Rameshwaram Cafe ಬಾಂಬ್ ಸ್ಫೋಟ: ಶಂಕಿತ ವ್ಯಕ್ತಿ ಬಳಸಿರುವುದು ನಕಲಿ ಮೊಬೈಲ್!
ಪೊಲೀಸರ ಹಾದಿ ತಪ್ಪಿಸಲು ನಿರಂತರ ಯತ್ನ ; ತಾಂತ್ರಿಕ ತನಿಖೆಯಲ್ಲಿ ಪತ್ತೆ
Team Udayavani, Mar 5, 2024, 10:26 PM IST
ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ನಡೆದ ಐಇಡಿ ಸ್ಫೋಟ ಪ್ರಕರಣದ ಶಂಕಿತ ವ್ಯಕ್ತಿ ಹೊಟೇಲ್‌ನಲ್ಲಿದ್ದ ವೇಳೆ ನಕಲಿ ಮೊಬೈಲ್ ಬಳಸಿರುವುದು ತನಿಖಾ ಸಂಸ್ಥೆಗಳ ತಾಂತ್ರಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮಾ. 1ರಂದು 11.40ರ ಸುಮಾರಿಗೆ ಹೊಟೇಲ್‌ಗೆ ಬಂದ ಶಂಕಿತ ಕೇವಲ 10 ನಿಮಿಷದಲ್ಲೇ ತಿಂಡಿ ತಿಂದು ಐಇಡಿ ಇರುವ ಬ್ಯಾಗ್ ಅನ್ನು ಕೈತೊಳೆಯುವ ಸ್ಥಳದಲ್ಲಿಟ್ಟು ತೆರಳಿದ್ದಾನೆ. ಈ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ತಲೆಗೆ ಕ್ಯಾಪ್, ಕನ್ನಡಕ ಮತ್ತು ಮಾಸ್ಕ್ ಧರಿಸಿದ್ದು ನಾಲ್ಕೈದು ಬಾರಿ ಮೊಬೈಲ್ ತೆಗೆದು ಮಾತಾಡಿದಂತೆ ನಟಿಸಿರುವುದು ಪತ್ತೆಯಾಗಿದೆ. ಹೀಗಾಗಿ ಆರೋಪಿಯ ಮೊಬೈಲ್ ಜಾಡು ಪತ್ತೆಗಾಗಿ ಹೊಟೇಲ್ ಆವರಣ ಹಾಗೂ ಅಕ್ಕ-ಪಕ್ಕದ ಎಲ್ಲ ಮೊಬೈಲ್ ನೆಟ್‌ವರ್ಕ್‌ನ ಟವರ್ ಡಂಪ್ ಡೇಟಾ ಸಂಗ್ರಹಿಸಿ ಪರಿಶೀಲಿಸಿ
ದಾಗ ಶಂಕಿತ ನಕಲಿ ಮೊಬೈಲ್ ಬಳಸಿರುವುದು ಪತ್ತೆ ಯಾಗಿದೆ.
ಮತ್ತೂಂದೆಡೆ ಆರೋಪಿ ಹೊಟೇಲ್‌ನಲ್ಲಿದ್ದ ಸಂದರ್ಭದಲ್ಲಿ ಮೊಬೈಲ್ ಬಳಕೆ ಮಾಡಿರುವ ಸಿಸಿ ಕೆಮರಾ ದೃಶ್ಯಗಳನ್ನು ಗಮನಿಸಿದಾಗ ಆತ ಬಳಸಿದ ಮೊಬೈಲ್‌ನ ಹಿಂಭಾಗದಲ್ಲಿ ಲೈಟ್ ಆನ್ ಆಗಿತ್ತು. ಆದರೆ ಮತ್ತೂಂದು ಭಾಗದ ಸಿಸಿ ಕೆಮರಾ ದೃಶ್ಯದಲ್ಲಿ ಆತನ ಮೊಬೈಲ್ ಪರದೆ ಪ್ಲಾಸ್ಟಿಕ್ ಪದರದಿಂದ ಇರುವಂತೆ ಕಂಡು ಬಂದಿದೆ. ಹೀಗಾಗಿ ಪೊಲೀಸರ ದಿಕ್ಕು ತಪ್ಪಿಸುವ ಉದ್ದೇಶದಿಂದಲೇ ಮೊಬೈಲ್ ತೆಗೆದು ಮಾತನಾಡುವಂತೆ ನಾಟಕವಾಡಿದ್ದಾನೆ.
ಹೊಟೇಲ್ ಆವರಣದಲ್ಲಿ ಮಾತ್ರವಲ್ಲದೆ, ಆತ ರಸ್ತೆಯಲ್ಲಿ ನಡೆದು ಹೋಗುವಾಗಲೂ ನಕಲಿ ಮೊಬೈಲ್ ಬಳಕೆ ಮಾಡಿದ್ದಾನೆ ಎಂಬುದು ಗೊತ್ತಾಗಿದೆ. ಆದರೆ, ಆತನ ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಮಾದರಿಯ ವಸ್ತು ಕಂಡು ಬಂದಿದ್ದು. ಅದನ್ನು ಆತ ಸ್ವಿಚ್x ಆಫ್ ಮಾಡಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಬಸ್ ನಿಲ್ದಾಣದಲ್ಲೇ ಟೈಮ್ ಫಿಕ್ಸ್
ಹೊಟೇಲ್‌ಗಿಂತ ಹಿಂದೆ 2 ಕಿ.ಮೀ. ದೂರದಲ್ಲೇ ಬಸ್ ಹತ್ತಿರುವ ಶಂಕಿತ ಕುಂದಲಹಳ್ಳಿ ಬಸ್ ನಿಲ್ದಾಣದಲ್ಲಿ ಇಳಿದು, ನಿಲ್ದಾಣದಲ್ಲೇ ಬ್ಯಾಗ್‌ನಲ್ಲಿದ್ದ ಐಇಡಿಗೆ ಟೈಮ್ ಫಿಕ್ಸ್ ಮಾಡಿರುವ ಸಾಧ್ಯತೆಯಿದೆ. ಏಕೆಂದರೆ, ಬಸ್ ನಿಲ್ದಾಣದಲ್ಲಿ ಬ್ಯಾಗ್ ಪರಿಶೀಲಿಸುವ ದೃಶ್ಯ ಸ್ಥಳೀಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಅಲ್ಲಿಂದ ನೇರವಾಗಿ ಹೊಟೇಲ್‌ಗೆ ಬಂದು ಇಡ್ಲಿ ತಿಂದು, ತೈತೊಳೆಯುವ ಜಾಗದಲ್ಲೇ ಬ್ಯಾಗ್ ಇಟ್ಟು ಪರಾರಿಯಾಗಿದ್ದಾನೆ. ಆಬಳಿಕ ಮಧ್ಯಾಹ್ನ 12.56ಕ್ಕೆ ಬಾಂಬ್ ಸ್ಫೋಟಗೊಂಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.