Belagavi; ಬಿಮ್ಸ್ ಆಸ್ಪತ್ರೆಯಲ್ಲಿ ಮೂರು ತಿಂಗಳಲ್ಲಿ 41 ನವಜಾತ ಶಿಶುಗಳ ಸಾ*ವು
Team Udayavani, Oct 27, 2024, 6:55 AM IST
ಬೆಳಗಾವಿ: ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್) ಆಸ್ಪತ್ರೆಯಲ್ಲಿ ಮೂರು ತಿಂಗಳಲ್ಲಿ 41 ನವಜಾತ ಶಿಶುಗಳು ಮೃತಪಟ್ಟಿವೆ. ಸಾವಿಗೆ ನಿಖರವಾದ ಕಾರಣ ಇನ್ನೂ ಹೊರಬಾರದಿದ್ದರೂ ಆಕ್ಸಿಜನ್ ಕಂಪ್ರಶರ್ ಕೊರತೆಯೇ ಕಾರಣ ಎಂಬ ಶಂಕೆಗಳಿವೆ.
ಈ ಬಗ್ಗೆ ಬಿಮ್ಸ್ ನಿರ್ದೇಶಕ ಡಾ| ಅಶೋಕ ಶೆಟ್ಟಿ ಪ್ರತಿಕ್ರಿಯಿಸಿ, ಈ ಆರೋಪವನ್ನು ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ. ಮೂರು ತಿಂಗಳಲ್ಲಿ 41 ಶಿಶುಗಳು ಮೃತಪಟ್ಟಿದ್ದು ನಿಜ. ನವಜಾತ ಶಿಶುಗಳ ಸಾವು ಬೇರೆ ಬೇರೆ ಕಾರಣಗಳಿಂದ ಆಗಿರಬಹುದು. ಹೆರಿಗೆ ವಿಭಾಗದಲ್ಲಿರುವ 2 ಏರ್ ಕಂಪ್ರಶರ್ ಪೈಕಿ ಒಂದು ಹಾಳಾಗಿದ್ದು, ದುರಸ್ತಿ ನಡೆಯುತ್ತಿದೆ.
ಆಕ್ಸಿಜನ್ ಲಭ್ಯವಾಗದೇ ಮೃತಪಟ್ಟಿವೆ ಎಂದು ಹೇಳಲು ಆಗಲ್ಲ. ಸಾವಿನ ಬಗ್ಗೆ ತನಿಖೆ ನಡೆಸಲಾಗುವುದು ಎಂದರು.
ಆಗಸ್ಟ್‌ನಲ್ಲಿ 12, ಸೆಪ್ಟಂಬರ್‌ನಲ್ಲಿ 18, ಅಕ್ಟೋಬರ್‌ನಲ್ಲಿ 11 ಸೇರಿ ಒಟ್ಟು 41 ಶಿಶುಗಳು ಮತಪಟ್ಟಿವೆ. ಅವಧಿ ಪೂರ್ವ ಪ್ರಸವ, ಕಡಿಮೆ ತೂಕ, ಹೃದಯ ಸಮಸ್ಯೆ ಸೇರಿ ಇತರ ಸಮಸ್ಯೆಯಿಂದ ಶಿಶುಗಳ ಸಾವಾಗಿದೆ. ಏರ್ ಕಂಪ್ರಶರ್ 3 ತಿಂಗಳಿಂದ ದುರಸ್ತಿ ಆಗಿಲ್ಲ. ಇನ್ನೊಂದೆಡೆ ಬಿಮ್ಸ್ ಆಡಳಿತ ಮಂಡಳಿ ಸೆ. 4ರಂದು ಕಂಪ್ರಶರ್ ದರ ಕುರಿತು ಮಾಹಿತಿ ಪಡೆದಿದ್ದರೂ ಈವರೆಗೆ ಅದನ್ನು ಖರೀದಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.