Bidar; ಸಾಲ ಬಾಧೆಯಿಂದ ಇಬ್ಬರು ರೈತರು ಆತ್ಮಹ*ತ್ಯೆ
Team Udayavani, Oct 24, 2024, 9:02 PM IST
ಶಿವಕುಮಾರ ಸಂಗನಬಸಪ್ಪ
ಬೀದರ್: ಸಾಲದ ಬಾಧೆ ತಾಳಲಾರದೆ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಬೀದರ ತಾಲೂಕಿನಲ್ಲಿ ನಡೆದಿದೆ.
ಕಪಲಾಪುರ ಗ್ರಾಮದ ಶಿವಕುಮಾರ ಸಂಗನಬಸಪ್ಪ (38) ಎಂಬುವರು ತಮ್ಮ ಹೊಲದಲ್ಲಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಡಿಸಿಸಿ ಬ್ಯಾಂಕ್, ಪಿಎಲ್ಡಿ ಬ್ಯಾಂಕ್, ಖಾಸಗಿ ಸೇರಿದಂತೆ 5 ಲಕ್ಷ ರೂ. ಅಧಿಕ ಸಾಲ ಇತ್ತು. ಅವರಿಗೆ ಪತ್ನಿ, ಇಬ್ಬರು ಪುತ್ರರಿದ್ದಾರೆ. ಪಿಎಸ್ಐ ಹುಲೇಪ್ಪ ಭೇಟಿ ನೀಡಿದ್ದರು. ಜನವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಮಿರ್ಜಾಪುರ್ (ಟಿ) ಗ್ರಾಮದ ಸುಭಾಷ ಮಾರುತಿ ಹೊಸಗೊಂಡ (65) ಎಂಬುವರು ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರನ್ನು ತಕ್ಷಣ ಬೀದರ್ ಬ್ರಿಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸುಭಾಷ ಅವರಿಗೆ ಎರಡು ಎಕರೆ ಜಮೀನಿದ್ದು, ಐದು ಲಕ್ಷ ರೂ. ಸಾಲ ಮಾಡಿದ್ದರು. ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಬಗದಲ್ ಠಾಣೆಯಲ್ಲಿ ಪ್ರಕರಣ ದಾಕಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಫೆ.11ರಿಂದ ಹೂಡಿಕೆದಾರರ ಸಮಾವೇಶ: ಸ್ಟಾರ್ಟಪ್ ಪ್ರೋತ್ಸಾಹಕ್ಕೆ 3 ಲ. ಡಾಲರ್
ಬಿಜೆಪಿಯಲ್ಲಿ ಮುನ್ನೂರು ಬಾಗಿಲು: ಸಚಿವ ಮಧು ಬಂಗಾರಪ್ಪ ತಿರುಗೇಟು
Mandya: ವಿಸಿ ನಾಲೆಗೆ ಕಾರು ಬಿದ್ದು ಇಬ್ಬರ ದುರ್ಮರಣ, ಒಬ್ಬ ನಾಪತ್ತೆ, ಮತ್ತೊಬ್ಬನ ರಕ್ಷಣೆ
World Cancer ದಿನದ ಅಂಗವಾಗಿ ಕ್ಯಾನ್ಸರ್ ಗೆದ್ದವರಿಗೆ ಪಿಕಲ್ಬಾಲ್ ಪಂದ್ಯಾವಳಿ ಆಯೋಜನೆ
BJP Rift;ಯಡಿಯೂರಪ್ಪ, ಮಗನ ಕರ್ಮಕಾಂಡಗಳ ಬಗ್ಗೆ ಹೇಳಲು ನಾಳೆ ದೆಹಲಿಗೆ: ಯತ್ನಾಳ್