ಬಿಜೆಪಿದು ಪಶ್ಚಾತ್ತಾಪದ ರ್ಯಾಲಿ: ಸಿಎಂ
Team Udayavani, Nov 6, 2017, 8:24 AM IST
ರಾಣಿಬೆನ್ನೂರು: ಬಿಜೆಪಿ ಆರಂಭಿಸಿರುವುದು ಪರಿವರ್ತನಾ ರ್ಯಾಲಿಯಲ್ಲ, ಪಶ್ಚಾತ್ತಾಪದ ರ್ಯಾಲಿ. ಮಾಡಿದ ಪಾಪ ಪರಿವರ್ತನೆ ಮಾಡಿಕೊಳ್ಳುವ ರ್ಯಾಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು. ನಗರದಲ್ಲಿ ಭಾನುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವರ 74ನೇ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಿಜೆಪಿ ಆರಂಭಿಸಿರುವ ಪರಿವರ್ತನಾ ರ್ಯಾಲಿ ಯಾರ ಪರಿವರ್ತನೆಗೆ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಜಾತಿಯ ವಿಷ ಬೀಜ ಬಿತ್ತಿ, ಜಾತಿ, ಧರ್ಮದ ನಡುವೆ ಬೆಂಕಿ ಹಚ್ಚುವ ಕೋಮುವಾದಿಗಳ ಪರಿವರ್ತನೆ ಆಗಬೇಕಿದೆ. ಮತಾಂಧರಿಗೆ, ಸಂವಿಧಾನ ವಿರೋಧಿ ನೀತಿ ಅನುಸರಿಸುವವರಿಗೆ ಪರಿವರ್ತನೆ ಆಗಬೇಕಿದೆ ಎಂದರು. ಅಪ್ಪನಾಣೆಗೂ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಏಕೆಂದರೆ ಜನ ಬಿಜೆಪಿ ಅಧಿಕಾರದಲ್ಲಿದ್ದಾಗ ಮಾಡಿದ ಪಾಪದ ಕೆಲಸ ಇನ್ನೂ ಮರೆತಿಲ್ಲ. ಅನೇಕರು ಜೈಲಿಗೆ ಹೋಗಿ ಬಂದಿದ್ದಾರೆ. ಹಾಗಾಗಿಯೇ ಅವರದ್ದು ಪರಿವರ್ತನಾ ರ್ಯಾಲಿ ಅಲ್ಲ ಪಶ್ಚಾತ್ತಾಪದ ರ್ಯಾಲಿ ಎಂದರು.
ಸಿಎಂ ಸಿದ್ದರಾಮಯ್ಯ ಮನೆಯಲ್ಲೇ ಮೊಟ್ಟೆ ಇಡಿ!
ಹಾವೇರಿ: “ಕೋಳಿ ಊರೆಲ್ಲ ಅಡ್ಡಾಡಿದರೂ ಮಾಲೀಕನ ಮನೆಯಲ್ಲೇ ಮೊಟ್ಟೆ ಇಡುವಂತೆ, ನೀವು (ಮತದಾರರು) ಯಾವುದೇ ಪಕ್ಷ, ಪ್ರದೇಶದಲ್ಲಿ ಓಡಾಡಿಕೊಂಡಿದ್ದರೂ ಮೊಟ್ಟೆಯನ್ನು ಸಿದ್ದರಾಮಯ್ಯ ಅವರ ಮನೆಯಲ್ಲೇ ಇಡಬೇಕು’ ಇದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಮತದಾರರನ್ನು ಕೋಳಿಗೆ ಹೋಲಿಸಿ ಕಾಂಗ್ರೆಸ್ ಪರ ಮಾತನಾಡಿದರು.
ಭಾನುವಾರ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವರ 74ನೇ ಜನ್ಮದಿನಾಚರಣೆ ಹಾಗೂ ಮುಖ್ಯಮಂತ್ರಿ ಯವರಿಂದ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೋಳಿ ಲಿಂಗಾಯತರ ಕೇರಿ, ಮಾದಿಗರ ಕೇರಿ, ಕುರುಬರ ಕೇರಿ ಸೇರಿ ಎಲ್ಲೆಡೆ ಹೋಗಿ ಕಾಳು ಕಡಿ, ಹುಳಹುಪ್ಪಡಿ ತಿಂದು ಬರುತ್ತೆ. ಆದರೂ ಕೊನೆಗೆ ಮಾಲೀಕನ ಮನೆಗೆ ಹೋಗಿಯೇ ಮೊಟ್ಟೆ ಇಡುತ್ತೆ. ಹಾಗೆಯೇ ನೀವು ಸಹ ಮತ್ತೂಮ್ಮೆ ಸಿಎಂಗೆ ಮೊಟ್ಟೆ ಇಡಬೇಕು ಎಂದರು.
ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಬಳಿದಾಖಲೆ ಇದ್ದರೆ ಬಹಿರಂಗಪಡಿಸಲಿ
ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರದ ಸಚಿವರ ವಿರುದ್ಧ ಬಿಜೆಪಿ ಭ್ರಷ್ಟಾಚಾರದ ಆರೋಪ ಹೊರಿಸುತ್ತಿದೆ. ಅವರಿಗೆ ಧೈರ್ಯವಿದ್ದರೆ ಎಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವುದರ ಬಗ್ಗೆ ದಾಖಲೆ ಸಮೇತ ಬಹಿರಂಗಪಡಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸವಾಲು ಹಾಕಿದ್ದಾರೆ. ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ನಾವು ಬಿಜೆಪಿ ಸರ್ಕಾರದ
ಹಗರಣವನ್ನು ಅಂದು ದಾಖಲೆ ಸಮೇತ ಬಹಿರಂಗಪಡಿಸಿ ಯಡಿಯೂರಪ್ಪ ಸೇರಿ ಅವರ ಸಚಿವ ಸಂಪುಟದ ಸಚಿವರನ್ನು ಜೈಲಿಗೆ ಕಳುಹಿಸಿದ್ದೇವು. ಬಿಜೆಪಿಯವರು ಯಾವುದೇ ದಾಖಲೆ ಇಲ್ಲದೆ ಬರಿ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಅವರ ಬಳಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಅಷ್ಟಕ್ಕೂ ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ’ ಎಂದು ಕಿಡಿ ಕಾರಿದರು. ಕಾಂಗ್ರೆಸ್ ಮೇಲೆ ನಂಬಿಕೆ ಇಟ್ಟು 20 ಮಂದಿ ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷವನ್ನು ಶೀಘ್ರವೇ ಸೇರಲಿದ್ದಾರೆ. ಯಾರು ಪಕ್ಷಕ್ಕೆ ಬರುತ್ತಾರೆ ಎನ್ನುವ ಬಗ್ಗೆ ಶೀಘ್ರದಲ್ಲೇ ತಿಳಿಸುತ್ತೇವೆ ಎಂದು ಪುನರುಚ್ಚರಿಸಿದರು.
ನಿಷೇಧಿತ ಪದ ಬಳಸಿ ಕೆಂಗಣ್ಣಿಗೆ ಗುರಿಯಾದ ಕೆ.ಬಿ. ಕೋಳಿವಾಡ
ರಾಣಿಬೆನ್ನೂರು: ಸವಿತಾ ಸಮಾಜದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಮುಜುಗರಕ್ಕೀಡಾಗಿದ್ದ ಬಿಜೆಪಿ ನಾಯಕ ಈಶ್ವರಪ್ಪ ಬಳಿಕ ಈಗ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಕೂಡ ಸವಿತಾ ಸಮಾಜದ ವಿರುದ್ಧ ನಿಷೇಧಿತ ಪದ ಬಳಸಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ತಮ್ಮ 74ನೇ ಜನ್ಮದಿನಾಚರಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊಗಳುವ ಭರದಲ್ಲಿ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಷ್ಟು ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿದ್ದರೆಂದರೆ ಅದಕ್ಕೆ ನಾನೇ ಸಾಕ್ಷಿ. ನಮ್ಮ ಸಮಾಜದ ಒಬ್ಬರಿಗೆ ಮಂತ್ರಿ ಸ್ಥಾನ ನೀಡಿದ್ದರಿಂದ ನಾನು ಎಷ್ಟು ಕೇಳಿದರೂ ನನಗೆ ಮಂತ್ರಿ ಸ್ಥಾನ ಕೊಟ್ಟಿಲ್ಲ. ಇನ್ನು ಕೆಪಿಎಸ್‌ಸಿ ನೇಮಕದಲ್ಲಿ ಲಿಂಗಾಯತ, ಉಪ್ಪಾರ ಸೇರಿ “ಹಜಾಮ’ ಜಾತಿಯವರಿಗೆ ಆದ್ಯತೆ ನೀಡಿದ್ದಾರೆ’ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.