ಗೆಲುವಿನ ಅಂಗಡಿ ತೆರೆದ ಮಂಗಳಾ

ಗುದ್ದಾಡಿ ಸೋತ ಸತೀಶ್‌ ಜಾರಕಿಹೊಳಿ , 5,240 ಅಂತರದಲ್ಲಿ ಗೆದ್ದ ಬಿಜೆಪಿ

Team Udayavani, May 2, 2021, 6:50 AM IST

ಗೆಲುವಿನ ಅಂಗಡಿ ತೆರೆದ ಮಂಗಲಾ

ಬೆಳಗಾವಿ: ಕಾಂಗ್ರೆಸ್‌ ಜಯ ಬಹುತೇಕ ನಿಶ್ಚಿತ ಎಂದು ಎಲ್ಲರೂ ಅಂದುಕೊಂಡಿರುವಾಗಲೇ ಕೊನೆಯ ಆರು ಸುತ್ತಿನ ಮತ ಎಣಿಕೆಯಲ್ಲಿ ಒಂದು ರೀತಿಯ ಮ್ಯಾಜಿಕ್‌ ಮಾಡಿದ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಎಲ್ಲರನ್ನು ಅಚ್ಚರಿಗೊಳಿಸಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಸಂಸತ್‌ ಮೆಟ್ಟಿಲು ಹತ್ತಿದರು. ಅಷ್ಟೇ ಅಲ್ಲ ಬೆಳಗಾವಿ ಕ್ಷೇತ್ರದಿಂದ ಸಂಸತ್‌ ಪ್ರವೇಶ ಮಾಡುವ ಮೊಟ್ಟ ಮೊದಲ ಮಹಿಳಾ ಸಂಸದೆ ಎಂಬ ಕೀರ್ತಿ ಸ್ಥಾಪಿಸಿದರು.

ಅಂತಿಮ ಸುತ್ತಿನ ಮತ ಎಣಿಕೆಯವರೆಗೆ ಸಾಕಷ್ಟು ರೋಚಕ ಕ್ಷಣಗಳನ್ನು ಕಂಡ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಜಯದ ನಗೆ ಬೀರಿದಾಗ ಬಿಜೆಪಿ ಪಾಳೆಯದಲ್ಲಿ ಒಂದು ದೊಡ್ಡ ಯುದ್ಧ ಗೆದ್ದಂತೆ ಕಾರ್ಯಕರ್ತರು ಬೀಗಿದರು. ವಿಜಯೋತ್ಸವಕ್ಕೆ ಅವಕಾಶ ಇಲ್ಲದಿದ್ದರೂ ಕುಣಿದಾಡಿದರು.

ಹಾವು ಏಣಿಯಾಟದಲ್ಲಿ ವಿಜೇತ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರು 4,40,327 ಮತಗಳನ್ನು ಪಡೆದರೆ ಅವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸತೀಶ್‌ ಜಾರಕಿಹೊಳಿ 4,35,087 ಮತಗಳನ್ನು ಪಡೆದರು. ಬಿಜೆಪಿಯ ಭಾರೀ ಮುನ್ನಡೆಗೆ ಅಡ್ಡಿಯಾದ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಶುಭಂ ಶೇಳಕೆ 1.17 ಲಕ್ಷ ಮತಗಳನ್ನು ಪಡೆದು ಎಲ್ಲರನ್ನೂ ಅಚ್ಚರಿಗೊಳಿಸಿದರು.

ತಮ್ಮ ಈ ರೋಚಕ ಗೆಲುವನ್ನು ತಮ್ಮ ಪತಿ ಸುರೇಶ ಅಂಗಡಿ ಅವರಿಗೆ ಸಮರ್ಪಿಸಿದ ಮಂಗಳಾ ಅಂಗಡಿ ಈ ಗೆಲುವಿನ ಶ್ರೇಯಸ್ಸು ಎಲ್ಲ ಕಾರ್ಯಕರ್ತರಿಗೆ ಸಲ್ಲಬೇಕು ಎಂದು ಹೆಮ್ಮೆಯಿಂದ ಹೇಳಿದರು.

40 ಸುತ್ತಿನಿಂದ ಸತತ 79 ನೇ ಸುತ್ತಿನ ವರೆಗೆ ಉತ್ತಮ ಮುನ್ನಡೆಯಲ್ಲಿದ್ದ ಸತೀಶ್‌ ಜಾರಕಿಹೊಳಿ ಜಯಗಳಿಸುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಬಿಜೆಪಿಯವರೂ ಸಹ ಗೆಲುವಿನ ಆಸೆ ಕೈಬಿಟ್ಟಿದ್ದರು. ಆದರೆ 80ನೇ ಸುತ್ತಿನ ಮತ ಎಣಿಕೆ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿತು. ಅದುವರೆಗೆ ಗೆಲುವಿನ ಆಸೆಯನ್ನೇ ಬಿಟ್ಟಿದ್ದ ಬಿಜೆಪಿ ಒಮ್ಮೆಲೇ ಎದ್ದುನಿಂತಿತು. 80 ನೇ ಸುತ್ತಿನ ಮತ ಎಣಿಕೆಯ ಅನಂತರ ಸತೀಶ್‌ ಜಾರಕಿಹೊಳಿ ಗೆದ್ದು ಸೋತರೆ ಮಂಗಳಾ ಅಂಗಡಿ ಸೋತು ಗೆದ್ದರು. ಕಡೆಯ ಸುತ್ತಿನ ಮತ ಎಣಿಕೆ ಮುಗಿದು ಫಲಿತಾಂಶ ಹೊರಬಂದಾಗ ಮಂಗಳಾ ಅಂಗಡಿ ಅವರ ಮುಖದಲ್ಲಿ ಧನ್ಯತಾ ಭಾವ ಎದ್ದುಕಂಡಿತು. ಮಾತನಾಡದೇ ಭಾವುಕರಾದರು.

ಅರಭಾವಿ, ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ, ಬೈಲಹೊಂಗಲ ಸವದತ್ತಿ ಮತ್ತು ರಾಮದುರ್ಗ ವಿಧಾನಸಭಾ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದ್ದ ಮಂಗಳಾ ಅಂಗಡಿ ಅವರನ್ನು ಗೋಕಾಕ ಮತ್ತು ಬೆ‌ಳಗಾವಿ ದಕ್ಷಿಣ ಕ್ಷೇತ್ರದ ಮತದಾರರು ಸುರಕ್ಷಿತವಾಗಿ ಗೆಲುವಿನ ದಡ ಮುಟ್ಟಿಸಿದರು. ಗೋಕಾಕದ ಜನ ತಮ್ಮ ಮನೆ ಮಗಳಿಗೆ ನಿರಾಸೆ ಮಾಡಲಿಲ್ಲ.

ಎಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1821,614 ಮತದಾರರಿದ್ದು ಆದರಲ್ಲಿ 10,11,616 ಮತದಾರರು ಅಂದರೆ ಶೇಕಡಾ 56.02 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

ಮನೆ ಮಗನಿಗೆ ಸೋಲು, ಮನೆ ಮಗಳಿಗೆ ಗೆಲುವು :

ಕರದಂಟಿನ ನಾಡು ಗೋಕಾಕದ ಮತದಾರರು ತಮ್ಮ ಮನೆ ಮಗಳು ಮಂಗಳಾ ಅಂಗಡಿ ಗೆಲ್ಲಿಸಿ, ಮನೆ ಮಗ ಸತೀಶ್‌ ಜಾರಕಿಹೊಳಿಗೆ ಸೋಲುಣಿಸಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಮೊದಲ ಬಾರಿಗೆ ಆಯ್ಕೆಯಾದ ಮಹಿಳಾ ಅಭ್ಯರ್ಥಿ ಎಂಬ ದಾಖಲೆಯನ್ನೂ ಬರೆದಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಅನುಭವದ ರಾಜಕೀಯ ಲೆಕ್ಕಾಚಾರದ ಮುಂದೆ ಪತಿ ಸುರೇಶ ಅಂಗಡಿ ಮಾಡಿದ ಕೆಲಸ, ಅನುಕಂಪದ ಬಲದಿಂದ ಮಂಗಲಾ ಗೆಲುವಿನ ದಡ ಸೇರಿದ್ದಾರೆ.

ಬಾಲಚಂದ್ರ ಕ್ಷೇತ್ರದಲ್ಲಿ ಸತೀಶ್ ಭರ್ಜರಿ ಮತ :

ಎಲ್ಲಕ್ಕಿಂತ ಅಚ್ಚರಿ ಉಂಟು ಮಾಡಿದ ಸಂಗತಿ ಎಂದರೆ ಅರಭಾವಿ ಕ್ಷೇತ್ರದಲ್ಲಿ ಸತೀಶ್‌ ಜಾರಕಿಹೊಳಿ ಪಡೆದ ಮತಗಳು. ಈ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಇದೆ ಎನ್ನುವುದಕ್ಕಿಂತ ಸತೀಶ್‌ ಜಾರಕಿಹೊಳಿ ಸಹೋದರರಾದ ರಮೇಶ್‌ ಹಾಗೂ ಬಾಲಚಂದ್ರ ಶಾಸಕರಿದ್ದಾರೆ. ಬಿಜೆಪಿ ಶಾಸಕರಿದ್ದರೂ ಮಂಗಳಾ ಅಂಗಡಿ ಅವರಿಗೆ ನಿರೀಕ್ಷಿಸಿದಷ್ಟು ಮತಗಳು ಬರದೇ ಇರುವುದು ಜಾರಕಿಹೊಳಿ ಸಹೋದರರ ಕಡೆ ಅನುಮಾನದಿಂದ ತಿರುಗಿ ನೋಡುವಂತೆ ಮಾಡಿದೆ.

ಕೊಟ್ಟ ಮಾತಿನಂತೆ ನಡೆದ ರಮೇಶ್ ಜಾರಕಿಹೊಳಿ :

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಮೊದಲಿಂದಲೂ ಮಂಗಳಾ ಅಂಗಡಿ ಅವರಿಗೆ ಟಿಕೆಟ್‌ ಕೊಟ್ಟರೆ ಒಳ್ಳೆಯದು. ಅವರನ್ನು ಆರಿಸಿ ತರುವ ಜವಾಬ್ದಾರಿ ನಮ್ಮದು ಎಂದು ಹೇಳುತ್ತಲೇ ಬಂದಿದ್ದರು. ಪ್ರಚಾರದ ಸಮಯದಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿ ಮನೆಯಲ್ಲೇ ಉಳಿದಾಗ ಸಹಜವಾಗಿಯೇ ಬಿಜೆಪಿ ವಲಯದಲ್ಲಿ ಆತಂಕ ಮನೆಮಾಡಿತ್ತು. ಆದರೆ ರಮೇಶ್‌ ಜಾರಕಿಹೊಳಿ ಹಾಗೂ ಬೆಂಬಲಿಗರು ಮಂಗಳಾ ಅಂಗಡಿ ಅವರಿಗೆ ಕೊಟ್ಟ ಮಾತು ಉಳಿಸಿಕೊಂಡರು. ಎಲ್ಲಕ್ಕಿಂತ ಮುಖ್ಯವಾಗಿ ಎಂಟು ಕ್ಷೇತ್ರಗಳ ಪೈಕಿ ಅತೀ ಹೆಚ್ಚು ಮುನ್ನಡೆಯನ್ನು ತಂದುಕೊಟ್ಟಿದ್ದು ಗೋಕಾಕ ಎಂಬುದು ವಿಶೇಷ. ಇದೇ ಕಾರಣದಿಂದ ಮಂಗಲಾ ಅಂಗಡಿ ಅವರ ಜಯ ನಿಶ್ಚಯವಾಗಿತ್ತು.

ಲಕ್ಷ್ಮೀ ಹೆಬ್ಟಾಳ್ಕರ ಕ್ಷೇತ್ರದಲ್ಲಿ ಎಂಇಎಸ್ಗೆ ಹೆಚ್ಚು ಮತ!

ಕಾಂಗ್ರೆಸ್‌ನಲ್ಲಿ ಪ್ರಭಾವಿ ನಾಯಕಿಯಾಗಿ ಗುರುತಿಸಿಕೊಂಡಿದ್ದ ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ ಕ್ಷೇತ್ರ ಬೆಳಗಾವಿ ಗ್ರಾಮೀಣದಲ್ಲಿ ಎಂಇಎಸ್‌ ಬೆಂಬಲಿತ ಅಭ್ಯರ್ಥಿ ಶುಭಂ ಶೇಳಕೆ ಹೆಚ್ಚಿನ ಮತ ಪಡೆದಿದ್ದಾರೆ! ಒಂದು ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದ ಎಂಇಎಸ್‌ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಶುಭಂ, ಕಾಂಗ್ರೆಸ್‌ಗಿಂತ ಬಿಜೆಪಿಗೆ ಹೆಚ್ಚು ಹಾನಿ ಮಾಡಿದ್ದಾರೆ. ಬೆಳಗಾವಿ ಉತ್ತರ, ದಕ್ಷಿಣ ಮತ್ತು ಗ್ರಾಮೀಣ ಕ್ಷೇತ್ರಗಳಲ್ಲಿ ಮುಂದಿನ ವಿಧಾನಸಭೆಗೆ ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ.

ಸತೀಶ್ಗೆ ಮೊದಲ ಸೋಲು :

ಜಾರಕಿಹೊಳಿ ಕುಟುಂಬದಲ್ಲಿ ಚಾಣಾಕ್ಷ ಎಣಿಸಿಕೊಂಡಿರುವ ಸತೀಶ್‌ ಜಾರಕಿಹೊಳಿ ಎಂದೂ ಸೋಲು ಕಂಡವರಲ್ಲ. 2 ದಶಕಗಳ ರಾಜಕಾರಣದಲ್ಲಿ ಎಂದೂ ತಪ್ಪು ಹೆಜ್ಜೆ ಇಟ್ಟ ಉದಾಹರಣೆ ಇಲ್ಲ. ಯಮಕನಮರಡಿ ಕ್ಷೇತ್ರದಲ್ಲಿ ಸತತ ಗೆಲುವನ್ನೇ ಸಾಧಿಸುತ್ತ ಬಂದಿದ್ದರು. ಮೊದಲ ಬಾರಿ ದೆಹಲಿ ರಾಜಕಾರಣದತ್ತ ಕಾಲಿಟ್ಟು “ಮೊದಲ ಸೋಲು’ ಅನುಭವಿಸಿದ್ದಾರೆ. ದಿಲ್ಲಿಯಲ್ಲಿ ಕುಳಿತು ರಾಷ್ಟ್ರ ರಾಜಕಾರಣದ ಮೇಲೆ ಹಿಡಿತ ಸಾಧಿಸುವುದು. ಯಮಕನಮರಡಿ ಕ್ಷೇತ್ರಕ್ಕೆ ತಮ್ಮ ಮಕ್ಕಳು ಇಲ್ಲವೇ ಲಖನ್‌ ಅವರನ್ನು ಕಳುಹಿಸುವ ಇರಾದೆ ಇತ್ತು. ಈಗ ಅವೆಲ್ಲವೂ ತಲೆಕೆಳಗಾಗಿದೆ.

ಬಿಜೆಪಿ ಭದ್ರಕೋಟೆ ಮತ್ತಷ್ಟು ಗಟ್ಟಿಯಾಗಿದೆ. ಕಾರ್ಯಕರ್ತರು, ನಾಯಕರ ಶ್ರಮದ ಫ‌ಲ ಸಿಕ್ಕಿದೆ. ಮೋದಿ ನಾಯಕತ್ವಕ್ಕೆ  ಬಲ ಬಂದಿದೆ ಸುರೇಶ ಅಂಗಡಿ ಅವರ ಅಭಿವೃದ್ಧಿ ಕನಸು ನನಸಾಗಿಸಲು ಹಗಲಿರುಳು ಶ್ರಮಿಸುತ್ತಿದೆ. -ಜಗದೀಶ ಶೆಟ್ಟರ, ಸಚಿವ

ಇದು ನನ್ನ ಗೆಲುವಲ್ಲ, ಕಾರ್ಯಕರ್ತರ ಜಯ. ದಿ| ಸುರೇಶ ಅಂಗಡಿ ಅವರ ಅಭಿವೃದ್ಧಿ ಕೆಲಸ ನೋಡಿ ಮತದಾರರು ನನ್ನನ್ನು ಆಯ್ಕೆ ಮಾಡಿದ್ದಾರೆ. ಎಲ್ಲರಿಗೂ ತುಂಬು ಹೃದಯದ ಕೃತಜ್ಞತೆ ಸಲ್ಲಿಸುತ್ತೇನೆ.-ಮಂಗಳಾ  ಅಂಗಡಿ, ಬಿಜೆಪಿ ವಿಜೇತ ಅಭ್ಯರ್ಥಿ

ಸೋಲು-ಗೆಲುವು ಸಹಜ. ಮತ್ತೆ ಇಂಥ ಹಲವಾರು ಚುನಾವಣೆ ಸವಾಲು ನಾವು ಎದುರಿಸಬೇಕಿದೆ. ಕಾರ್ಯಕರ್ತರು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಚುನಾವಣೆ ಇರಲಿ, ಇಲ್ಲದಿರಲಿ ನಾವು ಸದಾ ಜನಪರ ಕಾರ್ಯ ನಿರ್ವಹಿಸುತ್ತೇವೆ.-ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ಪರಾಜಿತ ಅಭ್ಯರ್ಥಿ

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.