‘ಮಹಾ’ ಸಮರ: ಕೆಪಿಸಿಸಿ ಕಚೇರಿ ಎದುರು ಬಿಜೆಪಿ ಪ್ರತಿಭಟನೆ!
Team Udayavani, Dec 27, 2017, 12:30 PM IST
ಬೆಂಗಳೂರು: ಮಹದಾಯಿ ವಿಚಾರದಲ್ಲಿ ಉತ್ತರ ಕರ್ನಾಟಕದಲ್ಲಿ ಬಂದ್, ರೈತರ ರಾಜಭವನ ಚಲೋ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿರುವ ವೇಳೆಯಲ್ಲೇ ತೀವ್ರ ರಾಜಕೀಯ ಹೋರಾಟ ಕಂಡು ಬಂದಿದ್ದು, ಬಿಜೆಪಿ ಮುಖಂಡರು ಕೆಪಿಸಿಸಿ ಕಚೇರಿ ಎದುರು ಇಂದು ಬುಧವಾರ ಉಗ್ರ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಈ ವೇಳೆ ಹಲವು ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಬಿಜೆಪಿ ಶಾಸಕರು ಸೇರಿದಂತೆ ಮುಖಂಡರು ಭಾಗಿಯಾಗಿದ್ದಾರೆ. ಕೆಪಿಸಿಸಿ ಕಚೇರಿ ಎದುರು ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು, ಭಾರೀ ಸಂಖ್ಯೆಯ ಪೊಲೀಸರನ್ನು ನಿಯೋಜಿಸಿ ಪ್ರತಿಭಟನಾ ಕಾರರನ್ನು ತಡೆಯಲಾಗಿದೆ.
‘ಸಿದ್ದರಾಮಯ್ಯ ಸರ್ಕಾರ ಗೂಂಡಾ ಸರ್ಕಾರ’ ಎಂದು ಘೋಷಣೆಗಳನ್ನು ಕೂಗಲಾಗಿದೆ.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶೋಭಾ ಕರಂದ್ಲಾಜೆ ‘ಸಿದ್ದರಾಮಯ್ಯ ಅವರೇ ನಿಮಗೆ ಕಳಕಳಿಯಿದ್ದರೆ ಗೋವಾಕ್ಕೆ ಬನ್ನಿ ಬಿಜೆಪಿ ನಿಮ್ಮೊಂದಿಗೆ ಬರುತ್ತದೆ. ಅಲ್ಲಿ ಮಾತುಕತೆ ನಡೆಸಿ ಮನೋಹರ್ ಪರ್ರಿಕರ್ ಅವರ ಮನವೊಲಿಸಿ ಎಂದು’ ಸವಾಲು ಹಾಕಿದರು.
‘ನಾವು ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮಹದಾಯಿಗಾಗಿ ಹೋರಾಟ ಮುಂದುವರಿಸುತ್ತೇವೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ರಾಜಕೀಯದ ಆಟ ಆಡಲು ಬಿಡುವುದಿಲ್ಲ’ ಎಂದು ಶೋಭಾ ಗುಡುಗಿದರು.
ಕಾನೂನು ಯಾವುದು ಹೇಳಿ
‘ಬಿಜೆಪಿ ಕಚೇರಿ ಎದುರು ರೈತರಿಗೆ ಪ್ರತಿಭಟನೆ ನಡೆಸಲು ಅವಕಾಶ ನೀಡಿದ್ದೀರಲ್ಲಾ, ಯಾವ ಕಾನೂನಿನಡಿ ಅವಕಾಶ ನೀಡಿದ್ದೀರಿ ಹೇಳಿ . ಕಮಿಷನರ್ ಉತ್ತರ ಕೊಡಲಿ . ಅವರಿಗೆ ಯಾವ ಕಾನೂನಿನಡಿ ಅವಕಾಶ ನೀಡಿದ್ದೀರಿ ಅದೇ ಕಾನೂನಿನ ಅಡಿ ನಮಗೂ ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲು ಅವಕಾಶ ಕೋಡಿ’ ಎಂದು ಬಿಜೆಪಿ ಮುಖಂಡ ಆರ್ .ಅಶೋಕ್ ಕಿಡಿ ಕಾರಿದರು.
‘ಕರ್ನಾಟಕ ಜನತೆ ಇನ್ಮುಂದೆ ಗಣೇಶನ ಹಬ್ಬಕ್ಕಾಗಲಿ, ಮೆರವಣಿಗಾಗಲಿ ಪೊಲೀಸರ ಅನುಮತಿ ಕೇಳುವ ಅಗತ್ಯವಿಲ್ಲ.ಕೇಳಲೂ ಹೋಗಬೇಡಿ’ ಎಂದು ಆರ್ .ಅಶೋಕ್ ಕರೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Bengaluru: ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು…
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
ಹೈಕಮಾಂಡ್ ಸೂಚನೆಗೆ ಔತಣಕೂಟ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ: ಜಿ.ಪರಮೇಶ್ವರ್
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.