BJP; ಮನದಲ್ಲಿ ಬಹಳ ಭಾವನೆಗಳಿವೆ, ಹೇಳಲು ಇದು ಸಮಯವಲ್ಲ: ಸಿ.ಟಿ.ರವಿ
ಹೇಳುತ್ತೇನೆ, ಹೇಳಲೇಬೇಕು.... ಬಹಳ ದಿನ ಹೊಟ್ಟೆಯಲ್ಲಿ ಇಟ್ಟುಕೊಳ್ಳಲು ಆಗುವುದಿಲ್ಲ
Team Udayavani, Mar 7, 2024, 7:10 PM IST
ಚಿಕ್ಕಗಳೂರು: ಮನದಲ್ಲಿ ಬಹಳ ಭಾವನೆಗಳಿವೆ ಆದರೆ ಹೇಳಲು ಇದು ಸಮಯವಲ್ಲ.ಪಕ್ಷ-ರಾಷ್ಟ್ರದ ಹಿತಕ್ಕಾಗಿ ಬಹಳ ವಿಷಯಗಳನ್ನ ನುಂಗಿಕೊಂಡಿದ್ದೇನೆ ಎಂದು ಮಾಜಿ ಸಚಿವ ಸಿ.ಟಿ.ರವಿ ಅಸಮಧಾನವನ್ನು ಮತ್ತೆ ಹೊರ ಹಾಕಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಯಾರು ಯಾರು ಹೇಗೆ ನಡೆದುಕೊಂಡರು ಎನ್ನುವುದೂ ಸೇರಿ ಬಹಳ ವಿಷಯ ಹೇಳಲು ಇದೆ, ಹೇಳುತ್ತೇನೆ, ಹೇಳಲೇಬೇಕು.ಬಹಳ ದಿನ ಹೊಟ್ಟೆಯಲ್ಲಿ ಇಟ್ಟುಕೊಳ್ಳಲು ಆಗುವುದಿಲ್ಲ. ಸಮಯ ಬರಲಿ ಎಲ್ಲಾ ಹೇಳುತ್ತೇನೆ. ವೈಯಕ್ತಿಕ ನೆಲೆಯಲ್ಲಿ ರಾಜಕಾರಣ ಮಾಡೋದಾದರೂ ಲೋಕಸಭಾ ಚುನಾವಣೆ ನಂತರ ಎಂದು ಹೇಳಿದ್ದಾರೆ.
‘ಈಗ ಪ್ರಧಾನಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಅದೊಂದೆ ಗುರಿ ಇರುವುದು. ರಾಜ್ಯದ 28 ಸ್ಥಾನವನ್ನೂ ಬಿಜೆಪಿ ಗೆಲ್ಲಬೇಕು, ಅದಕ್ಕೆ ಅಳಿಲು ಸೇವೆ ಮಾಡೋದಷ್ಟೆ ನಮ್ಮ ಕೆಲಸ’ ಎಂದರು.
‘ರಾಮ ದೇವರಲ್ಲ, ಭಾರತ ದೇಶವಲ್ಲ’ ಎಂಬ ಡಿಎಂಕೆ ನಾಯಕ ಎ. ರಾಜ ಹೇಳಿಕೆಗೆ ಕಿಡಿ ಕಾರಿ, ನಾಯಿ ಕೂಗಿದರೆ ಭೂಲೋಕ ಕೆಟ್ಟಿ ಹೋಗುತ್ತಾ? ಇವರು ಭಾರತದ ಜನರ ಶ್ರದ್ಧೆಯನ್ನ ನಾಶ ಮಾಡಬೇಕು ಎಂದು ಬಯಸುವವರು. ಹೀಗೇ ಬಯಸುವವರೆಲ್ಲ ನಾಶವಾಗಿ ಹೋಗಿದ್ದಾರೆ. ಎಲ್ಲಿ ನಿನ್ನ ಹರಿ ಎಂದ ಹಿರಣ್ಯ ಕಶ್ಯಪುವಿನ ಮನೆಯಲ್ಲೇ ಪ್ರಹ್ಲಾದ ಹುಟ್ಟಿದ. ಎ.ರಾಜನ ಮನೆಯಲ್ಲೇ ರಾಮಭಕ್ತ ಹುಟ್ಟುತ್ತಾನೆ. ತಮಿಳುನಾಡಲ್ಲಿ ಸಾವಿರಾರು ರಾಮನ ದೇವಾಲಯಗಳಿವೆ, ತಾಕತ್ತಿದ್ದರೆ ಮುಟ್ಟಲಿ. ರಾಮೇಶ್ವರ, ರಾಮನೇ ಪೂಜೆ ಮಾಡಿದ ಈಶ್ವರನಿದ್ದಾನೆ. ಇವರಿಗೆ ರಾಮನ ದೇವಾಲಯದ ಹುಂಡಿ ಬೇಕು, ರಾಮ ಬೇಡ. ಹುಂಡಿ ಇಟ್ಟು ಹಣ ತಿನ್ನುವ ಇವರಿಗೆ ನಾಚಿಕೆಯಾಗಬೇಕು ಎಂದರು.
ಆಕಾಶಕ್ಕೆ ಉಗಿದು, ಮೈಮೇಲೆ ಬೀಳಿಸಿಕೊಂಡವರಿದ್ದಾರೆ. ರಾಮನನ್ನ ಟೀಕೆ ಮಾಡೋದು ಆಕಾಶಕ್ಕೆ ಉಗಿದಂತೆ, ಅವರ ಮುಖಕ್ಕೇ ಬೀಳೋದು ಎಂದು ಕಿಡಿ ಕಾರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.