ದೇವಸ್ಥಾನಗಳು ಸರ್ಕಾರದ ಹಿಡಿತದಿಂದ ಮುಕ್ತವಾಗಬೇಕು: ಖುಷ್ಬೂ
Team Udayavani, Dec 30, 2021, 11:09 AM IST
ಬೆಂಗಳೂರು: ದೇವಸ್ಥಾನಗಳು ಸರ್ಕಾರದ ಹಿಡಿತದಿಂದ ಮುಕ್ತ ಮಾಡುತ್ತಿರುವುದಕ್ಕೆ ಸ್ವಾಗತವಿದೆ. ತಮಿಳುನಾಡಿನಲ್ಲೂ ಈ ಒತ್ತಾಯವಿದೆ. ತಮಿಳುನಾಡು ಸರ್ಕಾರದ ನಡೆ ಏನಿರುತ್ತದೆಂದು ನಾವೂ ಕಾದು ನೋಡುತ್ತಿದ್ದೇವೆ ಎಂದು ಬಿಜೆಪಿ ನಾಯಕಿ ಖಷ್ಬೂ ಹೇಳಿದರು.
ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕರ್ನಾಟಕದಲ್ಲಿ ದೇವಸ್ಥಾನಗಳನ್ನು ನಿಯಂತ್ರಣ ಕಾಯ್ದೆಗಳಿಂದ ಮುಕ್ತಗೊಳಿಸುವ ಚಿಂತನೆ ಇದೆ. ತಮಿಳುನಾಡಿನಲ್ಲೂ ಚುನಾವಣೆ ವೇಳೆ ದೇವಸ್ಥಾನಗಳನ್ನು ಮುಕ್ತಗೊಳಿಸುವ ಭರವಸೆ ಕೊಡಲಾಗಿತ್ತು ಎಂದರು.
ಇದನ್ನೂ ಓದಿ:ಬಿಡದಿ ಪುರಸಭೆಯಲ್ಲಿ ಜೆಡಿಎಸ್ ಗೆ ಅಧಿಕಾರ: ಎಲ್ಲಾ ವಾರ್ಡುಗಳಲ್ಲಿ ಠೇವಣಿ ಕಳೆದುಕೊಂಡ ಬಿಜೆಪಿ
ಪ್ರಧಾನಿ ನೇತೃತ್ವದ ಪೋಷಣ್ ಅಭಿಯಾನದಲ್ಲಿ ನಾನೂ ಪಾಲ್ಗೊಂಡಿದ್ದೇನೆ. ಸ್ವಸ್ಥ ಬಾಲಕ್, ಸ್ವಸ್ಥ ಬಾಲಿಕಾ ಸ್ಪರ್ಧೆ ಇದೆ. ಅಪೌಷ್ಟಿಕತೆಯುಳ್ಳ 0-6 ವರ್ಷದ ಮಕ್ಕಳನ್ನು ದೇಶಾದ್ಯಂತ ಪತ್ತೆ ಮಾಡಲಾಗುತ್ತಿದೆ. ಆಶಾವಾಡಿ, ಅಂಗನವಾಡಿಗಳಲ್ಲಿ ಈ ಮಕ್ಕಳ ನೋಂದಣಿ ಮಾಡುವ ಕಾರ್ಯ ನಡೆಯುತ್ತಿದೆ. ಈ ಅಭಿಯಾನವನ್ನು ಕರ್ನಾಟಕ ರಾಜ್ಯದಲ್ಲಿ ಕೈಗೊಳ್ಳುವ ಬಗ್ಗೆ ಸಿಎಂ ಬೊಮ್ಮಾಯಿ ಜತೆ ಇವತ್ತು ಚರ್ಚೆ ನಡೆಸಿದ್ದೇನೆ ಎಂದು ಖುಷ್ಬೂ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.