ಬೆಂಗಳೂರು ಗಲಭೆ: ವಾಜೀದ್ ಸಹಚರರ ಸೆರೆ
Team Udayavani, Aug 20, 2020, 6:42 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬೆಂಗಳೂರು: ಕಾಡುಗೊಂಡನಹಳ್ಳಿ ಮತ್ತು ದೇವರ ಜೀವನಹಳ್ಳಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪುಲಕೇಶಿ ನಗರದ ಜೆಡಿಎಸ್ ಮುಖಂಡ ವಾಜೀದ್ ಪಾಷಾನ ನಾಲ್ವರು ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಡಿ.ಜೆ. ಹಳ್ಳಿಯ ತೌಸಿಫ್, ಫಾಜಿಲ್, ಅಫ್ಜಲ್ ಪಾಷಾ ಮತ್ತು ಸಯ್ಯದ್ ಬಂಧಿತರು. ಇನ್ನೂ ಆರೇಳು ಮಂದಿ ಪ್ರಮುಖ ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಲಭೆ ಹಿನ್ನೆಲೆಯಲ್ಲಿ ವಿಧಿಸಿರುವ ಕರ್ಫ್ಯೂವನ್ನು ಸಡಿಲಿಸಬೇಕು ಎಂದು ಕೆಲವು ಜನಪ್ರತಿನಿಧಿಗಳ ಜತೆ ಮುಸ್ಲಿಂ ಧರ್ಮಗುರುಗಳು ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಆಗ್ರಹಿಸಿದ್ದಾರೆ.
ಡಿ.ಜೆ. ಠಾಣೆಗೆ ಆಯುಕ್ತರ ಭೇಟಿ
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಬುಧವಾರ ಡಿ.ಜೆ. ಹಳ್ಳಿ ಠಾಣೆಗೆ ಭೇಟಿ ನೀಡಿ ಸಿಸಿಬಿಯ ಅಧಿಕಾರಿಗಳು ಹಾಗೂ ಡಿಸಿಪಿಗಳ ಜತೆ ಚರ್ಚಿಸಿದರು.
ಸಮೀವುದ್ದೀನ್ ತೀವ್ರ ವಿಚಾರಣೆ
ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಆರೋಪಿಗಳ ಜತೆಗಿನ ಸಂಪರ್ಕ ಹಾಗೂ ಅಲ್ – ಹಿಂದ್ ಸಂಘಟನೆಯ ಸದಸ್ಯನೂ ಆಗಿರುವ ಸಮೀವುದ್ದೀನ್ ವಿಚಾರಣೆಯನ್ನು ಸಿಸಿಬಿ ಅಧಿಕಾರಿ ಗಳು ತೀವ್ರಗೊಳಿಸಿದ್ದಾರೆ. ಸಮೀವುದ್ದೀನ್ ಮಡಿಕೇರಿ ಮೂಲದವನಾಗಿದ್ದು, ಹಲವು ವರ್ಷಗಳಿಂದ ಪತ್ನಿ ಜತೆ ನಗರದಲ್ಲಿ ವಾಸವಾಗಿದ್ದಾನೆ. ಈತ ಪತ್ನಿ ಹೆಸರಿನಲ್ಲಿ ಎನ್‌ಜಿಒ ಸಂಸ್ಥೆ ನಡೆಸುತ್ತಿದ್ದು, ಅದಕ್ಕೆ ವಿದೇಶಗಳಿಂದ ಹಣ ಬರುತ್ತಿರುವುದು ಗೊತ್ತಾಗಿದೆ.
ಆತ ಕೋಟಿಗೂ ಅಧಿಕ ಮೊತ್ತದ ಆಸ್ತಿ ಹೊಂದಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದ್ದು, ಹಣದ ಮೂಲವನ್ನು ಶೋಧಿಸಬೇಕಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
73 ಎಫ್‌ಐಆರ್
ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಬುಧವಾರದ ವರೆಗೆ 73 ಎಫ್‌ಐಆರ್‌ಗಳು ದಾಖಲಾಗಿವೆ.
ಪ್ರಥಮ್‌ಗೆ ನೋಟಿಸ್
ಗಲಭೆ ಸಂಬಂಧಿಸಿ ಸಿನೆಮಾ ನಟ ಹಾಗೂ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಸಾಮಾಜಿಕ ಜಾಲತಾಣದಲ್ಲಿ ಸಮುದಾಯವೊಂದರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಉಮರ್ ಫಾರೂಕ್ ಎಂಬವರು ಹಲಸೂರುಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕ್ಲೇಮ್ ಕಮಿಷನರ್ ನೇಮಕ ಅರ್ಜಿ: ಇಂದು ವಿಚಾರಣೆ
ಗಲಭೆ ಪ್ರಕರಣದಲ್ಲಿ ಉಂಟಾದ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟದ ಅಂದಾಜು ಮಾಡಿ ಹೊಣೆಗಾರಿಕೆ ನಿಗದಿಪಡಿಸಲು ‘ಕ್ಲೇಮ್ ಕಮಿಷನರ್’ ನೇಮಕ ಮಾಡಲು ಕೋರಿ ರಾಜ್ಯ ಸರಕಾರ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದೆ. ಬುಧವಾರ ಮುಖ್ಯ ನ್ಯಾ| ಎ. ಎಸ್. ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಅವರು ಅರ್ಜಿಯನ್ನು ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.