ಹಣ ಹಂಚಿಕೆ ಆರೋಪ: ಬಿಜೆಪಿ-ಕಾಂಗ್ರೆಸ್ ವಾಗ್ವಾದ
Team Udayavani, May 20, 2019, 3:09 AM IST
ಕಲಬುರಗಿ: ಚಿಂಚೋಳಿ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನವರು ಮತದಾರರಿಗೆ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಡಾ.ಉಮೇಶ ಜಾಧವ್ ಅವರು ಪೊಲೀಸ್ ವಾಹನದ ಮುಂದೆ ಕುಳಿತು ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ಖಾನಾಪುರ ಗ್ರಾಮದಲ್ಲಿ ಜರುಗಿತು.
ಚಿತ್ತಾಪೂರ ತಾಲೂಕಿನ ಪೇಠ ಶಿರೂರ ತಾಪಂ ಕ್ಷೇತ್ರದ ಕಾಂಗ್ರೆಸ್ ಸದಸ್ಯ ನಾಮದೇವ ರಾಠೊಡ್ ಅವರು ಮತದಾರರಿಗೆ ಹಣ ಹಂಚುತ್ತಿದ್ದಾರೆ ಎಂಬ ಆರೋಪದ ಮೇರೆಗೆ ಜಾಧವ್ ಬೆಂಬಲಿಗರು ಕಾನುನಾಯಕ ತಾಂಡಾ-ಶಿವರಾಮ ನಾಯಕ ತಾಂಡಾ ನಡುವೆ ನಾಮದೇವ ಅವರ ವಾಹನ ತಡೆದು ಶೋಧಿಸಿದರು.
ವಾಹನದ ಮೇಲೆ ಕಲ್ಲು ತೂರಿ, ಗಾಲಿಯ ಗಾಳಿ ಬಿಟ್ಟರು. ವಾಹನದಲ್ಲಿ ಹಣ ಇದೆ ಈ ಕೂಡಲೇ ಸ್ಥಳಕ್ಕೆ ಬರಬೇಕೆಂದು ಎಂಸಿಸಿ ತಂಡಕ್ಕೆ ದೂರು ನೀಡಿದರು. ಘಟನೆ ನಡೆಯುತ್ತಿದ್ದಂತೆ ಸಮೀಪದ ಖಾನಾಪುರದಲ್ಲಿ ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರ ನಡುವೆ ವಾಗ್ಧಾದ ನಡೆಯಿತು.
ಹಣ ಹಂಚಿಕೆ ತಡೆಯಲು ಚುನಾವಣಾಧಿಕಾರಿಗಳು ಮುಂದಾಗಿಲ್ಲ, ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಉಮೇಶ ಜಾಧವ್ ನಡುರಸ್ತೆಯಲ್ಲೇ ಪೊಲೀಸ್ ವಾಹನದ ಎದುರು ಕುಳಿತು ಪ್ರತಿಭಟಿಸಿದರು. ನಾಮದೇವ ರಾಠೊಡ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತರಾಗಿದ್ದಾರೆ.
ಸಚಿವರ ಕುಮ್ಮಕ್ಕಿನಿಂದಲೇ ಮತದಾರರಿಗೆ ಹಣ ಹಂಚುತ್ತಿದ್ದಾರೆ. ಮತದಾರರಿಗೆ ಬಿಜೆಪಿಗೆ ಮತ ಹಾಕದಂತೆ ಬೆದರಿಕೆ ಹಾಕಲಾಗುತ್ತಿದೆ. ಚುನಾವಣಾಧಿಕಾರಿಗಳು ಮತ್ತು ಪೊಲೀಸರು ಸಹಕರಿಸಿದ್ದಾರೆ ಎಂದು ಜಾಧವ್ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ, ಸ್ಥಳದಲ್ಲಿ ಜಮಾಯಿಸಿದ್ದ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು, ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸ್ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಉಮೇಶ ಜಾಧವ್ ತಮ್ಮ ವಾಹನ ತಡೆದು ಜಖಂಗೊಳಿಸಿದ್ದಾರೆ. ವಿನಾಕಾರಣ ಆರೋಪ ಹೊರಿಸಲಾಗುತ್ತಿದೆ ಎಂದು ನಾಮದೇವ ರಾಠೊಡ ಘಟನೆ ನಂತರ ತಿಳಿಸಿದರು.
ಜೇಬಿನಲ್ಲಿದ್ದ ಹಣ ಜಪ್ತಿ: ಮತದಾರರಿಗೆ ಹಂಚಲು ಬಂದಿದ್ದರು ಎನ್ನಲಾದ ನಾಮದೇವ ರಾಠೊಡ್ ಅವರನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ನಾಮದೇವ ರಾಠೊಡ್ ಜೇಬಿನಲ್ಲಿ ಐನೂರರ ನೋಟಿನ ಕಂತುಗಳು ಪತ್ತೆಯಾಗಿದ್ದು, ಹಣವನ್ನು ಪೊಲೀಸರು ಜಪ್ತಿ ಮಾಡಿದರು. ನಂತರ, ನಾಮದೇವ ರಾಠೊಡ್‌ರನ್ನು ಬಿಡಲಾಯಿತು.
ಬಹಿರಂಗ ಪ್ರಚಾರ ಅಂತ್ಯಗೊಂಡ ನಂತರ ಹೊರಗಿನ ಜನಪ್ರತಿನಿಧಿಗಳು ಕ್ಷೇತ್ರದಲ್ಲಿ ಇರಬಾರದೆಂದು ಗೊತ್ತಿದ್ದರೂ ಸಚಿವ ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ ಪಾಟೀಲ್, ಕೆ.ಬಿ.ಶಾಣಪ್ಪ ಇತರರು ಮತದಾನ ನಡೆಯುತ್ತಿದ್ದ ಸಂದರ್ಭದಲ್ಲಿ ಕ್ಷೇತ್ರದಲ್ಲಿರುವುದನ್ನು ನೋಡಿದರೆ ಅಧಿಕಾರಿಗಳು ಸುಮ್ಮನೆ ಕುಳಿತಿರುವುದು ಕಾಣುತ್ತಿದೆ. ಪೊಲೀಸರು ಹಾಗೂ ಅಧಿಕಾರಿಗಳು ಕಾಂಗ್ರೆಸ್ ಪರ ನಡೆದುಕೊಂಡಿರುವುದನ್ನು ಇದು ನಿರೂಪಿಸುತ್ತದೆ.
-ಡಾ. ಉಮೇಶ ಜಾಧವ್, ಮಾಜಿ ಶಾಸಕ.
ಸೋಲಿನ ಭೀತಿಯಿಂದ ಡಾ.ಉಮೇಶ ಜಾಧವ್ ಏನೇನೋ ಆರೋಪ ಹೊರಿಸಿದ್ದಾರೆ. ತಾಂಡಾದ ಮತದಾರರು ತಮಗೆ ಬೆಂಬಲಿಸುತ್ತಿರುವುದನ್ನು ಕಂಡು ಸಂಬಂಧವಿರದ ಘಟನೆಗಳನ್ನು ಸೃಷ್ಟಿ ಮಾಡಿದ್ದಾರೆ.
-ಸುಭಾಷ ರಾಠೊಡ, ಕಾಂಗ್ರೆಸ್ ಅಭ್ಯರ್ಥಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
Private Bus fare: ಶೀಘ್ರದಲ್ಲೇ ಖಾಸಗಿ ಬಸ್ ಪ್ರಯಾಣ ದರವೂ ಏರಿಕೆ?
Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ
Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.