ಭಂಡಾರಿ ಪರವೇ “ಜಡ್ಜ್’ಮೆಂಟ್: ಭಾರತಕ್ಕೆ ರಾಜತಾಂತ್ರಿಕ ಜಯ
Team Udayavani, Nov 22, 2017, 6:00 AM IST
ಹೊಸದಿಲ್ಲಿ: ಹೇಗ್‌ನಲ್ಲಿನ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ (ಐಸಿಜೆ) ಭಾರತದ ನ್ಯಾ| ದಲ್ವಿರ್ ಭಂಡಾರಿ ಮರು ಆಯ್ಕೆಯಾಗುವ ಮೂಲಕ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಮಹತ್ವದ ರಾಜತಾಂತ್ರಿಕ ಯಶಸ್ಸು ಸಾಧಿಸಿದೆ.
ವಿಶ್ವಸಂಸ್ಥೆಯಲ್ಲಿ ನ್ಯಾ| ಭಂಡಾರಿಗೆ ಬೆಂಬಲವಿರು ವುದು ಖಚಿತವಾಗು ತ್ತಿದ್ದಂತೆಯೇ, ಮತ ದಾನಕ್ಕೂ ಕೆಲವೇ ಗಂಟೆ ಮುನ್ನ ಇಂಗ್ಲೆಂಡ್‌ನ ಕ್ರಿಸ್ಟೋಫರ್ ಗ್ರೀನ್‌ವುಡ್ ನಾಮಪತ್ರ ವಾಪಸ್ ಪಡೆದಿದ್ದಾರೆ. ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ನ್ಯಾ| ಭಂಡಾರಿ 193 ಮತಗಳ ಪೈಕಿ 183 ಮತಗಳನ್ನು ಪಡೆದಿದ್ದರೆ, ಭದ್ರತಾ ಮಂಡಳಿಯಲ್ಲಿ ಎಲ್ಲ 15 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದ್ದಾರೆ. ಸಾಮಾನ್ಯವಾಗಿ ವಿಶ್ವಸಂಸ್ಥೆ ಹಾಗೂ ಭದ್ರತಾ ಮಂಡಳಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಇಂಗ್ಲೆಂಡ್‌ಗೆ ಇದು ಭಾರೀ ಮುಖಭಂಗದ ಸನ್ನಿವೇಶ ವಾಗಿದ್ದು, ಭಾರತದ ಮೇಲೆ ಒತ್ತಡ ಹೇರುವ ಎಲ್ಲ ಪ್ರಯತ್ನಗಳೂ ವಿಫಲವಾಗಿವೆ ಎನ್ನಲಾಗಿದೆ.
ನ್ಯಾ| ಭಂಡಾರಿ ಮುಂದಿನ ಒಂಬತ್ತು ವರ್ಷಗಳವರೆಗೆ ನ್ಯಾಯಮೂರ್ತಿಯಾಗಿರಲಿದ್ದಾರೆ. ಹೇಗ್ ನ್ಯಾಯಾಲಯದಲ್ಲಿ 15 ನ್ಯಾಯಮೂರ್ತಿಗಳಿದ್ದು, ಈ ಪೈಕಿ ಐವರನ್ನು ಪ್ರತಿ 3 ವರ್ಷಗಳಿಗೊಮ್ಮೆ ಆಯ್ಕೆ ಮಾಡಲಾಗುತ್ತದೆ.
ನ್ಯಾಯಮೂರ್ತಿಯಾಗಿ ಆಯ್ಕೆಯಾಗಲು ವಿಶ್ವಸಂಸ್ಥೆಯ ಎರಡೂ ಸಭೆಗಳಲ್ಲಿ ಬಹುಮತ ಪಡೆಯಬೇಕು. 1945ರಲ್ಲಿ ಸ್ಥಾಪಿಸಲಾದ ಈ ಕೋರ್ಟ್‌ನಲ್ಲಿ, ಭಾರತ ಸಹಿತ ವಿಶ್ವದ ಎಲ್ಲ ದೇಶಗಳ ಅಂತಾರಾಷ್ಟ್ರೀಯ ವ್ಯಾಜ್ಯಗಳನ್ನು ಬಗೆಹರಿಸಲಾಗುತ್ತದೆ.
ನಾ| ಭಂಡಾರಿ ಗೆಲುವಿನಿಂದಾಗಿ ಇಂಗ್ಲೆಂಡ್ ಇದೇ ಮೊದಲ ಬಾರಿಗೆ ಐಸಿಜೆಯಲ್ಲಿ ತನ್ನ ದೇಶದ ಜಡ್ಜ್ ಹೊಂದಿರ ದಂತಾಗಿದೆ. ಅಷ್ಟೇ ಅಲ್ಲ, ಐಸಿಜೆ 70 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭದ್ರತಾ ಮಂಡಳಿಯ ಕಾಯಂ ಸದಸ್ಯ ದೇಶವೊಂದು, ಕಾಯಂ ಸದಸ್ಯತ್ವ ಹೊಂದಿಲ್ಲದ ದೇಶದಿಂದ ಸೋಲುಂಡಿದೆ. ಮೂಲಗಳ ಪ್ರಕಾರ ಜನರಲ್ ಅಸೆಂಬ್ಲಿ ಮುಖ್ಯಸ್ಥ ಮಿರೋಸ್ಲಾವ ಲಜಾRಕ್ ಮತ್ತು ಭದ್ರತಾ ಕೌನ್ಸಿಲ್‌ನ ಮುಖ್ಯಸ್ಥ ಸೆಬಾಸ್ಟಿನೋ ಕಾರ್ಡಿ ಸೇರಿ ಭಾರತ ಹಾಗೂ ಇಂಗ್ಲೆಂಡ್‌ನ ಕಾಯಂ ಪ್ರತಿನಿಧಿಗಳ ಜತೆ ಮತದಾನಕ್ಕೂ ಕೆಲವೇ ಗಂಟೆಗಳ ಮುನ್ನ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಆದರೆ ಭಾರತ ಯಾವುದೇ ಒತ್ತಡಕ್ಕೆ ಮಣಿಯಲು ನಿರಾಕರಿಸಿದ್ದು, ಇದರ ಫಲಿತಾಂಶವಾಗಿ ಇಂಗ್ಲೆಂಡ್ ತನ್ನ ಪ್ರತಿನಿಧಿಯನ್ನು ಹಿಂಪಡೆ ಯುವಂತಾಗಿದೆ. ಅಲ್ಲದೆ ಗೌಪ್ಯ ಮತದಾನ ದಲ್ಲಿ ಬ್ರಿಟನ್ ಪರ ಮತಹಾಕುವುದಾಗಿ ಬ್ರಿಟನ್‌ಗೆ ಬೆಂಬಲಿಗರು ಭರವಸೆ ನೀಡಿದ್ದರಾ ದರೂ, ಬಹಿರಂಗ ಮತದಾನದಲ್ಲಿ ಬ್ರಿಟನ್ ಪರ ಮತ ಹಾಕಲಾರೆವು ಎಂದು ಹೇಳಿದ್ದರು. ಯಾಕೆಂದರೆ ಎರಡೂ ಸದನಗಳಲ್ಲಿ ಮುಕ್ಕಾಲು ಭಾಗ ಸದಸ್ಯರು ಭಾರತದ ಪರವಾಗಿದ್ದಾರೆ.
ಮೂಲಗಳ ಪ್ರಕಾರ ಕಳೆದ 10 ದಿನಗಳಿಂದ ಈ ಬಗ್ಗೆ ಅಭಿಯಾನ ನಡೆಸಿತ್ತು ಎನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿ
ಸ್ವತಃ ಹಲವು ದೇಶದ ಮುಖಂಡರೊಂದಿಗೆ ಈ ಸಂಬಂಧ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಸುಷ್ಮಾ, ಅಕºರುದ್ದೀನ್ ಶ್ರಮ
ನ್ಯಾ| ದಲ್ವಿàರ್ ಭಂಡಾರಿ ಮರು ಆಯ್ಕೆ ವಿಚಾರ ದಲ್ಲಿ ಶ್ರಮವಹಿಸಿದ್ದಕ್ಕೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಸಚಿವಾ ಲಯದ ಅಧಿಕಾರಿಗಳನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾ ಸಿದ್ದಾರೆ. ಅಲ್ಲದೆ ವಿಶ್ವಸಂಸ್ಥೆಯ ಸದಸ್ಯರಿಗೂ ಅವರು ಧನ್ಯವಾದ ತಿಳಿಸಿದ್ದಾರೆ. ಇನ್ನೊಂದೆಡೆ ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿ ಸೈಯದ್ ಅಕºರುದ್ದೀನ್‌ಗೆ ಸುಷ್ಮಾ ಸ್ವರಾಜ್ ಧನ್ಯವಾದ ಅರ್ಪಿಸಿದ್ದಾರೆ.
ಬ್ರಿಟನ್ ಸೋಲನ್ನು ಅಲ್ಲಿನ ಪತ್ರಿಕೆಗಳು ಅವಮಾನಕರ ಎಂದು ಜರೆದಿವೆ. ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಇಂಗ್ಲೆಂಡ್ ವಿರೋಧಿ ಅಲೆ ಏಳುತ್ತಿರುವುದು ಬಹಿರಂಗಗೊಂಡಿದೆ. ಇದು ಉತ್ತಮ ಬೆಳವಣಿಗೆಯಲ್ಲ ಎಂದು ದಿ ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.