Belagavi Session; ಬಿಜೆಪಿಯೊಳಗಿನ ಬಿರುಕು ಕಲಾಪದಲ್ಲೂ ಪ್ರತಿಫಲನ
ಅಶೋಕ್, ಬಸನಗೌಡ ಪಾಟೀಲ್ ಯತ್ನಾಳ್ ಭಿನ್ನ ಬೇಡಿಕೆ ಮಂಡನೆ
Team Udayavani, Dec 10, 2024, 6:45 AM IST
ಬೆಳಗಾವಿ: ರಾಜ್ಯ ಬಿಜೆಪಿಯ ಭಿನ್ನಮತ ಸದನದ ಕಲಾಪಗಳಲ್ಲಿಯೂ ಬಿಂಬಿಸಿತು. ಬೆಳಗಾವಿ ಅಧಿವೇಶನದ ಮೊದಲ ದಿನವೇ ಕಲಾಪದಲ್ಲಿ ಬಿಜೆಪಿಯ ಹಿರಿಯ ನಾಯಕರ ನಡುವೆ ಹೊಂದಾಣಿಕೆ ಇಲ್ಲದಿರುವುದು ಗೋಚರಿಸಿತು.
ಸಂತಾಪ ನಿರ್ಣಯ ಮುಕ್ತಾಯದ ಬಳಿಕ ವಿಪಕ್ಷ ನಾಯಕ ಆರ್. ಅಶೋಕ್, ವಕ#… ವಿವಾದದ ಬಗೆಗಿನ ನಿಲುವಳಿ ಸೂಚನೆಗೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದರೆ, ಯತ್ನಾಳ್ ಅವರು ಪಂಚಮಸಾಲಿಗಳಿಗೆ ಮೀಸಲಾತಿ ನೀಡಲು ಆಗ್ರಹಿಸಿ ಮಂಗಳವಾರ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ಗೃಹ ಸಚಿವರು, ಮುಖ್ಯಮಂತ್ರಿಗಳು ಉತ್ತರ ನೀಡಬೇಕೆಂದು ಒತ್ತಾಯಿಸಿದರು.
ಈ ಇಬ್ಬರು ನಾಯಕರ ಬೇಡಿಕೆ ಮಂಡನೆಯಲ್ಲಿ ತಾಳಮೇಳವಿರಲಿಲ್ಲ. ಬಿಜೆಪಿಯ ಉಳಿದ ನಾಯಕರು ಒಮ್ಮೆ ವಕ್ಫ್ ಬಗ್ಗೆ, ಇನ್ನೊಮ್ಮೆ ಪಂಚಮಸಾಲಿ ಹೋರಾಟದ ಬಗ್ಗೆ ಮಾತನಾಡಿದರು. ಇದನ್ನು ಕಂಡ ಕಾಂಗ್ರೆಸ್ ಶಾಸಕರು, ನಿಮ್ಮಲ್ಲೇ ಗೊಂದಲವಿದೆ. ನಿಮ್ಮ ಪಕ್ಷದ್ದು ಮನೆಯೊಂದು ಮೂರು ಬಾಗಿಲು ಎಂಬಂತೆ ಆಗಿದೆ ಎಂದು ಲೇವಡಿ ಮಾಡಿದರು.
ಇದಿಷ್ಟೇ ಅಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರನ್ನು ಕಂಡ ಎಸ್.ಟಿ. ಸೋಮಶೇಖರ್, ಏನ್ ವಿಜಯಪ್ಪ ನನ್ಮೇಲೆ ಕ್ರಮ ತಗೋತಿಯಂತೆ ಎಂದು ಪ್ರಶ್ನಿಸಿದ್ದಕ್ಕೆ, ಪಕ್ಷ ಹೇಗೆ ತೀರ್ಮಾನಿಸುತ್ತೋ ಹಾಗೆ ಎಂದು ವಿಜಯೇಂದ್ರ ನಗೆ ಬೀರಿ ಮುನ್ನಡೆದರು. ಸೋಮವಾರ ಸಂಜೆ ಶಾಸಕಾಂಗ ಸಭೆಗೆ ಆಹ್ವಾನಿಸಿಲ್ಲ ಎಂದು ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಆರ್. ಅಶೋಕ್ ಅವರನ್ನು ಸೋಮಶೇಖರ್ ಪ್ರಶ್ನಿಸಿದ ಪ್ರಸಂಗವೂ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ
MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ
Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.