ಬಿಜೆಪಿ ಮುಖಂಡ ರಹೀಂ ಹಿಂದೂ ದೇಗುಲಕ್ಕೆ ಅರ್ಚಕ!; ಏನಿದು ವಿವಾದ?
Team Udayavani, Jul 21, 2017, 11:24 AM IST
ಹುಬ್ಬಳ್ಳಿ:ಇತಿಹಾಸ ಪ್ರಸಿದ್ಧ ಸಿದ್ಧಾರೂಢ ಮಠದಲ್ಲಿ ಭೇಟಿಕೊಟ್ಟ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಅಪಮಾನ ಮಾಡಿರುವ ಕುರಿತು ಶುಕ್ರವಾರ ಬೆಳಿಗ್ಗೆ ನಗರದ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಹೀಂ ಉಚ್ಚಿಲ್ ಹೇಳಿದರು.
ರಹೀಂ ಅವರು ಸಿದ್ಧಾರೂಢ ಮಠಕ್ಕೆ ಭೇಟಿಕೊಟ್ಟು ಸದ್ಗುರುಗಳ ಗದ್ದುಗೆಯ ದರ್ಶನ ಪಡೆದ ಚಿತ್ರ ಸಮೇತ ವಿಲಿಯಂ ಪಿಂಟೋ ಎಂಬುವವರು ಫೇಸ್‌ಬುಕ್‌ನಲ್ಲಿ ಇಲ್ಲಸಲ್ಲದ ಹೇಳಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ.
ಈ ಕುರಿತು “ಉದಯವಾಣಿ’ಯೊಂದಿಗೆ ಮಾತನಾಡಿದ ರಹೀಂ ಉಚ್ಚಿಲ್, ಭಾವೈಕ್ಯತೆಯ ಸಂಕೇತವಾದ ಸುಪ್ರಸಿದ್ಧ ಸಿದ್ಧಾರೂಢ ಮಠದಲ್ಲಿ ಮುಸ್ಲಿಂ ಸಮುದಾಯದ ನನಗೆ ಸನ್ಮಾನ, ಗೌರವ ನೀಡಿರುವುದು ಅಭಿಮಾನದ ಸಂಕೇತ. ಸಮಾಜವೂ ಅದನ್ನು ಗೌರವಿಸಬೇಕು. ಜೊತೆಗೆ ಸಮಾಜಕ್ಕೆ ಸಿಕ್ಕ ಗೌರವವೆಂದು ತಿಳಿದುಕೊಳ್ಳಬೇಕು. ಆದರೆ ವಿಲಿಯಂ ಪಿಂಟೋ ಎಂಬಾತನ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ಅಲ್ಲಿನ ವಿಚಾರಕ್ಕೆ ಅವಮಾನ ಮಾಡುವ ರೀತಿಯಲ್ಲಿ ಪೋಸ್ಟ್ ಮಾಡಿದ್ದು ಸರಿಯಲ್ಲ. ಇದನ್ನು ಪೋಸ್ಟ್ ಮಾಡಿದ ವಿಲಿಯಂ ಪಿಂಟೋನನ್ನು ತಕ್ಷಣ ಬಂಧಿಸಬೇಕು. ಅದರ ಹಿಂದೆ ಇದ್ದವರ ಮೇಲೂ ಸೂಕ್ತ ಕ್ರಮಕೈಗೊಳ್ಳಬೇಕು ಎಂದರು.
ಈ ಹಿಂದೆ ಪೇಜಾವರ ಮಠಕ್ಕೆ ಭೇಟಿಕೊಟ್ಟಾಗ ಸಹ ನಾನು ಮತಾಂತರಗೊಂಡಿದ್ದೇನೆಂದು ನನ್ನ ಫೇಸ್
ಬುಕ್ ಹ್ಯಾಕ್ ಮಾಡಿ ಪೋಸ್ಟ್ ಮಾಡಿದ್ದರು. ಆ ಬಗ್ಗೆ ಕೂಡ ದೂರು ಕೊಟ್ಟಿದ್ದೆ. ಎರಡನೇ ಬಾರಿ ನನ್ನ
ಮೇಲೆ ಇಂತಹ ಕೃತ್ಯ ನಡೆದಿದೆ. ಮಾನಸಿಕವಾಗಿ ಹಿಂಸೆ ನೀಡುವ ಕಾರ್ಯವಾಗಿದೆ. ನಾನು ಇದರಿಂದ
ವಿಚಲಿತನಾಗುವುದಿಲ್ಲ. ಸಮಾಜವನ್ನು ಒಗ್ಗೂಡಿಸುವ ಕಾರ್ಯ ಮುಂದುವರಿಸುತ್ತೇನೆ ಎಂದು ರಹೀಂ
ತಿಳಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.