ಕನ್ನಡದ ಡಿಂಡಿಮವನ್ನು ರಾಷ್ಟ್ರ ಮಟ್ಟದಲ್ಲಿ ಮುಟ್ಟಿಸುವ ಕೆಲಸ ಮಾಡುತ್ತೇನೆ: ನಟ ಜಗ್ಗೇಶ್
Team Udayavani, May 30, 2022, 11:23 AM IST
ಬೆಂಗಳೂರು: ನನಗೆ ಯಾವ ನಿರೀಕ್ಷೆ ಇರಲಿಲ್ಲ. ನಾನು ಬಹಳ ನಿಷ್ಠೆಯಿಂದ ಪಕ್ಷಕ್ಕೆ ಕೆಲಸ ಮಾಡಿದ್ದೆ ಸಿಎಂ ಹಾಗೂ ಸ್ನೇಹಿತರು, ಶಾಸಕರು ಸಂಘದ ಹಿರಿಯರು ಎಲ್ಲರೂ ನಿರ್ಧಾರ ಮಾಡಿ ಈ ಸ್ಥಾನ ಕೊಟ್ಟಿದ್ದಾರೆ. ನಾನು ನಿರೀಕ್ಷೆ ಮಾಡಿರಲಿಲ್ಲ ಎಂದು ಬಿಜೆಪಿ ರಾಜ್ಯಸಭೆ ಅಭ್ಯರ್ಥಿ ನಟ ಜಗ್ಗೇಶ್ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಮಾತಾನಾಡಿದ ಅವರು, ಚಿಂತನೆಗಳು ಇತ್ತು ಮುಂದಿನ ದಿನಗಳಲ್ಲಿ ಯಾವ ರೀತಿ ಕೆಲಸ ಮಾಡಬೇಕು ಅಂತ ನನಗೆ ಕಲ್ಪನೆ ಇರಲಿಲ್ಲ. ಪಕ್ಷ ಹಾಗೂ ಸಂಘಟನೆಗೆ ಧನ್ಯವಾದ. ನನಗೆ ಹಿರಿಯರು ಪೋನ್ ಮಾಡಿ ದಾಖಲೆ ರೆಡಿ ಮಾಡಿಕೊಳ್ಳಲು ಹೇಳಿದರು. ಆಗಲು ನನಗೆ ನಂಬಿಕೆ ಇರಲಿಲ್ಲ ಹೀಗಾಗಿ ಇದು ಸಂಪೂರ್ಣ ರಾಯರ ಆಶೀರ್ವಾದದಿಂದ ಬಂದಿದೆ ಎಂದರು.
ನಾಳೆ ನಾಮಿನೇಷನ್ ಮಾಡುತ್ತೇನೆ. ಇವತ್ತು ಇದಕ್ಕೆ ಬೇಕಾದ ದಾಖಲೆ ಸಿದ್ದತೆ ಮಾಡಿಕೊಳ್ಳುತ್ತೇನೆ. ನನಗೆ ನನ್ನ ಹೆಂಡತಿ ಕೂಡ ಇದರಲ್ಲಿ ಬಹಳ ಸಹಾಯ ಮಾಡುತ್ತಿದ್ದಾಳೆ. ಅವಳಿಗೂ ಧನ್ಯವಾದ. ನನಗೆ ನಿರೀಕ್ಷೆ ಇಲ್ಲದಿರುವುದರಿಂದ ದಾಖಲೆ ಸಂಗ್ರಹಿಸಲು ವಿಳಂಬ ಆಗಿದೆ. ದಾಖಲೆ ಸಂಗ್ರಹದ ಒತ್ತಡದಲ್ಲಿ ಇದ್ದೇನೆ ಎಲ್ಲಾ ಮುಗಿಸಿಕೊಂಡು ನಾಳೆ ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದರು.
ನಾನು ಯಾವುದೇ ಪ್ರಯತ್ನ ಮಾಡಿಲ್ಲ. ನಾನು ಯಾವ ಹುದ್ದೆನೂ ಕೇಳಿಲ್ಲ. ಕಳೆದ ಬಾರಿ ಕಡೆಗಳಿಗೆಯಲ್ಲಿ ಯಶವಂತಪುರದಲ್ಲಿ ನಿಲ್ಲಲು ಹೇಳಿದರು. ಆಗ ನಾನು ಬೇಡ ಅಂದೆ ಕಾರಣ ಏನಂದರೆ ನಾವು ವಿಧಾನಸಭೆಗೆ ಸ್ಪರ್ಧೆ ಮಾಡಬೇಕಾದರೆ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿರಬೇಕು. ಆವತ್ತು ನನ್ನ ಮೇಲೆ ವಿಶ್ವಾಸ ಇತ್ತು 12 ಸಾವಿರ ಇದ್ದ ಮತಗಳನ್ನು 61ಸಾವಿರ ಮತಕ್ಕೆ ತಂದಿದ್ದೆ ನನಗೂ ಆಶ್ಚರ್ಯ ಆಯಿತು. ಇದರಿಂದ ನನಗೆ ಮುಂದಿನ ದಿನಗಳಲ್ಲಿ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇತ್ತು ಹೀಗಾಗಿ ನನ್ನ ವೃತ್ತಿಯಲ್ಲಿ ಮುಂದುವರೆಯಿತ್ತಿದ್ದೆ ನನಗೆ ವಕ್ತಾರ ಹುದ್ದೆ ಕೊಟ್ಟಿದ್ರು ಸಂಪೂರ್ಣವಾಗಿ ಸಾಮಾಜಿಕ ಜಾಲತಾಣದಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಹೇಳಿದರು.
ನನಗೆ ಭಾಷೆ ಸಮಸ್ಯೆ ಇಲ್ಲ. ನಾನು ಹಿಂದಿ, ಇಂಗ್ಲಿಷ್, ಕನ್ನಡ ತಮಿಳು ಈ ಎಲ್ಲಾ ಭಾಷೆ ಮಾತನಾಡುತ್ತೇನೆ. ಸ್ವಲ್ಪ ಓದಿ ತಿಳಿದುಕೊಂಡಿದ್ದೇನೆ. ಹೆಚ್ಚಿನ ವಿಚಾರ ತಿಳಿದುಕೊಳ್ಳಲು ಹಿರಿಯರ ಸಲಹೆ ಪಡೆಯುತ್ತೇನೆ. ಕಾಯಾ ವಾಚಾ ಮನಸ್ಸಾ ಕನ್ನಡದ ಡಿಂಡಿಮವನ್ನು ಖಂಡಿತವಾಗಿ ರಾಷ್ಟ್ರ ಮಟ್ಟದಲ್ಲಿ ಮುಟ್ಟಿಸುವ ಕೆಲಸ ಮಾಡುತ್ತೇನೆ. ಹಿಂದಿ ಹೇರಿಕೆ ಬಗ್ಗೆ ಪ್ರತಿಕ್ರಿಯಿಸದೆ, ಒಳ್ಳೆಯ ಕೆಲಸಕ್ಕೆ ಹೋಗುತ್ತಿದ್ದೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.