ಜೆಡಿಎಸ್‌ನ ಆರು ಶಾಸಕರಿಗೆ ಬಿಜೆಪಿ ಗಾಳ?
Team Udayavani, Nov 9, 2017, 9:31 AM IST
ಬೆಂಗಳೂರು: ಜೆಡಿಎಸ್‌ನ ಏಳು ಬಂಡಾಯ ಶಾಸಕರು ಕಾಂಗ್ರೆಸ್ ಹೊಸ್ತಿಲಲ್ಲಿರುವ ಬೆನ್ನಲ್ಲೇ ಇನ್ನೂ ಆರು ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ರಾಯಚೂರಿನ ಶಿವರಾಜ್ ಪಾಟೀಲ್, ಲಿಂಗಸಗೂರಿನ ಮಾನಪ್ಪ ವಜ್ಜಲ್, ಅರಸೀಕೆರೆಯ ಶಿವಲಿಂಗೇಗೌಡ, ನೆಲಮಂಗಲದ ಡಾ.ಶ್ರೀನಿವಾಸಮೂರ್ತಿ, ದೇವನಹಳ್ಳಿಯ ಪಿಳ್ಳಮುನಿಶಾಮಪ್ಪ, ಭದ್ರಾವತಿಯ ಅಪ್ಪಾಜಿ ಅವರನ್ನು ಸೆಳೆಯಲು ಮಾತುಕತೆ ನಡೆಸಲಾಗುತ್ತಿದೆ. ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಹಾಗೂ ಇತ್ತೀಚೆಗಷ್ಟೇ ಬಿಜೆಪಿ ಸೇರಿದ ಸಿ.ಪಿ.ಯೋಗೇಶ್ವರ್ ಅವರು ಜೆಡಿಎಸ್ ಸದಸ್ಯರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ ನಡೆಸುತ್ತಿದ್ದು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಬಿಜೆಪಿ ಶಕ್ತಿ ಕಡಿಮೆ ಇರುವ ಕ್ಷೇತ್ರಗಳಲ್ಲಿ ಸ್ವಂತ ವರ್ಚಸ್ಸು ಇರುವ ನಾಯಕರನ್ನು ಕರೆ ತಂದು ಬಿಜೆಪಿ ಟಿಕೆಟ್ ಕೊಟ್ಟು ಗೆಲ್ಲಿಸಿ ಸಂಖ್ಯಾಶಕ್ತಿ ವೃದ್ಧಿಸಿಕೊಳ್ಳಲು ಈ ತಂತ್ರ ರೂಪಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ, ಜೆಡಿಎಸ್ ಮೂಲಗಳ ಪ್ರಕಾರ ಇವೆಲ್ಲವೂ ವದಂತಿ. ಯಾರೂ ಬಿಜೆಪಿ ಸೇರುವುದಿಲ್ಲ. ಪಕ್ಷದ ವರ್ಚಸ್ಸು ಕುಗ್ಗಿಸಲು ನಡೆಸುತ್ತಿರುವ ಪಿತೂರಿ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Congress: ಸಮರ್ಥನೆಗೆ ಸಿದ್ಧಆಗಿ: ಸಿಎಂ ಸಿದ್ದರಾಮಯ್ಯ ಸೂಚನೆ
Karnataka: ಗೋಬಿ, ಕಾಟನ್ ಕ್ಯಾಂಡಿಯಲ್ಲಿ ಮತ್ತೆ ಕೃತಕಬಣ್ಣ!
Congress: ಜಮೀರ್ “ಕರಿಯ’ ಹೇಳಿಕೆ ಕುರಿತು ಶಿಸ್ತು ಸಮಿತಿಗೆ ವರದಿ ಕೊಟ್ಟರೆ ಕ್ರಮ: ಪರಂ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.