“ಪರಿವಾರ’ಕ್ಕೆ ಬಹುಮತ ಬರದಿರುವ ಹಂಬಲ!
Team Udayavani, Feb 16, 2023, 11:00 PM IST
ವಿಧಾನ ಪರಿಷತ್ತು: ಜನತಾ ಪರಿವಾರ ಕಾಲಾಂತರದಲ್ಲಿ ದಳವಾಗಿ ಈಗ ಒಂದು ಪರಿವಾರಕ್ಕೆ ಸೀಮಿತವಾಗಿದೆ. ಆ “ಪರಿವಾರ’ವು ಯಾವುದೇ ಕಾರಣಕ್ಕೂ ಬಹುಮತ ಬರದಿರಲಿ ಎನ್ನುವುದೇ ಅದರ “ಹಂಬಲ’ ಎಂದು ಬಿಜೆಪಿಯ ಪ್ರತಾಪ್‌ಸಿಂಹ ನಾಯಕ್ ಆರೋಪಿಸಿದರು.
ಗುರುವಾರ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಇಡೀ ದೇಶವನ್ನು ಜನತಾ ಪರಿವಾರ ಆಳುತ್ತಿತ್ತು. ಆದರೆ, ದಳಗಳಾಗಿ ಈಗ ಒಂದು ಪರಿವಾರವಾಗಿ ಉಳಿದಿದೆ. ಗೆಲ್ಲುವ ಸಾಧ್ಯತೆ ಇರುವ ಕಡೆ “ಪರಿವಾರ’ದವರಿಗೇ ಟಿಕೆಟ್ ದೊರೆಯುತ್ತದೆ. ಸೋಲುವ ಕಡೆ ಕಾರ್ಯಕರ್ತರಿಗೆ ಟಿಕೆಟ್ ದಕ್ಕುತ್ತದೆ. ಏನೇ ಆದರೂ ಬಹುಮತ ಬರದಿರಲಿ. ಆ ಮೂಲಕ ಯಾರಾದರೂ ಬೆನ್ನೇರಿ ಅಧಿಕಾರ ಹಿಡಿಯಬಹುದು ಎಂದು ಯಾವಾಗಲೂ ಹವಣಿಸುತ್ತಿರುತ್ತದೆ’ ಎಂದು ಟೀಕಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್‌ನ ಭೋಜೇಗೌಡ, ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಟಾಗಿಲು ತೆರೆಯುವಂತೆ ಮಾಡಿದ್ದೇ ನಾವು (ಜೆಡಿಎಸ್). ನಮ್ಮ ಮೇಲೆಯೇ ನೀವು ಆರೋಪ ಮಾಡುತ್ತಿದ್ದೀರಿ. ಅಷ್ಟಕ್ಕೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಲ್ಲದ ಬಿಜೆಪಿ ಶೂನ್ಯ. ಇದು ತಮಗೆ ಅರಿವಿರಲಿ ಎಂದು ತೀಕ್ಷ್ಣವಾಗಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Raichur: ಕಾಂಗ್ರೆಸ್ ಸರ್ಕಾರ ಬಂದಿರುವುದೇ ಅಲ್ಲಾಹುವಿನ ಕೃಪೆಯಿಂದ… ಚಕ್ರವರ್ತಿ ಸೂಲಿಬೆಲೆ
MUDA Case: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆದ ರಾಜಕೀಯ ಪಿತೂರಿ: ಡಿಕೆಶಿ
Hubballi: ED ಬಿಜೆಪಿಯ ಅಂಗ ಸಂಸ್ಥೆಯೇ…? ಸಚಿವ ಎಚ್.ಕೆ.ಪಾಟೀಲ್ ಗರಂ
Republic Day Parade: ಗಣರಾಜ್ಯೋತ್ಸವ ಪರೇಡ್ ಗೆ ಚಾಮರಾಜನಗರದ ಕೃಷಿಕ ದಂಪತಿ
MUST WATCH
ಹೊಸ ಸೇರ್ಪಡೆ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್ 1 ಸ್ಥಾನ ಪಡೆದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.