ಇಂದು ಭಾರತ್ ಜೋಡೋಗೆ ಸೋನಿಯಾ ಸಾಥ್; ಮೇಲುಕೋಟೆಯಿಂದ ರಾಹುಲ್ ಗಾಂಧಿ ಯಾತ್ರೆ ಆರಂಭ
ಅ.8 ಕ್ಕೆ ಪ್ರಿಯಾಂಕ ಗಾಂಧಿ ಆಗಮನ
Team Udayavani, Oct 6, 2022, 7:25 AM IST
ಬೆಂಗಳೂರು: ಎರಡು ದಿನಗಳ ವಿರಾಮದ ನಂತರ ಗುರುವಾರದಿಂದ ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆ ಮುಂದುವರಿಯಲಿದ್ದು ಸೋನಿಯಾಗಾಂಧಿ ಹೆಜ್ಜೆ ಹಾಕಲಿದ್ದಾರೆ.
ರಾಹುಲ್‌ಗಾಂಧಿ ಅವರು ಮೇಲುಕೋಟೆಯಿಂದ ಬೆಳಗ್ಗೆ ಯಾತ್ರೆ ಆರಂಭಿಸಲಿದ್ದು, ಜಕ್ಕನಹಳ್ಳಿ-ನಾಗಮಂಗಲ ಮಾರ್ಗದಲ್ಲಿ ಸೋನಿಯಾಗಾಂಧಿ ಜತೆಗೂಡಲಿದ್ದಾರೆ. ಸೋನಿಯಾಗಾಂಧಿ ಅವರು ಬೆಳಗ್ಗೆ ಯಾತ್ರೆಯಲ್ಲಿ ಪಾಲ್ಗೊಂಡು ಮಧ್ಯಾಹ್ನ 12.30 ಕ್ಕೆ ದೆಹಲಿಗೆ ವಾಪಸ್ಸಾಗಲಿದ್ದಾರೆ.
ಪ್ರಿಯಾಂಕ ಭೇಟಿ ಅ.8 ಕ್ಕೆ : ಈ ಮಧ್ಯೆ, ಅ.6 ರಂದು ನಿಗದಿಯಾಗಿದ್ದ ಪ್ರಿಯಾಂಕ ಗಾಂಧಿ ಭೇಟಿ ಅ.8 ಕ್ಕೆ ಮುಂದೂಡಿಕೆಯಾಗಿದೆ. ಅಂದು ಅವರು ತುರುವೇಕೆರೆಯಲ್ಲಿ ಭಾರತ್ ಜೋಡೋ ಯಾತ್ರೆಯ ಜತೆಗೂಡಲಿದ್ದಾರೆ.
ಸೆ. 30 ರಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಿಂದ ಆರಂಭಗೊಂಡಿದ್ದ ಭಾರತ್ ಜೋಡೋ ನಾಲ್ಕು ದಿನಗಳ ಕಾಲ ಮೇಲುಕೋಟೆವರೆಗೂ ತಲುಪಿದೆ. ದಸರಾ ಪ್ರಯುಕ್ತ ಎರಡು ದಿನಗಳ ವಿರಾಮ ನೀಡಲಾಗಿತ್ತು.
“ಭಾರತ್ ಜೋಡೊ’ ಯಾತ್ರೆ ಸಿದ್ದು-ಡಿಕೆಶಿ
ಜೋಡೋ ಯಾತ್ರೆ ಎನ್ನುವ ಬಿಜೆಪಿಗರು ತಮ್ಮ ಪಕ್ಷದಲ್ಲಿ ಬಿಜೆಪಿ ತೋಡೋ ಜಾತ್ರೆ ನಡೆಯುತ್ತಿರುವುದು ಗಮನಿಸಲಿ. ರಾಜ್ಯದ ಜನರಷ್ಟೇ ಅಲ್ಲ ಸ್ವತಃ ಬಿಜೆಪಿಗರೇ ಬಿಜೆಪಿ ಮುಕ್ತ ಕರ್ನಾಟಕ ಮಾಡಲು ತುದಿಗಾಲಲ್ಲಿದ್ದಾರೆ. ಯತ್ನಾಳ್ ಹೇಳುತ್ತಿರುವ ಆ ಹುಳವನ್ನು ಬಿಜೆಪಿ ಕರ್ನಾಟಕ ಹುಡುಕಿಕೊಳ್ಳಲಿ.
– ಕಾಂಗ್ರೆಸ್ ಟ್ವೀಟ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.