಳ ಅಗತ್ಯ:
ಅಂಧ ಮಹಿಳೆಯರಿಗೆ ಜನಿಸುವ ಮಗುವಿನ ಆರೈಕೆ ಭತ್ತೆಯನ್ನು 2 ಸಾವಿರದಿಂದ 4 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು ಹಾಗೂ ಈ ಸೌಲಭ್ಯವನ್ನು ಕನಿಷ್ಠ 2 ಮಕ್ಕಳಿಗೆ ನೀಡುವಂತಾಗಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ಮಾಸಾಶನ ಹೆಚ್ಚಿಸಿ :
ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿ ವೃದ್ಧಿಗಾಗಿ ಮೀಸಲಿಟ್ಟಿರುವ ಹಣ ಮೂರು ವರ್ಷಗಳಿಂದ ಸದ್ಬಳಕೆ ಯಾಗಿಲ್ಲ. ಆ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಮಿತಿ ಶಿಫಾರಸು ಮಾಡಿದೆ. ಪ್ರಸ್ತುತ ಶೇ.45ರಿಂದ 70ರಷ್ಟು ಅಂಗ ವೈಕಲ್ಯ ಹೊಂದಿರುವವರಿಗೆ ನೀಡ ಲಾಗು ತ್ತಿರುವ ಮಾಸಾಶನವನ್ನು 800 ರೂ.ದಿಂದ 3 ಸಾವಿರ ರೂ.ಗಳಿಗೆ ಹಾಗೂ ಶೇ.75ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರು ವವರಿಗೆ 6 ಸಾವಿರ ರೂ. ಮಾಸಾಶನ ನೀಡಲು ಶಿಫಾರಸು ಮಾಡಲಾಗಿದೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.