Bengaluru: ರಂಗೇರಿದ ರಾತ್ರಿಯಲ್ಲಿ ಹೊಸ ವರ್ಷದ ಸಂಭ್ರಮ
ಅರ್ಧ ದಿನಕ್ಕೆ 308 ಕೋಟಿ ರೂ. ಮದ್ಯ ವಹಿವಾಟು!... ನಶೆಯಲ್ಲಿ ಪಬ್‌ನಿಂದ ಮನೆ ಸೇರಿದ ಜೋಡಿಗಳ ವಿಡಿಯೋ ವೈರಲ್
Team Udayavani, Jan 1, 2025, 9:35 AM IST
ಬೆಂಗಳೂರು: ಕೇಕೆ, ಚಪ್ಪಾಳೆ, ಹರ್ಷೋದ್ಗಾರ ಹಾಗೂ ಪರಸ್ಪರ ವಿನಿಮಯದ ಮೂಲಕ ರಾಜಧಾನಿ ಜನರು 2025ಕ್ಕೆ ಆತ್ಮೀಯ ಸ್ವಾಗತ ಕೋರಿದರು. ರಂಗೇರಿದ ರಾತ್ರಿಯಲ್ಲಿ ಹೊಸ ವರ್ಷವನ್ನು ಬರಮಾಡಿಕೊಂಡರು. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಮಂಗಳವಾರ ಮದುವಣಗಿತ್ತಯಂತೆ ಸಿಂಗಾರ ಗೊಂಡು ಕಂಗೊಳಿಸುತ್ತಿತ್ತು. ಬಾನಿನಲ್ಲಿ ಬಣ್ಣ ಬಣ್ಣಗಳ ಪಟಾಕಿಗಳ ಚಿತ್ತಾರ ಹೊಸತನ ಕಳೆತಂದಿತ್ತು. ರಾತ್ರಿ ಗಡಿಯಾರದ ಮುಳ್ಳು 12ಕ್ಕೆ ಮುತ್ತಿಡುತ್ತಿದ್ದಂತೆ ಇತ್ತ ರಸ್ತೆ, ಹೋಟೆಲ್, ಪಬ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲಿ ಯುವಕ-ಯುವತಿಯರು ಡಿ.ಜೆಗಳ ಅಬ್ಬರದ ಸಂಗೀತಕ್ಕೆ ಹುಚ್ಚೆಂದು ಕುಣಿದು ಕುಪ್ಪಳಿಸಿದರು.
ಅಬ್ಬರದ ಕೂಗಾಟ, ಚೀರಾಟ, ಕೇಕೆ, ಶಿಳ್ಳೆ ಮೂಲಕ ‘ಹ್ಯಾಪಿ ನ್ಯೂವ್ ಇಯರ್’ ಘೋಷಣೆ ಮೊಳಗಿಸಿದರು. ಹಳೇ
ವರ್ಷದ ಕಹಿ ಘಟನೆಗಳಿಗೆ ಗುಡ್ ಬೈ ಹೇಳಿ, ಹೊಸ ಕನಸುಗಳನ್ನು ಈಡೇರಿಸಿಕೊಳ್ಳುವ ಆಸೆ ಹೊತ್ತು 2025ಅನ್ನು ಅದ್ಧೂರಿ ಸ್ವಾಗತಿಸಿದರು.
ಸಿಲಿಕಾನ್ ಸಿಟಿಯಲ್ಲಿ ಪೊಲೀಸರು ಬುಧವಾರ ಮಧ್ಯರಾತ್ರಿ 1 ಗಂಟೆಯ ವರೆಗೂ ಹೊಸ ವರ್ಷಾಚರಣೆಗೆ ಅವಕಾಶ ಕಲ್ಪಿಸಿದ್ದರು. ಹೊಸ ವರ್ಷದ ಸ್ವಾಗತಕ್ಕಾಗಿಯೇ ರಸ್ತೆಗಳು ರಂಗು ಪಡೆದಿದ್ದವು. ಮಂಗಳವಾರ ಸಂಜೆ ಬಾನ ಸೂರ್ಯ ಪಶ್ಚಿಮ ದಿಕ್ಕಿನಲ್ಲಿ ಮರೆಯಾಗುತ್ತಿದ್ದಂತೆ ಇತ್ತ ಎಂ.ಜಿ.ರಸ್ತೆ, ಚರ್ಚ್ ಸ್ಟ್ರೀಟ್ ಗಳಲ್ಲಿ ಹೊಸ ಕಳೆ ಬಂತು. ರಾತ್ರಿ 10 ಗಂಟೆ ನಂತರ ಎಂ.ಜಿ. ರಸ್ತೆಗೆ ಬರುವ ಜನಸಂಖ್ಯೆ ಹೆಚ್ಚಾಯಿತು.
ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಕಾವಲಿದ್ದರು. ಆಗಾಗ್ಗೆ ರಸ್ತೆಗಳಲ್ಲಿ ಗುಂಪು-ಗುಂಪಾಗಿ ಕೇಕೆ ಹಾಕಿ ಸಂಚರಿಸಿ ಸಂಭ್ರಮಿಸಿದರು.
ದೀಪದ ಬೆಳಕಿನಲ್ಲಿ ಅಬ್ಬರದ ಸಂಗೀತ
ಮಹಾತ್ಮ ಗಾಂಧಿ ರಸ್ತೆ, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆ, ಕೋರಮಂಗಲ, ಇಂದಿರಾನಗರ, 100 ಅಡಿ ರಸ್ತೆ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಸಂಭ್ರಮ ಮೇರೆ ಮೀರಿತ್ತು. ಅಂಗಡಿ, ಹೋಟೆಲ್‌ಗಳ ಎದುರು ಅಲಂಕಾರಿಕ ವಿದ್ಯುತ್ ದೀಪಗಳ ಕಣ್ಣು ಕೊರೆಸುತ್ತಿದ್ದವು. ಆಕರ್ಷಕ ದೀಪಗಳ ಬೆಳಕಿನಲ್ಲಿ ಅಬ್ಬರದ ಸಂಗೀತಕ್ಕೆ ಪಬ್, ಕ್ಲಬ್ ಗಳಲ್ಲಿ ಯುವಕ-ಯುವತಿಯರು ಪರಸ್ಪರ ಕೈಕೈ ಹಿಡಿದು ಹೆಜ್ಜೆಹಾಕಿ ಕುಣಿದು ಕುಪ್ಪಳಿಸಿದರು. ಹೊಸ ವರ್ಷದ ಹಿನ್ನೆಲೆಯಲ್ಲಿ ಕೆಲವು ಭಾಗಗಳ ಪಬ್‌ಗಳಲ್ಲಿ ಸಂಜೆಯಿಂದಲೇ ಹೊಸ ವರ್ಷದ ಪಾರ್ಟಿಗಳು ರಂಗೇರಿದ್ದವು.
ಅವಿಸ್ಮರಣೀಯ ಮಾಡಿಕೊಂಡರು
ಮಹಾತ್ಮಗಾಂಧಿ ರಸ್ತೆಯಲ್ಲಿ ಜನದಟ್ಟಣೆಯಿತ್ತು. ರಾತ್ರಿ 12 ಗಂಟೆ ಆಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ರಸ್ತೆಗೆ ಬಂದರು. ಪ್ರಮುಖ ರಸ್ತೆಗಳಲ್ಲಿ ನಡೆದ ಹೊಸ ವರ್ಷಾಚರಣೆ ರಂಗು ರಂಗಾಗಿತ್ತು. ಫ್ಯಾಷನ್ ಉಡುಗೆಗಗಳನ್ನು ತೊಟ್ಟ ಯುವಕ-ಯುವತಿಯರ ಓಡಾಟ ಗಮನ ಸೆಳೆದವು. ನಗರ, ಹೊರ ಜಿಲ್ಲೆ, ರಾಜ್ಯ, ಹೊರ ದೇಶಗಳಿಂದಲೂ ಬಂದಿದ್ದ ಜನ ತಮ್ಮ ಅಭಿರುಚಿಗೆ ತಕ್ಕಂತೆ ಹೊಸ ವರ್ಷಾಚರಣೆ ಮಾಡಿದರು. ಹೊಸ ವರ್ಷದ ಮೊದಲ ಕ್ಷಣವನ್ನು ಅವಿಸ್ಮರಣೀಯ ಮಾಡಿಕೊಂಡರು.
ನೂತನ ವರ್ಷದ ಸಂಭ್ರಮಕ್ಕೆ ಮದ್ಯ ಮತ್ತಷ್ಟು ರಂಗು ತುಂಬಿತ್ತು. ಪಬ್‌ಗಳಲ್ಲಿ, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲಿ ಮದ್ಯ ಸೇವಿಸಿದವರು ರಸ್ತೆಗಳಲ್ಲಿ ಕೇಕೆ ಹಾಕಿ ನೃತ್ಯ ಮಾಡಿ ಸಂಭ್ರಮಿಸಿದರು. ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಭರ್ಜರಿ ವ್ಯಾಪಾರ ನಡೆಯಿತು.
ಬೇಕರಿಗಳಲ್ಲಿ ಹೊಸ ವರ್ಷ ಸ್ವಾಗತಿಸುವ ಭಿನ್ನವಾದ ಕೇಕ್ ತಯಾರಿಸಲಾಗಿತ್ತು. ಬೆಳಗ್ಗೆಯಿಂದ ರಾತ್ರಿವರೆಗೂ ಬೇಕರಿಗಳ ಮುಂದೆ ಜನದಟ್ಟಣೆ ಕಂಡು ಬಂತು. ಹೊಸ ವಿನ್ಯಾಸದ ಕೇಕ್ ಕತ್ತರಿಸಿ ಜನರು ಸಂಭ್ರಮಿಸಿದರು. ಹೊಸ ವರ್ಷ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಬ್ರಿಗೇಡ್, ಚರ್ಚ್ ಸ್ಟ್ರೀಟ್‌ಗೆ ಜನರು ಸಂಜೆಯಾಗುತ್ತಿದ್ದಂತೆ ಆಗಮಿಸ ತೊಡಗಿದರು. ಹೀಗಾಗಿ ನಮ್ಮ ಮೆಟ್ರೋ ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು. ಜತೆಗೆ ಎಂ.ಜಿ.ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ತೆರಳಲು ಬಿಎಂಟಿಸಿ ಬಸ್ ವ್ಯವಸ್ಥೆಯಿತ್ತು. ಕೆಲವು ಮೆಟ್ರೋ ಏರಿ ಮನೆಯತ್ತ ಮುಖ ಮಾಡಿದರೆ ಇನ್ನೂ ಕೆಲವರು ಬಸ್ ಏರಿ ಮನೆಯತ್ತ ಹೊರಟು ಹೋದರು
ಬೃಹತ್ ಆಕಾರದ ಎಲ್‌ಇಡಿ ಸ್ಕ್ರೀನ್
ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ ಹಾಗೂ ಕೋರಮಂಗಲದ ಕೆಲವೆಡೆ ಬೃಹದಾಕಾರದ ಹತ್ತಾರು ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಲಾಗಿತ್ತು. ದೂರದಿಂದಲೇ ನ್ಯೂ ಇಯರ್ ಸೆಲೆಬ್ರೇಷನ್ ವೀಕ್ಷಿಸಲು ಅವಕಾಶ ನೀಡಲಾಗಿತ್ತು. ಬ್ರಿಗೇಡ್ ರಸ್ತೆ, ಎಂ.ಜಿ. ರಸ್ತೆ ಸೇರಿ ವಿವಿಧೆಡೆ ಹೊಸ ವರ್ಷಾಚರಣೆಗೆ ಸಾವಿರಾರು ಮಂದಿ ಸೇರುವ ಹಿನ್ನೆಲೆಯಲ್ಲಿ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯದಂತಹ ಘಟನೆ ಮತ್ತು ಇತರೆ ಹಲ್ಲೆ ಅಥವಾ ಅಪರಾಧಗಳನ್ನು ಎಸಗುವ ವ್ಯಕ್ತಿಗಳ ಪತ್ತೆಗಾಗಿ ಮಹಿಳಾ ಸಿಬ್ಬಂದಿ ಹಾಗೂ 200ಕ್ಕೂ ಹೆಚ್ಚಿನ ಮಫ್ತಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ಸಿಬ್ಬಂದಿ ಸಾರ್ವಜನಿಕರ ಜತೆಯೇ ಓಡಾಟ ಮಾಡಿಕೊಂಡು ಪುಂಡರ ಮೇಲೆ ಹದ್ದಿನ ಕಣ್ಣಿಟ್ಟಿದ್ದರು.
ನಶೆಯಲ್ಲಿ ಪಬ್‌ನಿಂದ ಮನೆ ಸೇರಿದ ಜೋಡಿಗಳು
ರಾತ್ರಿ 8 ಗಂಟೆಗೆ ಪಬ್‌ಗಳ ಮುಂದೆ ಗ್ರಾಹಕರ ದಂಡೇ ನೆರೆದಿತ್ತು. ಪಬ್‌ಮುಂದೆ 2 ಪ್ರತ್ಯೇಕ ಕೌಂಟರ್ ಹಾಕಿದ್ದ ಸಿಬ್ಬಂದಿ ಒಬ್ಬರಾದ ಮೇಲೆ ಒಬ್ಬರಂತೆ ಗ್ರಾಹಕರ ಕೈಗೆ ಟ್ಯಾಗ್ ಕಟ್ಟಿ ಪ್ರವೇಶ ಕಲ್ಪಿಸಿದರು. ತಡರಾತ್ರಿ 1 ಗಂಟೆಗೆ ಗುಂಡಿನ ಮತ್ತಿನಲ್ಲಿ ಬಾಲಿವುಡ್ ಹಾಡುಗಳಿಗೆ ಹೆಜ್ಜೆ ಹಾಕಿ ಭರ್ಜರಿ ಪಾರ್ಟಿ ಮುಗಿಸಿ ಹೊರ ಬಂದ ಜೋಡಿ ಅಮಲಿನಲ್ಲಿ ತೇಲುತ್ತಾ ಮನೆ ಸೇರಿದರೆ, ಕೆಲವು ಕಡೆ ಪಬ್‌ನವರೇ ಕ್ಯಾಬ್ ವ್ಯವಸ್ಥೆ ಕಲ್ಪಿಸಿಕೊಟ್ಟರು.
ಅಪಾರ್ಟ್‌ಮೆಂಟ್‌ಗಳಲ್ಲಿ ವಿದ್ಯುತ್ ದೀಪಾಲಂಕಾರ
ಹೊಸ ವರ್ಷವನ್ನು ಸಂಭ್ರಮಿಸಲು ರಾಜಧಾನಿ ಯಲ್ಲಿ ಅಪಾರ್ಟ್‌ಮೆಂಟ್‌ಗಳ ರಂಗುರಂಗಿನ ವಿದ್ಯುತ್ ಬೆಳಕಿನ ದೀಪದಿಂದ ಅಲಂಕಾರಗೊಂಡು ಸಂಪೂರ್ಣ ಜಗಮಗಿಸುತ್ತಿದ್ದವು. ಅಪಾರ್ಟ್‌ಮೆಂಟ್ ಸಂಘದವರೂ ಔತಣ ಕೂಟಗಳನ್ನು ಆಯೋಜಿಸಿದ್ದರು. ಹಾಡು, ನೃತ್ಯ, ಸಂಗೀತ ಕಾರ್ಯಕ್ರಮ ನಡೆದು ನೆರೆದವರಲ್ಲಿ ಮುದ ನೀಡಿದವು. ಜೆ.ಪಿ. ನಗರ, ಜಯನಗರ, ಕೋರಮಂಗಲ, ರಾಜರಾಜೇಶ್ವರಿ ನಗರ, ಮಹಾಲಕ್ಷ್ಮೀ ಲೇಔಟ್, ಬಸವನಗುಡಿ, ಕೆಂಗೇರಿ, ಮಲ್ಲೇಶ್ವರ, ಪೀಣ್ಯ, ಶೇಷಾದ್ರಿಪುರ, ಸುಬ್ರಹ್ಮಣ್ಯ ನಗರ, ಇಂದಿರಾನಗರ, ಎಚ್.ಎಸ್.ಆರ್.ಲೇಔಟ್, ದೊಮ್ಮಲೂರು, ಯಲಹಂಕ ಸೇರಿದಂತೆ ಹಲವುಕಡೆಗಳಲ್ಲಿ ಜನರು ಅದ್ಧೂರಿಯಾಗಿ ಹೊಸ ವರ್ಷವನ್ನು ಬರಮಾಡಿಕೊಂಡರು.
ಅರ್ಧ ದಿನಕ್ಕೆ 308 ಕೋಟಿ ರೂ. ಮದ್ಯ ವಹಿವಾಟು!
ಡಿ.31ರಂದು ಅರ್ಧ ದಿನಕ್ಕೆ (ಮಧ್ಯಾಹ್ನ 2ಗಂಟೆವರೆಗೂ) ವಿಸ್ಕಿ- 4,83,705 ಪೆಟ್ಟಿಗೆ, ಬಿಯರ್- 2,92,3339 ಪೆಟ್ಟಿಗೆ,
ಒಟ್ಟು ಪೆಟ್ಟಿಗೆ-76,0462 ಪೆಟ್ಟಿಗೆ ಮದ್ಯ ಮಾರಾಟವಾಗಿದೆ. ವಿಸ್ಕಿ-250.25 ಕೋಟಿ ರೂ.ವಹಿವಾಟು, ಬಿಯರ್- 57.75
ಕೋಟಿ ರೂ.ವಹಿವಾಟು, ಒಟ್ಟಾರೆ- 308 ಕೋಟಿ ರೂ. ವಹಿವಾಟು ನಡೆದಿದೆ ಎಂದು ಫೆಡರೇಷನ್ ಆಫ್ ವೈನ್
ಮರ್ಚೆಂಟ್ ಅಸೋಸಿಯೇಷನ್ ಕರ್ನಾಟಕದ ಪ್ರದಾನ ಕಾರ್ಯದರ್ಶಿ ಗೋವಿಂದರಾಜ ಹೆಗ್ಡೆ ಮಾಹಿತಿ ನೀಡಿದ್ದಾರೆ.
ಬಂಡಲ್‌ಗಟಲೆ ಸಿಗರೆಟ್ ಜಫ್ತಿ
ಬ್ರಿಗೇಡ್ ರಸ್ತೆ ಪ್ರವೇಶ ದ್ವಾರದಲ್ಲಿ ಲೋಹಪರಿಶೋಧಕ ಯಂತ್ರ ಅಳವಡಿಸಿದ್ದು, ಪ್ರತಿಯೊಬ್ಬರನ್ನು ತಪಾಸಣೆ
ನಡೆಸಲಾಯಿತು. ಈ ವೇಳೆ ಬಂಡಲ್‌ಗಟ್ಟಲೇ ಸಿಗರೆಟ್ ಪ್ಯಾಕೆಟ್ ಹಾಗೂ ಲೈಟರ್‌ಗಳನ್ನು ಜಪ್ತಿ ಮಾಡಲಾಗಿದೆ.
ಚನಮ್ಮ ಪಡೆಯಿಂದ ಮಗು ರಕ್ಮಣೆ
ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಮಹಿಳಾ ಪಿಎಸ್‌ಐಗಳ ನೇತೃತ್ವದಲ್ಲಿ ಆಯಾ ಠಾಣೆಗಳ ವ್ಯಾಪ್ತಿಯಲ್ಲಿ
ಚೆನ್ನಮ್ಮ ಪಡೆ ರಚಿಸಲಾಗಿದ್ದು, ಕೋರಮಂಗಲದಲ್ಲಿ ನಾಪತ್ತೆಯಾಗಿದ್ದ ಮೂರು ವರ್ಷದ ಮಗುವನ್ನು ಈ
ಪಡೆ ರಕ್ಷಣೆ ಮಾಡಿ ಪೋಷಕರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ.
ರಾತ್ರಿ 10ರ ಬಳಿಕ ನಗರದ ಎಲ್ಲ ಫ್ಲೈಓವರ್ ಬಂದ್
ಸುರಕ್ಷತೆ ದೃಷ್ಟಿಯಿಂದ ಡಿ.31ರಂದು ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ನಗರದ ಎಲ್ಲ ಮೇಲು
ಸೇತುವೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಹೆಚ್ಚುವರಿಯಾಗಿ ಸಿಸಿ ಕ್ಯಾಮೆರಾ,
ಡ್ರೋನ್ ಕ್ಯಾಮೆರಾ ಕಾರ್ಯಾಚರಣೆಗೊಳಿಸಲಾಗಿದೆ. ನಗರದ ಪ್ರಮುಖ ಸ್ಥಳಗಳನ್ನು ಶ್ವಾನದಳ ಮತ್ತು 16
ಎ.ಎಸ್.ಚೆಕ್ ತಂಡಗಳಿಂದ ತಪಾಸಣೆ ನಡೆಸಿದರು.
ಕರ್ಕಶ ಪೀಪಿಗೆ ನಿರ್ಬಂಧ
ಕಳೆದ ಬಾರಿ ಸಾರ್ವಜನಿಕರಿಂದ ಆಕ್ರೋಶಕ್ಕೆ ಕಾರಣವಾಗಿದ್ದ ಕರ್ಕಶ ಪೀಪಿ ಊದುವುದನ್ನು ನಿರ್ಬಂಧಿಸಲಾಗಿತ್ತು. ನಗರ ಪೊಲೀಸ್ ಆಯುಕ್ತರ ಎಚ್ಚರಿಕೆ ನಡುವೆಯೂ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಕರ್ಕಶ ಪಿಪಿ ಉದುವುದು ಮಾತ್ರ ವಲ್ಲದೆ, ಮಾರಾಟ ಮಾಡುತ್ತಿರುವುದು ಕಂಡು ಬಂತು.
ಮುಖವಾಡಗಳಿಗೆ ನಿಷೇಧ
ಈ ಹಿಂದೆ ವಿಕೃತಿ ರೂಪದ ಮಾಸ್ಕ್ಗಳನ್ನು ಧರಿಸಿ ಯುವತಿ ಯರಿಗೆ ಕಿರುಕುಳ ನೀಡಿದ ಪ್ರಕರಣಗಳು ನಡೆದಿತ್ತು.ಹೀಗಾಗಿ ಈ ಬಾರಿ ವಿಕೃತಿ ಮತ್ತು ಭೀಬತ್ಸ ಮಾಸ್ಕ್ ಗಳ ಧರಿಸುವುದನ್ನು ನಿರ್ಬಂಧಿಸಲಾಗಿತ್ತು. ಆದರೂ ಬ್ರಿಗೇಡ್ ರಸ್ತೆ, ಎಂ.ಜಿ.ರಸ್ತೆ ಸೇರಿ ಸಾರ್ವಜನಿಕರು ಸೇರುವ ಪ್ರದೇಶಕ್ಕೆ ಪ್ರವೇಶಿಸಿದವರಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆರಳ ತುದಿಯಲ್ಲೇ ಸಿಗಲಿದೆ ಕನ್ನಡ ರಂಗಭೂಮಿ ಮಾಹಿತಿ; ಇಂದು ಜಾಲತಾಣಕ್ಕೆ ಸಿಎಂ ಚಾಲನೆ
Ticket price hike: ಬಿಜೆಪಿ ಕೋಪ : ಜನರ ಕ್ಷಮೆ ಕೇಳಿ ಪ್ರತಿಭಟನೆ!
“ನಿಮ್ಹಾನ್ಸ್ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು
10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ
Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆರಳ ತುದಿಯಲ್ಲೇ ಸಿಗಲಿದೆ ಕನ್ನಡ ರಂಗಭೂಮಿ ಮಾಹಿತಿ; ಇಂದು ಜಾಲತಾಣಕ್ಕೆ ಸಿಎಂ ಚಾಲನೆ
Ticket price hike: ಬಿಜೆಪಿ ಕೋಪ : ಜನರ ಕ್ಷಮೆ ಕೇಳಿ ಪ್ರತಿಭಟನೆ!
Mangaluru; ಸದ್ಯ ಖಾಸಗಿ ಬಸ್ ಟಿಕೆಟ್ ದರ ಏರಿಕೆ ಇಲ್ಲ
Kasaragod:ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; 10 ಮಂದಿಗೆ ಅವಳಿ ಜೀವಾವಧಿ ಸಜೆ
Bus ಪ್ರಯಾಣ ದರ ಏರಿಕೆ; ಮೊದಲು ಉದ್ದೇಶ ಅರಿಯಲಿ: ಖಾದರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.