![Dubai Garden Glow: ಅದ್ಭುತ ಮ್ಯಾಜಿಕ್ ಪಾರ್ಕ್ “ಗ್ಲೋ ಗಾರ್ಡನ್ ದುಬಾೖ’](https://www.udayavani.com/wp-content/uploads/2025/02/Dubai1-415x234.jpg)
![Dubai Garden Glow: ಅದ್ಭುತ ಮ್ಯಾಜಿಕ್ ಪಾರ್ಕ್ “ಗ್ಲೋ ಗಾರ್ಡನ್ ದುಬಾೖ’](https://www.udayavani.com/wp-content/uploads/2025/02/Dubai1-415x234.jpg)
Team Udayavani, Jan 29, 2025, 3:25 PM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಸತೀಶ್ ಕುಂಪಲ ಅವರು ಮುಂದಿನ ಮೂರು ವರ್ಷಗಳ ಅವಧಿಗೆ ಪುನರಾಯ್ಕೆಗೊಂಡಿದ್ದಾರೆ.
ಬುಧವಾರ ಜಿಲ್ಲಾ ಕಚೇರಿಯಲ್ಲಿ ರಾಜ್ಯ ಬಿಜೆಪಿ ಸಂಘಟನ ಪರ್ವ ಚುನಾವಣಾಧಿಕಾರಿ ಕ್ಯಾ| ಗಣೇಶ್ ಕಾರ್ಣಿಕ್, ಸಂಸದ ಕ್ಯಾ| ಬ್ರಿಜೇಶ್ ಚೌಟರ ಸಮಕ್ಷಮದಲ್ಲಿ ಚುನಾವಣಾಧಿಕಾರಿ ರಾಜೇಶ್ ಕಾವೇರಿ ಅವರು ಸತೀಶ್ ಆಯ್ಕೆಯನ್ನು ಘೋಷಿಸಿದರು.
ಈ ವೇಳೆ ಮಾತನಾಡಿದ ಸತೀಶ್ ಕುಂಪಲ, ಅಧ್ಯಕ್ಷನಾಗಿದ್ದ ಒಂದು ವರ್ಷದ ಅವಧಿಯಲ್ಲಿ ಸಂಸತ್ ಹಾಗೂ ವಿಧಾನ ಪರಿಷತ್ ಚುನಾ ವಣೆಯನ್ನು ಕಾರ್ಯಕರ್ತರ ಸಂಪೂರ್ಣ ಸಹಕಾರದಿಂದ ಗೆಲ್ಲಲು ಸಾಧ್ಯವಾಗಿದೆ. ಹಲವು ಸಹಕಾರ ಸಂಘಗಳ ಚುನಾವಣೆಗಳಲ್ಲೂ ಗೆಲುವು ಸಾಧಿಸಲಾಗಿದೆ. ಸಮಾಧಾನ ಚಿತ್ತದಲ್ಲಿ ಎಲ್ಲ ಸವಾಲುಗಳನ್ನು ಎದುರಿಸಿಕೊಂಡು ಬಂದಿರುವ ನನಗೆ ಮತ್ತೆ ಅಧ್ಯಕ್ಷನಾಗಲು ಅವಕಾಶ ಸಿಕ್ಕಿದೆ. ಎಲ್ಲರೂ ಜತೆಯಾಗಿ ಕೆಲಸ ಮಾಡಿ ಮುಂಬರುವ ಚುನಾವಣೆ ಗಳನ್ನು ಎದುರಿಸೋಣ ಎಂದರು.
ಸಂಸದ ಕ್ಯಾ| ಬ್ರಿಜೇಶ್ ಚೌಟ ಮಾತನಾಡಿ, ಸದ್ಯ ಕರ್ನಾಟಕದ ಅಸ್ಮಿತೆಯನ್ನು ರಾಜಕೀಯ-ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ಕೆಲಸ ಬಿಜೆಪಿಯ ಮುಂದಿದೆ, ಸಜ್ಜನಿಕೆ- ಮೌಲ್ಯಯುತ ರಾಜಕಾರಣವನ್ನು ಬಿಟ್ಟು ಸಿಎಂ ಸಿದ್ದರಾಮಯ್ಯ ಸ್ಥಾನಕ್ಕೆ ಅಂಟಿಕೊಂಡಿರುವುದರ ವಿರುದ್ಧ ಜನಾಭಿಪ್ರಾಯ ಮೂಡಿಸುವ ಜವಾಬ್ದಾರಿ ಪಕ್ಷಕ್ಕಿದೆ ಎಂದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಸತೀಶ್ ಕುಂಪಲ ಒಂದು ವರ್ಷದಲ್ಲಿ ಎಲ್ಲರನ್ನೂ ಸೇರಿಸಿಕೊಂಡು ಸಂಘಟನೆ ಕೆಲಸ ಮಾಡಿದ್ದಾರೆ. ಮುಂದೆಯೂ ಯಶಸ್ವಿಯಾಗಿ ಸಂಘಟನೆ ಮಾಡುವ ಜತೆಗೆ ಸರಕಾರದ ದುರಾಡಳಿತದ ವಿರುದ್ಧ ಹೋರಾಡಬಹುದು ಎಂದರು.
ಕ್ಯಾ| ಗಣೇಶ್ ಕಾರ್ಣಿಕ್ ಮಾತನಾಡಿ, ಪಂಚನಿಷ್ಠೆಯಲ್ಲಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಪ್ರಮುಖ ವಿಷಯ. ಮೂರು ವರ್ಷಗಳಿಗೊಮ್ಮೆ ಆಂತರಿಕ ಚುನಾವಣೆಯಲ್ಲಿ ಭಾಗವಹಿಸುವುದು ಅದರ ಭಾಗವೇ ಆಗಿದೆ ಎಂದರು.
ಬೇರೆ ಪಕ್ಷಗಳಿಗಿಂತ ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಹೆಚ್ಚು ಸಶಕ್ತವಾಗಿದೆ ಎಂದು ರಾಜ್ಯ ವೀಕ್ಷಕ ಮೋನಪ್ಪ ಭಂಡಾರಿ ಹೇಳಿದರು.
ಶಾಸಕ ಡಾ| ವೈ. ಭರತ್ ಶೆಟ್ಟಿ, ಸಹಾಯಕ ಚುನಾವಣಾಧಿಕಾರಿಗಳಾದ ರಾಧಾಕೃಷ್ಣ ಆಳ್ವ ಸಾಜ, ವಿಕಾಸ್ ಪಿ., ಮಾಜಿ ಶಾಸಕ ಸಂಜೀವ ಮಠಂದೂರು ಉಪಸ್ಥಿತರಿದ್ದರು.
ಕುಂಪಲ ಆಯ್ಕೆ ಹೇಗೆ?
ಎರಡು ತಿಂಗಳುಗಳಿಂದ ಜಿಲ್ಲೆಯ 1,861 ಬೂತ್ ಸಮಿತಿ ಹಾಗೂ 9 ಮಂಡಲ ಸಮಿತಿ ರಚಿಸಲಾಗಿತ್ತು. ಬಳಿಕ ಚುನಾವಣಾಧಿಕಾರಿಗಳು ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು, ಮಾಜಿ ಅಧ್ಯಕ್ಷರು, ರಾಜ್ಯ ಹಾಗೂ ರಾಷ್ಟ್ರೀಯ ಪದಾಧಿಕಾರಿಗಳಿಂದ ಅಧ್ಯಕ್ಷರ ಆಯ್ಕೆ ಕುರಿತು ಅಭಿಪ್ರಾಯ ಸಂಗ್ರಹಿಸಿದ್ದಾರೆ. ಅದರಲ್ಲಿ ಐದು ಹೆಸರುಗಳು ಬಂದಿದ್ದು, ಈ ಪೈಕಿ ಮೂರು ಹೆಸರುಗಳನ್ನು ರಾಜ್ಯದ ಸಮಿತಿಗೆ ಕಳಿಸಲಾಗಿತ್ತು. ಅದರಲ್ಲಿ ಹೆಚ್ಚು ಮಂದಿ ಸೂಚಿಸಿರುವ ಸತೀಶ್ ಕುಂಪಲ ಹೆಸರನ್ನು ರಾಜ್ಯದ ಕೋರ್ ಕಮಿಟಿ ಹಾಗೂ ಚುನಾವಣ ಸಮಿತಿ ಅಂತಿಮಗೊಳಿಸಿದೆ.
ಶಿರಸಿ: ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಘಟಕದ ನೂತನ ಅಧ್ಯಕ್ಷರಾಗಿ 2ನೇ ಬಾರಿಗೆ ಎನ್.ಎಸ್. ಹೆಗಡೆ ಕರ್ಕಿ ಪುನರಾಯ್ಕೆಯಾಗಿದ್ದಾರೆ.
ಜ.29ರ ಬುಧವಾರ ನಗರದ ದೀನ್ ದಯಾಳ ಭವನದಲ್ಲಿ ಆಯ್ಕೆ ಘೋಷಿಸಿದ ಬಿಜೆಪಿ ಜಿಲ್ಲಾ ಚುನಾವಣಾಧಿಕಾರಿ, ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಕೆ.ಸಿದ್ದರಾಮಣ್ಣ, ಎನ್. ಎಸ್ ಹೆಗಡೆ ಅವರು ಮುಂದಿನ 3 ವರ್ಷದ ಅವಧಿಗೆ ಆಯ್ಕೆ ಮಾಡಲಾಗಿದ್ದು, ಬರಲಿರುವ ಚುನಾವಣೆ ಎದುರಿಸಲು ಪಕ್ಷ ಸದೃಢಗೊಳಿಸುವಂತೆ ಸೂಚನೆ ನೀಡಿದರು.
ಈ ವೇಳೆ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ, ಜಿಲ್ಲಾಧ್ಯಕ್ಷ ಎನ್. ಎಸ್. ಹೆಗಡೆ ಕರ್ಕಿ, ಪ್ರಮುಖರಾದ ಆರ್. ಡಿ ಹೆಗಡೆ, ನಗರ ಮಂಡಲ ಅಧ್ಯಕ್ಷ ಆನಂದ ಸಾಲೇರ್, ಮಾಜಿ ಶಾಸಕ ವಿವೇಕಾನಂದ ವೈದ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್, ಮಾಜಿ ಅಧ್ಯಕ್ಷ ಎಂ.ಜಿ.ನಾಯ್ಕ, ಕಚೇರಿ ಕಾರ್ಯದರ್ಶಿ ಶ್ರೀರಾಮ ನಾಯ್ಕ ಇತರರಿದ್ದರು.
ಶಿವಮೊಗ್ಗ: ನೂತನ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಜಗದೀಶ್ ಎನ್. ಕೆ. ಆಯ್ಕೆಯಾಗಿದ್ದಾರೆ. ಈ ಹಿಂದೆ ಬಿಜೆಪಿ ಶಿವಮೊಗ್ಗ ನಗರ ಅಧ್ಯಕ್ಷರಾಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ್ ಸೇವೆ ಸಲ್ಲಿಸಿದ್ದರು.
ಜಿಲ್ಲಾ ಬಿಜೆಪಿ ಪ್ರತಿನಿಧಿಯಾಗಿ ಮಾಜಿ ಎಂಎಲ್ಸಿ ಎಸ್. ರುದ್ರೇಗೌಡ ಆಯ್ಕೆಯಾಗಿದ್ದಾರೆ.
ಬಳ್ಳಾರಿ: ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಅನಿಲ್ ಕುಮಾರ್ ಮೋಕ ಮರು ಆಯ್ಕೆಯಾಗಿದ್ದಾರೆ. ಅವಿರೋಧವಾಗಿ 2ನೇ ಅವಧಿಗೆ ಅನಿಲ್ ಕುಮಾರ್ ಮೋಕ ಆಯ್ಕೆಯಾಗಿದ್ದು, ಮಾಜಿ ಎಂ.ಎಲ್.ಸಿ. ಹಾಗೂ ಬಿಜೆಪಿ ಚುನಾವಣಾಧಿಕಾರಿ ಅರುಣ್ ಶಾಪೂರ್ ಅವರಿಂದ ಸುದ್ದಿಗೋಷ್ಠಿ ನಡೆದು ಈ ಕುರಿತು ಘೋಷಣೆ ಮಾಡಲಾಗಿದೆ.
ಮುಂದಿನ ದಿನಗಳಲ್ಲಿ ಪಕ್ಷ ನಿಷ್ಠೆಯಿಂದ ಕೆಲಸ ಮಾಡಿದವರಿಗೆ ಉನ್ನತ ಸ್ಥಾನ ಸಿಗಲಿದೆ ಎಂದು ತಿಳಿಸಿದರು.
ಬಳ್ಳಾರಿಯಲ್ಲಿ ಗುಂಪುಗಾರಿಕೆ ಇರುವುದರಿಂದ ಅನಿಲ್ ಮುಂದುವರಿಕೆ ಆಗಿಲ್ಲ ಎಂಬುದೆಲ್ಲ ಸುಳ್ಳು. ಶ್ರೀರಾಮುಲು ಜೊತೆ ನಾನು ಸಂಪರ್ಕದಲ್ಲಿರುವೆ. ಅವರು ನಮ್ಮ ಜೊತೆ ಇದ್ದಾರೆ. ರಾಜ್ಯಾಧ್ಯಕ್ಷರ ವಿಚಾರವನ್ನು ಹಿರಿಯರು ನಿರ್ಧಾರ ಮಾಡುತ್ತಾರೆ. ಯಾವಾಗಲೂ ಚುನಾವಣೆ ಪ್ರಕ್ರಿಯೆ ಮೂಲಕವೇ ಅಧ್ಯಕ್ಷರ ಆಯ್ಕೆ ಆಗತ್ತೆ. ನನ್ನ ಅಭಿಪ್ರಾಯ ಈ ಬಾರಿ ಏಕಾಭಿಪ್ರಾಯದ ಮೂಲಕ ಅಧ್ಯಕ್ಷರಾಗುತ್ತಾರೆ ಎಂದು ಹೇಳಿದ್ದಾರೆ.
ಬಳ್ಳಾರಿ: ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿರುವ ಅನಿಲ್ ಕುಮಾರ್ ಮೋಕಾ ಅವರಿಗೆ ಸುದ್ದಿಗೋಷ್ಟಿಯಲ್ಲಿ ಜನಾರ್ದನ ರೆಡ್ಡಿ ಅಭಿನಂದನೆ ಸಲ್ಲಿಸಿದ್ದಾರೆ. ಅನಿಲ್ ಅವರ ನೇತೃತ್ವದಲ್ಲಿ ನಮ್ಮಲ್ಲಿ ಏನೇ ಸಣ್ಣ ಪುಟ್ಟ ವೈಮನಸ್ಸು ಇದ್ರೂ ನಾವು ಸರಿ ಮಾಡ್ಕೊಳ್ತೇವೆ. ಮುಂದಿನ ದಿನಗಳಲ್ಲಿ ಬಿಜೆಪಿ ಬಳ್ಳಾರಿಯಲ್ಲಿ ಎಲ್ಲಾ ಕ್ಷೇತ್ರ ಗೆಲ್ಲಲಿದೆ. ಅನಿಲ್ ಕುಮಾರ್ ಮೋಕಾ ನಿಸ್ವಾರ್ಥ ಮನುಷ್ಯ. ಈ ಸಂದರ್ಭದಲ್ಲಿ ನಾನು ಏನನ್ನೂ ಮಾತನಾಡುವುದಿಲ್ಲ ಎಂದರು.
ಜೀವನದಲ್ಲಿ ಕಳೆದ 14 ವರ್ಷದಿಂದ ಅನೇಕ ಸವಾಲು ಎದುರಿಸಿದ್ದೇನೆ. ನಿನ್ನೆ ಹಲವು ಬಿಜೆಪಿ ಕಾರ್ಯಕರ್ತರು ಶ್ರೀರಾಮುಲು ಕ್ಷೇತ್ರ ಬಿಡಬಾರದು ಎಂದು ಪ್ರೆಸ್ ಮೀಟ್ ಮಾಡಿದರು. ಶ್ರೀರಾಮುಲು ಬೇಕು ಎಂದು ಪ್ರೀತಿ, ಗೌರವದಿಂದ ಕ್ಷೇತ್ರ ಬಿಡಬಾರದು ಎಂದು ಮನವಿ ಮಾಡಿದರು. ಆದರೆ ಅದನ್ನು ಕೆಲವರು ಬೇರೆ ರೀತಿ ಯೋಚನೆ ಮಾಡ್ತಾರೆ. ಹೆಚ್ಚಿನ ವಿಷಯವನ್ನು ಈ ಸಂದರ್ಭದಲ್ಲಿ ಮಾತನಾಡುವುದಿಲ್ಲ ಎಂದು ಹೇಳಿದರು.
11 ವರ್ಷದಿಂದ ವಿಶ್ವಗುರು ನೋಡಿದ್ದೇವೆ, ಅವರನ್ನು ಕೆಳಗಿಳಿಸಿ: ಬಿಜೆಪಿಗೆ ಸಂತೋಷ್ ಲಾಡ್ ಟಾಂಗ್
ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ: ಮೇ 30 ರೊಳಗೆ ಮೀಸಲಾತಿ ಪಟ್ಟಿ ಸಲ್ಲಿಕೆ
Davanagere: 115 ರೂ. ಕೇಳಿದ್ದಕ್ಕೆ ಬೇಕರಿ ಮಾಲೀಕನಿಗೆ ಚಾಕುವಿನಿಂದ ಇರಿದ ವ್ಯಕ್ತಿ
Kalaburagi: ಸಾವಿರ ಕೋ.ರೂ ವೆಚ್ಚದ ಕಲ್ಯಾಣಪಥ ಯೋಜನೆಗೆ ಶೀಘ್ರ ಅಡಿಗಲ್ಲು: ಡಾ. ಅಜಯ್ ಸಿಂಗ್
Belagavi: ಮುಂದಿನ ಅವಧಿಗೂ ಸಿದ್ದರಾಮಯ್ಯ ಸಿಎಂ ಆದರೆ ತಪ್ಪೇನಿದೆ… ಸಚಿವ ಶಿವಾನಂದ ಪಾಟೀಲ
Anandapura:ಮನೆಗೆ ಆಕಸ್ಮಿಕ ಬೆಂಕಿ; ಅಪಾರ ನಷ್ಟ; ಶಾಸಕ ಗೋಪಾಲಕೃಷ್ಣ ಬೇಳೂರು ಸ್ಥಳಕ್ಕೆ ಭೇಟಿ
Dubai Garden Glow: ಅದ್ಭುತ ಮ್ಯಾಜಿಕ್ ಪಾರ್ಕ್ “ಗ್ಲೋ ಗಾರ್ಡನ್ ದುಬಾೖ’
ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯಾ ರಂಗ!: ಆಡೂ ಆಟ ಆಡು ….ನೀ ಆಡು ಆಡು ಆಡಿ ನೋಡು
Railway; ಮಹಾಕುಂಭಕ್ಕೆ ಟಿಕೆಟ್ ಇಲ್ಲದೆ ಪ್ರಯಾಣಿಸಲು ಮೋದಿ ಜಿ ಹೇಳಿದ್ದಾರೆ ಎಂದ ಮಹಿಳೆಯರು
Udupi: ಡಾ| ಟಿಎಂಎ ಪೈ ಆಸ್ಪತ್ರೆ; ಫೆ.20ರಂದು ಲಿಂಫೆಡೆಮಾ ತಪಾಸಣೆ ಶಿಬಿರ
You seem to have an Ad Blocker on.
To continue reading, please turn it off or whitelist Udayavani.