ಬಿಜೆಪಿ ನಾಯಕರ ಟೀಕೆಗಳಿಗೆ ಉಪ ಚುನಾವಣೆ ಫಲಿತಾಂಶ ಉತ್ತರ ಕೊಟ್ಟಿದೆ: ಡಿಕೆಶಿ
Team Udayavani, Nov 3, 2021, 10:30 PM IST
ಬೆಂಗಳೂರು:ಕಾಂಗ್ರೆಸ್ ಮುಳುಗಿದ ಹಡಗು, ಇಬ್ಟಾಗ, ಮೂರು ಭಾಗ ಆಗಿದೆ ಎಂದು ವ್ಯಾಖ್ಯಾನ ಮಾಡಿದ್ದ ಬಿಜೆಪಿ ಸ್ನೇಹಿತರಿಗೆ ಉಪ ಚುನಾವಣೆ ಫಲಿತಾಂಶ ಸೂಕ್ತ ಉತ್ತರ ನೀಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಾದ್ಯಂತ ನಡೆದಿರುವ ಉಪಚುನಾವಣೆಯಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಕ್ಕೂ ನಷ್ಟವಾಗಿದೆ. ದೇಶದ ಹಲವೆಡೆ ಕಾಂಗ್ರೆಸ್ ಗೆ ಜನ ಆಶೀರ್ವಾದ ಮಾಡಿದ್ದು, ಬಿಜೆಪಿ ಕೆಲವೆಡೆ ಸ್ಥಾನ ಉಳಿಸಿಕೊಂಡಿದ್ದರೂ ಮುಖಭಂಗ ಅನುಭವಿಸಿದೆ ಎಂದು ತಿಳಿಸಿದರು.
ಸಿಂದಗಿಯಲ್ಲಿ ನಾವು 3ನೇ ಸ್ಥಾನದಲ್ಲಿದ್ದೆವು. ಈಗ 30 ಸಾವಿರ ಅಂತರದಲ್ಲಿ ಸೋತರೂ ಮತಗಳ ಏರಿಕೆಯಿಂದ ನಾವು ಬೆಳವಣಿಗೆ ಕಂಡಿದ್ದೇವೆ. ಜೆಡಿಎಸ್ ಕ್ಷೇತ್ರ ವಶಪಡಿಸಿಕೊಳ್ಳಲು ಪ್ರಯತ್ನಿಸಿದ್ದೆವು, ವಿಫಲವಾಗಿದ್ದೇವೆ. ಬಿಜೆಪಿ ಅದನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.
ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಯ ಹಿರಿಯ ನಾಯಕರು, ಸಂಸತ್ ಸದಸ್ಯರಿದ್ದು, ಮುಖ್ಯಮಂತ್ರಿಗಳ ಪಕ್ಕದ ಕ್ಷೇತ್ರ. ಮುಖ್ಯಂಮತ್ರಿ ಈ ಕ್ಷೇತ್ರದ ಅಳಿಯಂದಿರು. ಇಡೀ ಸರ್ಕಾರ ಎರಡೂ ಕ್ಷೇತ್ರಗಳಲ್ಲಿ ಕೂತಿತ್ತು. ಚುನಾವಣೆ ಸಂದರ್ಭದಲ್ಲಿ ಯಾವೆಲ್ಲ ಪ್ರಯೋಗ ಮಾಡಬಹುದೋ ಎಲ್ಲವನ್ನು ಮಾಡಿದ್ದರು. ಆದರೂ ಆ ಕ್ಷೇತ್ರದ ಮತದಾರರು ದಿಟ್ಟ ತೀರ್ಮಾನ ತೆಗೆದುಕೊಂಡರು ಎಂದು ತಿಳಿಸಿದರು.
ಇದನ್ನೂ ಓದಿ:ಉಡುಪಿ ಜಿಲ್ಲಾದ್ಯಂತ ಭಾರೀ ಗುಡುಗು, ಸಿಡಿಲು ಸಹಿತ ಮಳೆ :ವಿವಿಧೆಡೆಯಲ್ಲಿ ವಿದ್ಯುತ್ ವ್ಯತ್ಯಯ
ಮತದಾರರು ಅನುಭವಿಸಿದ ನೋವು, ಸಮಸ್ಯೆಯಿಂದ ಸರ್ಕಾರ ಎಷ್ಟೇ ಒತ್ತಡ, ಆಮೀಷ ಒಡ್ಡಿದ್ದರೂ ಕ್ಷೇತ್ರದ ಮತದಾರರು ಕಾಂಗ್ರೆಸ್ ಕೈ ಹಿಡಿದು ದೇಶಕ್ಕೆ ದೊಡ್ಡ ಸಂದೇಶ ರವಾನಿಸಿದ್ದಾರೆ. ಕ್ಷೇತ್ರದ ಮತದಾರರು, ಕಾರ್ಯಕರ್ತರು, ಜಿಲ್ಲಾ ಮಟ್ಟದ ನಾಯಕರು, ಅಲ್ಲಿ ಕಾರ್ಯಕರ್ತರಂತೆ ಕೆಲಸ ಮಾಡಿದರಾಜ್ಯ ನಾಯಕರಿಗೆ ಶ್ರೀಮತಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಇದು ನನ್ನ ಗೆಲುವಲ್ಲ. ಮತದಾರರು ಹಾಗೂ ಕಾರ್ಯಕರ್ತರ ಗೆಲುವು. ಬಿಜೆಪಿ ಆಡಳಿತ ವಿರುದ್ಧ ಕೊಟ್ಟ ತೀರ್ಪು. ಯಾರು ಜನರ ಮಧ್ಯೆ ಇರುತ್ತಾರೋ, ಸ್ಪಂದಿಸುತ್ತಾರೋ, ಕಷ್ಟಕಾಲದಲ್ಲಿ ಭಾಗಿಯಾಗುವವರಿಗೆ ಮತದಾರ ಆಶೀರ್ವಾದ ನೀಡುತ್ತಾನೆ ಎಂದರು.
ಹಾನಗಲ್ ನಲ್ಲಿ ನಾಮಪತ್ರ ಸಲ್ಲಿಸುವಾಗ ಅಲ್ಲಿನ ಗ್ರಾಮದೇವತೆ ದೇವಾಲಯ ಹಾಗೂ ದರ್ಗಾಕ್ಕೆ ಹೋಗಿದ್ದೆ. ಆಗ ನನಗೆ ಸಮಾಧಾನ ಆಗಿರಲಿಲ್ಲ. ನಂತರ ಆ ದೇವಾಲಯಕ್ಕೆ ಹೋಗಿ ಹರಕೆ ಮಾಡಿಕೊಂಡು ನನ್ನ ಪ್ರಚಾರ ಆರಂಭಿಸಿದ್ದೆ. ಈಗ ನನ್ನ ಹರಕೆಯಂತೆ ಇದೇ 5ರಂದು ಅಲ್ಲಿಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಸಿಂದಗಿ ಚುನಾವಣೆಯಲ್ಲಿ ಹಲವು ನಾಯಕರು ಒಟ್ಟಾಗಿ ಕೆಲಸ ಮಾಡಿದ್ದು, ಅಲ್ಲಿ ಕೆಲವು ಲೆಕ್ಕಾಚಾರ ಬದಲಾಗಿದ್ದರೂ ಸಮಾಧಾನ ತಂದಿದೆ. ಅಲ್ಲಿನ ಕಾರ್ಯಕರ್ತರು ನಾಯಕರನ್ನು ಕೈ ಬಿಡುವುದಿಲ್ಲ. ನಮ್ಮ ತಪ್ಪು ತಿದ್ದುಕೊಂಡು 2023ರ ಚುನಾವಣೆಗೆ ಸಿದ್ಧರಾಗಲು ಮಾರ್ಗದರ್ಶನ ನೀಡುತ್ತೇವೆ ಎಂದು ಹೇಳಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಧ್ಯಮ ವಿಭಾಗದ ಅಧ್ಯಕ್ಷ ಬಿ.ಎಲ್. ಶಂಕರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Police FIR: ಎಫ್ಐಆರ್ ದಾಖಲಿಸಿ ನನ್ನ ವಿರುದ್ಧ ಸರ್ಕಾರದಿಂದ ದ್ವೇಷ ಸಾಧನೆ: ಎಚ್‌ಡಿಕೆ
Waqf: ಕಾಂಗ್ರೆಸ್ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್ ಆಸ್ತಿ ಕಬಳಿಕೆ: ಯತ್ನಾಳ್
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.