ರಮೇಶ್‌ಕುಮಾರ್ ವಿರುದ್ಧ ಬಿಜೆಪಿ ಆಕ್ರೋಶ
Team Udayavani, Nov 17, 2017, 7:21 AM IST
ವಿಧಾನ ಪರಿಷತ್ತು: ಖಾಸಗಿ ವೈದ್ಯಕೀಯ ಸಂಸ್ಥೆಗಳ ಮೇಲೆ ಸರ್ಕಾರದ ನಿಯಂತ್ರಣ ಹೊಂದುವ ವಿಧೇಯಕ ವಿರೋಧಿಸಿ ವೈದ್ಯರು ನಡೆಸುತ್ತಿರುವ ಮುಷ್ಕರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಬಿಜೆಪಿ ಆರೋಗ್ಯ ಸಚಿವ ಕೆ.ಆರ್.ರಮೇಶ್‌ಕುಮಾರ್‌ರನ್ನು ಗುರಿಯಾಗಿಸಿದ್ದು, ಗುರುವಾರವೂ ಅವರ ವಿರುದ್ಧ ವಾಗ್ಧಾಳಿ ಮುಂದುವರಿಸಿದೆ.
“ವೈದ್ಯರ ಮುಷ್ಕರದ ಬಗ್ಗೆ ಕೇಳಿದಾಗ, ನನ್ನನ್ನು ಕೇಳಬೇಡಿ, ನನಗೆ ಸಂಬಂಧವಿಲ್ಲ, ನಮ್ಮ ನಾಯಕರನ್ನು ಕೇಳಿ ಎಂದು ಹೇಳುತ್ತಿರುವ ಆರೋಗ್ಯ ಸಚಿವ ರಮೇಶ್‌ಕುಮಾರ್ ರಾಜೀನಾಮೆ ಕೊಟ್ಟು ಹೊರನಡೆಯಲಿ ಎಂದು ಪ್ರತಿಪಕ್ಷ ನಾಯಕ ಈಶ್ವರಪ್ಪ ಹೇಳಿದರು. ಅಲ್ಲದೇ, ಮತ್ತೆ ರಮೇಶ್ ಕುಮಾರ್ ವಿರುದ್ಧ ಕೊಲೆಗಡುಕ ಪದ ಬಳಸಿದರು. ಇದರಿಂದ ಸದನದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ
ಸದಸ್ಯರ ನಡುವೆ ವಾಗ್ವಾದ ನಡೆದು ಕೋಲಾಹಲದ ವಾತಾವರಣ ನಿರ್ಮಾಣವಾಯಿತು.
ಮಾತುಕತೆಗೆ ಕರೆಯಿರಿ: ಪರಿಷತ್‌ನಲ್ಲಿ ವೈದ್ಯರ ಮುಷ್ಕರದ ಬಗ್ಗೆ ಪ್ರಸ್ತಾಪಿಸಿದ ಈಶ್ವರಪ್ಪ, “ವೈದ್ಯರು ಮತ್ತು ಸರ್ಕಾರಕ್ಕೆ ಸ್ವಪ್ರತಿಷ್ಠೆಗಿಂತ ಜನರ ಪ್ರಾಣ ರಕ್ಷಣೆ ಮುಖ್ಯ. ವೈದ್ಯರನ್ನು ಮಾತುಕತೆಗೆ ಕರೆಯಿರಿ. ಒಂದು ವೇಳೆ ಅವರು ಮಾತುಕತೆಗೆ
ಬಾರದೆ ತಮ್ಮ ಹಠ ಮುಂದುವರಿಸಿದರೆ ನಾವು ವೈದ್ಯರನ್ನು ಬೆಂಬಲಿಸುವುದಿಲ್ಲ’ ಎಂದರು. ಅಲ್ಲದೇ, “25 ಜನರ ಸಾವಿಗೆ ಕಾರಣವಾದ ಸರ್ಕಾರ ಮತ್ತು ಆರೋಗ್ಯ ಸಚಿವರು ಕೊಲೆ ಗಡಕರು’ ಎಂದು ಆಕ್ರೋಶ ವ್ಯಕ್ತಪಡಿಸಿದರು. “ವೈದ್ಯರ ಧರಣಿಗೆ ಪ್ರಚೋದನೆ ನೀಡಿದ ನೀವು (ಬಿಜೆಪಿ) ಕೊಲೆಗಡುಕ’ ಎಂದು ಸಿಎಂ ತಿರುಗೇಟು ನೀಡಿದರು. ಈಶ್ವರಪ್ಪನವರು ಬಳಸಿದ ಕೊಲೆ
ಗಡುಕ ಪದಕ್ಕೆ ಕಾಂಗ್ರೆಸ್‌ನ ಎಲ್ಲ ಸಚಿವರು, ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ಎರಡೂ ಕಡೆಯ ಸದಸ್ಯರ ನಡುವೆ ಮಾತಿನ ಚಕಮಕಿ ಮುಂದುವರಿಯಿತು. ಮಾತು ಮುಂದುವರಿಸಿದ ಸಿದ್ದರಾಮಯ್ಯ, “ವೈದ್ಯರ ನಿಯೋಗ ನನ್ನೊಂದಿಗೆ ಚರ್ಚಿಸಿದ ಸಂದರ್ಭದಲ್ಲಿ ಮುಷ್ಕರ ಹಿಂದೆಗೆದು ಕೊಳ್ಳುವ ಭಾವನೆ ವ್ಯಕ್ತವಾಗಿತ್ತು. ಆದರೆ, ನೀವು (ಬಿಜೆಪಿ) ಹೋಗಿ ಧರಣಿ ಮುಂದುವರಿಸಲು ಪ್ರಚೋದನೆ ನೀಡಿದ್ದರಿಂದ ವೈದ್ಯರು ಮುಷ್ಕರ ಮುಂದುವರಿಸಿ ಜನ ಸಾಯುವಂತಾಗಿದೆ. ನಿಜವಾದ ಕೊಲೆಗಡುಕರು ನೀವು’ ಎಂದು ಬಿಜೆಪಿ
ಸದಸ್ಯರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
“ವಿಧೇಯಕದಲ್ಲಿ ಶಿಕ್ಷೆ, ಜೈಲು ಎಂಬ ಅಂಶಗಳಿವೆ ಎಂಬ ಊಹಾಪೋಹಗಳಿಗೆ ಅವಕಾಶ ಬೇಡ. ವಿಧೇಯಕದಲ್ಲಿ 2- 3 ಸೆಕ್ಷನ್‌ಗಳಿಗೆ ವೈದ್ಯರು ಆಕ್ಷೇಪ ತೋರಿದ್ದಾರೆ. ವಿಧೇಯಕ ಮಂಡ ನೆಗೆ ಮೊದಲು ಖಾಸಗಿ ವೈದ್ಯರ ಸಂಘದ ಪ್ರತಿನಿಧಿಗಳನ್ನು ಕರೆದು ಚರ್ಚಿಸಲಾಗುವುದು’ ಎಂದರು.
xನನ್ನ ಕೊನೆ ಉಸಿರು ಇರುವವರೆಗೂ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಇರುತ್ತೇನೆ. ನನ್ನ ಅವರ ಸ್ನೇಹ 40 ವರ್ಷಗಳದ್ದು. ಅವರ ಕಷ್ಟ ಕಾಲದಲ್ಲಿ ಅವರೊಂದಿಗೆ ಹೆಚ್ಚು ಇದ್ದವನು ನಾನು. ನನ್ನ-ಅವರ ನಡುವೆ ಭಿನ್ನಾಭಿಪ್ರಾಯದ ಯತ್ನಕ್ಕೆ ಮುಂದಾಗಬೇಡಿ. ನನ್ನ ಸೈದ್ಧಾಂತಿಕ ಆಲೋಚನೆಗೆ ಮುಖ್ಯಮಂತ್ರಿಗಳು ಎಂದೂ ತಡೆಯೊಡ್ಡಿಲ್ಲ. ನನ್ನ ಮತ್ತು ಮುಖ್ಯಮಂತ್ರಿಯವರ ನಡುವೆ ಹೊಂದಾಣಿಕೆ ಇಲ್ಲ ಎಂಬುದು ಬೇಜವಾಬ್ದಾರಿತನದ ಹೇಳಿಕೆ.
ಕೆ.ಆರ್.ರಮೇಶ್‌ಕುಮಾರ್, ಆರೋಗ್ಯ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ
Munirathna ವಿರುದ್ಧದ ಅತ್ಯಾಚಾರ ಆರೋಪ ರುಜುವಾತು
Bengaluru; ನಿದ್ರೆಗೆ ಜಾರಿದ ಕ್ಯಾಬ್ ಡ್ರೈವರ್: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video
Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್ ಮ್ಯಾನೇಜರ್!
Liquor Sale; ರಾಜ್ಯದಲ್ಲಿ ಒಂದೇ ದಿನ 408 ಕೋಟಿ ರೂ ಮೌಲ್ಯದ ಮದ್ಯ ಮಾರಾಟ ದಾಖಲೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjalkatte: ಘನತ್ಯಾಜ್ಯ ಘಟಕ ಆರಂಭಕ್ಕೆ ಇನ್ನೂ ಮೀನ ಮೇಷ ಎಣಿಕೆ
Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ
Hubli; ಅಯ್ಯಪ್ಪ ಶಿಬಿರ ಅಗ್ನಿ ಆಕಸ್ಮಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ
ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ
INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್: ಕೊನೆಯಲ್ಲಿ ಕಾಡಿದ ಲಿಯಾನ್- ಬೊಲ್ಯಾಂಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.