ಯತ್ನಾಳ್‌ ಬೀದಿಕಾಳಗಕ್ಕೆ ಬಿಜೆಪಿ ವರಿಷ್ಠರ ತಡೆ; ಆಂತರಿಕ ವಿಚಾರ ಬಗ್ಗೆ ಬಹಿರಂಗ ಹೇಳಿಕೆ ಬೇಡ

ಸರಕಾರಕ್ಕೆ ಬಿಸಿ ಮುಟ್ಟಿಸಿ: ಶಿಸ್ತು ಸಮಿತಿ ಸೂಚನೆ

Team Udayavani, Dec 5, 2024, 6:55 AM IST

ಯತ್ನಾಳ್‌ ಬೀದಿಕಾಳಗಕ್ಕೆ ಬಿಜೆಪಿ ವರಿಷ್ಠರ ತಡೆ; ಆಂತರಿಕ ವಿಚಾರ ಬಗ್ಗೆ ಬಹಿರಂಗ ಹೇಳಿಕೆ ಬೇಡಯತ್ನಾಳ್‌ ಬೀದಿಕಾಳಗಕ್ಕೆ ಬಿಜೆಪಿ ವರಿಷ್ಠರ ತಡೆ; ಆಂತರಿಕ ವಿಚಾರ ಬಗ್ಗೆ ಬಹಿರಂಗ ಹೇಳಿಕೆ ಬೇಡ

ಬೆಂಗಳೂರು: ರಾಜ್ಯ ಬಿಜೆಪಿಯ ಬಣ ರಾಜಕಾರಣ ಉಲ್ಬಣಗೊಳ್ಳುವ ಲಕ್ಷಣ ಕಾಣುತ್ತಿದ್ದಂತೆ ಮುಲಾಮು ಹಚ್ಚಿರುವ ವರಿಷ್ಠರು, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ರ ಅಸಮಾ ಧಾನ ತಣಿಸಿ ತೇಪೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಕಿಡಿಕಾರುತ್ತಿದ್ದ ಯತ್ನಾಳ್‌ಗೆ ಬಿಜೆಪಿಯ ಶಿಸ್ತು ಸಮಿತಿ ನೋಟಿಸ್‌ ಕೊಟ್ಟಿತ್ತು. ಅದನ್ನೇ ನಕಲಿ ಎಂದಿದ್ದ ಯತ್ನಾಳ್‌, ಬುಧ ವಾರ ದಿಲ್ಲಿಯಲ್ಲಿ ಕೇಂದ್ರ ಶಿಸ್ತು ಸಮಿತಿ
ಅಧ್ಯಕ್ಷ ಓಮ್‌ ಪಾಠಕ್‌ ಎದುರು ವಿಚಾರಣೆಗೆ ಹಾಜರಾಗಿದ್ದರು.

ಆಂತರಿಕ ವಿಚಾರಕ್ಕೆ ಆದ್ಯತೆ ಬೇಡ
ವಿಚಾರಣೆ ವೇಳೆ ಇಷ್ಟು ದಿನ ಮಾಧ್ಯಮಗಳೆದುರು ಬಿಎಸ್‌ವೈ, ವಿಜಯೇಂದ್ರ ವಿರುದ್ಧ ತಾನು ಮಾಡುತ್ತಿದ್ದ ಆರೋಪಗಳನ್ನು ವಿಷದೀಕರಿಸಿ ಮನವರಿಕೆ ಮಾಡಿ ಕೊಡಲು ಯತ್ನಾಳ್‌ ಯತ್ನಿಸಿದರು. ಅಹವಾಲು ಆಲಿಸಿದ ಓಮ್‌ ಪಾಠಕ್‌, ಹಿಂದುತ್ವದ ಪರವಾದ ಹೋರಾಟ, ಕಾಂಗ್ರೆಸ್‌ನ ಭ್ರಷ್ಟಾ ಚಾರ ಹಾಗೂ ವಕ್ಫ್ ವಿರುದ್ಧದ ಹೋರಾಟ ಗಳನ್ನು ಮುಂದುವರಿಸಿ.

ಇಂತಹ ಹೋರಾಟಗಳಿಗೆ ಆದ್ಯತೆ ಕೊಡಬೇಕೇ ಹೊರತು ಪಕ್ಷದ ಆಂತರಿಕ ವಿಚಾರಗಳಿಗಲ್ಲ ಎನ್ನುವ ಬುದ್ಧಿಮಾತು ಹೇಳಿದ್ದಾರೆ.
ವಿಚಾರಣೆ ಬಳಿಕ ಸುದ್ದಿಗಾರರಿಗೆ ಯತ್ನಾಳ್‌ ಅವರೇ ಸ್ವತಃ ಈ ವಿಚಾರವನ್ನು ತಿಳಿಸಿದ್ದು, ಇಷ್ಟು ದಿನ ಮಾಧ್ಯಮಗಳ ಮುಂದೆ ಹೇಳಿದ್ದನ್ನೇ ಒಂದೂಕಾಲು ಗಂಟೆ ಕಾಲ ಸವಿಸ್ತಾರವಾಗಿ ಹೇಳಿದ್ದೇನಷ್ಟೆ. ಎಲ್ಲವನ್ನೂ ಅವರು ಸ್ವೀಕರಿಸಿದ್ದಾರೆ. ಮುಂದಿನ ವಿಚಾರ ತಿಳಿಸುವುದಾಗಿಯೂ ಹೇಳಿದ್ದಾರೆ ಎಂದಿದ್ದಾರೆ.

ಪಕ್ಷದ ವೇದಿಕೆಯಲ್ಲಿ ಮಾತನಾಡಲು ಸ್ವತಂತ್ರ
ಪಕ್ಷದ ಯಾವುದೇ ವ್ಯಕ್ತಿಗಳ ಬಗ್ಗೆಯೂ ಮಾಧ್ಯ ಮಗಳ ಮುಂದೆ ಮಾತನಾಡಬೇಡಿ, ಪಕ್ಷದ ವೇದಿಕೆಯಲ್ಲಿ ಮಾತನಾಡಲು ನೀವು ಸ್ವತಂತ್ರರಿದ್ದೀರಿ. ಇದನ್ನು ಕಾಯ್ದುಕೊಂಡು ಹೋದರೆ ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯದು ಎಂದು ಪಾಠಕ್‌ ಸಲಹೆ ಕೊಟ್ಟಿದ್ದಾರೆ. ಇದರರ್ಥ ಜಗಳ ಆಡಬೇಡಿ, ಆಂತರಿಕ ವಿಚಾರಗಳನ್ನು ಹೊರಗೆ ಮಾತನಾಡಬೇಡಿ ಎಂದೇ ತಾನೇ? ಪಕ್ಷದ ಅಧ್ಯಕ್ಷರು, ವರಿಷ್ಠರ ಮುಂದೆ ಹೇಳಬಹುದು ಎಂದೇ ಅರ್ಥ ತಾನೇ? ಎಂದುಯತ್ನಾಳ್‌ ಪ್ರಶ್ನೆ ಮಾಡಿದ ಯತ್ನಾಳ್‌, ಪಾಠಕ್‌ ಅವರು ನಿಮಗೆ ಒಳ್ಳೆಯ ಭವಿಷ್ಯ ಇದೆ, ಶಾಂತ ಸ್ವಭಾವದಿಂದ ಇರಿ ಎಂದಿದ್ದಾರೆ. ಹೊಸ ಯತ್ನಾಳ್‌ ಎಂದೆಲ್ಲ ಏನೂ ಇಲ್ಲ, ವಿಚಾರ ಆಧಾರಿತವಾಗಿ ಮಾತನಾಡುತ್ತೇನಷ್ಟೇ. ಇನ್ನೂ 10 ದಿನ ಸಮಯ ಇದೆ. ಏನಾಗಬಹುದು ಯತ್ನಾಳ್‌ಗೆ ಎಂಬುದು ಗೊತ್ತಾಗಿಯೇ ಆಗುತ್ತದೆ ಎಂದು ನಗುತ್ತಲೇ ಹೇಳಿದರು.

ಯತ್ನಾಳ್‌ ವಿಚಾರದಲ್ಲಿ ವರಿಷ್ಠರು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ. ಈಗಾಗಲೇ ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಶೀಘ್ರವೇ ಎಲ್ಲವೂ ಸರಿ ಹೋಗಲಿದೆ.
– ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ

ಯತ್ನಾಳ್‌ ಹೊರಗಡೆಯವರಲ್ಲ. ಯಾವುದೋ ಕಾರಣಕ್ಕೆ ಆಕ್ರೋಶದಲ್ಲಿರಬಹುದು. ಮಾತನಾಡಲಿ ಪರವಾಗಿಲ್ಲ. ಎಲ್ಲವನ್ನು ಸರಿಮಾಡುವ ಪ್ರಾಮಾಣಿಕ ಪ್ರಯತ್ನ ಒಟ್ಟಾಗಿ ಸೇರಿ ಮಾಡುತ್ತೇನೆ. ಏನೇ ಕೂರತೆ ಇದ್ದರೂ ಎದುರು ಬದುರು ಕೂತು ಮಾತಾಡಿ ಬಗೆಹರಿಸಿಕೊಳ್ಳಬೇಕು ಎನ್ನುವುದು ನನ್ನ ಅಭಿಪ್ರಾಯ.
-ಬಿ.ಎಸ್‌.ಯಡಿಯೂರಪ್ಪ, ಮಾಜಿ ಸಿಎಂ

ವಕ್ಫ್ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ವರದಿ ಕೊಟ್ಟಿರುವುದು ಪ್ರಶಂಸನೀಯ ಎಂದು ನಮ್ಮ ಹೋರಾಟವನ್ನು ಪಾಠಕ್‌ ಪ್ರಶಂಸಿಸಿದ್ದಾರೆ. ಕಾಂಗ್ರೆಸಿನ ಭ್ರಷ್ಟಾಚಾರ ಬಗ್ಗೆ ಆದ್ಯತೆ ಕೊಡಿ, ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಆದ್ಯತೆ ಕೊಡಬೇಡಿ ಎಂದಿದ್ದಾರೆ. ಅವರು ಒಳಗೆ ಹೇಳಿದ್ದನ್ನೆಲ್ಲ ಮನಸ್ಸಿನಲ್ಲಿ ಇಟ್ಟುಕೊಂಡು ಕೆಲಸ ಮಾಡುತ್ತೇನೆ.
– ಬಸನಗೌಡ ಪಾಟೀಲ್‌
ಯತ್ನಾಳ್‌, ಬಿಜೆಪಿ ಶಾಸಕ

ಟಾಪ್ ನ್ಯೂಸ್

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

DKS–Delhi

Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್‌

siddaramaih-Meeting

State Budget Meeting: ಇಂದಿನಿಂದ ಸಿಎಂ ಬಜೆಟ್‌ ಪೂರ್ವಭಾವಿ ಸರಣಿ ಸಭೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.