BJP; ಯತ್ನಾಳ್ ವಿರುದ್ಧ ರಾತೋರಾತ್ರಿ ಪಕ್ಷ ವರಿಷ್ಠರಿಗೆ ವಿಜಯೇಂದ್ರ ದೂರು
ರಾಜ್ಯ ಸೇವೆಗೆ ಶೋಭಾ, ಸೋಮಣ್ಣ?
Team Udayavani, Dec 1, 2024, 6:45 AM IST
ಬೆಂಗಳೂರು: ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಜತೆಗೆ ಬಣ ಜಗಳ ಭುಗಿಲೆದ್ದಿರುವುದರಿಂದ ಹಠಾತ್ ದಿಲ್ಲಿಗೆ ತೆರಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯ ಉಸ್ತುವಾರಿ ಡಾ| ರಾಧಾ ಮೋಹನ್ ಅಗರ್ವಾಲಾ ಅವರನ್ನು ಭೇಟಿ ಮಾಡಿ ಯತ್ನಾಳ್ ಬಣದ ವಿರುದ್ಧ ದೂರು ನೀಡಿದ್ದಾರೆ. ಉಪಚುನಾವಣೆ ಸೋಲು ಸಹಿತ ರಾಜ್ಯದ ಎಲ್ಲ ವಿದ್ಯಮಾನಗಳ ಬಗ್ಗೆ ಅವರು ವಿವರಣೆ ನೀಡಿದ್ದು, ಮುಖ್ಯವಾಗಿ “ಭಿನ್ನರ ನಿಯಂತ್ರಣ’ಕ್ಕೆ ಒತ್ತಡ ಹೇರಿದ್ದಾರೆ.
ಶುಕ್ರವಾರ ರಾತ್ರಿ ದಿಲ್ಲಿಗೆ ಬಂದಿಳಿದ ವಿಜಯೇಂದ್ರ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗೆ ಪ್ರಯತ್ನ ನಡೆಸಿ ದರು. ಆದರೆ ಸಮಯಾವಕಾಶ ಲಭಿಸದೆ ರಾಧಾ ಮೋಹನ್ ದಾಸ್ ಅವರ ಬಳಿ ದೂರಿತ್ತು ಶನಿವಾರ ಸಂಜೆ ಬೆಂಗಳೂರಿಗೆ ವಾಪಸ್ ಆದರು.
ರಾಜ್ಯಾಧ್ಯಕ್ಷರ ಬದಲಾವಣೆಯಾಗುತ್ತದೆ ಎಂಬ ಭ್ರಮೆಯಲ್ಲಿ ಇರುವವರ ಆಸೆ ಈಡೇರು ವುದಿಲ್ಲ. ನಾನು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಿ ಎಂದು ದಿಲ್ಲಿಯಲ್ಲಿ ದೂರು ನೀಡಿಲ್ಲ. ಎಲ್ಲವನ್ನೂ ಯಾರ ಗಮನಕ್ಕೆ ತರಬೇಕೋ ಅವರ ಗಮನಕ್ಕೆ ತಂದಿದ್ದೇನೆ. ವಿಜಯೇಂದ್ರ ಏನೂ ಮಾತನಾಡುತ್ತಿಲ್ಲ ಅಂದರೆ ಅದು ನನ್ನ ಅಸಾಮರ್ಥ್ಯ ಎಂದು ಭಾವಿಸಬೇಕಿಲ್ಲ. ಯಡಿಯೂರಪ್ಪ ಅವರನ್ನು ಟೀಕೆ ಮಾಡಿದರೆ ಪ್ರಚಾರ ಸಿಗುತ್ತದೆ ಅಂದುಕೊಳ್ಳುವುದು ಕೇವಲ ಭ್ರಮೆ ಎಂದು ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಜಗದಂಬಿಕಾ ಪಾಲ್‌ಗೆ ಯತ್ನಾಳ್ ತಂಡ ವರದಿ
ಈ ಮಧ್ಯೆ ವಕ್ಫ್ ಹೋರಾಟ ತೀವ್ರಗೊಳಿಸಿರುವ ಯತ್ನಾಳ್ ಬಣವು ತೇರದಾಳದಲ್ಲಿ ಶನಿವಾರ ಬೃಹತ್ ಸಭೆ ನಡೆಸಿದೆ. ಬೆಳಗಾವಿಯಲ್ಲಿ ರವಿವಾರ ಸಮಾವೇಶ ಆಯೋಜಿಸಲಾಗಿದ್ದು, ಡಿ. 3ರಂದು ತಂಡ ದಿಲ್ಲಿಗೆ ತೆರಳಲಿದೆ. ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಪ್ರತಾಪ್ ಸಿಂಹ ಅವರನ್ನು ಒಳಗೊಂಡ ತಂಡ ವಕ್ಫ್ ಕುರಿತಾದ ಸಂಸತ್ತಿನ ಜಂಟಿ ಸಮಿತಿ (ಜೆಪಿಸಿ) ಅಧ್ಯಕ್ಷ ಜಗದಂಬಿಕಾ ಪಾಲ್ ಅವರನ್ನು ಭೇಟಿ ಮಾಡಿ ಇದುವರೆಗಿನ ಹೋರಾಟದ ವಿವರಣೆ, ವಕ್ಫ್ ಸಂಬಂಧ ಕುಮಾರ್ ಬಂಗಾರಪ್ಪ ಸಮಿತಿ ನೀಡಿದ್ದ ವರದಿಯನ್ನು ಸಲ್ಲಿಸಲಿದೆ.
ವಕ್ಫ್ ವಿವಾದಕ್ಕೆ ಸಂಬಂಧಿಸಿ ಬಿಜೆಪಿಯಿಂದ ಅಧಿಕೃತ ರಾಜ್ಯ ಪ್ರವಾಸ ಆರಂಭವಾಗುವುದಕ್ಕೆ ಮುನ್ನವೇ ಯತ್ನಾಳ್ ತಂಡದ ಪ್ರವಾಸ ವಿವರವನ್ನು ಕೇಳುವುದಕ್ಕೆ ಜೆಪಿಸಿ ಮುಂದಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ರಾಜ್ಯ ತಂಡದ ಅಧಿಕೃತ ರಾಜ್ಯ ಪ್ರವಾಸ ಡಿ. 4ರಿಂದ 6ರವರೆಗೆ ನಡೆಯಲಿದೆ. ಆದರೆ ಯತ್ನಾಳ್ ಬಣ ಜೆಪಿಸಿ ಹೊರತುಪಡಿಸಿ ಯಾವುದೇ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಲು ಸಮಯಾವಕಾಶ ಕೋರಿಲ್ಲ ಎಂದು ತಿಳಿದು ಬಂದಿದೆ.
ನಮ್ಮನ್ನು ಉಚ್ಚಾಟಿಸಿ ಎನ್ನುವ ಹಾಗೂ ದಾರಿ ಮೇಲೆ ಹೋಗುವವರಿಗೆ ನಾನು ಉತ್ತರಿಸುವುದಿಲ್ಲ. ವಕ್ಫ್ ವಿರುದ್ಧ ಹೋರಾಟ ನಡೆದಿದೆ. ಪಕ್ಷ ಅಥವಾ ಪಕ್ಷದ ಯಾವುದೇ ವ್ಯಕ್ತಿಗಳ ಬಗ್ಗೆ ನಾನು ಮಾತಾಡುವುದಿಲ್ಲ. ಸಾವಿರಾರು ಕೋ.ರೂ. ಇರುವವರು ಸಮಾವೇಶ ನಡೆಸುತ್ತಾರೆ. ನಮ್ಮ ಬಳಿ ಹಣ ಇಲ್ಲ. ಹೀಗಾಗಿ ನಾವು ರಾಜ್ಯಾದ್ಯಂತ ತಿರುಗಾಡಿ ವಕ್ಫ್ ಸಮಸ್ಯೆ ಆಲಿಸುತ್ತೇವೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವರಿಷ್ಠರ ನಿಲುವೇನು?
ರಾಜ್ಯ ಬಿಜೆಪಿಯ ಈ ಬಣ ಬಡಿದಾಟದ ವಿಚಾರದಲ್ಲಿ ವರಿಷ್ಠರ ನಿಲುವೇನೆಂಬುದು ಮಾತ್ರ ನಿಗೂಢವಾಗಿಯೇ ಉಳಿದಿದೆ. ಬಿಜೆಪಿ ಮೂಲಗಳ ಪ್ರಕಾರ ಯತ್ನಾಳ್ ಅವರನ್ನು ಅಮಾನತು ಮಾಡುವ ಯಾವುದೇ ಭರವಸೆಯನ್ನು ವರಿಷ್ಠರು ಇದುವರೆಗೆ ನೀಡಿಲ್ಲ. ಆದರೆ ಎಲ್ಲ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ರಾಷ್ಟ್ರಾದ್ಯಂತ ಸಂಘಟನ ಪರ್ವ ನಡೆಯುತ್ತಿರುವುದರಿಂದ ಈ ಹಂತದಲ್ಲಿ ಯಾರ ಪರವಾದ ನಿಲುವು ತೆಗೆದುಕೊಳ್ಳುವ ಸಾಧ್ಯತೆಯಿಲ್ಲ. ಹೀಗಾಗಿ ಜನವರಿ ಬಳಿಕ ಸಂಧಾನ ಚಟುವಟಿಕೆ ನಡೆಯಬಹುದು ಎನ್ನಲಾಗುತ್ತಿದೆ.
ಮತ್ತೆ ದಿಲ್ಲಿಗೆ
ಇವೆಲ್ಲವುಗಳ ಮಧ್ಯೆ ನಡ್ಡಾ ಹಾಗೂ ಅಮಿತ್ ಶಾ ಅವರ ಭೇಟಿಗೆ ಅವಕಾಶ ಸಿಕ್ಕಿದರೆ ವಿಜಯೇಂದ್ರ ಅವರ ಸೋಮವಾರ ಮತ್ತೆ ದಿಲ್ಲಿಗೆ ತೆರಳುವ ಸಾಧ್ಯತೆ ಇದೆ. ಡಿ. 9ರಿಂದ ಬೆಳಗಾವಿಯಲ್ಲಿ ನಡೆಯುವ ಅಧಿವೇಶನಕ್ಕೆ ಮುಂಚಿತವಾಗಿ ಯತ್ನಾಳ್ ಬಣದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ವರಿಷ್ಠರ ಮನವೊಲಿಸಲು ಅವರ ಪ್ರಯತ್ನ ನಡೆಸಿದ್ದಾರೆ. ಈ ತಿಂಗಳಲ್ಲಿ ಎರಡು ಬಾರಿ ಅವರು ದಿಲ್ಲಿಗೆ ತೆರಳಿ ವರಿಷ್ಠರ ಭೇಟಿಗೆ ಪ್ರಯತ್ನ ನಡೆಸಿದರೂ ಪೂರ್ಣ ಯಶಸ್ಸು ಸಿಕ್ಕಿಲ್ಲ.
ರಾಜ್ಯ ಸೇವೆಗೆ ಶೋಭಾ, ಸೋಮಣ್ಣ?
ಬಿಜೆಪಿ ಬಣ ರಾಜಕೀಯದ ನಡುವೆಯೇ ಬಿಜೆಪಿಯ ತಟಸ್ಥ ಗುಂಪೊಂದು ಎಲ್ಲ ಗೊಂದಲಗಳಿಗೂ ಪೂರ್ಣ ವಿರಾಮ ಹಾಕುವಂತೆ ವರಿಷ್ಠರ ಮೇಲೆ ಒತ್ತಡ ಹೇರುತ್ತಿದೆ. ಈ ಬೆಳವಣಿಗೆಯ ಮಧ್ಯೆಯೇ ಕೇಂದ್ರ ಸಚಿವರಾದ ವಿ. ಸೋಮಣ್ಣ ಅಥವಾ ಶೋಭಾ ಕರಂದ್ಲಾಜೆ ಅವರನ್ನು ಕರ್ನಾಟಕಕ್ಕೆ ನಿಯೋಜನೆ ಮಾಡಬೇಕೆಂಬ ಚರ್ಚೆ ದಿಲ್ಲಿ ಮಟ್ಟದಲ್ಲಿ ಪ್ರಾರಂಭವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Private Bus fare: ಶೀಘ್ರದಲ್ಲೇ ಖಾಸಗಿ ಬಸ್ ಪ್ರಯಾಣ ದರವೂ ಏರಿಕೆ?
Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ
Report: ಐಸಿಯು ಗಲೀಜು, ಟ್ಯಾಂಕ್‌ನಲ್ಲಿ ಪಾಚಿ: ಸರಕಾರಿ ಆಸ್ಪತ್ರೆಗಳ ದುಃಸ್ಥಿತಿ!
JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್.ಡಿ.ಕುಮಾರಸ್ವಾಮಿ
Contracter Case: ಗುತ್ತಿಗೆದಾರ ಆತ್ಮಹತ್ಯೆ: ಸಚಿವ ಪ್ರಿಯಾಂಕ್ ರಾಜೀನಾಮೆಗೆ ಬಿಜೆಪಿ ಆಗ್ರಹ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.