ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಿಳಿಮಲೆ, ಅಕಾಡೆಮಿಗೆ ಮುಕುಂದರಾಜ್ ಅಧ್ಯಕ್ಷ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ವಿವಿಧ ಅಕಾಡೆಮಿ, ಪ್ರಾಧಿಕಾರಗಳಿಗೆ ಅಧ್ಯಕ್ಷರು, ಸದಸ್ಯರ ನೇಮಕ
Team Udayavani, Mar 16, 2024, 9:39 PM IST
ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಲೋಕಸಭಾ ಚುನಾವಣೆ ನೀತಿ ಸಂಹಿತೆ ಶನಿವಾರದಿಂದಲೇ ಜಾರಿಗೆ ಬಂದಿದ್ದರೂ ಹೊಸ ಅಧ್ಯಕ್ಷರು ಅಧಿಕಾರ ಸ್ವೀಕರಿಸಲು ಯಾವುದೇ ರೀತಿ ಅಡ್ಡಿ ಇಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ನೇಮಕಾತಿ ಆದೇಶದಲ್ಲಿ ಮಾರ್ಚ್ 15ರ ದಿನಾಂಕ ನಮೂದಿಸಲಾಗಿದ್ದರೂ ವಾಸ್ತವವಾಗಿ ಸರ್ಕಾರದಿಂದ ಶನಿವಾರ ಅಧಿಕೃತ ಪಟ್ಟಿ ಹೊರಬಿದ್ದಿದೆ. ಸೋಮವಾರದ ಬಳಿಕ ವಿವಿಧ ಅಕಾಡೆಮಿಗಳ ಅಧ್ಯಕ್ಷರು ಹಾಗೂ ಸದಸ್ಯರು ಅಧಿಕಾರ ಸ್ವೀಕರಿಸಬಹುದಾಗಿದೆ.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಜೆಎನ್‌ಯು ನ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಡಾ.ಪುರುಷೋತ್ತಮ ಬಿಳಿಮಲೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ. ಎಲ್ .ಎನ್.ಮುಕುಂದರಾಜ್ , ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ ಡಾ.ಚನ್ನಪ್ಪ ಕಟ್ಟಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಮಾನಸ ಅವರನ್ನು ನೇಮಿಸಲಾಗಿದೆ.
ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ ಹಿರಿಯ ರಂಗಕರ್ಮಿ ಕೆ.ವಿ.ನಾಗರಾಜಮೂರ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರಾಗಿ ಹಿರಿಯ ಕಲಾವಿದೆ ಕೃಪಾ ಫಡಕಿ, ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ತಲ್ಲೂರು ಶಿವರಾಂ ಶೆಟ್ಟಿ ಅವರನ್ನು ಸರ್ಕಾರ ನೇಮಿಸಿದೆ. ಅಧ್ಯಕ್ಷರ ಮತ್ತು ಸದಸ್ಯರ ಅವಧಿ ಮೂರು ವರ್ಷವಾಗಿದೆ. ವಿವಿಧ ಪ್ರಾಧಿಕಾರ ಮತ್ತು ಅಕಾಡೆಮಿ ಅಧ್ಯಕ್ಷರು, ಸದಸ್ಯರುಗಳ ಪಟ್ಟಿ ಈ ಕೆಳಗಿನಂತಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ:
ಅಧ್ಯಕ್ಷರು: ಡಾ.ಪುರುಷೋತ್ತಮ ಬಿಳಿಮಲೆ (ನವದೆಹಲಿ). ಸದಸ್ಯರು: ಪ್ರೊ.ರಾಮಚಂದ್ರಪ್ಪ, ಡಾ.ವಿ.ಪಿ. ನಿರಂಜನಾರಾಧ್ಯ, ಟಿ.ಗುರುರಾಜ್, ಡಾ. ರವಿಕುಮಾರ್ ನೀಹ, ದಾಕ್ಷಾಯಿಣಿ ಹುಡೇದ, ಯಾಕೂಬ್ ಖಾದರ್, ವಿರೂಪಣ್ಣ ಕಲ್ಲೂರು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ:
ಅಧ್ಯಕ್ಷರು: ಡಾ.ಚನ್ನಪ್ಪ ಕಟ್ಟಿ (ವಿಜಯಪುರ). ಸದಸ್ಯರು: ಡಾ.ಎಂ.ಎಸ್.ಶೇಖರ್, ವಿಜಯಲಕ್ಷ್ಮಿ ಕೌಟಗಿ, ನಾರಾಯಣ್ ಹೊಡಘಟ್ಟ, ಶಾಕಿರಾ ಬಾನು, ಡಾ.ಪಿ.ಭಾರತಿ ದೇವಿ, ಡಾ.ಎಸ್ ಗಂಗಾಧರಯ್ಯ, ಡಾ.ಚಿತ್ತಯ್ಯ ಪೂಜಾರ್, ಡಾ.ಕರಿಯಪ್ಪ ಮಾಳಗಿ, ಡಾ.ಚಿತ್ತಯ್ಯ ಪೂಜಾರ್, ಡಾ.ಜಾಜಿ ದೇವೇಂದ್ರಪ್ಪ.
ಕನ್ನಡ ಪುಸ್ತಕ ಪ್ರಾಧಿಕಾರ:
ಅಧ್ಯಕ್ಷರು: ಮಾನಸ (ಮೈಸೂರು). ಸದಸ್ಯರು: ಡಾ. ಲಕ್ಷ್ಮಣ ಕೊಡಸೆ, ಶರಣಪ್ಪ ಬಸಪ್ಪ ಕೊಲ್ಕಾರ್, ಕುಶಾಲ ಬರಗೂರು, ಎಚ್.ಬಿ.ನೀರಗುಡಿ, ಅಕ್ಷತಾ ಹುಂಚದಕಟ್ಟೆ.
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ:
ಸದಸ್ಯರು: ಅಶೋಕ್ ಚಂದರಗಿ, ಡಾ.ಎಂ.ಎಸ್.ಮದಬಾವಿ, ಜಾಣಗೆರೆ ವೆಂಕಟರಾಮಯ್ಯ, ಭಗತರಾಜ್, ಎ.ಆರ್ ಸುಬ್ಬಯ್ಯಕಟ್ಟೆ, ಡಾ.ಸಂಜೀವ ಕುಮಾರ್ ಅತಿವಾಡ, ಶಿವರೆಡ್ಡಿ ಹಡೇದ್.
ಕರ್ನಾಟಕ ಸಾಹಿತ್ಯ ಅಕಾಡೆಮಿ:
ಅಧ್ಯಕ್ಷರು: ಡಾ.ಎಲ್.ಎನ್.ಮುಕುಂದ್ ರಾಜ್ (ತುಮಕೂರು). ಸದಸ್ಯರು: ಸಿದ್ದಪ್ಪ ಹೊನಕಲ್, ಅರ್ಜುನ ಗೋಳಸಂಗಿ, ಡಾ.ಎಚ್.ಜಯಪ್ರಕಾಶ್ ಶೆಟ್ಟಿ, ಡಾ.ಚಂದ್ರಕಲಾ ಬಿದರಿ,ಡಾ. ಚಿಲಕ್ ರಾಗಿ ,ಡಾ.ಗಣೇಶ್, ಸುಮಾ ಸತೀಶ್, ಎಚ್.ಆರ್.ಸುಜಾತಾ, ಅಕೈ ಪದ್ಮಶಾಲಿ, ಪಿ.ಚಂದ್ರಿಕಾ, ಪ್ರಕಾಶ್‌ರಾಜ್ ಮೇಹು, ಮಲ್ಲಿಕಾರ್ಜುನ ಮಾನ್ಪಡೆ, ಅಜಮೀರ್ ನಂದಾಪುರ, ಚಂದ್ರ ಕಿರಣ, ಮಹದೇವ ಬಸರಕೋಡ.
ಕರ್ನಾಟಕ ನಾಟಕ ಅಕಾಡೆಮಿ:
ಅಧ್ಯಕ್ಷರು: ಕೆ.ವಿ.ನಾಗರಾಜ ಮೂರ್ತಿ (ಬೆಂಗಳೂರು ಗ್ರಾಮಾಂತರ). ಸದಸ್ಯರು: ಜೇವರ್ಗಿ ರಾಜಣ್ಣ, ಜಿಪಿಒ ಚಂದ್ರು, ಅಮಾಸ, ಮಾಲೂರು ವಿಜಿ, ಷಾಹಿ ಜಾಹಿದಾ, ಎಸ್.ರಾಮು, ಜ್ಯೋತಿ ಮಂಗಳೂರು, ಗೀತಾ ಸಿದ್ಧಿ, ಬಾಬು ವಿ.ಕುಂಬಾರ, ಗಾಯತ್ರಿ ಹಡಪದ, ಲವಕುಮಾರ, ಕೆ.ಎ.ಬನಟ್ಟಿ, ಉಗಮ ಶ್ರೀನಿವಾಸ, ಬಾಬಾ ಸಾಹೇಬ್ ಕಾಂಬ್ಲೆ, ಚಾಂದ್ ಪಾಷಾ ಬಾಬು ಸಾಬ್ ಕಿಲ್ಲೇದಾರ್.
ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ:
ಅಧ್ಯಕ್ಷರು: ಡಾ.ಕೃಪಾ ಫಡಕಿ (ಮೈಸೂರು). ಸದಸ್ಯರು: ವಿದ್ವಾನ್ ವೆಂಕಟರಾಘವನ್, ಖಾಸಿಂ ಮಲ್ಲಿಗೆ ಮಡು, ಬಿ.ವಿ.ಶ್ರೀನಿವಾಸ್, ರಮೇಶ್ ಗನ್ನೂರು, ಸತ್ಯವತಿ ರಾಮನಾಥ್, ಸವಿತಾ ಅಮರೇಶ್ ನುಗಡೋಣಿ, ಹರಿದೋಗ್ರಾ, ಬಸಪ್ಪ ಹೆಚ್. ಭಜಂತ್ರಿ, ಡಾ.ಗೀತಾ, ಉಷಾ, ನಿರ್ಮಲಾ, ಶಂಕರ್ ಹೂಗಾರ, ಡಾ. ಮೃತ್ಯುಂಜಯ ದೊಡ್ಡವಾಡ, ಹುಸೇನ್ ಸಾಬ್, ಪದ ದೇವರಾಜ್.
ಕರ್ನಾಟಕ ಶಿಲ್ಪಕಲಾ ಅಕಾಡೆಮಿ:
ಅಧ್ಯಕ್ಷರು: ಎಂ.ಸಿ.ರಮೇಶ್ (ರಾಮನಗರ). ಸದಸ್ಯರು: ರಾಮಮೂರ್ತಿ, ಬಸಮ್ಮ ನರಗುಂದ, ಹರೀಶ್ ಮಾಳಪ್ಪನವರ್, ಬಿ.ಸಿ.ಶಿವಕುಮಾರ್, ನಾಗರಾಜ್ ಶಿಲ್ಪಿ, ವಿಶಾಲ್, ಹನುಮಂತ ಬಾಡದ, ಗೋಪಾಲ ಕಮ್ಮಾರ, ಭಾರತಿ ಸಂಕಣ್ಣಾಚಾರ್, ವೈ.ಕುಮಾರ.
ಕರ್ನಾಟಕ ಲಲಿತ ಕಲಾ ಅಕಾಡೆಮಿ:
ಅಧ್ಯಕ್ಷರು: ಡಾ.ಪ.ಸ.ಕುಮಾರ್ (ಬೆಂಗಳೂರು). ಸದಸ್ಯರು: ಬಸವರಾಜ್ ಎಸ್.ಜಾನೆ, ರಾ.ಸೂರಿ, ಕರಿಯಪ್ಪ ಹಂಚಿನ ಮನಿ, ಮನು ಚಕ್ರವರ್ತಿ, ಪಿ.ಮಹಮ್ಮದ್, ಶಾಂತಾ ಕೊಳ್ಳಿ, ಅನಿತಾ ನಟರಾಜ್ ಹುಳಿಯಾರ್, ಚಂದ್ರಕಾಂತ್ ಸರೋದೆ, ಬಸವರಾಜ ಕಲೆಗಾರ, ಆಶಾರಾಣಿ, ಮಹದೇವ ಶೆಟ್ಟಿ, ಫಾತಿಮಾ, ಆರ್.ಶಂಕರ್, ರಾಜೇಶ್ವರಿ ಮೋಪಗಾರ, ವೆಂಕಟೇಶ್ ಬಡಿಗೇರ.
ಕರ್ನಾಟಕ ಯಕ್ಷಗಾನ ಅಕಾಡೆಮಿ:
ಅಧ್ಯಕ್ಷರು: ತಲ್ಲೂರ್ ಶಿವರಾಮಶೆಟ್ಟಿ (ಉಡುಪಿ). ಸದಸ್ಯರು: ಎಚ್.ರಾಘವ, ಕೃಷ್ಣಪ್ಪ ಪೂಜಾರಿ, ಗುರುರಾಜ್ ಭಟ್, ವಿನಯ್ ಕುಮಾರ್ ಶೆಟ್ಟಿ, ವಿಜಯ್ ಕುಮಾರ್ ಶೆಟ್ಟಿ (ಮುಲ್ಕಿ), ಮೋಹನ್ ಕೊಪ್ಪಾಳ್, ಸತೀಶ್ ಅಡ್ಡಪ್ಪ ಸಂಕಬೈಲ್, ರಾಜೇಶ್ ಕಳೆ, ದಯಾನಂದ ಪಿ, ಜಿ.ವಿ.ಎಸ್.ಉಳ್ಳಾಲ್.
ಕರ್ನಾಟಕ ಜಾನಪದ ಅಕಾಡೆಮಿ:
ಅಧ್ಯಕ್ಷರು: ಶಿವಪ್ರಸಾದ್ ಗೊಲ್ಲಹಳ್ಳಿ (ಚಿಕ್ಕಬಳ್ಳಾಪುರ).ಸದಸ್ಯರು: ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ, ಉಮೇಶ್, ಡಾ.ಜಮೀರುಲ್ಲ ಷರೀಪ್, ಮಂಜುನಾಥ್ ರಾಮಣ್ಣ, ಸಂಕರಣ್ಣ, ಸಂಗಣ್ಣನವರ್, ರಂಗಪ್ಪ ಮಾಸ್ತರ, ಗುರುರಾಜ್, ಡಾ.ಕೆಂಪಮ್ಮ, ಡಾ.ಎಂ.ಎಂ ಪಡಶೆಟ್ಟಿ, ದೇವಾನಂದ ವರಪ್ರಸಾದ್, ನಿಂಗಣ್ಣ ಮುದೆನೂರು,ಕೆಂಕೆರೆ ಮಲ್ಲಿಕಾರ್ಜುನ, ಜೀವನ್ ಸಾಬ್ ವಾಲೀಕಾರ್, ಶಿವಮೂರ್ತಿ ತನಿಖೆದಾರ್, ಮೆಹಬೂಬ್ ಸಾಬ್ ಕಿಲ್ಲೇದಾರ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ:
ಅಧ್ಯಕ್ಷರು: ತಾರನಾಥ್ ಗಟ್ಟಿ ಕಾಪಿಕಾಡ್ (ದಕ್ಷಿಣ ಕನ್ನಡ). ಸದಸ್ಯರು: ಪೃಥ್ವಿರಾಜ್, ಕುಂಬ ದುರ್ಗಾಪ್ರಸಾದ್ ರೈ, ಮೋಹನ್ ದಾಸ್ ಕೊಟ್ಟಾರಿ, ಅಕ್ಷಯ್ ಆರ್. ಶೆಟ್ಟಿ, ಶೈಲೇಶ್ ಬಿನ್ ಬೋಜ ಸುವರ್ಣ, ಕಿಶೋರ್ ಬಿನ್ ಗುಡ್ಡಪ್ಪಗೌಡ, ಬೂಬ ಪೂಜಾರಿ, ರೋಹಿತಾಶ್ಚ ಯು ಕಾಪಿಕಾಡ್, ನಾಗೇಶ್ ಕುಮಾರ್‌ಉದ್ಯಾವರ, ಸಂತೋಷ್ ಶೆಟ್ಟಿ .
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ:
ಅಧ್ಯಕ್ಷರು: ಜೊಕಿಂ ಸ್ಥಾನಿ ಅಲ್ವಾರಿಸ್.ಸದಸ್ಯರು: ವಂ. ಪ್ರಕಾಶ್ ಮಾಡ್ತಾ ಎಸ್.ಜೆ, ರೊನಾಲ್ಕ ಕ್ರಾಸ್ತಾ, ಡಾ.ವಿಜಯ ಲಕ್ಷಿ$¾ ನಾಯಕ್, ನವೀನ್ ಲೋಬೋ, ಸಪ್ನಾ ಮೇ ಕ್ರಾಸ್ತಾ, ಸಮರ್ಥ ಭಟ್, ಸುನಿಲ್ ಸಿದ್ಧಿ, ಜೇಮ್ಸ… ಲೋಪಿಸ್, ದಯಾನಂದ ಮುಡೇಕರ್, ಪ್ರಮೋದ್ ಪಿಂಟೋ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ:
ಅಧ್ಯಕ್ಷರು: ಯು.ಎಚ್.ಉಮರ್. (ದಕ್ಷಿಣ ಕನ್ನಡ). ಸದಸ್ಯರು: ಬಿ.ಎಸ್.ಮೊಹಮದ್, ಹಫ್ತಾ ಬಾನು, ಸಾರಾ ಅಲಿ ಪರ್ಲಡ, ಶಮೀರಾ ಜಹಾನ್, ಯು.ಹೆಚ್.ಖಾಲಿದ್ ಉಜಿರ್, ತಾಜುದ್ದೀನ್, ಅಬೂಬಕರ್ ಅನಿಲ ಕಟ್ಟೆ, ಅಬ್ದುಲ್ ಶರೀಫ್, ಅಮೀದ್ ಹಸನ್ ಮಾಡೂರು, ಶಮೀರ್ ಮುಲ್ಕಿ.
ಕರ್ನಾಟಕ ಅರೆಭಾಷೆ ಸಾಂಸ್ಕೃತಿಕ ಮತ್ತು ಸಾಹಿತ್ಯ ಅಕಾಡೆಮಿ:
ಅಧ್ಯಕ್ಷರು: ಸದಾನಂದ ಮಾವಜಿ (ದಕ್ಷಿಣ ಕನ್ನಡ), ಸದಸ್ಯರು: ಚಂದ್ರಶೇಖರ್ ಪೇರಾಲು, ತೇಜಕುಮಾರ್ ಕುಡೆಕಲ್ಲು, ಚಂದ್ರಾವತಿ ಬಡ್ಕಡ್ಕ, ಲತಾ ಕುದ್ರಾಜೆ, ಪಿ.ಎಸ್. ಕಾರ್ಯಪ್ಪ, ಡಾ.ಎನ್.ಎ.ಜ್ಞಾನಪ್ರಕಾಶ್.
ಕರ್ನಾಟಕ ಬಯಲಾಟ ಅಕಾಡೆಮಿ:
ಅಧ್ಯಕ್ಷರು: ಪ್ರೊ.ದುರ್ಗಾದಾಸ್ (ಬಳ್ಳಾರಿ). ಸದಸ್ಯರು: ಬಿ.ಪರಶುರಾಮ್, ಅನಸೂಯ ವಡ್ಡರ್, ಚಂದ್ರು ಕಾಳೇನಹಳ್ಳಿ , ಭೀಮಪ್ಪ ರಾಮಪ್ಪ ಹುದ್ದಾರ್, ಮಲ್ಲಮ್ಮ ಸಾಲಹಳ್ಳಿ, ಮಾರನಾಯಕ, ಲಿಂಗಪ್ಪ ತೋರಣಗಟ್ಟಿ, ಯಲ್ಲಪ್ಪ ಮಾಸ್ತರ ನವಕಲಕಲ್, ಸುಜಾತ ಹಳಿಹಾಳ,ಡಿ. ಫಾಲಕ್ಷಯ್ಯ.
ಕರ್ನಾಟಕ ಬಂಜಾರ ಅಕಾಡೆಮಿ:
ಅಧ್ಯಕ್ಷರು: ಡಾ.ಎ.ಆರ್ ಗೋವಿಂದ ಸ್ವಾಮಿ (ರಾಮನಗರ). ಸದಸ್ಯರು: ಶಾಂತಾ ನಾಯಕ್ ಶಿರಗಾನಹಳ್ಳಿ, ಭಾರತಿ ಬಾಯಿ ಕೂಬಾ, ಪಳನಿಸ್ವಾಮಿ ಜಾಗೇರಿ, ಆರ್.ಬಿ. ನಾಯ್ಕ, ಶೇಖರಪ್ಪ ಜೀಮಲಪ್ಪ ಲಮಾಣಿ, ಡಾ.ರವಿನಾಯ್ಕ, ಸಾವಿತ್ರಿ ಬಾಯಿ, ಅಣ್ಣಾರಾಯ್ ರಾಠೊಡ್, ಸುರೇಖಾ ಲಮಾಣಿ, ಕುಮಾರ್ ತಾರೊನಾಥ್ ರಾಠೊಡ್.
ರಂಗ ಸಮಾಜ :
ಡಾ.ರಾಮಕೃಷ್ಣಯ್ಯ ( ಬೆಂಗಳೂರು), ಡಾ.ರಾಜಪ್ಪ ದಳವಾಯಿ (ಚಿಕ್ಕಮಗಳೂರು), ಲಕ್ಷಿ$¾ ಚಂದ್ರಶೇಖರ್ (ಬೆಂಗಳೂರು),ಶಶಿಧರ್ ಬಾರಿಘಾಟ್ (ಹಾಸನ), ಡಿಂಗ್ರಿ ನರೇಶ್ (ರಾಯಚೂರು), ಮಹಂತೇಶ್ ಗಜೇಂದ್ರ ಘಡ (ಬಾಗಲಕೋಟೆ), ಸುರೇಶ್ ಬಾಬು (ಮಂಡ್ಯ).
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ: ಅಧ್ಯಕ್ಷರು: ಅಜ್ಜಿನಕೊಂಡ ಮಹೇಶ ನಾಚ್ಚಯ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.